Bigg Boss Kannada Winner Hanumantha: ಬಿಗ್ ಬಾಸ್ ವಿನ್ನರ್ ಹನುಮಂತ
Bigg Boss Kannada Winner Hanumantha: ಬಿಗ್ ಬಾಸ್ ಕನ್ನಡ ಸೀಸನ್ 11’ರ ವಿನ್ನರ್ ಯಾರು ಎಂದು ಘೋಷಣೆ ಆಗಿದೆ. ‘ಬಿಗ್ ಬಾಸ್’ ಫಿನಾಲೆಯಲ್ಲಿ ತ್ರಿವಿಕ್ರಂ ಹಾಗೂ ಹನುಮಂತ ಅವರು ಫಿನಾಲೆ ಹಂತದಲ್ಲಿ ಇದ್ದರು. ಸುದೀಪ್ ಅವರು ಹನುಮಂತ ಹಾಗೂ ತ್ರಿವಿಕ್ರಂನ ಅಕ್ಕ ಪಕ್ಕ ನಿಲ್ಲಿಸಿದರು. ಈ ವೇಳೆ ‘ವಿನ್ನರ್ ಹನುಮಂತ’ ಎಂದು ಸುದೀಪ್ ಕೈ ಎತ್ತಿದರು.
Bigg Boss Kannada Winner Hanumantha: ಬಿಗ್ ಬಾಸ್ ಕನ್ನಡ ಸೀಸನ್ 11’ರ ವಿನ್ನರ್ ಯಾರು ಎಂಬುದು ರಿವೀಲ್ ಆಗಿದೆ. ಕಳೆದ 117 ದಿನಗಳಿಂದ ನಡೆದುಕೊಂಡು ಬರುತ್ತಿದ್ದ ಬಿಗ್ ಬಾಸ್ ಇಂದು (ಜನವರಿ 26) ಕೊನೆ ಆಗಿದೆ. ಈ ಬಾರಿ ಮೋಕ್ಷಿತಾ ಪೈ, ರಜತ್, ಮಂಜು, ತ್ರಿವಿಕ್ರಂ ಹಾಗೂ ಹನುಮಂತ ಇದ್ದರು. ಹನುಮಂತ ಅವರಿಗೆ ಕಪ್ ಒಲಿದಿದೆ.
LIVE NEWS & UPDATES
-
ರನ್ನರ್ ಅಪ್ ಸ್ಥಾನ ಪಡೆದುಕೊಂಡ ತ್ರಿವಿಕ್ರಮ್
ಸರಳತೆ ಮೂಲಕವೇ ಸೌಂಡು ಮಾಡಿದ್ದ ಹನುಮಂತ ಅವರು ಬಿಗ್ ಬಾಸ್ ವಿನ್ನರ್ ಪಟ್ಟ ಪಡೆದರು. ತ್ರಿವಿಕ್ರಮ್ ಅವರು ರನ್ನರ್ ಅಪ್ ಆಗಿದ್ದಾರೆ.
-
ಎರಡನೇ ರನ್ನರ್ ಅಪ್ ಆದ ರಜತ್
50ನೇ ದಿನಗಳ ಬಳಿಕ ಬಿಗ್ಬಾಸ್ ಮನೆಗೆ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದ ರಜತ್ ಎರಡನೇ ರನ್ನರ್ ಅಪ್ ಆಗಿ ಮನೆಯಿಂದ ಹೊರಬಂದಿದ್ದಾರೆ. ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿದ್ದರೂ ರಜನ್ ತನ್ನ ನೇರ ನುಡಿಯಿಂದಲೇ ಸಾಕಷ್ಟು ಜನಮನ್ನಣೆ ಗಳಿಸಿದ್ದರು.
-
ಬಿಗ್ ಬಾಸ್ ಮನೆಯೊಳಗೆ ಕಿಚ್ಚ ಸುದೀಪ್
ಟಾಪ್ 3 ಸ್ಪರ್ಧಿಗಳಾದ ರಜತ್, ವಿಕ್ರಮ್ ಹಾಗೂ ಹನುಮಂತ ಅವರನ್ನು ಕರೆತರಲು ದೊಡ್ಮನೆ ಒಳಗೆ ಸುದೀಪ್ ಬಂದಿದ್ದಾರೆ.
ರಜತ್ ಕಿಶನ್ ಬಿಗ್ ಬಾಸ್ ಜರ್ನಿ
50 ದಿನಗಳ ನಂತರ ಬಿಗ್ ಬಾಸ್ ಮನೆಗೆ ಎಂಟ್ರಿಕೊಟ್ಟಿದ್ದ ರಜತ್ ಲಕ್ಷಾಂತರ ಜನರ ಮನಗೆದ್ದು ಟಾಪ್ 3ಯಲ್ಲಿ ಜಾಗ ಪಡೆದುಕೊಂಡಿದ್ದಾರೆ. ಲೇಟಾಗಿ ಬಂದ್ರೂ ಎಲ್ಲರನ್ನೂ ಎಂಟರ್‌ಟೈನ್ ಮಾಡಿದ ರಜತ್ ಕಿಶನ್ ಅವರ ಬಿಗ್ ಬಾಸ್ ಜರ್ನಿ ವಿಡಿಯೋ ಇಲ್ಲಿದೆ ನೋಡಿ.
View this post on Instagram
ಅಮ್ಮನ ನೆನೆದು ಕಿಚ್ಚ ಸುದೀಪ್ ಭಾವುಕ
ಕಟ್ಟ ಕಡೆಯ ಬಿಗ್ ಬಾಸ್ ಶೋ ನಡೆಸಿಕೊಡಲು ಕಿಚ್ಚ ಸುದೀಪ್ ಅವರು ಸ್ವಲ್ಪ ಎಮೋಷನಲ್ ಆಗಿದ್ದಾರೆ. ಇದಲ್ಲದೇ ಅಮ್ಮನ ನೆನೆದು ಕಿಚ್ಚ ಸುದೀಪ್ ಕಣ್ಣೀರು ಹಾಕಿದ್ದಾರೆ.
View this post on Instagram
ಕಿಚ್ಚನೇ ಕರೆತರ್ತಾರೆ
ಉಳಿದ ಮೂರು ಸ್ಪರ್ಧಿಗಳು ದೊಡ್ಮನೆಯಿಂದ ಸುದೀಪ್ ಅವರೇ ಕರೆದು ತರೋದಾಗಿ ಹೇಳಿದ್ದಾರೆ. ವೇದಿಕೆ ಮೇಲೆ ಈ ಮೂವರನ್ನು ವೇದಿಕೆ ಮೇಲೆ ಕಿಚ್ಚನೇ ಕರೆತರಲಿದ್ದಾರೆ.
ದೊಡ್ಮನೆಯಿಂದ ಮೋಕ್ಷಿತಾ ಔಟ್
ದೊಡ್ಮನೆಯಿಂದ ಮೋಕ್ಷಿತಾ ಅವರು ಎಲಿಮಿನೇಟ್ ಆಗಿದ್ದಾರೆ. ಅವರು ಟಾಪ್ ಐದರಲ್ಲಿ ಇದ್ದ ಏಕೈಕ ಮಹಿಳಾ ಸ್ಪರ್ಧಿ ಆಗಿತ್ತು. ಅವರಿಗೆ ಬಿದ್ದ ವೋಟ್ ಎಷ್ಟು ಎಂಬುದು ರಿವೀಲ್ ಆಗಿಲ್ಲ.
ವೇದಿಕೆಯ ಮೇಲೆ ತಮ್ಮನ್ನು ತಾವೇ ನೋಡಿ ಬಿದ್ದು ಬಿದ್ದು ನಕ್ಕ ಬಿಗ್ ಬಾಸ್ ಮನೆ ಮಂದಿ
ಬಿಗ್ ಬಾಸ್ ಮನೆ ಮಂದಿಯಂತೆ ಗಿಚ್ಚಿ ಗಿಲಿಗಿಲಿ ಸ್ಪರ್ಧಿಗಳು ಅಭಿನಯಿಸಿದ್ದಾರೆ. ಗಿಚ್ಚಿ ಗಿಲಿಗಿಲಿ ಸ್ಪರ್ಧಿಗಳ ಅವತಾರ ಕಂಡು ಬಿಗ್ ಬಾಸ್ ಮನೆ ಮಂದಿಯೆಲ್ಲ ನಕ್ಕು ನಕ್ಕು ಸುಸ್ತಾಗಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ.
View this post on Instagram
ಮಂಜುಗೆ ಬಿಗ್ ಬಾಸ್ ಮನೆಯಲ್ಲಿ ಕಾಟ ಕೊಟ್ಟಿದ್ದು ಈ ಸ್ಪರ್ಥಿ
ಉಗ್ರಂ ಮಂಜು ಅವರಿಗೆ ಬಿಗ್ ಬಾಸ್ ಮನೆಯಲ್ಲಿ ಅತಿ ಹೆಚ್ಚು ಕಾಟ ಕೊಟ್ಟಿದ್ದು ಯಾರು ಎಂಬುದನ್ನು ಬಹಿರಂಗಪಡಿಸಿದ್ದಾರೆ. ಸುದೀಪ್ ಅವರ ಕೇಳಿದ ಪ್ರಶ್ನೆಗೆ ಮಂಜು ಉತ್ತರಿಸಿದ್ದು, ಚೈತ್ರಾ ಕುಂದಾಪುರ ಅವರು ನನಗೆ ಹೆಚ್ಚು ಕಾಟ ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ.
ಚೈತ್ರಾ ಕಂಡು ಶಾಕ್ ಆದ ರಜತ್
ಗ್ರ್ಯಾಂಡ್ ಫಿನಾಲೆ ವೇದಿಕೆಗೆ ಬಿಗ್ ಬಾಸ್ ಸೀಸನ್ 11ರ ಮಾಜಿ ಸ್ಪರ್ಧಿಗಳು ಬಂದಿದ್ದು, ಅವರ ಪೈಕಿ ಚೈತ್ರಾ ಕುಂದಾಪುರ ಅವರು ತಮ್ಮ ಲುಕ್ ಮೂಲಕ ಗಮನ ಸೆಳೆದಿದ್ದಾರೆ. ಚೈತ್ರಾ ಅವರ ಕಾಸ್ಟೂಮ್ ಹಾಗೂ ಮೇಕಪ್ ಕಂಡು ರಜತ್ ಹಾಗೂ ಮನೆಯೊಳಗಿನ ಸ್ಪರ್ಧಿಗಳು ಶಾಕ್ ಆಗಿದ್ದಾರೆ. ಜೊತೆಗೆ ಸುದೀಪ್ ಅವರು ಕೂಡ ಚೈತ್ರಾಳ ಕಾಲೆಳೆದಿದ್ದಾರೆ.
View this post on Instagram
ಹಿರಿಯ ನಟ ಅನಂತ್ ನಾಗ್ ಬಗ್ಗೆ ಸುದೀಪ್ ಮಾತು
ಕನ್ನಡ ಚಿತ್ರರಂಗದ ಹಿರಿಯ ನಟ ಅನಂತ್ ನಾಗ್ ಅವರಿಗೆ ಪದ್ಮ ಭೂಷಣ ಪ್ರಶಸ್ತಿ ಘೋಷಣೆ ಆಗಿದ್ದು, ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆ ವೇದಿಕೆಯಲ್ಲಿ ಕಿಚ್ಚ ಸುದೀಪ್ ಅವರು ಅನಂತ್ ನಾಗ್ ಅವರಿಗೆ ಶುಭ ಹಾರೈಸಿದ್ದಾರೆ.
ಫಿನಾಲೆ ವೇದಿಕೆಗೆ ಕಿಚ್ಚನ ಗ್ರ್ಯಾಂಡ್ ಎಂಟ್ರಿ
‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಫಿನಾಲೆಗೆ ಕಿಚ್ಚ ಸುದೀಪ್ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ. ಗ್ರ್ಯಾಂಡ್ ಫಿನಾಲೆಯ ಎರಡನೇ ದಿನವಾದ ಇಂದು ಬಿಗ್ ಬಾಸ್ ವಿಜೇತರು ಯಾರು ಎಂಬುದು ಘೋಷಣೆಯಾಗಲಿದೆ.
ಹನುಮಂತನ ಮಾತಿಗೆ ನಕ್ಕು ನಕ್ಕು ಸುಸ್ತಾದ ಕಿಚ್ಚ
ಬಿಗ್ ಬಾಸ್ ಸ್ಪರ್ಧಿಗಳ ಪೈಕಿ ಯಾರ‍್ಯಾರು ಯಾವ ತರ ಎಂದು ಕಿಚ್ಚ ಸುದೀಪ್ ಅವರು ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಜಾಣ್ಮೆಯಿಂದ ಹನುಮಂತ ಉತ್ತರಿಸಿದ್ದು, ಹನುಮಂತನ ಉತ್ತರ ಕೇಳಿ ಕಿಚ್ಚ ಸುದೀಪ್ ನಕ್ಕು ನಕ್ಕು ಸುಸ್ತಾಗಿದ್ದಾರೆ. ಕಲರ್ಸ್ ಕನ್ನಡದ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ.
View this post on Instagram
ಭವ್ಯಾಳ ಜರ್ನಿಯ ವಿಡಿಯೋ ಹಂಚಿಕೊಂಡ ಬಿಗ್ ಬಾಸ್
ನಿನ್ನೆ ಟಾಪ್ 6 ಫೈನಲಿಸ್ಟ್ ಪೈಕಿ ಭವ್ಯ ಅವರು ಮನೆಯಿಂದ ಹೊರ ಬಂದಿದ್ದಾರೆ. ನಗು-ಅಳು-ಗೆಲುವು ಎಲ್ಲಾ ಭಾವನೆಗಳನ್ನೂ ಹೊತ್ತು ಹೊರಬಂದ ಭವ್ಯಾ ಅವರ ಬಿಗ್ ಬಾಸ್ ಜರ್ನಿಯ ಬಗ್ಗೆ ಕಲರ್ಸ್ ಕನ್ನಡದ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ.
View this post on Instagram
ಸುದೀಪ್ ಸಿದ್ಧತೆ
‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಫಿನಾಲೆಗೆ ಕ್ಷಣಗಣೆ ಆರಂಭ ಆಗಿದೆ. ಸುದೀಪ್ ಸಿದ್ಧತೆ ಹೇಗಿದೆ ಎಂಬ ವಿಡಿಯೋನ ಕಲರ್ಸ್ ಹಂಚಿಕೊಂಡಿದೆ.
View this post on Instagram
Published On - Jan 26,2025 3:44 PM