‘ನೀವು ಗೌರವ ಕೊಟ್ಟಾಗಲೇ ಅಲ್ಲವೇ ಮರಳಿ ಸಿಗೋದು’; ಅಶ್ವಿನಿಗೆ ಸುದೀಪ್ ಮಾತಿನ ಚಾಟಿ
‘ರಘು ಅವರು ಏಕವಚನ ಕೊಟ್ಟ ವಿಚಾರಕ್ಕೆ ಸಿಟ್ಟು ಬಂತು’ ಎಂದು ಅಶ್ವಿನಿ ಅವರು ದೂರಲು ಬಂದರು. ಇದಕ್ಕೆ ಸುದೀಪ್ ಅವರು ನೇರವಾಗಿ ಉತ್ತರಿಸಿದರು. ‘ನೀವು ಗೌರವ ಕೊಟ್ಟಾಗಲೇ ಅಲ್ಲವೇ ಮರಳಿ ಗೌರವ ಸಿಗೋದು’ ಎಂದು ಸುದೀಪ್ ಹೇಳಿದ್ದಾರೆ. ಇದನ್ನು ಕೇಳಿ ಅಶ್ವಿನಿ ಅವರು ಕಕ್ಕಾಬಿಕ್ಕಿ ಆಗಿದ್ದಾರೆ.

ಅಶ್ವಿನಿ ಗೌಡ (Ashwini Gowda) ಅವರು ಬಿಗ್ ಬಾಸ್ ಮನೆಯಲ್ಲಿ ವಿವಾದಗಳ ಮೂಲಕ ಸಾಕಷ್ಟು ಸುದ್ದಿ ಆಗುತ್ತಿದ್ದಾರೆ. ಅವರು ಜಗಳ ಮಾಡಲು ಎಲ್ಲಾದರೂ ಅವಕಾಶ ಸಿಗುತ್ತದೆಯೇ ಎಂದು ಕಾಯುತ್ತಿರುತ್ತಾರೆ ಎಂದರೂ ತಪ್ಪಾಗಲಾರದು. ಅವರಿಗೆ ಯಾರಾದರೂ ಏಕವಚನ ಕೊಟ್ಟಾಗ ಸಿಟ್ಟು ಬರುತ್ತದೆ. ಆದರೆ, ಅವರು ಮಾತ್ರ ಯಾರಿಗೂ ಬಹುವಚನ ಕೊಡುವುದಿಲ್ಲ. ಈ ವಿಚಾರದಲ್ಲಿ ಸುದೀಪ್ ಅವರು ಅಶ್ವಿನಿ ಅವರಿಗೆ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಈ ಬಾರಿ ಮೂವರು ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಪಡೆದರು. ಸೂರಜ್ ಸಿಂಗ್, ರಘು ಹಾಗೂ ರಿಷಾ ಗೌಡ ಅವರು ದೊಡ್ಮೆನೆಗೆ ಬಂದಿದ್ದಾರೆ. ಅವರ ಬಗ್ಗೆ ಹೇಳುವಂತೆ ಸುದೀಪ್ ಅವರು ಎಲ್ಲಾ ಸ್ಪರ್ಧಿಗಳ ಬಳಿ ಕೇಳಿದರು. ಅದೇ ರೀತಿ ಅಶ್ವಿನಿ ಬಳಿಯೂ ಈ ಪ್ರಶ್ನೆ ಕೇಳಿದರು. ಈ ವೇಳೆ ಅಶ್ವಿನಿ ಅವರು ದೂರುಗಳ ಸುರಿಮಳೆ ಸುರಿಸಿದರು.
‘ರಘು ಅವರು ಏಕವಚನ ಕೊಟ್ಟ ವಿಚಾರಕ್ಕೆ ಸಿಟ್ಟು ಬಂತು’ ಎಂದು ಅಶ್ವಿನಿ ಅವರು ದೂರಲು ಬಂದರು. ಇದಕ್ಕೆ ಸುದೀಪ್ ಅವರು ನೇರವಾಗಿ ಉತ್ತರಿಸಿದರು. ‘ನೀವು ಗೌರವ ಕೊಟ್ಟಾಗಲೇ ಅಲ್ಲವೇ ಮರಳಿ ಸಿಗೋದು’ ಎಂದು ಸುದೀಪ್ ಹೇಳಿದ್ದಾರೆ. ಇದನ್ನು ಕೇಳಿ ಅಶ್ವಿನಿ ಅವರು ಕಕ್ಕಾಬಿಕ್ಕಿ ಆಗಿದ್ದಾರೆ.
‘ಇದು ಅಶ್ವಿನಿ ಅವರಿಗೆ ಮಾತ್ರ ಹೇಳುತ್ತಾ ಇಲ್ಲ. ಇಡೀ ಮನೆಗೆ ಹೇಳ್ತಾ ಇದೀನಿ. ನೀವು ಗೌರವ ಕೊಟ್ಟಾಗ ಮಾತ್ರ ಮತ್ತೊಬ್ಬರಿಂದ ಗೌರವವನ್ನು ನಿರೀಕ್ಷಿಸಬಹುದು. ನೀವು ಏಕವಚನ ಕೊಟ್ಟು ಮತ್ತೊಬ್ಬರಿಂದ ಗೌರವ ನಿರೀಕ್ಷಿಸೋದು ಸರಿ ಅಲ್ಲ’ ಎಂಬರ್ಥದಲ್ಲಿ ಸುದೀಪ್ ಅವರು ಮಾತನಾಡಿದರು.
ಇದನ್ನೂ ಓದಿ: ರಿವೇಂಜ್ಗಾಗಿ ಸ್ಪರ್ಧಿಗಳ ಹಲ್ಲುಜ್ಜೋ ಬ್ರೆಶ್ನಲ್ಲಿ ಟಾಯ್ಲೆಟ್ ತಿಕ್ಕಿದ್ರಾ ಅಶ್ವಿನಿ ಗೌಡ?
ಅಶ್ವಿನಿ ಗೌಡ ಅವರು ಯಾರಿಗೂ ಗೌರವ ಕೊಡೋದಿಲ್ಲ. ಆದರೆ, ಬೇರೆಯವರಿಂದ ಮಾತ್ರ ಅದನ್ನು ನಿರೀಕ್ಷಿಸುತ್ತಾ ಇದ್ದಾರೆ. ಇದು ತಪ್ಪು ಎಂಬುದು ಅನೇಕರ ಅಭಿಪ್ರಾಯ. ಇದು ಅಶ್ವಿನಿ ಅವರಿಗೆ ಅರ್ಥ ಆಗಿರಲೇ ಇಲ್ಲ. ಸುದೀಪ್ ಅವರೇ ಇದನ್ನು ಹೇಳೋಕೆ ಬರಬೇಕಾಯಿತು ಎಂದು ಅನೇಕರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



