- Kannada News Photo gallery Deepika Padukone And Ranveer Singh Daughter Dua Padukone Singh Photo Revealed
ದೀಪಿಕಾ-ರಣವೀರ್ ಪಡುಕೋಣೆ ಮಗಳ ಮುಖ ರಿವೀಲ್; ಯಾರ ಹಾಗೆ ಕಾಣ್ತಾರೆ ದುವಾ?
Deepika Padukone Daughter Photo: ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಅವರು 2024ರ ಸೆಪ್ಟೆಂಬರ್ 8ರಂದು ಹೆಣ್ಣು ಮಗುವಿನ ಪಾಲಕರಾದರು. ಮಗು ಜನಿಸಿ ವರ್ಷದ ಮೇಲಾಗಿದೆ. ಈಗ ಅವರು ಮಗಳ ಫೋಟೋನ ರಿವೀಲ್ ಮಾಡಿದ್ದಾರೆ. ಈ ಫೋಟೋ ಗಮನ ಸೆಳೆಯುವ ರೀತಿಯಲ್ಲಿ ಇದೆ.
Updated on: Oct 22, 2025 | 6:56 AM

ದೀಪಿಕಾ ಪಡುಕೋಣೆ ಅವರು ನಟಿಯಾಗಿ ಗಮನ ಸೆಳೆದೆವರು. ರಣವೀರ್ ಸಿಂಗ್ ಕೂಡ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಇವರು ಅನೇಕ ವರ್ಷಗಳ ಕಾಲ ಪ್ರೀತಿಸಿ ಆ ಬಳಿಕ ಮದುವೆ ಆದರು. ಇವರಿಗೆ ಸೆಪ್ಟೆಂಬರ್ನಲ್ಲಿ ಮಗಳು ಜನಿಸಿದ್ದು, ದುವಾ ಎಂದು ಹೆಸರು ಇಟ್ಟಿದ್ದಾರೆ.

ಮಗು ಜನಿಸಿ ವರ್ಷ ಕಳೆದರೂ ದೀಪಿಕಾ ಪಡುಕೋಣೆ ಅವರು ಮಗಳ ಫೋಟೋ ತೋರಿಸಿಯೇ ಇರಲಿಲ್ಲ. ಅನುಷ್ಕಾ-ವಿರಾಟ್ ಕೊಹ್ಲಿ ಸದ್ಯಕ್ಕಂತೂ ಮಗಳ ಫೋಟೋ ರಿವೀಲ್ ಮಾಡಬಾರದು ಎನ್ನುವ ನಿರ್ಧಾರಕ್ಕೆ ಬಂದಿದ್ದಾರೆ. ದೀಪಿಕಾ ಕೂಡ ಹಾಗೆಯೇ ಯೋಚಿಸಿದರೇ ಎನ್ನುವ ಪ್ರಶ್ನೆ ಮೂಡಿತ್ತು.

ಆದರೆ, ದೀಪಿಕಾ ಪಡುಕಣೆ ಹಾಗಲ್ಲ. ಅವರು ಮಗಳು ದುವಾ ಫೋಟೋನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಮಗಳನ್ನು ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ.

ದುವಾ ಸಖತ್ ಕ್ಯೂಟ್ ಆಗಿದ್ದಾಳೆ. ಅವಳ ಪುಟಾಣಿ ಜುಟ್ಟ ಕೂಡ ಗಮನ ಸೆಳೆಯುವಂತಿದೆ. ಅವಳು ನಕ್ಕಾಗ ಅದೆಷ್ಟು ಸುಂದರವಾಗಿ ಕಾಣುತ್ತಾಳೆ ಎಂದು ಹೇಳಲೇ ಸಾಧ್ಯವಿಲ್ಲ ಎಂದು ಅನೇಕರು ಹೇಳಿದ್ದಾರೆ. ದೀಪಿಕಾ ಹಾಗೂ ದುವಾ ಇಬ್ಬರೂ ಒಂದೇ ಬಣ್ಣದ ಬಟ್ಟೆ ಧರಿಸಿದ್ದಾರೆ.

ಈ ಫೋಟೋ ನೋಡಿದ ಅನೇಕರು ಇದನ್ನು ಎಐ ಜನರೇಟೆಡ್ ಫೋಟೋ ಎಂದು ಭಾವಿಸಿದರು. ಆದರೆ, ಹಾಗಿಲ್ಲ. ಇದು ಅಸಲಿ ಫೋಟೋ ಎಂಬುದು ಆ ಬಳಿಕ ಗೊತ್ತಾಗಿದೆ. ಕೆಲವರು ದುವಾ ದೀಪಿಕಾ ತರ ಇದ್ದಾಳೆ ಎಂದರೆ ಇನ್ನೂ ಕೆಲವರು ರಣವೀರ್ ಸಿಂಗ್ ರೀತಿ ಇದ್ದಾರೆ ಎನ್ನುತ್ತಿದ್ದಾರೆ.




