ರಕ್ಷಿತಾ ಶೆಟ್ಟಿ ಬುದ್ಧಿವಂತಿಕೆ ನೋಡಿ ಬೆರಗಾದ ರಘು; ಬಾಯ್ತುಂಬ ಹೊಗಳಿಕೆ
ರಘು ಅವರು ಬಿಗ್ ಬಾಸ್ ಮನೆಯ ಕ್ಯಾಪ್ಟನ್ ಆಗಿದ್ದಾರೆ. ಈ ವೇಳೆ ಅವರು ಸೂರಜ್ ಹಾಗೂ ಅಶ್ವಿನಿ ಮೊದಲಾದವರನ್ನು ಬಾತ್ರೂಂ ಕ್ಲೀನ್ ಮಾಡುವ ಟೀಂಗೆ ನೇಮಕ ಮಾಡಿದ್ದಾರೆ. ಈ ಬಗ್ಗೆ ರಕ್ಷಿತಾ ಅವರು ರಘು ಬಳಿ ತಮ್ಮ ಅಭಿಪ್ರಾಯ ಹೊರಹಾಕಿದರು. ಆಗ ರಕ್ಷಿತಾ ಅವರ ಆಲೋಚನೆ ಏನು ಎಂಬುದರ ಸ್ಪಷ್ಟ ಚಿತ್ರಣ ರಘುಗೆ ಸಿಕ್ಕಿದೆ.

ರಕ್ಷಿತಾ ಶೆಟ್ಟಿ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ ಉತ್ತಮವಾದ ಆಟ ಆಡುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರ ವಿಡಿಯೋ ನೋಡಿದ ಅನೇಕರು ‘ಇವರು ಇನ್ನೂ ಚಿಕ್ಕವಳು’ ಎಂಬರ್ಥದಲ್ಲಿ ಮಾತನಾಡಿದ್ದರು. ಆದರೆ, ಅವರ ಆಟ ನೋಡಿದ ಬಳಿಕ ಅನೇಕರ ಅಭಿಪ್ರಾಯ ಬದಲಾಗಿದೆ. ರಘು ಕೂಡ ರಕ್ಷಿತಾ ಶೆಟ್ಟಿ ಬುದ್ಧಿವಂತಿಕೆ ನೋಡಿ ಮೆಚ್ಚುಗೆ ಸೂಚಿಸಿದ್ದಾರೆ.
ರಘು-ರಕ್ಷಿತಾ ಸಂಭಾಷಣೆ
ರಘು ಅವರು ಬಿಗ್ ಬಾಸ್ ಮನೆಯ ಕ್ಯಾಪ್ಟನ್ ಆಗಿದ್ದಾರೆ. ಈ ವೇಳೆ ಅವರು ಸೂರಜ್ ಹಾಗೂ ಅಶ್ವಿನಿ ಮೊದಲಾದವರನ್ನು ಬಾತ್ರೂಂ ಕ್ಲೀನ್ ಮಾಡುವ ಟೀಂಗೆ ನೇಮಕ ಮಾಡಿದ್ದಾರೆ. ಈ ಬಗ್ಗೆ ರಕ್ಷಿತಾ ಅವರು ರಘು ಬಳಿ ತಮ್ಮ ಅಭಿಪ್ರಾಯ ಹೊರಹಾಕಿದರು.
‘ಕೆಲವರು ನಿಮ್ಮ ಪರ ಇದ್ದಾರೆ, ಇನ್ನೂ ಕೆಲವರು ನಿಮ್ಮ ವಿರುದ್ಧ ಇದ್ದಾರೆ. ಕೆಲವರು ನಿಮ್ಮ ವಿರುದ್ಧ ಇದ್ದರೆ ಅದು ನಿಮಗೆ ತೊಂದರೆ ಉಂಟುಮಾಡಬಹುದು. ಅಶ್ವಿನಿ ಜೊತೆ ಇರುವಾಗ ಸೂರಜ್ ಅವರು ಮ್ಯಾನ್ಯುಪಲೇಟ್ ಮಾಡಬಹುದು. ಹೀಗಾಗಿ, ಸೂರಜ್ನ ಕಿಚನ್ಗೆ ಹಾಕಿಬಿಡಿ. ಆಗ ಅಶ್ವಿನಿ-ಸೂರಜ್ ಒಟ್ಟಾಗಿ ಇರಲ್ಲ’ ಎಂದಿದ್ದಾರೆ ರಕ್ಷಿತಾ. ‘ಒಳ್ಳೆಯ ಯೋಚನೆ ಇದೆ’ ಎಂದು ರಕ್ಷಿತಾ ಬಗ್ಗೆ ರಘು ಮೆಚ್ಚುಗೆ ಸೂಚಿಸಿದರು.
ಇದನ್ನೂ ಓದಿ: ಅಶ್ವಿನಿ, ಸುಧಿಗೆ ಮಾರಿಹಬ್ಬ; ರಕ್ಷಿತಾಗೆ ಕಿಚ್ಚನ ಚಪ್ಪಾಳೆ? ಒಂದೇ ಪ್ರೋಮೋದಲ್ಲಿ ಹಲವು ವಿಚಾರ
ಉಪವಾಸ ಮಾಡಿ; ಅಶ್ವಿನಿಗೆ ಕಿವಿಮಾತು
ಅಶ್ವಿನಿ ಅವರು ಬಿಗ್ ಬಾಸ್ ಮನೆಯಲ್ಲಿ ಕಳಪೆ ಆಗಿದ್ದಾರೆ. ಹೀಗಾಗಿ, ಜೈಲು ಸೇರಿದ್ದಾರೆ. ಈ ವೇಳೆ ಅವರು ಉಪವಾಸ ಇರಲು ನಿರ್ಧರಿಸಿದರು. ಈ ವೇಳೆ ರಕ್ಷಿತಾ ಅವರು ಬಂದು, ‘ನಿಮಗೆ ಹಸಿವು ಆಗಲ್ವ’ ಎಂದು ಕೇಳಿದರು. ಇದಕ್ಕೆ ಉತ್ತರಿಸಿದ ಅಶ್ವಿನಿ, ‘ಆಗುತ್ತೆ, ಆದರೆ, ನಾನು ಗಟ್ಟಿ ನಿರ್ಧಾರ ಮಾಡಿದ್ದೇನೆ’ ಎಂದರು. ಇದಕ್ಕೆ ಉತ್ತರಿಸಿದ ರಕ್ಷಿತಾ, ‘ಮಾಡಿ ನಿಮಗೆ ಒಳ್ಳೆಯದು’ ಎಂದರು. ಇದು ಕೂಡ ವೀಕ್ಷಕರ ಗಮನ ಸೆಳೆದಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




