ಬಿಗ್ ಬಾಸ್ನಲ್ಲಿ ದರ್ಶನ್ ನೆನಪಿಸಿದ ಗಿಲ್ಲಿ ಡೈಲಾಗ್; ಡಿ ಬಾಸ್ ಫ್ಯಾನ್ಸ್ಗೆ ಖುಷಿಯೋ ಖುಷಿ
ಗಿಲ್ಲಿ ನಟ ಬಿಗ್ ಬಾಸ್ ಮನೆಯಲ್ಲಿ ದರ್ಶನ್ ಅವರ ಜನಪ್ರಿಯ ಡೈಲಾಗ್ ಅನ್ನು ಅನುಕರಿಸುವ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದಾರೆ. ಅಕ್ಟೋಬರ್ 24ರ ಎಪಿಸೋಡ್‌ನಲ್ಲಿ ಇದು ಪ್ರಸಾರವಾಗಿದ್ದು, ದರ್ಶನ್ ಅಭಿಮಾನಿಗಳು ಗಿಲ್ಲಿ ಅವರ ಈ ನಡೆಯಿಂದ ಅತೀವ ಸಂತಸ ವ್ಯಕ್ತಪಡಿಸಿದ್ದಾರೆ. ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುತ್ತಿದ್ದಾರೆ.

ಗಿಲ್ಲಿ ನಟ ಅವರು ಬಿಗ್ ಬಾಸ್ನಲ್ಲಿ (Bigg Boss) ಛಾಪು ಮೂಡಿಸುತ್ತಿದ್ದಾರೆ. ಅವರು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡರು. ಬಿಗ್ ಬಾಸ್ನಲ್ಲಿ ಅವರ ಆಟ ಅನೇಕರಿಗೆ ಇಷ್ಟ ಆಗುತ್ತಿದೆ. ಹೀಗಿರುವಾಗಲೇ ಅವರು ದರ್ಶನ್ ಅಭಿಮಾನಿಗಳಿಗೆ ಖುಷಿ ಆಗುವಂತೆ ಬಿಗ್ ಬಾಸ್ ಮನೆಯಲ್ಲಿ ನಡೆದುಕೊಂಡಿದ್ದಾರೆ. ಅಕ್ಟೋಬರ್ 24ರ ಎಪಿಸೋಡ್‌ನಲ್ಲಿ ಇದು ಟೆಲಿಕಾಸ್ಟ್ ಮಾಡಲಾಗಿದೆ.
ಗಿಲ್ಲಿ ನಟ ಅವರು ದೊಡ್ಮನೆಯಲ್ಲಿ ಭರ್ಜರಿ ಮನರಂಜನೆ ನೀಡುತ್ತಿದ್ದಾರೆ. ಅನೇಕರನ್ನು ಅವರು ಅನುಕರಿಸ ಬಲ್ಲರು. ಇನ್ನು ಸಮಯ ಸಿಕ್ಕಾಗ ಅವರು ಪ್ರಾಪರ್ಟಿ ಕಾಮಿಡಿ ಕೂಡ ಮಾಡುತ್ತಿದ್ದಾರೆ. ಅಶ್ವಿನಿ ಗೌಡ ಅವರಿಗೆ ಉರಿಸೋದರಲ್ಲಿ ಅವರು ಸದಾ ಮುಂದು. ಈಗ ವೀಕೆಂಡ್ ವಿತ್ ರಮೇಶ್ನಲ್ಲಿ ದರ್ಶನ್ ಹೇಳಿದ್ದ ಡೈಲಾಗ್ನ ಅವರು ಸಂಭಾಷಣೆ ಒಂದರಲ್ಲಿ ಅನುಕರಿಸಿದ್ದಾರೆ.
ರಘು ಈ ವಾರದ ಕ್ಯಾಪ್ಟನ್ ಆದರು. ಗಿಲ್ಲಿ ‘ನಾನು ಉಪ ನಾಯಕ’ ಎಂದು ಹೇಳಿಕೊಳ್ಳುತ್ತಾ ಬಂದರು. ಆಗ ಕಾವ್ಯಾ ಅವರು, ‘ನೀನೇ ಕ್ಯಾಪ್ಟನ್ಸಿಯನ್ನು ಸಂಪಾದಿಸಿಕೊಳ್ಳಬೇಕು’ ಎಂದರು. ‘ನಾನೇ ಸಂಪಾದಿಸಿ ಉಪನಾಯಕ ಆಗಿರೋದು. ನನಗೆ ನಾನೇ ಸ್ಟ್ಯಾಂಡ್ ತೆಗೆದುಕೊಂಡಿದ್ದು. ಯಾರು ನನಗೆ ಸ್ಟ್ಯಾಂಡ್ ಆಗಿಲ್ಲಿ. ಆ ಟೈಮ್ ಅಲ್ಲಿ ಯಾರೂ ಬಂದಿಲ್ಲ. ಅರ್ಥ ಮಾಡಿಕೊಳ್ಳಿ’ ಎಂದು ದರ್ಶನ್ ಸ್ಟೈಲ್ನಲ್ಲೇ ಗಿಲ್ಲಿ ಮಾತನಾಡಿದ್ದಾರೆ.
ಗಿಲ್ಲಿ ನಟ
View this post on Instagram
ಈ ಮೊದಲು ದರ್ಶನ್ ಅವರು ‘ ನಾನು ಬೆಂಗಳೂರಿಗೆ ಬಂದಾಗ ಯಾರು ಇರಲಿಲ್ಲ ಸರ್. ಈಗ ಸಾಕಷ್ಟು ಆಸ್ತಿ ಇದೆ. ಅದಕ್ಕೆ ಏನೇನೋ ಆಗಿದೆ. 500 ರೂಪಾಯಿ ಇಟ್ಟುಕೊಂಡು ಬೆಂಗಳೂರಿಗೆ ಬಂದಿದ್ದೆ. ಫ್ಯಾಮಿಲಿಯವರೆಲ್ಲ ವೇಸ್ಟ್. ಅವರು ನಮ್ಮನ್ನು ನೋಡಿಕೊಳ್ಳಲ್ಲ’ ಎಂದು ಹೇಳಿದ್ದರು.
ಇದನ್ನೂ ಓದಿ: ‘ನನ್ನ ಸಕ್ಸಸ್ಗೆ ದರ್ಶನ್ ಕಾರಣ’; ಬಿಗ್ ಬಾಸ್ ರಘು ಮಾತು
ಈ ವಿಡಿಯೋನ ದರ್ಶನ್ ಫ್ಯಾನ್ಸ್ ವೈರಲ್ ಮಾಡುತ್ತಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ದರ್ಶನ ಹಾಡು ಮೊಳಗೋದು ತುಂಬಾನೇ ಕಡಿಮೆ. ದರ್ಶನ್ ಹಾಡನ್ನು ಹಾಕೋದೇ ಇಲ್ಲ ಎಂದರೂ ತಪ್ಪಾಗಲಾರದು. ಈಗ ಗಿಲ್ಲಿ ಅವರು ದರ್ಶನ್ ಡೈಲಾಗ್ ಹೇಳಿದ್ದಕ್ಕೆ ಅವರ ಫ್ಯಾನ್ಸ್ ಖುಷಿಪಟ್ಟಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




