‘ದೈಹಿಕ ವಿಚಾರದಲ್ಲಿ ವಂಚನೆ ಮಾಡೋದು ದೊಡ್ಡದಲ್ಲ’; ಅಕ್ಷಯ್ ಪತ್ನಿ ಟ್ವಿಂಕಲ್ ಖನ್ನಾ
ಟ್ವಿಂಕಲ್ ಖನ್ನಾ ಮತ್ತು ಕಾಜೋಲ್ ಅವರ 'ಟೂ ಮಚ್ ವಿತ್ ಕಾಜೋಲ್ ಆ್ಯಂಡ್ ಟ್ವಿಂಕಲ್' ಶೋನಲ್ಲಿ ಜಾನ್ವಿ ಕಪೂರ್, ಕರಣ್ ಜೋಹರ್ ಸಂಬಂಧ, ವಂಚನೆ ಕುರಿತು ಚರ್ಚಿಸಿದ್ದಾರೆ. ದೈಹಿಕ ಮತ್ತು ಭಾವನಾತ್ಮಕ ವಂಚನೆ ಯಾವುದು ಹೆಚ್ಚು ಪರಿಣಾಮಕಾರಿ ಎಂಬ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಟ್ವಿಂಕಲ್ ಅವರ ಅಕ್ಷಯ್ ಕುಮಾರ್ ಕುರಿತ ಪರೋಕ್ಷ ಹೇಳಿಕೆ ಟ್ರೋಲ್ ಆಗಿದೆ.

ಟ್ವಿಂಕಲ್ ಖನ್ನಾ ಮತ್ತು ಕಾಜೋಲ್ ಪ್ರಸ್ತುತ ‘ಟೂ ಮಚ್ ವಿತ್ ಕಾಜೋಲ್ ಆ್ಯಂಡ್ ಟ್ವಿಂಕಲ್’ ಎಂಬ ಟಾಕ್ ಶೋ ಮೂಲಕ ಸುದ್ದಿಯಲ್ಲಿದ್ದಾರೆ. ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಪ್ರಸಾರ ಕಾಣುವ ಈ ಕಾರ್ಯಕ್ರಮದಲ್ಲಿ ಈಗ ಜಾನ್ವಿ ಕಪೂರ್ ಮತ್ತು ಕರಣ್ ಜೋಹರ್ ಅತಿಥಿಗಳಾಗಿ ಕಾಣಿಸಿಕೊಂಡಿದ್ದಾರೆ. ಈ ಸಂಚಿಕೆಯ ಪ್ರೋಮೋವನ್ನು ಸಹ ಈಗ ಬಿಡುಗಡೆ ಮಾಡಲಾಗಿದೆ. ಈ ವೇಳೆ ಅವರ ವೈಯಕ್ತಿಕ ಜೀವನದ ಬಗ್ಗೆ ಚರ್ಚಿಸಲಾಯಿತು. ಮದುವೆ, ಸಂಬಂಧಗಳಿಂದ ಹಿಡಿದು ವಿವಾಹೇತರ ಸಂಬಂಧಗಳವರೆಗೆ ಅನೇಕ ವಿಷಯಗಳ ಬಗ್ಗೆ ಚರ್ಚಿಸಲಾಗಿದೆ.
ಕಾಜೋಲ್ ಮತ್ತು ಟ್ವಿಂಕಲ್ ಅವರು ಸಂಬಂಧದಲ್ಲಿನ ಮೋಸದ ಬಗ್ಗೆ ಕರಣ್ ಮತ್ತು ಜಾನ್ವಿ ಅವರನ್ನು ಕೇಳಿದರು. ‘ದೈಹಿಕ ವಂನೆ ನನ್ನ ಮೇಲೆ ಹೆಚ್ಚು ಪರಿಣಾಮ ಬೀರುವುದಿಲ್ಲ, ಆದರೆ ಭಾವನಾತ್ಮಕ ವಂಚನೆ ಹೆಚ್ಚು ಕಿರಿಕಿರಿ ಉಂಟುಮಾಡುತ್ತದೆ’ ಎಂದರು.
‘ಮದುವೆಯಲ್ಲಿ ಯಾವುದು ಮುಖ್ಯ? ಪ್ರೀತಿ ಅಥವಾ ಹೊಂದಾಣಿಕೆ? ಎಂದು ಕಾಜೋಲ್ ಮತ್ತು ಟ್ವಿಂಕಲ್ ಕರಣ್ ಮತ್ತು ಜಾನ್ವಿ ಅವರನ್ನು ಕೇಳಿದರು. ಜಾನ್ವಿ ಪ್ರೀತಿ ಎಂದು ಉತ್ತರಿಸಿದರು. ಏತನ್ಮಧ್ಯೆ, ಕಾಜೋಲ್ ಮತ್ತು ಕರಣ್ ಜೋಹರ್ ಹೊಂದಾಣಿಕೆಯ ಬಗ್ಗೆ ಒತ್ತು ನೀಡಿದರು. ‘ಹೊಂದಾಣಿಕೆ ಇಲ್ಲದೆ ಪ್ರೀತಿ ಎಂದಿಗೂ ಉಳಿಯುವುದಿಲ್ಲ. ಹೊಂದಾಣಿಕೆ ಇಲ್ಲದಿದ್ದರೆ, ಮದುವೆಯ ನಂತರ ಕಡಿಮೆಯಾಗುವ ಮೊದಲ ವಿಷಯವೆಂದರೆ ಪ್ರೀತಿ’ಎಂದು ಕಾಜೋಲ್ ಹೇಳಿದರು. ಕರಣ್ ಕೂಡ ನಟಿಯ ಉತ್ತರವನ್ನು ಬೆಂಬಲಿಸಿದರು.
ನಂತರ ಅವರು ಕರಣ್ ಮತ್ತು ಜಾನ್ವಿ ಅವರನ್ನು ಭಾವನಾತ್ಮಕ ವಂಚನೆಯ ಬಗ್ಗೆ ಕೇಳಿದರು. ಅವರಿಗೆ ದೈಹಿಕ ವಂಚನೆ ಹೆಚ್ಚು ಮುಖ್ಯವೋ ಅಥವಾ ಭಾವನಾತ್ಮಕ ವಂಚನೆಯೋ ಎಂದು. ಉಳಿದವರೆಲ್ಲರೂ ಭಾವನಾತ್ಮಕ ವಂಚನೆ ಹೆಚ್ಚು ಮುಖ್ಯ ಎಂದು ಹೇಳಿದರು. ಆದರೆ ದೈಹಿಕ ವಂಚನೆ ಹೆಚ್ಚು ಕಿರಿಕಿರಿ ಉಂಟುಮಾಡುತ್ತದೆ ಎಂದು ಹೇಳಿದ್ದು ಜಾನ್ವಿ ಕಪೂರ್ ಮಾತ್ರ. ಅವರ ಸಂಗಾತಿ ಇದನ್ನು ಮಾಡಿದ್ದರೆ, ಅದು ಒಪ್ಪಂದ ಮುರಿಯುವ ಹಂತ ಎಂದರು.
ಇದನ್ನೂ ಓದಿ: ಸೈಫ್ ಅಲಿ ಖಾನ್ ಅಟ್ಯಾಕ್ ಬಳಿಕ ಕರೀನಾ ದೂಷಿಸಿದವರಿಗೆ ಟ್ವಿಂಕಲ್ ಖನ್ನಾ ಕ್ಲಾಸ್
‘ನಾವು ಐವತ್ತರ ಆಸುಪಾಸಿನಲ್ಲಿದ್ದೇವೆ ಮತ್ತು ಆಕೆಗೆ ಕೇವಲ ಇಪ್ಪತ್ತರ ಆಸುಪಾಸು. ಅವಳು ಶೀಘ್ರದಲ್ಲೇ ಈ ವಲಯಕ್ಕೆ ಪ್ರವೇಶಿಸುತ್ತಾಳೆ. ನಾವು ನೋಡಿದ್ದನ್ನು ಅವಳು ನೋಡಿಲ್ಲ. ರಾತ್ರಿ ಕಳೆಯುತ್ತಿದ್ದಂತೆ ಮಾತು ಕೂಡ ಮಾಯ ಆಗುತ್ತದೆ’ ಟ್ವಿಂಕಲ್ ಖನ್ನಾ ಮಾಡಿದ ಈ ಹೇಳಿಕೆಯು ಅಕ್ಷಯ್ ಕುಮಾರ್ ಅವರ ವಿವಾಹೇತರ ಸಂಬಂಧಗಳನ್ನು ನೇರವಾಗಿ ಸೂಚಿಸುತ್ತದೆ. ಈ ಸಲಹೆಗಾಗಿ ಟ್ವಿಂಕಲ್ ಅವರನ್ನು ಸಾಮಾಜಿಕ ಮಾಧ್ಯಮದಲ್ಲಿ ಟ್ರೋಲ್ ಮಾಡಲಾಯಿತು. ಕರಣ್ ಜೋಹರ್ ಮತ್ತು ಕಾಜೋಲ್ ಕೂಡ ಟ್ವಿಂಕಲ್ ಅವರನ್ನು ಬೆಂಬಲಿಸಿದರು ಮತ್ತು ಇದರಿಂದಾಗಿ ಅವರನ್ನು ಸಹ ಟೀಕಿಸಲಾಗುತ್ತಿದೆ. ಜಾನ್ವಿ ಅವರ ಉತ್ತರವನ್ನು ನೆಟ್ಟಿಗರು ಸಹ ಬೆಂಬಲಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.







