AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೈಫ್ ಅಲಿ ಖಾನ್ ಅಟ್ಯಾಕ್ ಬಳಿಕ ಕರೀನಾ ದೂಷಿಸಿದವರಿಗೆ ಟ್ವಿಂಕಲ್ ಖನ್ನಾ ಕ್ಲಾಸ್

ಸೈಫ್ ಅಲಿ ಖಾನ್ ಮೇಲೆ ನಡೆದ ದಾಳಿಯ ನಂತರ ಕರೀನಾ ಕಪೂರ್ ಅವರನ್ನು ದೂಷಿಸಿದ್ದಕ್ಕೆ ಟ್ವಿಂಕಲ್ ಖನ್ನಾ ತೀವ್ರವಾಗಿ ಖಂಡಿಸಿದ್ದಾರೆ. ಸೈಫ್ ಅವರ ಮೇಲಿನ ದಾಳಿಗೆ ಕರೀನಾ ಕಾರಣ ಎಂದು ಹರಡಿದ ವದಂತಿಗಳನ್ನು ಅವರು ತಳ್ಳಿಹಾಕಿದ್ದಾರೆ. ಪತಿಯ ಮೇಲಿನ ದಾಳಿಗಳಿಗೆ ಪತ್ನಿಯರನ್ನು ದೂಷಿಸುವುದು ಸಾಮಾನ್ಯ ಪದ್ಧತಿಯಾಗುತ್ತಿದೆ ಎಂದು ಅವರು ಟೀಕಿಸಿದ್ದಾರೆ.

ಸೈಫ್ ಅಲಿ ಖಾನ್ ಅಟ್ಯಾಕ್ ಬಳಿಕ ಕರೀನಾ ದೂಷಿಸಿದವರಿಗೆ ಟ್ವಿಂಕಲ್ ಖನ್ನಾ ಕ್ಲಾಸ್
Twinkle Khanna
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ|

Updated on: Jan 26, 2025 | 4:52 PM

Share

ಟ್ವಿಂಕಲ್ ಖನ್ನಾ ಅವರು ಉತ್ತಮ ಬರಹಗಾರ್ತಿ ಹೌದು. ನಟಿಯಾಗಿದ್ದ ಅವರು ನಂತರ ಬರಹವನ್ನು ಆಯ್ಕೆ ಮಾಡಿಕೊಂಡರು. ಈಗ ಅವರು ಇತ್ತೀಚಿಗಿನ ಬೆಳವಣಿಗೆ ಬಗ್ಗೆ ಬರೆದುಕೊಂಡಿದ್ದಾರೆ. ಹೌದು, ಇತ್ತೀಚೆಗೆ ಹಲವು ಘಟನೆಗಳಲ್ಲಿ ಪತಿ ಸಮಸ್ಯೆ ಎದುರಿಸಿದಾಗ ಅದಕ್ಕೆ ಪತ್ನಿ ಕಾರಣ ಎಂಬ ರೀತಿಯಲ್ಲಿ ಹೇಳಲಾಗುತ್ತಿದೆ. ಇದಕ್ಕೆ ಟ್ವಿಂಕಲ್ ಖನ್ನಾ ಅವರು ಸರಿಯಾದ ಉತ್ತರ ಕೊಟ್ಟಿದ್ದಾರೆ. ಈ ಮೂಲಕ ಸೋಶಿಯಲ್ ಮೀಡಿಯಾ ಚರ್ಚೆಗೆ ಇತಿ ಹಾಡಿದ್ದಾರೆ.

ಇತ್ತೀಚೆಗೆ ಸೈಫ್ ಅಲಿ ಖಾನ್ ಮೇಲೆ ದಾಳಿ ಆಯಿತು. ಈ ದಾಳಿಗೆ ಕರೀನಾ ಕಪೂರ್ ಕಾರಣ ಎಂದು ಅನೇಕರು ದೂರಿದರು. ಸೈಫ್ ಮೇಲೆ ದಾಳಿ ನಡೆಯುತ್ತಿರುವಾಗ ಕರೀನಾ ಕಪೂರ್ ಅವರು ಗೆಳತಿಯರ ಜೊತೆ ಪಾರ್ಟಿ ಮಾಡುತ್ತಿದ್ದರು ಎಂದು ಅನೇಕರು ಹೇಳಿದ್ದರು. ಇದನ್ನು ಟ್ವಿಂಕಲ್ ಖನ್ನಾ ಅವರು ಖಂಡಿಸಿದ್ದಾರೆ. ‘ಸೈಫ್ ಅಲಿ ಖಾನ್ ಅವರು ಆಸ್ಪತ್ರೆಯಲ್ಲಿ ಇರುವಾಗ ಒಂದು ವದಂತಿ ಹರಡಿತ್ತು. ಸೈಫ್ ಮೇಲೆ ದಾಳಿ ನಡೆದಾಗ ಸಹಾಯಕ್ಕೆ ಕರೀನಾ ಅಲ್ಲಿ ಇರಲಿಲ್ಲ ಎಂದು ಹೇಳಲಾಯಿತು. ಆದರೆ, ಇದನ್ನು ಸಾಬೀತು ಮಾಡುವ ಯಾವುದೇ ಸಾಕ್ಷ್ಯ ಇರಲಿಲ್ಲ. ಜನರು ಇದನ್ನು ಎಂಜಾಯ್ ಮಾಡಿದರು’ ಎಂದು ಟ್ವಿಂಕಲ್ ಹೇಳಿದ್ದಾರೆ.

‘ವಿರಾಟ್ ಕೊಹ್ಲಿ ಅವರು ಕಡಿಮೆ ರನ್​ಗೆ ಔಟ್ ಆದಾಗ ಅನುಷ್ಕಾ ಶರ್ಮಾ ಅವರನ್ನು ತೆಗಳಲಾಯಿತು. ಈ ರೀತಿಯ ಅನೇಕ ಘಟನೆ ನಡೆದಿದೆ. ಪತಿಗೆ ಆಗುವ ತೊಂದರೆಗೆ ಪತ್ನಿಯರನ್ನು ದೂಷಿಸುವುದು ಇದೇ ಮೊದೇಲನು ಅಲ್ಲ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಸಂದರ್ಶನ ಒಂದರಲ್ಲಿ ಟ್ವಿಂಕಲ್ ಖನ್ನಾಗೆ ಪ್ರಶ್ನೆ ಒಂದನ್ನು ಮಾಡಲಾಗಿತ್ತು. ‘ಸ್ಟಾರ್ ವೈಫ್​ ಆಗಿರೋದಕ್ಕೆ ಹೇಗೆ ಅನ್ನಿಸುತ್ತಿದೆ’ ಎಂದು ಅವರನ್ನು ಕೇಳಲಾಯಿತು. ಇದಕ್ಕೆ ಅವರು ಸಿಟ್ಟಾಗಿದ್ದರು. ಈಗ ಆರ್ಟಿಕಲ್​​ನಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Fact Check: ವಿರಾಟ್ ಕೊಹ್ಲಿ ಆಸ್ಪತ್ರೆಯಲ್ಲಿ ಸೈಫ್ ಅಲಿ ಖಾನ್​ರನ್ನು ಭೇಟಿ ಮಾಡಿದ್ದು ನಿಜವೇ?, ಇಲ್ಲಿದೆ ಸತ್ಯಾಂಶ

ಸೈಫ್ ಅಲಿ ಖಾನ್ ಅವರ ಮೇಲೆ ಜನವರಿ 16ರಂದು ದಾಳಿ ನಡೆದಿತ್ತು. ಹಲವು ಕಡೆಗಳಲ್ಲಿ ಅವರ ದೇಹದಲ್ಲಿ ಗಾಯಗಳು ಆಗಿದ್ದವು. ಸೈಫ್ ಮನೆಗೆ ನುಗ್ಗಿದ್ದ ಕಳ್ಳ ಈ ದಾಳಿ ನಡೆಸಿದ್ದ. ಸದ್ಯ ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವ ಅವರು ಮನೆಗೆ ಆಗಮಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.