AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ವಾತಂತ್ರ್ಯಾ ನಂತರ ಖಾದಿಯ ನಿರ್ಲಕ್ಷ್ಯವೇ ನಿರುದ್ಯೋಗಕ್ಕೆ ಕಾರಣವಾಯಿತು; ಅಮಿತ್ ಶಾ

ಸ್ವಾತಂತ್ರ್ಯಾ ನಂತರ ಖಾದಿಯ ನಿರ್ಲಕ್ಷ್ಯವೇ ನಿರುದ್ಯೋಗಕ್ಕೆ ಕಾರಣವಾಯಿತು; ಅಮಿತ್ ಶಾ

ಸುಷ್ಮಾ ಚಕ್ರೆ
|

Updated on: Oct 03, 2025 | 10:22 PM

Share

ಸ್ವಾತಂತ್ರ್ಯದ ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ಸತತವಾಗಿ ಖಾದಿಯನ್ನು ನಿರ್ಲಕ್ಷಿಸದಿದ್ದರೆ, ದೇಶದಲ್ಲಿ ನಿರುದ್ಯೋಗ ಸಮಸ್ಯೆ ಎಂದಿಗೂ ಉದ್ಭವಿಸುತ್ತಿರಲಿಲ್ಲ ಎಂದು ಕೇಂದ್ರ ಗೃಹ ಸಚಿವ ಮತ್ತು ಸಹಕಾರ ಸಚಿವ ಅಮಿತ್ ಶಾ ಹೇಳಿದ್ದಾರೆ. ಹರಿಯಾಣದ ರೋಹ್ಟಕ್‌ನಲ್ಲಿ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಅವರ ನೇತೃತ್ವದಲ್ಲಿ ನಡೆದ 'ಖಾದಿ ಕರಿಗರ್ ಮಹೋತ್ಸವ'ದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾತನಾಡಿದ್ದಾರೆ. 

ರೋಹ್ಟಕ್, ಅಕ್ಟೋಬರ್ 3: ಹರಿಯಾಣದ ರೋಹ್ಟಕ್‌ನಲ್ಲಿ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಅವರ ನೇತೃತ್ವದಲ್ಲಿ ನಡೆದ ‘ಖಾದಿ ಕರಿಗರ್ ಮಹೋತ್ಸವ’ದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಮಾತನಾಡಿದ್ದಾರೆ. “ಸ್ವಾತಂತ್ರ್ಯ ಚಳವಳಿಯ ಸಮಯದಲ್ಲಿ ಮಹಾತ್ಮ ಗಾಂಧಿ ಬಡತನವನ್ನು ನಿರ್ಮೂಲನೆ ಮಾಡಲು, ದೇಶವನ್ನು ಸ್ವಾವಲಂಬಿಗಳನ್ನಾಗಿ ಮಾಡಲು, ಸ್ವದೇಶಿ ಕಲ್ಪನೆಯನ್ನು ಉತ್ತೇಜಿಸಲು ಮತ್ತು ಸ್ವಾತಂತ್ರ್ಯವನ್ನು ಸಾಧಿಸಲು ‘ಖಾದಿ’ಯನ್ನು ಬಳಸಿದರು. ಮಹಾತ್ಮಾ ಗಾಂಧಿಯವರು ‘ಖಾದಿ’ಯನ್ನು ಪ್ರಾರಂಭಿಸಿದರು, ಇದು ದೇಶಾದ್ಯಂತ ಲಕ್ಷಾಂತರ ನೇಕಾರರ ಜೀವನದಲ್ಲಿ ಕ್ರಾಂತಿಕಾರಿ ಬದಲಾವಣೆಯನ್ನು ತಂದಿತು. ಆದರೆ, ಸ್ವಾತಂತ್ರ್ಯಾ ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ಖಾದಿಯನ್ನು ನಿರ್ಲಕ್ಷ್ಯಿಸಿದ್ದರಿಂದ ನಿರುದ್ಯೋಗ ಹೆಚ್ಚಾಯಿತು” ಎಂದು ಅಮಿತ್ ಶಾ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ