ಬಿಗ್ ಬಾಸ್ನಲ್ಲಿರೋ ಕೆನಡಾ ಹುಡುಗನ ಹಿಂದೆ ಬಿದ್ದ ರಾಶಿಕಾ-ಸ್ಪಂದನಾ; ಫೇಮ್ ಪಡೆಯಲು ಲವ್ ಸ್ಟೋರಿ?
ಬಿಗ್ ಬಾಸ್ ಮನೆಯಲ್ಲಿ ಹೊಸ ಪ್ರೇಮ ಕಹಾನಿ ಶುರುವಾಗುವ ಸೂಚನೆ ಸಿಕ್ಕಿದೆ. ಕೆನಡಾದಿಂದ ಬಂದ ಸೂರಜ್ ಸಿಂಗ್‌ಗೆ ರಾಶಿಕಾ ಹಾಗೂ ಸ್ಪಂದನಾ ಆಕರ್ಷಿತರಾಗಿದ್ದಾರೆ. ಈ ಲವ್ ಟ್ರ್ಯಾಕ್ ಫೇಮ್ ಗಳಿಸಲು ಒಂದು ತಂತ್ರವಾಗಿರಬಹುದೇ ಎಂಬ ಚರ್ಚೆ ಬಿಗ್ ಬಾಸ್ ವಲಯದಲ್ಲಿ ಶುರುವಾಗಿದೆ.

ಬಿಗ್ ಬಾಸ್ (Bigg Boss) ಮನೆಯಲ್ಲಿ ಸಾಕಷ್ಟು ಲವ್ ಸ್ಟೋರಿಗಳು ಹುಟ್ಟಿಕೊಂಡಿವೆ. ಕೆಲವು ಯಶಸ್ಸು ಕಂಡರೆ, ಇನ್ನೂ ಕೆಲವು ಬಿಗ್ ಬಾಸ್ ಮನೆಯಲ್ಲಿ ಫೇಮ್ ಪಡೆಯಲು ಮಾತ್ರ ಸೀಮಿತವಾಗಿದೆ. ಬಿಗ್ ಬಾಸ್ ಆರಂಭ ಆಗಿ ಒಂದು ತಿಂಗಳು ಕಳೆಯುತ್ತಾ ಬಂದರೂ ಯಾವುದೇ ಲವ್ ಸ್ಟೋರಿ ಹುಟ್ಟಿಕೊಂಡಿರಲಿಲ್ಲ. ಈಗ ಆ ರೀತಿಯ ಒಂದು ಕಥೆ ಆರಂಭ ಕಾಣುವ ಸೂಚನೆ ಸಿಕ್ಕಿದೆ.
ಬಿಗ್ ಬಾಸ್ ಮನೆಗೆ ಸೂರಜ್ ಸಿಂಗ್ ಎಂಟ್ರಿ ಆಗಿದೆ. ಅವರು ಕೆನಡಾದಲ್ಲಿ ಇದ್ದು, ಈಗ ಭಾರತಕ್ಕೆ ಮರಳಿದ್ದಾರೆ. ಅವರು ತಮ್ಮ ಹ್ಯಾಂಡ್ಸಮ್ ಲುಕ್ನಿಂದ ಗಮನ ಸೆಳೆಯುವ ರೀತಿಯಲ್ಲಿ ಇದ್ದಾರೆ. ಈಗ ಅವರನ್ನು ನೋಡಿ ಬಿಗ್ ಬಾಸ್ ಮನೆಯಲ್ಲಿ ಇಬ್ಬರು ಆಕರ್ಷಿತರಾಗಿದ್ದಾರೆ. ಅವರು ಬೇರಾರೂ ಅಲ್ಲ, ಸ್ಪಂದನ ಹಾಗೂ ರಾಶಿಕಾ. ಈ ವಿಚಾರ ಚರ್ಚೆ ಹುಟ್ಟುಹಾಕಿದೆ.
ಬಿಗ್ ಬಾಸ್ಗೆ ಬಂದ ದಿನವೇ ಸೂರಜ್ ಅವರು ಗುಲಾಬಿ ಹೂವನ್ನು ರಾಶಿಕಾಗೆ ನೀಡಿ, ‘ಅವರು ಕ್ಯೂಟ್ ಆಗಿ ಕಾಣಿಸುತ್ತಾರೆ’ ಎಂದರು. ಅಂದಿನಿಂದಲೂ ರಾಶಿಕಾ ಸೂರಜ್ ಅವರನ್ನು ಕಂಡಾಕ್ಷಣ ನಾಚುತ್ತಿದ್ದಾರೆ. ಅಶ್ವಿನಿ ಗೌಡ ಹಾಗೂ ಜಾನ್ವಿ ಬಳಿ ಈ ವಿಚಾರವನ್ನು ರಾಶಿಕಾ ಮಾತನಾಡಿದ್ದಾರೆ.
‘ನಾನು ಬಿಗ್ ಬಾಸ್ ಮನೆಗೆ ಬರೋದಕ್ಕೂ ಮೊದಲು ಇನ್ಸ್ಟಾಗ್ರಾಮ್ನಲ್ಲಿ ರೀಲ್ಸ್ ಬಂದಿತ್ತು. ಹ್ಯಾಂಡ್ಸಮ್ ಆಗಿದ್ದಾನೆ ಅಂತ ಪ್ರಾಫೈಲ್ ಚೆಕ್ ಮಾಡಿದೆ. ಇಲ್ಲಿ ಅವರನ್ನೇ ನೋಡಿದ ಬಳಿಕ ಫ್ಲ್ಯಾಶ್ ಆಯ್ತು’ ಎಂದು ಸೂರಜ್ ಬಗ್ಗೆ ಅಶ್ವಿನಿ ಅವರು ಹೇಳಿದ್ದಾರೆ. ‘ಯಾರಿಗೆ ಅವನು ಇಷ್ಟ’ ಎಂದು ಅಶ್ವಿನಿ ಅವರು ರಾಶಿಕಾ ಹಾಗೂ ಸ್ಪಂದನಾ ಬಳಿ ಪ್ರಶ್ನೆ ಮಾಡಿದರು. ‘ಇಬ್ಬರೂ ಲಿಸ್ಟ್ನಲ್ಲಿ ಇದ್ದಾರೆ’ ಎಂಬ ಮಾತು ಅಲ್ಲೇ ಕೇಳಿ ಬಂತು. ಆ ಬಳಿಕ ಅಶ್ವಿನಿ ಅವರು ‘ಇಷ್ಟು ದಿನ ಲವ್ ಟ್ರ್ಯಾಕ್ ಮಿಸ್ ಆಗ್ತಾ ಇತ್ತು’ ಎಂದರು.
ಇದನ್ನೂ ಓದಿ: ‘ಬಿಗ್ ಬಾಸ್ನಲ್ಲಿ ಅವಮಾನ ಆದರೆ ಅದನ್ನು ಮರೆತು ಮುಂದೆ ಹೋಗಲು ಸಾಧ್ಯವಿಲ್ಲ’; ಅಶ್ವಿನಿ ಗೌಡ ಕಣ್ಣೀರು
ಫೇಮ್ ಪಡೆಯಬೇಕು ಎಂದರೆ ಲವ್ ಸ್ಟೋರಿ ತುಂಬಾನೇ ಮುಖ್ಯವಾಗುತ್ತದೆ. ಹೀಗಾಗಿ ರಾಶಿಕಾ ಹಾಗೂ ಸ್ಪಂದನಾ ಈ ರೀತಿ ಆಲೋಚಿಸಿರಬಹುದು ಎಂದು ಊಹಿಸಲಾಗುತ್ತಾ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








