AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bigg Boss Kannada: ಪಾಪ ಗಿಲ್ಲಿಗೆ ಅದೂ ಇಲ್ಲ, ಇತ್ತ ಇದೂ ಇಲ್ಲ

Bigg Boss Kannada 12: ಬಿಗ್​​ಬಾಸ್ ಕನ್ನಡ ಸೀಸನ್ 12ರಲ್ಲಿ ಕೆಲವು ಸ್ಪರ್ಧಿಗಳು ಹೆಚ್ಚು ಗಮನ ಸೆಳೆಯುತ್ತಿದ್ದಾರೆ ಅವರಲ್ಲಿ ಗಿಲ್ಲಿ ಸಹ ಒಬ್ಬರು. ತಮ್ಮ ಹಾಸ್ಯದಿಂದ ಮನೆ ಮಂದಿಯನ್ನು ನಗಿಸುತ್ತಿದ್ದಾರೆ. ಗಿಲ್ಲಿ ಇಷ್ಟು ದಿನ ಕಾವ್ಯಾ ಹಿಂದೆ ಸುತ್ತುತ್ತಾ, ಕಾವ್ಯಾ ಜೊತೆ ಫ್ಲರ್ಟ್ ಮಾಡಿಕೊಂಡು ಆರಾಮವಾಗಿದ್ದರು. ಆದರೆ ಇದೀಗ ಪಾಪ ಅವರ ಸ್ಥಿತಿ ಅತ್ತ ಅದೂ ಇಲ್ಲ, ಇತ್ತ ಇದೂ ಇಲ್ಲ ಎಂಬಂತಾಗಿದೆ.

Bigg Boss Kannada: ಪಾಪ ಗಿಲ್ಲಿಗೆ ಅದೂ ಇಲ್ಲ, ಇತ್ತ ಇದೂ ಇಲ್ಲ
Bigg Boss Kannada 12
ಮಂಜುನಾಥ ಸಿ.
|

Updated on: Oct 21, 2025 | 11:00 PM

Share

ಬಿಗ್​​ಬಾಸ್ (Bigg Boss) ಮನೆಗೆ ಇತ್ತೀಚೆಗಷ್ಟೆ ಮೂವರು ಹೊಸ ಸ್ಪರ್ಧಿಗಳ ಎಂಟ್ರಿ ಆಗಿದೆ. ನಟ ರಘು, ರಿಷಾ ಮತ್ತು ಸೂರಜ್ ಅವರುಗಳು ವೈಲ್ಡ್ ಕಾರ್ಡ್ ಮೂಲಕ ಮನೆಯ ಒಳಗೆ ಎಂಟ್ರಿ ಕೊಟ್ಟಿದ್ದಾರೆ. ಮೂವರು ಸಹ ಆರಂಭದಲ್ಲಿ ಗಟ್ಟಿ ಸ್ಪರ್ಧಿಗಳಂತೆ ತಮ್ಮನ್ನು ತಾವು ತೋರಿಸಿಕೊಂಡಿದ್ದಾರೆ. ಈಗ ವೈಲ್ಡ್ ಕಾರ್ಡ್ ಸದಸ್ಯರು ಮನೆಗೆ ಬಂದ ಬಳಿಕ ಮನೆಯಲ್ಲಿದ್ದ ಮನೆಯ ಸದಸ್ಯರ ನಡುವಿನ ಸಮೀಕರಣಗಳು ಬದಲಾಗಿವೆ. ಆದರೆ ಎಲ್ಲರಿಗಿಂತಲೂ ಹೆಚ್ಚು ಪೆಚ್ಚಾಗಿರುವುದು ಗಿಲ್ಲಿ. ಅವರ ಸ್ಥಿತಿ ಪಾಪ ಅತ್ತ ಅದೂ ಇಲ್ಲ, ಇತ್ತ ಇದೂ ಇಲ್ಲ ಎಂಬಂತಾಗಿದೆ.

ಗಿಲ್ಲಿ, ಬಿಗ್​​ಬಾಸ್ ಮನೆಗೆ ಬಂದಾಗಿನಿಂದಲೂ ಗಿಲ್ಲಿ ಹಾಗೂ ಕಾವ್ಯಾ ಒಟ್ಟಿಗೆ ಇದ್ದರು. ಇಬ್ಬರೂ ಜಂಟಿಯಾಗಿ ಆಡಿದ್ದರು. ಗಿಲ್ಲಿ ಅಂತೂ ಅವಕಾಶ ಸಿಕ್ಕಾಗೆಲ್ಲ ಕಾವ್ಯಾ ಜೊತೆ ಫ್ಲರ್ಟ್ ಮಾಡುತ್ತಾ, ತಮಾಷೆ ಮಾಡುತ್ತಾ ಕಾಲ ಕಳೆಯುತ್ತಿದ್ದ. ಕಾವ್ಯಾ ಸಹ ಗಿಲ್ಲಿ ಜೊತೆಗೆ ಆತ್ಮೀಯವಾಗಿದ್ದರು. ಕೆಲ ಎಪಿಸೋಡ್​​ಗಳಲ್ಲಿ ಇಬ್ಬರ ನಡುವಿನ ಆತ್ಮೀಯತೆ ಪ್ರೇಕ್ಷಕರಲ್ಲಿ ಅನುಮಾನ ಮೂಡಿಸುವಂತೆ ಸಹ ಇತ್ತು. ಆದರೆ ಇತ್ತೀಚೆಗೆ ಕಾವ್ಯಾ, ಗಿಲ್ಲಿಯನ್ನು ಅವಾಯ್ಡ್ ಮಾಡಲು ಆರಂಭಿಸಿದರು. ಅದರಲ್ಲೂ ಶನಿವಾರದ ಎಪಿಸೋಡ್​​ನಲ್ಲಿ ಸುದೀಪ್ ಅವರು, ಗಿಲ್ಲಿ ಹಾಗೂ ಕಾವ್ಯಾ ಅಣ್ಣ-ತಂಗಿ ಅಂದ ಬಳಿಕ ಕಾವ್ಯಾ ಸಹ ಅದನ್ನೇ ಮುಂದುವರೆಸಿದ್ದರು.

ಈಗ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿರುವ ರಿಶಾ ಹಿಂದೆ ಗಿಲ್ಲೆ ಬಿದ್ದಿದ್ದರು. ರೀಷ್ಮಾ ಬಂದ ಬಳಿಕ ಗಿಲ್ಲಿ, ರಿಶಾ ಅನ್ನು ಹೊಗಳುತ್ತಾ, ತಮಾಷೆ ಮಾಡುತ್ತಾ ಓಡಾಡುತ್ತಿದ್ದರು. ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟ ಮೂವರಲ್ಲಿ ಯಾರು ಬೆಸ್ಟ್ ಆಗಿದ್ದಾರೆಯೊ ಅವರಿಗೆ ಹಾರ್ಟ್ ಕೊಡಿ ಎಂದು ಬಿಗ್​​ಬಾಸ್ ಹೇಳಿದರು. ಆಗ ರಘು ಅವರಿಗೆ ಏಳು ಹಾರ್ಟ್​​ಗಳು ಸಿಕ್ಕವು. ಸೂರಜ್ ಅವರಿಗೆ ಮೂರು ಹಾರ್ಟ್​​ಗಳು ಸಿಕ್ಕವು. ರಿಶಾಗೆ ನಾಲ್ಕು ಹಾರ್ಟ್​​ಗಳು ಸಿಕ್ಕವು ಅವುಗಳಲ್ಲಿ ಒಂದು ಹಾರ್ಟ್​​ ಅನ್ನು ಗಿಲ್ಲಿ ಅವರೇ ಕೊಟ್ಟರು.

ಇದನ್ನೂ ಓದಿ:ಬಿಗ್​ಬಾಸ್ ಗೌತಮಿ, ರಿಷಿ ನಟನೆಯ ಹೊಸ ಸಿನಿಮಾ ಮುಹೂರ್ತ: ವಿಡಿಯೋ

ಆ ನಂತರ ಸ್ಪರ್ಧಿಗಳು ಕೊಟ್ಟಿರುವ ಹಾರ್ಟ್​​ನಲ್ಲಿ ಒಂದು ಹಾರ್ಟ್ ಅನ್ನು ಉಳಿಸಿಕೊಳ್ಳಬೇಕು ಎಂದು ಬಿಗ್​​ಬಾಸ್, ವೈಲ್ಡ್ ಕಾರ್ಟ್ ಸ್ಪರ್ಧಿಗಳಿಗೆ ಹೇಳಿದರು. ಆದ ಸೂರಜ್, ಮಲ್ಲಮನ ಹಾರ್ಟ್ ಉಳಿಸಿಕೊಂಡರು. ರಘು ಅಭಿಷೇಕ್ ಅವರ ಹಾರ್ಟ್ ಉಳಿಸಿಕೊಂಡರು. ರಿಷಾ ಸರದಿ ಬಂದಾಗ ಗಿಲ್ಲಿಯ ಹಾರ್ಟ್ ಉಳಿಸಿಕೊಳ್ಳಲಿಲ್ಲ, ಗಿಲ್ಲಿ ಕೊಟ್ಟ ಹೃದಯವನ್ನು ಹರಿದು ಹಾಕಿದರು. ಇದನ್ನು ಕಂಡ ಗಿಲ್ಲಿ ಪಾಪ ಒದ್ದಾಡಿಬಿಟ್ಟ. ಮನೆಯ ಇತರೆ ಸ್ಪರ್ಧಿಗಳೆಲ್ಲ ಗಿಲ್ಲಿಯನ್ನು ಹಿಡಿದುಕೊಂಡು ಸಮಾಧಾನ ಮಾಡಬೇಕಾಗಿ ಬಂತು. ರಿಶಾ ಕೊನೆಗೆ ಕಾಕ್ರೂಚ್ ಸುಧಿಯ ಹಾರ್ಟ್ ಉಳಿಸಿ ಅವರನ್ನು ನಾಮಿನೇಷನ್​​ ಕಾಪಾಡಿದರು.

ಈಗ ಗಿಲ್ಲಿಯ ಪರಿಸ್ಥಿತಿ ಹೇಗಾಗಿದೆ ಎಂದರೆ ಅತ್ತ ಕಾವ್ಯಾನೂ ಇಲ್ಲ, ಇತ್ತ ರೀಶಾನೂ ಇಲ್ಲ. ಕಾವ್ಯಾ ಸರಿಯಾಗಿ ಮಾತನಾಡುತ್ತಿಲ್ಲ, ಇತ್ತ ಹೊಸ ಎಂಟ್ರಿ ರಿಶಾ ಗಿಲ್ಲಿಗೆ ಸೊಪ್ಪು ಹಾಕುತ್ತಿಲ್ಲ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್