AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತನಿಷಾ ನಿರ್ಮಾಣದ ‘ಕೋಣ’ ಚಿತ್ರದಲ್ಲಿ ವರ್ತೂರು ಸಂತೋಷ್ ನಟಿಸಿಲ್ಲ: ಇಲ್ಲಿದೆ ಅಸಲಿ ಕಾರಣ

‘ಬಿಗ್​ ಬಾಸ್ ಕನ್ನಡ’ ರಿಯಾಲಿಟಿ ಶೋನ ಹಲವು ಮಾಜಿ ಸ್ಪರ್ಧಿಗಳು ‘ಕೋಣ’ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಆದರೆ ವರ್ತೂರು ಸಂತೋಷ್ ಅವರು ನಟಿಸಲು ಸಾಧ್ಯವಾಗಿಲ್ಲ. ಯಾಕೆ ಎಂಬ ಪ್ರಶ್ನೆ ಅಭಿಮಾನಿಗಳಿಗೆ ಇದೆ. ಆ ಕುರಿತು ನಟಿ, ನಿರ್ಮಾಪಕಿ ತನಿಷಾ ಕುಪ್ಪಂಡ ಅವರು ಟಿವಿ9 ಜೊತೆ ಮಾತನಾಡಿದ್ದಾರೆ.

ತನಿಷಾ ನಿರ್ಮಾಣದ ‘ಕೋಣ’ ಚಿತ್ರದಲ್ಲಿ ವರ್ತೂರು ಸಂತೋಷ್ ನಟಿಸಿಲ್ಲ: ಇಲ್ಲಿದೆ ಅಸಲಿ ಕಾರಣ
Tanisha Kuppanda, Varthur Santhosh
Mangala RR
| Edited By: |

Updated on:Oct 26, 2025 | 8:42 PM

Share

ನಟಿ ತನಿಷಾ ಕುಪ್ಪಂಡ (Tanisha Kuppanda) ಅವರು ಬಿಗ್ ಬಾಸ್ ಮೂಲಕ ಖ್ಯಾತಿ ಹೆಚ್ಚಿಸಿಕೊಂಡರು. ಈಗ ಅವರು ನಿರ್ಮಾಪಕಿ ಕೂಡ ಆಗಿದ್ದಾರೆ. ‘ಕೋಣ’ ಸಿನಿಮಾಗೆ ಅವರು ಬಂಡವಾಳ ಹೂಡಿದ್ದಾರೆ. ಈ ಚಿತ್ರದಲ್ಲಿ ಕೋಮಲ್ ಕುಮಾರ್ ಅವರು ಹೀರೋ ಆಗಿ ಅಭಿನಯಿಸಿದ್ದಾರೆ. ‘ನಮ್ಮನ್ನು ಹೀಯಾಳಿಸಿದವರ ಮುಂದೆ ಎದ್ದು ನಿಲ್ಲಬೇಕು. ಒಂದಷ್ಟು ಜನರಿಗೆ ಕೆಲಸ ಕೊಡಬೇಕು’ ಎಂಬ ಉದ್ದೇಶದಿಂದ ಅವರು ನಿರ್ಮಾಪಕಿ ಆಗಿದ್ದಾರೆ. ತನಿಷಾ ಕುಪ್ಪಂಡ ಅವರು ‘ಟಿವಿ9 ಕನ್ನಡ’ ಜೊತೆ ಮಾತನಾಡಿ ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ವರ್ತೂರು ಸಂತೋಷ್ (Varthur Santhosh) ಕುರಿತ ಪ್ರಶ್ನೆಗೂ ಅವರು ಉತ್ತರ ನೀಡಿದ್ದಾರೆ.

‘ಕೋಣ’ ಸಿನಿಮಾ ಅಕ್ಟೋಬರ್ 31ರಂದು ರಿಲೀಸ್ ಆಗಲಿದೆ. ಈ ಚಿತ್ರದಲ್ಲಿ ಬಿಗ್ ಬಾಸ್ ಮಾಜಿ ಸ್ಪರ್ಧಿಗಳು ಹಲವರು ಅಭಿನಯಿಸಿದ್ದಾರೆ ಎಂಬುದು ವಿಶೇಷ ಆದರೆ ವರ್ತೂರು ಸಂತೋಷ್ ಅವರು ನಟಿಸಿಲ್ಲ. ಬಿಗ್ ಬಾಸ್ ಮನೆಯಲ್ಲಿ ಇದ್ದಾಗ ತನಿಷಾ ಕುಪ್ಪಂಡ ಮತ್ತು ವರ್ತೂರು ಸಂತೋಷ್ ಅವರು ತುಂಬಾ ಆಪ್ತವಾಗಿದ್ದರು. ಆದರೆ ತನಿಷಾ ನಿರ್ಮಾಣದ ಸಿನಿಮಾದಲ್ಲಿ ವರ್ತೂರು ಸಂತೋಷ್ ಯಾಕೆ ನಟಿಸಲ್ಲ ಎಂಬದಕ್ಕೆ ಅವರು ಉತ್ತರಿಸಿದ್ದಾರೆ.

‘ಕಾರ್ತಿಕ್ ಮಹೇಶ್ ಮತ್ತು ವರ್ತೂರು ಸಂತೋಷ್ ಅವರನ್ನು ನಾನು ಕೇಳಿದ್ದೇನೆ. ಕಾರಣಾಂತರಗಳಿಂದ ಅವರು ಈ ಸಿನಿಮಾದಲ್ಲಿ ನಟಿಸಲು ಸಾಧ್ಯವಾಗಲಿಲ್ಲ. ಅದೇ ಸತ್ಯ. ನನ್ನ ಪಟ್ಟಿಯಲ್ಲಿ ಇರುವ ಯಾರನ್ನೂ ನಾನು ಆ ರೀತಿ ಬಿಡಲು ಸಾಧ್ಯವಿಲ್ಲ. ನನ್ನ ಕಡೆಯಿಂದ ನಾನು ಯಾರನ್ನೂ ಬಿಟ್ಟುಕೊಡಲ್ಲ. ಅವರು ಇಲ್ಲ ಅಂದರೆ ಅದಕ್ಕೆ ನಿಜವಾದ ಕಾರಣ ಇರುತ್ತದೆ. ಒಂದು ಪಾತ್ರಕ್ಕೆ ವರ್ತೂರು ಅವರನ್ನು ಕೇಳಿದ್ವಿ. ಅವರಿಗೆ ನಟನೆ ಮಾಡೋಕೆ ಬರಲ್ಲ ಎಂಬ ಕಾರಣಕ್ಕೆ ಅವರನ್ನು ಬಿಡಬೇಕಾಯಿತು’ ಎಂದಿದ್ದಾರೆ ತನಿಷಾ ಕುಪ್ಪಂಡ.

‘ಸಿನಿಮಾ, ಧಾರಾವಾಹಿ, ಬಿಗ್ ಬಾಸ್ ಮುಂತಾದ ಕ್ಷೇತ್ರದಿಂದ ಕಲಾವಿದರನ್ನು ಆಯ್ಕೆ ಮಾಡಿಕೊಂಡಿದ್ದೇನೆ. ಹೊಸ ಕಲಾವಿದರು ಕೂಡ ನಟಿಸಿದ್ದಾರೆ. ತುಕಾಲಿ ಸಂತೋಷ್, ಗೋಲ್ಡ್ ಸುರೇಶ್, ಮಂಜು ಪಾವಗಡ, ಶಿಶಿರ್ ಶಾಸ್ತ್ರಿ, ನಮ್ರತಾ ಗೌಡ, ವಿನಯ್ ಗೌಡ ಬಿಗ್ ಬಾಸ್ ಮೂಲಕ ಜನರಿಗೆ ಹತ್ತಿರವಾದವರು. ಹಾಗಾಗಿ ಅವರೆಲ್ಲರೂ ಮನರಂಜನೆ ನೀಡುತ್ತಾರೆ’ ಎಂದು ತನಿಷಾ ಕುಪ್ಪಂಡ ಹೇಳಿದ್ದಾರೆ.

ಇದನ್ನೂ ಓದಿ: ತನಿಷಾ ಜೊತೆ ಕಾರ್ತಿಕ್ ಮಹೇಶ್ ಸ್ನೇಹಕ್ಕೆ ಸಾಕ್ಷಿ ಈ ಫೋಟೋಗಳು

ತನಿಷಾ ಅವರು ‘ಕೋಣ’ ಸಿನಿಮಾದಲ್ಲಿ ಮೃದು ಸ್ವಭಾವದ ಹುಡುಗಿಯ ಪಾತ್ರ ಮಾಡಿದ್ದಾರೆ. ‘ನಿಜ ಜೀವನದಲ್ಲಿ ನನ್ನನ್ನು ಯಾರೂ ಕೂಡ ಈ ರೀತಿ ನೋಡಿಲ್ಲ. ಪಾತ್ರಕ್ಕೆ ಎಷ್ಟು ಬೇಕೋ ಅಷ್ಟು ಕಾಣಿಸಿಕೊಂಡಿದ್ದೇನೆ’ ಎಂದು ತನಿಷಾ ಅವರು ಹೇಳಿದ್ದಾರೆ. ಸಾಕಷ್ಟು ಟ್ವಿಸ್ಟ್​ಗಳು ಕೂಡ ಈ ಪಾತ್ರಕ್ಕೆ ಇದೆ ಎಂದು ಹೇಳುವ ಮೂಲಕ ಅವರು ಕುತೂಹಲ ಮೂಡಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:55 pm, Sun, 26 October 25