ಯಾವುದಕ್ಕೂ ತಲೆಕೆಡಿಸಿಕೊಳ್ಳುತ್ತಿರಲಿಲ್ಲ ಪುನೀತ್; ಅವರೇ ಹೇಳಿದ್ರು ಕೇಳಿ
Puneeth Rajkumar Death Anniversary: ಪುನೀತ್ ರಾಜ್‌ಕುಮಾರ್ ಅವರು ವರ್ಷಕ್ಕೊಂದು ಚಿತ್ರದಲ್ಲಿ ನಟಿಸಿ, ಕುಟುಂಬಕ್ಕೆ ಸಮಯ ಮೀಸಲಿಡುತ್ತಿದ್ದರು. ಅಪ್ಪ ರಾಜ್‌ಕುಮಾರ್ ಮತ್ತು ಶಿವಣ್ಣನ ಕೆಲಸದ ಶೈಲಿಗಿಂತ ಪುನೀತ್ ಸಿನಿಮಾ ಮಾಡುವ ಶೈಲಿ ಭಿನ್ನವಾಗಿತ್ತು. 2021ರಲ್ಲಿ ಹೃದಯಾಘಾತದಿಂದ ಅಪ್ಪು ನಿಧನರಾದರು. ಇದು ಕನ್ನಡ ಚಿತ್ರರಂಗಕ್ಕೆ ದೊಡ್ಡ ನಷ್ಟ.

ಪುನೀತ್ ರಾಜ್‌ಕುಮಾರ್ (Puneeth) ಅವರು ವರ್ಷಕ್ಕೆ ಒಂದು ಸಿನಿಮಾ ಆದರೂ ನೀಡುತ್ತಿದ್ದರು. ಅವರು ಇಲ್ಲದೆ ಕನ್ನಡ ಚಿತ್ರರಂಗಕ್ಕೆ ದೊಡ್ಡ ನಷ್ಟ ಆಗಿದೆ ಎಂದರೂ ತಪ್ಪಾಗಲಾರದು. ಪುನೀತ್ ಅವರು ಒಂದು ಸಿನಿಮಾ ಆದಮೇಲೆ ಮತ್ತೊಂದು ಸಿನಿಮಾ ಮಾಡಲು ಗ್ಯಾಪ್ ತೆಗೆದುಕೊಳ್ಳುತ್ತಿದ್ದರು. ಕುಟುಂಬಕ್ಕೆ ಸಮಯ ಕೊಡುತ್ತಿದ್ದರು. ಈ ಬಗ್ಗೆ ಅವರೇ ಹೇಳಿದ್ದರು. ಇದಕ್ಕೆ ಕಾರಣ ಏನು ಎಂದು ಕೂಡ ವಿವರಿಸಿದ್ದರು.
ರಾಜ್‌ಕುಮಾರ್ ಅವರು ಕನ್ನಡ ಚಿತ್ರರಂಗ ಕಂಡ ಮೇರುನಟ. ಅವರು ಹಲವು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಒಂದು ಸಿನಿಮಾ ಆದಮೇಲೆ ಅವರು ಗ್ಯಾಪ್ ತೆಗೆದುಕೊಳ್ಳುತ್ತಿರಲಿಲ್ಲ. ಒಂದೇ ದಿನ ಹಲವು ಸಿನಿಮಾಗಳನ್ನು ಅವರು ಶೂಟ್ ಮಾಡಿದ ಉದಾಹರಣೆ ಇದೆ. ಇದೇ ಥಿಯರಿಯನ್ನು ಶಿವರಾಜ್ಕುಮಾರ್ ಕೂಡ ಫಾಲೋ ಮಾಡಿಕೊಂಡು ಬಂದಿದ್ದಾರೆ. ಈ ಕಾರಣದಿಂದಲೇ ಬ್ಯಾಕ್ ಟು ಬ್ಯಾಕ್ ಸಿನಿಮಾ ನೀಡುತ್ತಿದ್ದಾರೆ. ವರ್ಷಕ್ಕೆ 3 ಸಿನಿಮಾ ರಿಲೀಸ್ ಆದ ಉದಾಹರಣೆ ಇದೆ.
ಆದರೆ ಪುನೀತ್ ರಾಜ್‌ಕುಮಾರ್ ಅವರು ಆ ರೀತಿ ಅಲ್ಲವೇ ಅಲ್ಲ. ‘ಕಥೆ ಅಪ್ರೂವ್ ಆಗೋಕೆ ಟೈಮ್ ತೆಗೆದುಕೊಳ್ಳುತ್ತದೆ. ನಾನು ರಿಲ್ಯಾಕ್ಸ್ ಮನುಷ್ಯ. ಯಾವುದಕ್ಕೂ ತಲೆಕೆಡಿಸಿಕೊಳ್ಳಲ್ಲ. ಹೀಗಾಗಿ, ಹೆಚ್ಚು ಸಮಯ ಬೇಕು’ ಎಂದು ಪುನೀತ್ ಅವರು ನೇರ ಮಾತುಗಳಲ್ಲಿ ಹೇಳಿದ್ದರು. ಅವರು ಸಮಯ ಮಾಡಿಕೊಂಡು ಕುಟುಂಬದ ಜೊತೆ ವೆಕೇಶನ್ ಹೋಗುತ್ತಿದ್ದರು. ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
ಇದನ್ನೂ ಓದಿ: ಪುನೀತ್ ಪ್ರೀತಿ ವಿಚಾರ ಹೇಳಿದಾಗ ರಾಜ್‌ಕುಮಾರ್ ರಿಯಾಕ್ಷನ್ ಹೇಗಿತ್ತು?
ಪುನೀತ್ ರಾಜ್‌ಕುಮಾರ್ ಅವರು ನಿಧನ ಹೊಂದಿ ನಾಲ್ಕು ವರ್ಷಗಳು ಕಳೆದಿವೆ. ಅದು 2021ರ ಅಕ್ಟೋಬರ್ 29ರಂದು ನಿಧನ ಹೊಂದಿದರು. ಸಾಯುವ ಹಿಂದಿನ ದಿನ ರಾತ್ರಿ ಅವರು ಗುರು ಕಿರಣ್ ಬರ್ತ್ಡೇ ಪಾರ್ಟಿಗೆ ತೆರಳಿದ್ದರು. ಈ ಪಾರ್ಟಿ ಮುಗಿಸಿ ಅವರು ಬಂದಿದ್ದರು. ಆ ಬಳಿಕ ಅವರಿಗೆ ಹೃದಯಾಘತ ಆಯಿತು. ಈ ಹೃದಯಾಘಾತ ಸಾಕಷ್ಟು ಶಾಕಿಂಗ್ ಎನಿಸಿದೆ. ಇದರಿಂದ ಹೊರ ಬರಲು ಅವರ ಅಭಿಮಾನಿಗಳಿಗೆ ಸಾಧ್ಯವೇ ಆಗಿಲ್ಲ. ಪುನೀತ್ ರಾಜ್‌ಕುಮಾರ್ ಸಾವಿನ ಬಳಿಕ ಅವರ ಹೆಸರಲ್ಲಿ ಸಾಕಷ್ಟು ಒಳ್ಳೆಯ ಕೆಲಸಗಳು ನಡೆದವು. ರಸ್ತೆ, ಪಾರ್ಕ್ಗಳಿಗೆ ಅವರ ಹೆಸರನ್ನು ಇಡಲಾಗಿದೆ. ಪುನೀತ್ ಇಂದು ನಮ್ಮ ಜೊತೆ ಇಲ್ಲ ಎಂಬ ನೋವು ಸದಾ ಕಾಡುತ್ತದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 8:10 am, Tue, 28 October 25







