‘ನನ್ನ ಸಕ್ಸಸ್ಗೆ ದರ್ಶನ್ ಕಾರಣ’; ಬಿಗ್ ಬಾಸ್ ರಘು ಮಾತು
ಬಿಗ್ ಬಾಸ್ ಮನೆಗೆ ಕಾಲಿಟ್ಟ ಅನೇಕರು ಮಿಂಚುತ್ತಾರೆ. ಸುದೀಪ್ ಬಗ್ಗೆ ಹೊಗಳುವ ಕೆಲಸ ಮಾಡುತ್ತಾರೆ. ಆದರೆ, ರಘು ಆ ರೀತಿ ಅಲ್ಲ. ಅವರು ದರ್ಶನ್ ಅವರನ್ನು ನೆನಪಿಸಿಕೊಂಡಿದ್ದಾರೆ. ತಮ್ಮ ಸಕ್ಸಸ್ಗೆ ದರ್ಶನ್ ಕಾರಣ ಎಂದು ನೇರ ಮಾತುಗಳಲ್ಲಿ ಹೇಳಿದ್ದಾರೆ. ಆ ವಿಡಿಯೋ ಇಲ್ಲಿದೆ.
ಜಿಮ್ ಟ್ರೇನರ್ ಆಗಿ ಗಮನ ಸೆಳೆದ ರಘು (Raghu) ಅವರು ‘ಕ್ವಾಟ್ಲೆ ಕಿಚನ್’ ವಿನ್ನರ್ ಆದರು. ಆ ಬಳಿಕ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದಾರೆ. ಅವರ ಸೋಶಿಯಲ್ ಮೀಡಿಯಾ ಮೂಲಕ ಒಂದು ವಿಡಿಯೋ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ರಘು ಅವರು ದರ್ಶನ್ ಅವರನ್ನು ನೆನಪಿಸಿಕೊಂಡಿದ್ದಾರೆ. ‘ಬಿಗ್ ಬಾಸ್ ಒಳಗೆ ಹೋಗ್ತಾ ಇದೀನಿ. ದರ್ಶನ್ ಅವರು ಇದ್ದಿದ್ರೆ ಖುಷಿ ಪಡ್ತಾ ಇದ್ರು. ಅವರನ್ನು ತುಂಬಾ ಮಿಸ್ ಮಾಡ್ಕೋತಾ ಇದೀನಿ. ನನ್ನ ಸಕ್ಸಸ್ಗೆ ಅವರೂ ಕಾರಣ. ನಾನು ಯಾರು ಅಂತ ಜನರಿಗೆ ಗೊತ್ತಿರಲಿಲ್ಲ. ಆದರೂ ನನ್ನ ಜಿಮ್ ಉದ್ಘಾಟಿಸಿದರು. ಅವರ ಸಿನಿಮಾದಲ್ಲಿ ಚಾನ್ಸ್ ಕೊಟ್ಟರು. ನನ್ನ ಸಕ್ಸಸ್ನಲ್ಲಿ ಅವರು ಯಾವಾಗಲೂ ಇದಾರೆ’ ಎಂದಿದ್ದಾರೆ ರಘು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

