‘ಕಾಂತಾರ: ಚಾಪ್ಟರ್ 1’ ಚಿತ್ರದಲ್ಲಿ ರಿಷಬ್ ಮಾಯಕಾರನಾಗಲು ಬೇಕಾಯ್ತು 6 ಗಂಟೆ; ಅಪರೂಪದ ವಿಡಿಯೋ
‘ಕಾಂತಾರ: ಚಾಪ್ಟರ್ 1’ ಚಿತ್ರದಲ್ಲಿ ರಿಷಬ್ ಶೆಟ್ಟಿ ದ್ವಿಪಾತ್ರದಲ್ಲಿ ನಟಿಸಿದ್ದಾರೆ. ಬೆರ್ಮೆ ಜೊತೆಗೆ ಮಾಯಕಾರ ಪಾತ್ರವನ್ನು ಅವರೇ ಮಾಡಿದ್ದು ಅನೇಕರಿಗೆ ಗೊತ್ತಿರಲಿಲ್ಲ. ರಿಷಬ್ 6 ಗಂಟೆಗಳ ಪರಿಶ್ರಮದಿಂದ ಮಾಯಕಾರನಾಗಿ ರೂಪಾಂತರಗೊಂಡಿದ್ದನ್ನು ತೋರಿಸಿದೆ. 25 ದಿನ ಪೂರೈಸಿ ₹850 ಕೋಟಿ ಗಳಿಸಿರುವ ಚಿತ್ರದಲ್ಲಿ ಅವರ ಸಮರ್ಪಣೆಗೆ ಮೆಚ್ಚುಗೆ ವ್ಯಕ್ತವಾಗಿದೆ.

ರಿಷಬ್ ಶೆಟ್ಟಿ ಅವರು ‘ಕಾಂತಾರ: ಚಾಪ್ಟರ್ 1’ (Kantar) ಚಿತ್ರದಲ್ಲಿ ಕೇವಲ ಬೆರ್ಮೆ ಆಗಿ ಮಾತ್ರ ಕಾಣಿಸಿಕೊಂಡಿರಲಿಲ್ಲ ಎಂಬ ವಿಚಾರ ಅನೇಕರಿಗೆ ತಿಳಿದಿಲ್ಲ! ಹೌದು, ಈ ಚಿತ್ರದಲ್ಲಿ ರಿಷಬ್ ಅವರದ್ದು ದ್ವಿಪಾತ್ರ. ಬೆರ್ಮೆ ಜೊತೆಗೆ ಮಾಯಕಾರ ಹೆಸರಿನ ಪಾತ್ರದಲ್ಲೂ ಅವರು ಕಾಣಿಸಿಕೊಂಡಿದ್ದಾರೆ. ಅನೇಕರಿಗೆ ಆ ಪಾತ್ರವನ್ನು ಮಾಡಿದ್ದು ರಿಷಬ್ ಅವರೇ ಎಂಬ ಸಣ್ಣ ಸುಳಿವೂ ಸಿಕ್ಕಿರಲಿಲ್ಲ. ಈಗ ಇದನ್ನು ಅನಾವರಣ ಮಾಡುವ ವಿಡಿಯೋ ಒಂದನ್ನು ಹೊಂಬಾಳೆ ಫಿಲ್ಮ್ಸ್ ಹಂಚಿಕೊಂಡಿದೆ.
‘ಕಾಂತಾರ: ಚಾಪ್ಟರ್ 1’ ಚಿತ್ರದ ಆರಂಭದಲ್ಲಿ ಹಾಗೂ ಕ್ಲೈಮ್ಯಾಕ್ಸ್ನಲ್ಲಿ ಒಂದು ಪಾತ್ರ ಬರುತ್ತದೆ. ಅದುವೇ ಮಾಯಕಾರ. ರಿಷಬ್ಗೆ ಸಹಾಯ ಮಾಡುವ ಪಾತ್ರ ಇದಾಗಿದೆ. ಇದನ್ನು ಮಾಡಿದ್ದು ಯಾರು ಎಂಬ ವಿಚಾರ ಅನೇಕರಿಗೆ ಗೊತ್ತಿರಲಿಲ್ಲ. ಈಗ ಸಿನಿಮಾ 25 ದಿನ ಪೂರೈಸಿದ ಹಿನ್ನೆಲೆಯಲ್ಲಿ ಹೊಂಬಾಳೆ ಈ ವಿಶೇಷ ವಿಡಿಯೋನ ಹೊಂಬಾಳೆ ಹಂಚಿಕೊಂಡಿದೆ.
ಹೊಂಬಾಳೆ ಹಂಚಿಕೊಂಡ ವಿಡಿಯೋ
View this post on Instagram
ರಿಷಬ್ ಶೆಟ್ಟಿ ಸೆಟ್ಗೆ ಬೆಳಿಗ್ಗೆ 3 ಗಂಟೆಗೆ. ನಂತರ ಸುಮಾರು ಆರು ಗಂಟೆಗಳ ನಿರಂತರ ಪರಿಶ್ರಮದೊಂದಿಗೆ ರಿಷಬ್ ಅವರು ಮಾಯಕಾರನಾಗಿ ಬದಲಾಗುತ್ತಾರೆ. ಅವರು ಅದೆಷ್ಟು ಬದಲಾಗಿದ್ದರು ಎಂದರೆ ರಿಷಬ್ ಎಂದು ಗುರುತಿಸಲೂ ಸಾಧ್ಯವಾಗದಷ್ಟು. ಈಗ ಈ ವಿಡಿಯೋ ನೋಡಿದ ಬಳಿಕ ಅನೇಕರು ಅಚ್ಚರಿ ಹೊರಹಾಕಿದ್ದಾರೆ. ರಿಷಬ್ ತೋರಿದ ಸಮರ್ಪಣೆ ಬಗ್ಗೆ ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ. ಈ ಪಾತ್ರವನ್ನು ಬೇರೆಯವರ ಬಳಿ ಅವರು ಮಾಡಿಸಬಹುದಿತ್ತು. ಆದರೆ, ಈ ಪಾತ್ರವನ್ನು ಅವರೇ ಮಾಡಿದ್ದಾರೆ.
ಇದನ್ನೂ ಓದಿ: ‘ಕಾಂತಾರ ನೋಡಿ ಮೈಮರೆತೆ’; ರಿಷಬ್ ಚಿತ್ರ ಹೊಗಳಿದ ಅಲ್ಲು ಅರ್ಜುನ್
25 ದಿನ ಪೂರೈಸಿದ ಕಾಂತಾರ
‘ಕಾಂತಾರ: ಚಾಪ್ಟರ್ 1’ ಚಿತ್ರ ರಿಲೀಸ್ ಆಗಿ 25 ದಿನಗಳು ಕಳೆದಿವೆ. ಈ ಸಿನಿಮಾ ವಿಶ್ವ ಬಾಕ್ಸ್ ಆಫೀಸ್ನಲ್ಲಿ ಬರೋಬ್ಬರಿ 850 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಹೀಗೆಯೇ ಮುಂದುವರಿದರೆ ಸಿನಿಮಾದ ಒಟ್ಟಾರೆ ಗಳಿಕೆ ಎಷ್ಟು ಕೋಟಿ ರೂಪಾಯಿ ಆಗುತ್ತದೆ ಎಂಬ ಕುತೂಹಲ ಮೂಡಿದೆ. ಈ ಸಿನಿಮಾ ಸಾವಿರ ಕೋಟಿ ರೂಪಾಯಿ ಕ್ಲಬ್ ಸೇರಬಹುದು ಎಂದು ಊಹಿಸಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:37 am, Mon, 27 October 25








