‘ಲವ್ ಟ್ರ್ಯಾಕ್ ಮುಂದುವರಿದ್ರೆ ರಾಶಿಕಾ ಔಟ್ ಆಗ್ತಾರೆ’; ಕೈ ಕೈ ಸೇರುವಾಗಲೇ ಎಚ್ಚರಿಸಿದ ಸುದೀಪ್
ಸುದೀಪ್ ಅವರು ಪ್ರತಿ ವೀಕೆಂಡ್ನಲ್ಲೂ ಬರುತ್ತಾರೆ. ಸ್ಪರ್ಧಿಗಳು ತಪ್ಪು ಮಾಡಿದಾಗ ಅದಕ್ಕೆ ಎಚ್ಚರಿಕೆ ನೀಡುತ್ತಾರೆ. ಕೆಲವು ಸ್ಪರ್ಧಿಗಳು ಇದನ್ನು ತೆಗೆದುಕೊಂಡರೆ, ಇನ್ನೂ ಕೆಲವು ಸ್ಪರ್ಧಿಗಳು ಅದನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಈಗ ರಾಶಿಕಾಗೆ ಸುದೀಪ್ ಹೇಳಿದ ಮಾತು ಎಷ್ಟು ಗಂಭೀರವಾಗಿ ನಾಟುತ್ತದೆ ಎಂಬ ಪ್ರಶ್ನೆ ಮೂಡಿದೆ.

ಬಿಗ್ ಬಾಸ್ ಮನೆಯಲ್ಲಿ ಲವ್ ಟ್ರ್ಯಾಕ್ ಸೃಷ್ಟಿ ಮಾಡಿದರೆ ಹೆಚ್ಚು ದಿನ ಬಿಗ್ ಬಾಸ್ ಮನೆಯಲ್ಲಿ ಇರಬಹುದು ಎಂದು ಅನೇಕ ಸ್ಪರ್ಧಿಗಳಿಗೆ ಅನಿಸಿದೆ. ಇದಕ್ಕೆ ತಕ್ಕಂತೆ ಅನೇಕರು ಆಟ ಆಡುತ್ತಿದ್ದಾರೆ. ಈ ಸೀಸನ್ ಅಲ್ಲಿ ರಾಶಿಕಾ ಶೆಟ್ಟಿ ಅವರು ಲವ್ ಟ್ರ್ಯಾಕ್ ಆರಂಭಿಸಲು ಪ್ರಯತ್ನಿಸಿದ್ದಾರೆ. ಸೂರಜ್ ಸಿಂಗ್ ಜೊತೆ ಲವ್ ಟ್ರ್ಯಾಕ್ ಮಾಡಲು ಪ್ರಯತ್ನಿಸಿದ್ದಾರೆ. ಹೀಗಿರುವಾಗಲೇ ಸುದೀಪ್ ಅವರು ಎಚ್ಚರಿಕೆ ನೀಡಿದ್ದಾರೆ. ಹೀಗೆ ಆದ್ರೆ ರಿಶಿಕಾ ಔಟ್ ಆಗ್ತಾರೆ ಎಂದು ಸುದೀಪ್ ನೇರವಾಗಿ ಹೇಳಿದ್ದನ್ನು ಕಾಣಬಹುದು.
ರಾಶಿಕಾ ಅವರು ಮೊದಲಿನಿಂದಲೂ ಬಿಗ್ ಬಾಸ್ ಮನೆಯಲ್ಲಿ ಜೋಡಿಗಾಗಿ ಹುಡುಕಾಟ ನಡೆಸುತ್ತಿದ್ದರು. ಆದರೆ, ಯಾರೂ ಅವರಿಗೆ ಸೆಟ್ ಆಗಿರಲಿಲ್ಲ. ಈ ವಿಚಾರದಲ್ಲಿ ಅವರಿಗೆ ಬೇಸರ ಇತ್ತು. ಅನೇಕ ಬಾರಿ ಈ ವಿಚಾರವನ್ನು ಅವರೇ ಹೇಳಿಕೊಂಡಿದ್ದರಂತೆ. ಈಗ ಬಿಗ್ ಬಾಸ್ ಮನೆಗೆ ಸೂರಜ್ ಬರುತ್ತಿದ್ದಂತೆ ಅವರಿಗೆ ಖುಷಿ ಆಗಿದೆ ಮತ್ತು ಅವರು ನೇರವಾಗಿ ಹೇಳಿಕೊಂಡಿದ್ದಾರೆ.
ರಾಶಿಕಾ ಅವರು ಸೂರಜ್ ಅವರ ಕೈ ಕೈ ಹಿಡಿದುಕೊಂಡು ಮಾತನಾಡಲು ಆರಂಭಿಸಿದ್ದರು. ಪ್ರೀತಿ ವಿಚಾರವನ್ನು ದಾಳವಾಗಿ ಬಳಕೆ ಮಾಡಿಕೊಂಡು ಗೆಲ್ಲಲು ಅವರು ಪ್ಲ್ಯಾನ್ ರೂಪಿಸಿದ್ದಾರೆ ಎಂಬುದು ಸ್ಪಷ್ಟವಾಗುತ್ತಿದೆ. ಇದಕ್ಕೆ ಸುದೀಪ್ ಅವರು ನೇರವಾಗಿ ಮಾತನಾಡಿ ಎಚ್ಚರಿಕೆ ನೀಡಿದ್ದಾರೆ.
‘ನೀವು (ಸೂರಜ್) ಬಂದು ಶರ್ಟ್ ತೆಗೆದಿದ್ದು ನೋಡಿ ಕೆಲವರು ಆಟ ಆಡುವುದನ್ನೇ ನಿಲ್ಲಿಸಿದ್ದಾರೆ. ಅಲ್ಲಿ ಚೇಂಜ್ ಆದವರು ಆಟವನ್ನೇ ಆಡುತ್ತಿಲ್ಲ. ಹೀಗೆ ಮುಂದುವರಿದರೆ ನೀವು ಅಲ್ಲೇ ಇರ್ತೀರಿ, ನೀವು ಔಟ್ ಆಗ್ತೀರಾ’ ಎಂದು ಸುದೀಪ್ ಅವರು ರಾಶಿಕಾಗೆ ಎಚ್ಚರಿಕೆ ನೀಡಿದರು.
ಇದನ್ನೂ ಓದಿ: ಬಿಗ್ ಬಾಸ್ನಲ್ಲಿ ದರ್ಶನ್ ನೆನಪಿಸಿದ ಗಿಲ್ಲಿ ಡೈಲಾಗ್; ಡಿ ಬಾಸ್ ಫ್ಯಾನ್ಸ್ಗೆ ಖುಷಿಯೋ ಖುಷಿ
ಸುದೀಪ್ ಅವರು ಪ್ರತಿ ವೀಕೆಂಡ್ನಲ್ಲೂ ಬರುತ್ತಾರೆ. ಸ್ಪರ್ಧಿಗಳು ತಪ್ಪು ಮಾಡಿದಾಗ ಅದಕ್ಕೆ ಎಚ್ಚರಿಕೆ ನೀಡುತ್ತಾರೆ. ಕೆಲವು ಸ್ಪರ್ಧಿಗಳು ಇದನ್ನು ತೆಗೆದುಕೊಂಡರೆ, ಇನ್ನೂ ಕೆಲವು ಸ್ಪರ್ಧಿಗಳು ಅದನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಈಗ ರಾಶಿಕಾಗೆ ಸುದೀಪ್ ಹೇಳಿದ ಮಾತು ಎಷ್ಟು ಗಂಭೀರವಾಗಿ ನಾಟುತ್ತದೆ ಎಂಬ ಪ್ರಶ್ನೆ ಮೂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



