ನಂಬಿಸಿ ಗಿಲ್ಲಿಗೆ ಮೋಸ ಮಾಡಿದ ರಿಷಾ; ಮರಳಿ ಬಂದ ನಟನಿಗೆ ಗಡ್ಡ ಬೋಳಿಸಲು ಹೇಳಿದ ಕಾವ್ಯಾ
ಬಿಗ್ ಬಾಸ್ ಮನೆಗೆ ಮೂವರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಪ್ರವೇಶಿಸಿದ್ದಾರೆ. ರಿಷಾ ಗೌಡ ಗಿಲ್ಲಿಗೆ ಮೋಸ ಮಾಡಿ, ಕಾಕ್ರೋಚ್ ಸುಧಿಯನ್ನು ಉಳಿಸಿದರು. ಆ ಬಳಿಕ ಗಿಲ್ಲಿ ಅವರು ಕಾವ್ಯಾ ಗೌಡರ ಹಿಂದೆ ಹೋಗಿದ್ದಾರೆ. ಆದರೆ ಕಾವ್ಯಾ "ಕ್ಲೀನ್ ಶೇವ್ ಮಾಡಿದರೆ ಮಾತ್ರ ನೋಡೋದು" ಎಂದು ಷರತ್ತು ವಿಧಿಸಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಮೂವರು ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿದ್ದಾರೆ. ಇದರಲ್ಲಿ ಇಬ್ಬರು ಪುರುಷ ಸ್ಪರ್ಧಿಗಳಾದರೆ, ಒಬ್ಬರು ಮಹಿಳಾ ಸ್ಪರ್ಧಿ. ರಘು ಅವರು ಜಿಮ್ ಟ್ರೇನರ್, ಸೂರಜ್ ಸಿಂಗ್ ಕೆನಡಾದಲ್ಲಿ ಇದ್ದರು. ಅವರು ಇಂಜಿನಿಯರ್ ಆಗಿದ್ದರು. ಫಿಟ್ನೆಸ್ ಬಗ್ಗೆ ಅವರಿಗೆ ಹೆಚ್ಚು ಕಾಳಜಿ ಇದೆ. ರಿಷಾ ಗೌಡ ಅವರು ಮಾಡೆಲ್ ಹಾಗೂ ನಟಿ. ರಿಷಾ (Risha) ಅವರು ಡೊಡ್ಮನೆಗೆ ಬರುತ್ತಿದ್ದಂತೆ ಗಿಲ್ಲಿ ಹಿಂದೆ ಸುತ್ತಿದ್ದರು. ಆದರೆ, ಗಿಲ್ಲಿಗೆ ರಿಷಾ ಮೋಸ ಮಾಡಿದ್ದಾರೆ.
ಮೂವರು ವೈಲ್ಡ್ ಕಾರ್ಡ್ ಸ್ಪರ್ಧಿಗಳ ಪೈಕಿ ಒಬ್ಬರಿಗೆ ಮನೆಯ ಸದಸ್ಯರು ಹಾರ್ಟ್ ಶೇಪ್ನ ವಸ್ತುವನ್ನು ನೀಡಬೇಕಿತ್ತು. ರಘು ಅವರಿಗೆ ಏಳು, ರಿಷಾಗೆ ನಾಲ್ಕು ಹಾಗೂ ಸೂರಜ್ಗೆ ಮೂರು ಹಾರ್ಟ್ ಸಿಕ್ಕವು. ಈ ಪೈಕಿ ಒಂದು ಹಾರ್ಟ್ನ ಮಾತ್ರ ಇಟ್ಟುಕೊಂಡು ಉಳಿದ ಹಾರ್ಟ್ಗಳನ್ನು ಹರಿದು ಹಾಕಬೇಕಿತ್ತು. ಕೊನೆಯಲ್ಲಿ ಯಾರ ಹಾರ್ಟ್ ಉಳಿಸಿಕೊಳ್ಳುತ್ತಾರೋ ಅವರು ನಾಮಿನೇಷನ್ನಿಂದ ಬಚಾವ್ ಆಗುತ್ತಾರೆ.
ರಿಷಾ ಹಾಗೂ ಗಿಲ್ಲ ಮಧ್ಯೆ ಒಳ್ಳೆಯ ಬಾಂಡಿಂಗ್ ಬೆಳೆದಿದ್ದರಿಂದ, ಗಿಲ್ಲಿ ಅವರು ರಿಷಾಗೆ ಹಾರ್ಟ್ ನೀಡಿದ್ದರು. ಆದರೆ, ರಿಷಾ ಅವರು ಗಿಲ್ಲಿ ಹಾರ್ಟ್ನ ಹರಿದು ಹಾಕಿ, ಕಾಕ್ರೋಚ್ ಸುಧಿಯನ್ನು ನಾಮಿನೇಷನ್ನಿಂದ ಸೇವ್ ಮಾಡಿದರು. ಇದು ಗಿಲ್ಲಿಗೆ ಸಾಕಷ್ಟು ಬೇಸರ ಮೂಡಿಸಿದೆ. ನಂಬಿಸಿ ಮೋಸ ಹೋದಂತೆ ಅವರಿಗೆ ಭಾಸವಾಗಿದೆ.
ಇದನ್ನೂ ಓದಿ: ಹೊಸ ನೀರು ಬಂದಾಗ ಹಳೆ ನೀರ ಮರೆತ ಗಿಲ್ಲಿ; ರಿಷಾಗಾಗಿ ಕಾವ್ಯಾನಿಂದ ದೂರ
ಮತ್ತೆ ಕಾವ್ಯಾ ಹಿಂದೆ ಹೋದ ಗಿಲ್ಲಿ
ರಿಷಾ ಗೌಡ ಕೈ ಕೊಟ್ಟಂತೆ ಭಾಸವಾದ ಬಳಿಕ ಗಿಲ್ಲಿ ಅವರು ಬೇರೆ ದಾರಿ ಕಾಣದೆ ಕಾವ್ಯಾ ಗೌಡ ಹಿಂದೆ ಹೋಗಿದ್ದಾರೆ. ಕಾವ್ಯಾ ಅವರು ಗಿಲ್ಲಿನ ಕೇರ್ ಮಾಡಲೇ ಇಲ್ಲ. ಈ ವೇಳೆ ಅವರು ಒಂದು ಟಾಸ್ಕ್ ಕೂಡ ನೀಡಿದ್ದಾರೆ. ‘ಕ್ಲೀನ್ ಶೇವ್ ಮಾಡಿದರೆ ಮಾತ್ರ ನೋಡೋದು’ ಎಂದು ಷರತ್ತು ಹಾಕಿದ್ದಾರೆ. ಇದಕ್ಕೆ ಒಪ್ಪಲು ಗಿಲ್ಲಿ ರೆಡಿ ಇಲ್ಲ. ಮುಂದೇನಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








