AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಿನ್ ಮಿಸ್ ಮಾಡಿಕೊಳ್ತೀನಿ’; ಬಿಗ್ ಬಾಸ್​ನಿಂದ ಹೊರಟಿದ್ದ ರಾಶಿಕಾನ ತಬ್ಬಿ ಹೇಳಿದ ಸೂರಜ್

Bigg Boss Kannada Elimination: ಬಿಗ್ ಬಾಸ್ ಕನ್ನಡ ಸೀಸನ್ 12ರ ನಾಲ್ಕನೇ ವಾರ ದೀಪಾವಳಿ ಪ್ರಯುಕ್ತ ಪ್ರ್ಯಾಂಕ್ ಎಲಿಮಿನೇಷನ್ ಮಾಡಲಾಯಿತು. ರಾಶಿಕಾ ಮತ್ತು ಸ್ಪಂದನಾ ಮನೆಯಿಂದ ಹೊರಹೋಗುವವರ ಲಿಸ್ಟ್‌ನಲ್ಲಿದ್ದರು. ಸೂರಜ್ ರಾಶಿಕಾರನ್ನು ಅಪ್ಪಿಕೊಂಡರು. ಕೊನೆಗೆ ಇದು ಪ್ರ್ಯಾಂಕ್ ಎಂದು ತಿಳಿದು ಸ್ಪರ್ಧಿಗಳು ನಿಟ್ಟುಸಿರು ಬಿಟ್ಟರು.

‘ನಿನ್ ಮಿಸ್ ಮಾಡಿಕೊಳ್ತೀನಿ’; ಬಿಗ್ ಬಾಸ್​ನಿಂದ ಹೊರಟಿದ್ದ ರಾಶಿಕಾನ ತಬ್ಬಿ ಹೇಳಿದ ಸೂರಜ್
ಬಿಗ್ ಬಾಸ್
ರಾಜೇಶ್ ದುಗ್ಗುಮನೆ
|

Updated on:Oct 27, 2025 | 9:02 AM

Share

‘ಬಿಗ್ ಬಾಸ್ ಕನ್ನಡ ಸೀಸನ್ 12’ರ (BBk 12) ನಾಲ್ಕನೇ ವೀಕೆಂಡ್​ನಲ್ಲಿ ಪ್ರ್ಯಾಂಕ್ ಎಲಿಮಿನೇಷನ್ ಮಾಡಲಾಗಿದೆ. ದೀಪಾವಳಿ ಪ್ರಯುಕ್ತ ಯಾವುದೇ ಎಲಿಮಿನೇಷನ್ ಇರೋದಿಲ್ಲ ಎಂದು ವೀಕ್ಷಕರಿಗೆ ಮೊದಲೇ ತಿಳಿಸಲಾಗಿತ್ತು. ಆದರೆ, ಬಿಗ್ ಬಾಸ್​ನಲ್ಲಿ ಇದ್ದ ಸ್ಪರ್ಧಿಗಳಿಗೆ ಈ ಬಗ್ಗೆ ಮಾಹಿತಿ ಇರಲಿಲ್ಲ. ಪ್ರ್ಯಾಂಕ್ ಎಲಿಮಿನೇಷನ್​ಗೆ ರಾಶಿಕಾ ಹಾಗೂ ಸ್ಪಂದನಾ ಸೋಮಣ್ಣ ಒಂದು ಕ್ಷಣ ಕಂಗಾಲಾದರು. ಮನೆಯಿಂದ ಹೊರ ಹೊರಟ ರಾಶಿಕಾನ ಸೂರಜ್ ತಬ್ಬಿದ್ದಾರೆ.

ಸೂರಜ್ ಹಾಗೂ ರಾಶಿಕಾ ಮಧ್ಯೆ ಪ್ರೀತಿ ಮೂಡುತ್ತಿರುವುದು ಸ್ಪಷ್ಟವಾಗುತ್ತಿದೆ. ಆದರೆ, ನೋಡುಗರಿಗೆ ಇದು ತುಂಬಾನೇ ನಾಟಕೀಯ ಎನಿಸುತ್ತಿದೆ. ಜನಪ್ರಿಯತೆ ಗಳಿಸಬೇಕು ಎಂಬ ಕಾರಣಕ್ಕೆ ರಾಶಿಕಾ ಅವರು ಈ ರೀತಿಯ ಪ್ರೀತಿ ನಾಟಕ ಮಾಡುತ್ತಿದ್ದಾರೆ ಎಂದು ಕೆಲವರು ಹೇಳುತ್ತಿದ್ದಾರೆ. ಸುದೀಪ್ ಕೂಡ ಈ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಹೀಗೆ ಮುಂದುವರಿದರೆ ಆಟ ಶೀಘ್ರವೇ ಕೊನೆ ಆಗುತ್ತದೆ ಎಂದು ರಾಶಿಕಾಗೆ ಸುದೀಪ್ ಬುದ್ಧಿಮಾತು ಹೇಳಿದ್ದಾರೆ.

ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಬಿಗ್ ಬಾಸ್ ರಾಶಿಕಾಗೆ ಚಮಕ್ ನೀಡಿದರು. ನಾಮಿನೇಟ್ ಆದವರ ಪೈಕಿ ಧ್ರುವಂತ್, ರಾಶಿಕಾ ಹಾಗೂ ಸ್ಪಂದನಾ ಅವರು ಅಂತಿಮವಾಗಿ ಉಳಿದುಕೊಂಡರು. ಈ ಪೈಕಿ ಧ್ರುವಂತ್ ಸೇವ್ ಆದರು. ಈ ಬೆನ್ನಲ್ಲೇ, ‘ರಾಶಿಕಾ ಹಾಗೂ ಸ್ಪಂದನಾ ನೀವಿನ್ನು ಮನೆಯಿಂದ ಹೊರಡಬಹುದು’ ಎಂದರು. ಇದರಿಂದ ರಾಶಿಕಾ ಹಾಗೂ ಸ್ಪಂದನಾ ಕಣ್ಣೀರು ಹಾಕಲು ಆರಂಭಿಸಿದರು.

ಇದನ್ನೂ ಓದಿ
Image
‘ಜಾನ್ವಿ ಗೆಳೆತನದಿಂದ ನನಗೆ ಕಳಂಕ ಬಂದಿದೆ’; ಬದಲಾದ ಅಶ್ವಿನಿ ಗೌಡ
Image
‘ಮುತ್ತಿಟ್ಟು, ಬಟ್ಟೆಗೆ ಕೈ ಹಾಕಿದ’; ಕರಾಳ ಅನುಭವ ಹಂಚಿಕೊಂಡ ನಟಿ
Image
‘ಕಾಂತಾರ: ಚಾಪ್ಟರ್ 1’ ಚಿತ್ರದಲ್ಲಿ ರಿಷಬ್ ಮಾಯಕಾರನಾಗಲು ಬೇಕಾಯ್ತು 6 ಗಂಟೆ
Image
4ನೇ ಭಾನುವಾರವೂ ‘ಕಾಂತಾರ: ಚಾಪ್ಟರ್ 1’ ಚಿತ್ರಕ್ಕೆ ಡಬಲ್ ಡಿಜಿಟ್ ಕಲೆಕ್ಷನ್

ಇದನ್ನೂ ಓದಿ: ಬಿಗ್ ಬಾಸ್ ಎಲಿಮಿನೇಷನ್: ಸ್ಪರ್ಧಿಗಳ ಎದೆಯಲ್ಲಿ ಢವಢವ ಹೆಚ್ಚಿಸಿದ ಕಿಚ್ಚ ಸುದೀಪ್

ಓಡಿ ಬಂದ ಸೂರಜ್ ಅವರು ರಾಶಿಕಾನ ತಬ್ಬಿಕೊಂಡರು. ಸೂರಜ್​ಗೂ ಇದು ಸಾಕಷ್ಟು ಬೇಸರ ಮೂಡಿಸಿತು. ‘ನಾನು ನಿನ್ನನ್ನು ಮಿಸ್ ಮಾಡಿಕೊಳ್ಳುತ್ತೇನೆ’ ಎಂದು ಸೂರಜ್ ಹೇಳಿದರು. ಆ ಬಳಿಕ ಮುಖ್ಯದ್ವಾರ ಓಪನ್ ಆದಾಗ, ‘ಎಲಿಮಿನೇಷನ್ ಇರೋದಿಲ್ಲ’ ಎಂಬ ಬೋರ್ಡ್ ಕಂಡು ರಾಶಿಕಾ ಹಾಗೂ ಸ್ಪಂದನಾ ಖುಷಿ ಆದರು. ಈ ವೇಳೆ ಮತ್ತೆ ಓಡೋಡಿ ಬಂದ ಸೂರಜ್ ರಾಶಿಕಾನ ಮತ್ತೆ ತಬ್ಬಿಕೊಂಡರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 9:01 am, Mon, 27 October 25