ಬಿಗ್ ಬಾಸ್ ಎಲಿಮಿನೇಷನ್: ಸ್ಪರ್ಧಿಗಳ ಎದೆಯಲ್ಲಿ ಢವಢವ ಹೆಚ್ಚಿಸಿದ ಕಿಚ್ಚ ಸುದೀಪ್
ಬಿಗ್ ಬಾಸ್ ಆಟದಲ್ಲಿ ಧ್ರುವಂತ್, ಸ್ಪಂದನಾ, ರಾಶಿಕಾ ಅವರು ಈ ವಾರ ಡೇಂಜರ್ ಝೋನ್ ತಲುಪಿದ್ದರು. ಅಂತಿಮವಾಗಿ ಸ್ಪಂದನಾ ಮತ್ತು ರಾಶಿಕಾ ಅವರು ಎಲಿಮಿನೇಟ್ ಆಗಿದ್ದಾರೆ ಎಂದು ಘೋಷಿಸಲಾಯಿತು. ಆದರೆ ಮುಖ್ಯದ್ವಾರ ತೆರೆದಾಗ ಎಲ್ಲರಿಗೂ ಅಚ್ಚರಿ ಕಾದಿತ್ತು. ಅದನ್ನು ಕಂಡು ಸ್ಪಂದನಾ, ರಾಶಿಕಾ ಎಮೋಷನಲ್ ಆದರು.

ಈ ವಾರ ‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss Kannada 12) ಶೋನಲ್ಲಿ ಎಲಿಮಿನೇಷನ್ ನಡೆಯಲಿಲ್ಲ. ಓಟಿಂಗ್ ಲೈನ್ಸ್ ತೆರೆದಿರಲಿಲ್ಲ. ಹಾಗಾಗಿ ಯಾರೂ ಎಲಿಮಿನೇಟ್ ಆಗುವುದಿಲ್ಲ ಎಂಬುದು ಪ್ರೇಕ್ಷಕರಿಗೆ ತಿಳಿದಿತ್ತು. ಆದರೆ ಮನೆಯ ಒಳಗೆ ಇರುವ ಸ್ಪರ್ಧಿಗಳಿಗೆ ಈ ವಿಷಯ ತಿಳಿದಿರಲಿಲ್ಲ. ಹಾಗಾಗಿ ಕಿಚ್ಚ ಸುದೀಪ್ (Kichcha Sudeep) ಅವರು ಪ್ರತಿ ವಾರದಂತೆ ಈ ಭಾನುವಾರ ಕೂಡ ಎಲಿಮಿನೇಷನ್ (Elimination) ಪ್ರಕ್ರಿಯೆ ಆರಂಭಿಸಿದರು. ಆಗ ನಾಮಿನೇಟ್ ಆಗಿದ್ದ ಎಲ್ಲ ಸ್ಪರ್ಧಿಗಳಿಗೆ ಟೆನ್ಷನ್ ಶುರುವಾಯಿತು. ಡೇಂಜರ್ ಝೋನ್ನಲ್ಲಿ ಇದ್ದ ಧ್ರುವಂತ್, ರಾಶಿಕಾ ಮತ್ತು ಸ್ಪಂದನಾ ಅವರಿಗೆ ಢವ ಢವ ಹೆಚ್ಚಾಯಿತು.
ಅಶ್ವಿನಿ ಗೌಡ, ಜಾಹ್ನವಿ, ಗಿಲ್ಲಿ ನಟ, ರಕ್ಷಿತಾ ಕೂಡ ನಾಮಿನೇಟ್ ಆಗಿದ್ದರು. ಆದರೆ ಆರಂಭದಲ್ಲೇ ಇವರೆಲ್ಲ ಸೇಫ್ ಆದರು. ಹಾಗಾಗಿ ನಿಟ್ಟುಸಿರು ಬಿಟ್ಟರು. ವೋಟ್ ಮಾಡಿದ ಅಭಿಮಾನಿಗಳಿಗೆ ಅವರೆಲ್ಲರೂ ಧನ್ಯವಾದ ಅರ್ಪಿಸಿದರು. ಆದರೆ ಧ್ರುವಂತ್, ರಾಶಿಕಾ ಹಾಗೂ ಸ್ಪಂದನಾ ಅವರಿಗೆ ಚಿಂತೆ ಹೆಚ್ಚಾಯಿತು. ಮೂವರಲ್ಲಿ ಯಾರು ಮನೆಯಿಂದ ಹೊರಗೆ ಹೋಗುತ್ತಾರೆ ಎಂಬ ಕೌತುಕ ಸ್ಪರ್ಧಿಗಳಲ್ಲಿ ಮೂಡಿತು.
ಈ ಮೂವರು ಒಂದು ಪಝಲ್ ಪೂರ್ಣಗೊಳಿಸಬೇಕಿತ್ತು. ಅದಕ್ಕೆ ಧ್ರುವಂತ್, ರಾಶಿಕಾ ಮತ್ತು ಸ್ಪಂದನಾ ಸಾಕಷ್ಟು ಸಮಯ ತೆಗೆದುಕೊಂಡರು. ಮೊದಲಿಗೆ ಪಝಲ್ ಪೂರ್ಣಗೊಳಿಸಿ ಧ್ರುವಂತ್ ಅವರು ಸೇಫ್ ಆದರು. ಸಮಯ ಕಳೆದಂತೆಲ್ಲ ರಾಶಿಕಾ ಮತ್ತು ಸ್ಪಂದನಾ ಅವರಿಗೆ ಟೆನ್ಷನ್ ಜಾಸ್ತಿ ಆಯಿತು. ರಾಶಿಕಾ ಅವರಂತೂ ಕಣ್ಣೀರು ಹಾಕಲು ಆರಂಭಿಸಿದರು.
ತಮ್ಮದೇ ಭಾವಚಿತ್ರದ ತುಣುಕುಗಳನ್ನು ಜೋಡಿಸಲು ರಾಶಿಕಾ ಮತ್ತು ರಾಶಿಕಾ ಅವರು ಕಷ್ಟಪಟ್ಟರು. ಎಷ್ಟೇ ಪ್ರಯತ್ನಿಸಿದರೂ ಕೂಡ ಅವರಿಗೆ ಪಝಲ್ ಮುಗಿಸಲು ಆಗಲಿಲ್ಲ. ಅವರಿಬ್ಬರು ಎಲಿಮಿನೇಟ್ ಆಗಿದ್ದಾರೆ ಎಂದು ಬಿಗ್ ಬಾಸ್ ಘೋಷಿಸಿದರು. ಇಬ್ಬರೂ ಅಳುತ್ತಾ ದೊಡ್ಮನೆಯಿಂದ ಹೊರಗೆ ಬರಲು ಸಜ್ಜಾಗಿದರು. ಅವರಿಗೆ ಎಲ್ಲರೂ ವಿದಾಯ ಹೇಳಿದರು.
ಇದನ್ನೂ ಓದಿ: ಬಿಗ್ ಬಾಸ್ನಲ್ಲಿ ದರ್ಶನ್ ನೆನಪಿಸಿದ ಗಿಲ್ಲಿ ಡೈಲಾಗ್; ಡಿ ಬಾಸ್ ಫ್ಯಾನ್ಸ್ಗೆ ಖುಷಿಯೋ ಖುಷಿ
ಇನ್ನೇನು ಬಿಗ್ ಬಾಸ್ ಮನೆಯಿಂದ ರಾಶಿಕಾ ಮತ್ತು ಸ್ಪಂದನಾ ಅವರು ಹೊರಗೆ ಬರಬೇಕು ಎಂಬಷ್ಟರಲ್ಲಿ ಟ್ವಿಸ್ಟ್ ಎದುರಾಯಿತು. ಮುಖ್ಯ ದ್ವಾರ ತೆರೆದಾಗ ‘ನೋ ಎಲಿಮಿನೇಷನ್’ ಎಂಬುದನ್ನು ಘೋಷಿಸಲಾಯಿತು. ಇದರಿಂದ ರಾಶಿಕಾ ಮತ್ತು ಸ್ಪಂದನಾ ಅವರು ಖುಷಿಯಿಂದ ಆನಂದಭಾಷ್ಪ ಸುರಿಸಿದರು. ಇದು ದೀಪಾವಳಿ ಗಿಫ್ಟ್ ಎಂದು ಬಿಗ್ ಬಾಸ್ ಹೇಳಿದರು.
ಕಳೆದ ಬಾರಿ ಗಿಲ್ಲಿ ನಟ ಅವರಿಗೆ ಕಿಚ್ಚನ ಚಪ್ಪಾಳೆ ಸಿಕ್ಕಿತ್ತು. ಹಾಗಾಗಿ ಅವರಿಗೆ ಈ ವಾರ ಒಂದು ಗಿಫ್ಟ್ ನೀಡಲಾಯಿತು. ಈ ಬಾರಿ ಯಾರು ಕಿಚ್ಚನ ಚಪ್ಪಾಳೆ ಪಡೆಯಬಹುದು ಎಂದು ನೋಡಲು ಎಲ್ಲರೂ ಕಾದಿದ್ದರು. ಆದರೆ ಯಾರೂ ಕೂಡ ಈ ಬಾರಿ ಸುದೀಪ್ ಅವರ ಮೆಚ್ಚುಗೆ ಪಡೆಯಲಿಲ್ಲ. ‘ಈ ವಾರ ಯಾರಿಗೂ ಕಿಚ್ಚನ ಚಪ್ಪಾಳೆ ಕೊಡಬೇಕು ಎನಿಸಿಲ್ಲ. ಮುಂದಿನ ವಾರ ಚೆನ್ನಾಗಿ ಆಡಿ’ ಎಂದ ಸುದೀಪ್ ಹೇಳಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




