AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಿವೇಂಜ್​ಗಾಗಿ ಸ್ಪರ್ಧಿಗಳ ಹಲ್ಲುಜ್ಜೋ ಬ್ರೆಶ್​ನಲ್ಲಿ ಟಾಯ್ಲೆಟ್​ ತಿಕ್ಕಿದ್ರಾ ಅಶ್ವಿನಿ ಗೌಡ?

‘ಬಿಗ್ ಬಾಸ್ ಕನ್ನಡ 12’ರಲ್ಲಿ ಅಶ್ವಿನಿ ಗೌಡರ ವರ್ತನೆ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಸ್ಪರ್ಧಿಗಳ ಟೂತ್‌ಬ್ರಶ್‌ಗಳನ್ನು ಟಾಯ್ಲೆಟ್‌ಗೆ ತೆಗೆದುಕೊಂಡು ಹೋಗಿರುವ ಘಟನೆ ಅವರ ಬಗ್ಗೆ ನೆಗೆಟಿವ್ ಅಭಿಪ್ರಾಯ ಮೂಡಿಸಿದೆ. ರಕ್ಷಿತಾ ಶೆಟ್ಟಿ ವಿವಾದದ ನಂತರ ಈಗ ಈ ಘಟನೆ ಅಶ್ವಿನಿಯವರ ನಿಜಬಣ್ಣವನ್ನು ಬಯಲು ಮಾಡಿದೆ ಎಂದು ನೆಟ್ಟಿಗರು ಟೀಕಿಸುತ್ತಿದ್ದಾರೆ.

ರಿವೇಂಜ್​ಗಾಗಿ ಸ್ಪರ್ಧಿಗಳ ಹಲ್ಲುಜ್ಜೋ ಬ್ರೆಶ್​ನಲ್ಲಿ ಟಾಯ್ಲೆಟ್​ ತಿಕ್ಕಿದ್ರಾ ಅಶ್ವಿನಿ ಗೌಡ?
ಅಶ್ವಿನಿ
ರಾಜೇಶ್ ದುಗ್ಗುಮನೆ
|

Updated on: Oct 25, 2025 | 8:43 AM

Share

‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ ಅಶ್ವಿನಿ ಗೌಡ (Ashwini Gowda) ಅವರ ಒಂದೊಂದೇ ಮುಖ ಕಳಚುತ್ತಿದೆ. ತಾವು ಒಳ್ಳೆಯವರಂತೆ ತೋರಿಸಿಕೊಳ್ಳಬೇಕು ಎಂದು ಸಾಕಷ್ಟು ಪ್ರಯತ್ನಿಸಿದರೂ ಅದು ಸಾಧ್ಯವಾಗುತ್ತಿಲ್ಲ. ಈಗ ಅವರು ತೀರಾನೆ ಕೆಳ ಹಂತಕ್ಕೆ ಹೋಗಿದ್ದಾರೆ ಎಂಬ ಮಾತು ವ್ಯಕ್ತವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಇದಕ್ಕೆ ಅಶ್ವಿನಿ ಕಡೆಯಿಂದಲೇ ಸ್ಪಷ್ಟನೆ ಸಿಗಬೇಕಿದೆ.

ಅಶ್ವಿನಿ ಗೌಡ ಅವರಿಗೆ ರಿವೇಂಜ್ ತೆಗೆದುಕೊಳ್ಳೋದು ಎಂದರೆ ಎಲ್ಲಿಲ್ಲದ ಖುಷಿ. ಕಳೆದ ವಾರ ರಕ್ಷಿತಾ ಶೆಟ್ಟಿ ಅವರ ಮೇಲೆ ಆಪಾದನೆ ಹೊರಿಸಿ, ಅವರನ್ನು ಕೆಟ್ಟವರು ಎಂದು ಬಣ್ಣಿಸುವ ಪ್ರಯತ್ನ ಮಾಡಿದ್ದರು. ಆದರೆ, ಇದು ಅವರಿಗೆ ಉಲ್ಟಾ ಹೊಡೆಯಿತು. ಸುದೀಪ್ ಅವರು ಅಶ್ವಿನಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡರು. ಆದಾಗ್ಯೂ ಅಶ್ವಿನಿ ಗೌಡ ಅವರು ಬದಲಾದಂತೆ ಕಾಣುತ್ತಿಲ್ಲ.

ಇದನ್ನೂ ಓದಿ
Image
‘ದೈಹಿಕ ವಿಚಾರದಲ್ಲಿ ವಂಚನೆ ಮಾಡೋದು ದೊಡ್ಡದಲ್ಲ’; ಅಕ್ಷಯ್ ಪತ್ನಿ ಟ್ವಿಂಕಲ್
Image
ಭುವನ್ ಗೌಡ ಮದುವೆಯಲ್ಲಿ ಹ್ಯಾಂಡ್ಸಮ್ ಹಂಕ್ ರೀತಿ ಕಾಣಿಸಿಕೊಂಡ ಯಶ್
Image
‘ನಿನ್ನ ಪಂಚೆ ಎಳೆಯೋಕೆ ಬರುತ್ತೆ, ಥೂ’; ಕೀಳು ಮಟ್ಟಕ್ಕೆ ಇಳಿದ ಅಶ್ವಿನಿ
Image
‘ಸೀತಾ ರಾಮ’ ಮುಗಿದ ಬಳಿಕ ಏನು ಮಾಡ್ತಿದ್ದಾಳೆ ಸಿಹಿ? ಇಲ್ಲಿದೆ ವಿವರ

ಈ ವಾರವೂ ಅವರು ತಮ್ಮ ಚಾಳಿ ಮುಂದುವರಿಸಿದ್ದಾರೆ. ಗೊತ್ತಿದ್ದೇ ನಿಯಮ ಮುರಿಯೋದು, ಬೇರೆಯವರನ್ನು ಏಕವಚನದಲ್ಲಿ ಮಾತನಾಡಿಸೋದು ಮತ್ತು ಬೇರೆಯವರು ತಮ್ಮನ್ನು ಏಕವಚನದಲ್ಲಿ ಮಾತನಾಡಿಸಿದಾಗ ಕೋಪಗೊಳ್ಳೋದು ಇತ್ಯಾದಿಗಳು ನಡೆದೇ ಇದ್ದವು. ಆದರೆ, ಈ ಮಧ್ಯೆ ಅವರು ಮಾಡಿದ ಒಂದು ವಿಚಾರ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ.

View this post on Instagram

A post shared by DEAR BROOO😎 (@dearbrooo_)

ಅಶ್ವಿನಿ ಗೌಡ ಅವರಿಗೆ ರಘು ಗೌಡ ಅವರು ಕಳಪೆ ನೀಡಿದರು. ಇದರಿಂದ ಅಶ್ವಿನಿ ಗೌಡ ಸಿಟ್ಟಾದರು. ಆ ಬಳಿಕ ಅವರು ಪದೇ ಪದೇ ಟಾಯ್ಲೆಟ್ ಹೋಗೋ ಬಗ್ಗೆ ಬೇಡಿಕೆ ಇಟ್ಟರು. ಹೀಗೆ ಟಾಯ್ಲೆಟ್ ಹೋದ ಸಂದರ್ಭದಲ್ಲಿ ಅವರು ಇತರ ಸ್ಪರ್ಧಿಗಳ ಹಲ್ಲುಜ್ಜುವ ಬ್ರೆಶ್​​ಗಳನ್ನು ಒಟ್ಟುಗೂಡಿಸಿಕೊಂಡು ಟಾಯ್ಲೆಟ್​ಗೆ ಹೋಗಿದ್ದಾರೆ. ಈ ವಿಚಾರ ಚರ್ಚೆಗೆ ಕಾರಣ ಆಗಿದೆ.

ಇದನ್ನೂ ಓದಿ: ‘ನಂಗೂ ನಿನ್ನ ಪಂಚೆ ಎಳೆಯೋಕೆ ಬರುತ್ತೆ, ಥೂ’; ಗಿಲ್ಲಿ ವಿರುದ್ಧ ಕೀಳು ಮಟ್ಟಕ್ಕೆ ಇಳಿದ ಅಶ್ವಿನಿ

‘ಅಶ್ವಿನಿ ಗೌಡ ಅವರು ಇತರ ಸ್ಪರ್ಧಿಗಳ ಬ್ರೆಶ್ ಅಲ್ಲಿ ಟಾಯ್ಲೆಟ್ ಕ್ಲೀನ್ ಮಾಡಿದ್ದಾರೆ’ ಎಂದು ಕೆಲವರು ಹೇಳಿದ್ದಾರೆ. ಇನ್ನೂ ಕೆಲವರು, ಅಶ್ವಿನಿ ಗೌಡ ಟಾಯ್ಲೆಟ್​ನಲ್ಲಿ ಇದನ್ನು ಬಚ್ಚಿಟ್ಟಿರಬಹುದು ಎಂದಿದ್ದಾರೆ. ಈ ಬಗ್ಗೆ ಅವರೇ ಸ್ಪಷ್ಟನೆ ನೀಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.