ಅಶ್ವಿನಿಯನ್ನು ಟಾರ್ಗೆಟ್ ಮಾಡಿದ ವೈಲ್ಡ್ ಕಾರ್ಡ್ ಸ್ಪರ್ಧಿಗಳು: ಆಗಿದ್ದೇನು?
Bigg Boss Kannada season 12: ಬಿಗ್ಬಾಸ್ ಕನ್ನಡ ಸೀಸನ್ 12ರ ಗಟ್ಟಿ ಸ್ಪರ್ಧಿ ಎಂದು ಅಶ್ವಿನಿ ತಮ್ಮನ್ನು ತಾವು ಪ್ರೊಜೆಕ್ಟ್ ಮಾಡಿಕೊಂಡಿದ್ದಾರೆ. ಆದರೆ ಬುಧವಾರದ ಎಪಿಸೋಡ್ನಲ್ಲಿ ಅಶ್ವಿನಿ ಎಲ್ಲರ ಮುಂದೆ ಕಣ್ಣೀರು ಹಾಕಿದರು. ಅಶ್ವಿನಿ ಅವರ ಗಟ್ಟಿತನವೇ ಅವರಿಗೆ ಸಮಸ್ಯೆ ಆಗಿದೆ. ವೈಲ್ಡ್ ಕಾರ್ಡ್ ಸದಸ್ಯರು ಅಶ್ವಿನಿಯನ್ನು ಟಾರ್ಗೆಟ್ ಮಾಡಿದ್ದಾರೆ.

ಬಿಗ್ಬಾಸ್ ಕನ್ನಡ ಸೀಸನ್ 12 (Bigg Boss Kannada 12) ಪ್ರಾರಂಭವಾಗಿ ಮೂರು ವಾರಗಳಾಗಿವೆ. ಆದರೆ ಈ ವರೆಗೆ ಬಿಗ್ಬಾಸ್ ಮನೆಗೆ ಯಾರೂ ಕ್ಯಾಪ್ಟನ್ ಆಗಿಲ್ಲ. ಬಿಗ್ಬಾಸ್ ಮನೆಯ ಕ್ಯಾಪ್ಟನ್ ಆದವರಿಗೆ ವಿಶೇಷ ಅಧಿಕಾರ, ಒಂದು ವಾರ ಇಮ್ಯೂನಿಟಿ, ವಿಶೇಷ ರೂಮು ದೊರಕುತ್ತದೆ. ಆದರೆ ಈ ಸೀಸನ್ನಲ್ಲಿ ಕ್ಯಾಪ್ಟನ್ಗೆ ಇನ್ನೊಂದು ಅವಕಾಶವನ್ನು ಸಹ ನೀಡಲಾಗಿದೆ. ಈ ಬಾರಿ ಕ್ಯಾಪ್ಟನ್ ಆದವರಿಗೆ ಒಂದು ವಾರ ಇಮ್ಯೂನಿಟಿ ಸಿಗುವ ಜೊತೆಗೆ ಮುಂದಿನ ವಾರ ಕ್ಯಾಪ್ಟನ್ಸಿ ರೇಸಿಗೆ ನೇರವಾಗಿ ಆಯ್ಕೆ ಆಗಲಿದ್ದಾರೆ.
ಅದರಂತೆ ಬಿಗ್ಬಾಸ್ ಈ ಸೀಸನ್ನ ಮೊದಲ ಕ್ಯಾಪ್ಟನ್ ಆಯ್ಕೆ ಮಾಡಲು ವೇದಿಕೆ ಸಜ್ಜು ಮಾಡಿದರು. ಆದರೆ ಈಗಿರುವ ಮನೆಯ ಸದಸ್ಯರ ಪೈಕಿ 15 ಮಂದಿ ಮಾತ್ರವೇ ಕ್ಯಾಪ್ಟೆನ್ಸಿ ಓಟಕ್ಕೆ ಸ್ಪರ್ಧಿಸಬೇಕು. ಈಗಿರುವ ಸ್ಪರ್ಧಿಗಳಲ್ಲಿ ಅನರ್ಹರಾದ ಇಬ್ಬರನ್ನು ಕ್ಯಾಪ್ಟೆನ್ಸಿ ಓಟದಿಂದ ಹೊರಗೆ ಇಡಬೇಕು ಎಂದು ಬಿಗ್ಬಾಸ್ ಹೇಳಿದರು. ಇಬ್ಬರನ್ನು ಹೊರಗೆ ಇಡುವ ಅಧಿಕಾರವನ್ನು ವೈಲ್ಡ್ ಕಾರ್ಡ್ ಮೂಲಕ ಒಳಗೆ ಬಂದ ಮೂವರಿಗೆ ನೀಡಿದರು.
ರಘು, ರಿಶಾ ಮತ್ತು ಸೂರಜ್ ಪರಸ್ಪರ ಚರ್ಚೆ ಮಾಡಿ ಅಶ್ವಿನಿ ಮತ್ತು ಕಾಕ್ರೂಚ್ ಸುಧಿ ಅವರನ್ನು ಹೊರಗೆ ಇಟ್ಟರು. ರಿಶಾ ಈಗಾಗಲೇ ಕಾಕ್ರೂಚ್ ಸುಧಿಗೆ ಒಂದು ವಾರದ ಇಮ್ಯೂನಿಟಿ ನೀಡಿರುವ ಕಾರಣ ಮತ್ತೊಂದು ವಾರದ ಇಮ್ಯೂನಿಟಿ ಸಿಗಬಾರದೆಂದು ಸುಧಿಯನ್ನು ಹೊರಗಿಟ್ಟರು. ಅದಾದ ಬಳಿಕ ಅಶ್ವಿನಿ ಈಗಾಗಲೇ ಪರೋಕ್ಷವಾಗಿ ಮನೆಯ ಲೀಡರ್ ಆಗಿದ್ದಾರೆ. ಅವರಿಗೆ ಮತ್ತೆ ಅಧಿಕಾರ ಕೊಡುವುದು ಬೇಡ ಎಂದು ಚರ್ಚೆ ಮಾಡಿ ಅಶ್ವಿನಿ ಅವರನ್ನು ಕ್ಯಾಪ್ಟೆನ್ಸಿ ಓಟದಿಂದ ಹೊರಗೆ ಇಟ್ಟರು.
ಇದನ್ನೂ ಓದಿ:ಬಿಗ್ಬಾಸ್ ಮನೆಯಲ್ಲಿ ಗಲಾಟೆ ಜೋರು: ಎಲ್ಲರ ಎಳೆದು ಬಿಸಾಡಿದ ರಘು
ಈ ವಿಷಯವನ್ನು ಎಲ್ಲರೆದುರು ಘೋಷಣೆ ಮಾಡಿದಾಗ ಅಶ್ವಿನಿ ಎದ್ದು ಹೋಗಿಬಿಟ್ಟರು. ಕೆಲವರು ಅವರನ್ನು ಸಮಾಧಾನ ಮಾಡಲು ಮುಂದಾದಾಗ ಕಣ್ಣೀರು ಹಾಕಿದರು ಅಶ್ವಿನಿ. ನಾನು ಎರಡು ವಾರದಿಂದ ಚೆನ್ನಾಗಿ ಆಡುತ್ತಿದ್ದೇನೆ. ನನಗೆ ಕಿಚ್ಚನ ಚಪ್ಪಾಳೆ ಸಿಗಬಹುದು ಎಂದುಕೊಂಡಿದ್ದೆ. ಆದರೆ ಅದು ಸಿಗಲಿಲ್ಲ. ಈಗ ಕ್ಯಾಪ್ಟೆನ್ಸಿ ಓಟದಿಂದ ಹೊರಗೆ ಇಡಲಾಗಿದೆ. ಕುದುರೆಯನ್ನು ರೇಸಿಗೆ ಬಿಡದೆ ಅದರ ಶಕ್ತಿ ತಿಳಿದುಕೊಳ್ಳುವುದು ಹೇಗೆ? ಇದು ಅನ್ಯಾಯ ಎಂದು ಕಣ್ಣೀರು ಹಾಕಿದರು.
ಅರ್ಹರಲ್ಲದ ವ್ಯಕ್ತಿಯನ್ನು ಹೊರಗೆ ಇಡಬೇಕು ಎಂದು ನಿಯಮ ಇತ್ತು ಆದರೆ ಇವರು ಅತಿಯಾದ ಅರ್ಹರು ಎಂಬ ಕಾರಣಕ್ಕೆ ನನ್ನನ್ನು ಹೊರಗೆ ಇಟ್ಟಿದ್ದಾರೆ ಇದು ಸರಿಯಲ್ಲ ಎಂದು ಅಶ್ವಿನಿ ವಾದಿಸಿದರು. ಅಶ್ವಿನಿಯ ಗೆಳತಿ ಜಾನ್ವಿ, ಅಶ್ವಿನಿಯನ್ನು ಸಮಾಧಾನ ಮಾಡುತ್ತಾ, ನಾವು ಸಹ ಈ ಹಿಂದೆ ಟಾಸ್ಕ್ ಒಂದರಲ್ಲಿ ಧನು ಸ್ಟ್ರಾಂಗ್ ಎಂದು ಹೊರಗೆ ಇಟ್ಟಿದ್ದೆವು, ಈಗಲೂ ಸಹ ಹಾಗೆಯೇ ಆಗಿದೆ’ ಎಂದು ಖಂಡಿಸಿದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:13 pm, Wed, 22 October 25




