ಶ್ರೀಲೀಲಾ ಸಿನಿಮಾಗಳಲ್ಲಿ ತಾಯಿಯದ್ದೇ ಕಾರುಬಾರು: ನಟಿ ಹೇಳಿದ್ದೇನು?
Sreeleela mother: ಶ್ರೀಲೀಲಾ ಭಾರತದ ಟಾಪ್ ನಟಿಯರಲ್ಲಿ ಒಬ್ಬರು. ಆದರೆ ಅವರ ವೃತ್ತಿಯ ಬಗ್ಗೆ ಅವರ ತಾಯಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಸಿನಿಮಾ ಸೆಟ್ಗಳಲ್ಲಿ ಮಗಳ ಬಗ್ಗೆ ಕಠಿಣ ನಿಯಮಗಳನ್ನು ಹಾಕುತ್ತಾರೆ ಇದು ನಿರ್ಮಾಪಕರಿಗೆ ಕಿರಿ-ಕಿರಿ ತರುತ್ತಿದೆ ಎಂದು ಇತ್ತೀಚೆಗೆ ಕೆಲ ತೆಲುಗು ಮಾಧ್ಯಮಗಳು ವರದಿ ಮಾಡಿದ್ದವು. ಅದರ ಬಗ್ಗೆ ಸ್ವತಃ ಶ್ರೀಲೀಲಾ ಮಾತನಾಡಿದ್ದಾರೆ.

ಕನ್ನಡದ ಹುಡುಗಿ ಶ್ರೀಲೀಲಾ (Sreeleela) ಪರ ಭಾಷೆಗಳಲ್ಲಿ ಸಖತ್ ಆಗಿ ಮಿಂಚುತ್ತಿದ್ದಾರೆ. ನಟಿಯ ಸೌಂದರ್ಯ, ನಟನಾ ಪ್ರತಿಭೆ ಮತ್ತು ಡ್ಯಾನ್ಸ್ಗೆ ತೆಲುಗು ಪ್ರೇಕ್ಷಕರಂತೂ ಫಿದಾ ಆಗಿದ್ದಾರೆ. ತೆಲುಗಿನಲ್ಲಿ ಮಹೇಶ್ ಬಾಬು, ಅಲ್ಲು ಅರ್ಜುನ್, ರವಿತೇಜ ಇನ್ನೂ ಕೆಲವು ಸ್ಟಾರ್ ನಟರೊಟ್ಟಿಗೆ ಶ್ರೀಲೀಲಾ ನಟಿಸಿದ್ದಾರೆ. ಇದೀಗ ಬಾಲಿವುಡ್ಗೆ ಸಹ ಕಾಲಿಟ್ಟಿದ್ದು ಅಲ್ಲಿಯೂ ಅವಕಾಶಗಳನ್ನು ಬಾಚಿಕೊಳ್ಳುತ್ತಿದ್ದಾರೆ. ಆದರೆ ಶ್ರೀಲೀಲಾ ಅವರ ವೃತ್ತಿಯ ಬಗ್ಗೆ ಅವರ ತಾಯಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಸಿನಿಮಾ ಸೆಟ್ಗಳಲ್ಲಿ ಮಗಳ ಬಗ್ಗೆ ಕಠಿಣ ನಿಯಮಗಳನ್ನು ಹಾಕುತ್ತಾರೆ ಇದು ನಿರ್ಮಾಪಕರಿಗೆ ಕಿರಿ-ಕಿರಿ ತರುತ್ತಿದೆ ಎಂದು ಇತ್ತೀಚೆಗೆ ಕೆಲ ತೆಲುಗು ಮಾಧ್ಯಮಗಳು ವರದಿ ಮಾಡಿದ್ದವು. ಅದರ ಬಗ್ಗೆ ಸ್ವತಃ ಶ್ರೀಲೀಲಾ ಮಾತನಾಡಿದ್ದಾರೆ.
ಶ್ರೀಲೀಲಾ ತಾಯಿ ಸ್ವರ್ಣಲತಾ ವೃತ್ತಿಯಲ್ಲಿ ವೈದ್ಯೆ. ಆದರೆ ಶ್ರೀಲೀಲಾ ಸಿನಿಮಾ ರಂಗದಲ್ಲಿ ಬ್ಯುಸಿ ಆದ ಬಳಿಕ ಅವರ ಕೇರ್ ಟೇಕರ್ ಆಗಿ ಮಗಳ ಜೊತೆಯಲ್ಲಿಯೇ ಇರುತ್ತಾರೆ ಸ್ವರ್ಣಲತಾ. ಶ್ರೀಲೀಲಾ ಅವರ ಸಿನಿಮಾಗಳಿಗೆ ಸಂಬಂಧಿಸಿದ ನಿರ್ಣಯಗಳನ್ನು ಅವರೇ ತೆಗೆದುಕೊಳ್ಳುತ್ತಾರೆ. ಸಂಭಾವನೆ ವಿಷಯವನ್ನೂ ತಾಯಿಯೇ ನೋಡಿಕೊಳ್ಳುತ್ತಾರೆ. ಮಗಳು ಸಿನಿಮಾ ಶೂಟಿಂಗ್ಗೆ ಹೋದರೆ, ಖಾಸಗಿ ಕಾರ್ಯಕ್ರಮಕ್ಕೆ ಹೋದರೆ, ಸಿನಿಮಾ ಪ್ರೊಮೋಷನ್ ಎಲ್ಲಿಯೇ ಹೋದರೂ ತಾಯಿ ಸ್ವರ್ಣಲತಾ ಜೊತೆಗಿರುತ್ತಾರೆ.
ಇತ್ತೀಚೆಗೆ ಸಂದರ್ಶನವೊಂದರಲ್ಲಿ ಈ ಬಗ್ಗೆ ಶ್ರೀಲೀಲಾಗೆ ಪ್ರಶ್ನೆ ಎದುರಾಯ್ತು, ಪ್ರಶ್ನೆಗೆ ಉತ್ತರಿಸಿದ ನಟಿ ಶ್ರೀಲೀಲಾ, ‘ನನ್ನ ಜೀವನದಲ್ಲಿ ತಾಯಿಗೆ ವಿಶೇಷ ಮಹತ್ವ. ನಾನಿಂದು ಈ ಸ್ಥಾನದಲ್ಲಿ ಇರಲು ತಾಯಿಯೇ ಕಾರಣ. ನನ್ನ ಸಿನಿಮಾ ಮತ್ತಿತರೆ ವಿಷಯಗಳಲ್ಲಿ ತಾಯಿ ಬಹಳ ಆಸಕ್ತಿವಹಿಸುತ್ತಾರೆ. ಆದರೆ ಕತೆಯ ಆಯ್ಕೆ ಇನ್ನಿತರೆ ವಿಷಯಗಳಲ್ಲಿ ನನಗೂ ಆಯ್ಕೆಯ ಸ್ವಾತಂತ್ರ್ಯ ನೀಡುತ್ತಾರೆ. ಇಬ್ಬರೂ ಸೇರಿ ನಿರ್ಣಯಗಳನ್ನು ತೆಗೆದುಕೊಳ್ಳುತ್ತೇವೆ. ಅಲ್ಲದೆ, ನನ್ನ ತಾಯಿ ನನಗೆ ಒಳ್ಳೆಯದನ್ನೇ ಬಯಸುತ್ತಾರೆ ಹೀಗಿರುವಾಗ ಅವರು ಮಾಡುತ್ತಿರುವುದರಲ್ಲಿ ತಪ್ಪೇನೂ ಇಲ್ಲ ಎಂದು ನನಗೆ ಅನಿಸುತ್ತದೆ’ ಎಂದಿದ್ದಾರೆ ನಟಿ.
ಇದನ್ನೂ ಓದಿ:ಬಾಲಿವುಡ್ ಸ್ಟಾರ್ ರಣ್ವೀರ್ ಸಿಂಗ್ ಜೊತೆ ಶ್ರೀಲೀಲಾ, ಆದರೆ ಸಿನಿಮಾಕ್ಕಾಗಿ ಅಲ್ಲ
ಶ್ರೀಲೀಲಾ ಪ್ರಸ್ತುತ ಹಲವಾರು ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಹಿಂದಿಯಲ್ಲಿ ‘ಆಶಿಖಿ 3’, ಸೈಫ್ ಅಲಿ ಖಾನ್ ಪುತ್ರನ ಸಿನಿಮಾದ ಜೊತೆಗೆ ಮತ್ತೊಂದು ಹೆಸರಿಡದ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಇವುಗಳ ಜೊತೆಗೆ ತೆಲುಗಿನಲ್ಲಿ ರವಿತೇಜ ಜೊತೆಗೆ ‘ಮಾಸ್ ಜಾತರ’ ಸಿನಿಮಾನಲ್ಲಿ ನಟಿಸಿದ್ದಾರೆ. ಪವನ್ ಕಲ್ಯಾಣ್ ಜೊತೆಗೆ ‘ಗಬ್ಬರ್ ಸಿಂಗ್ 2’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ತಮಿಳಿನಲ್ಲಿ ಶಿವಕಾರ್ತಿಕೇಯನ್ ಜೊತೆಗೆ ‘ಪರಾಶಕ್ತಿ’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಅಂದಹಾಗೆ ಶ್ರೀಲೀಲಾ ವೈದ್ಯಕೀಯ ಕೋರ್ಸ್ ಅನ್ನು ಸಹ ಮುಗಿಸಿದ್ದಾರೆ. ಸಿನಿಮಾಗಳಲ್ಲಿ ನಟಿಸುತ್ತಿರುವಾಗಲೇ ಎಂಬಿಬಿಎಸ್ ಸಹ ಮುಗಿಸಿರುವುದು ಅವರ ಬಹುಮುಖ ಪ್ರತಿಭೆಗೆ ಸಾಕ್ಷಿ. ಮಗಳು ವೈದ್ಯೆ ಆಗಬೇಕು ಎಂಬುದು ಅವರ ತಾಯಿ ಪುಷ್ಪಲತಾ ಅವರ ಕನಸಾಗಿತ್ತಂತೆ.
ಅಂದಹಾಗೆ ಪುಷ್ಪಲತಾ ಅವರು ಸಿಂಗಲ್ ಮದರ್. ಪತಿಯ ನೆರವು ಇಲ್ಲದೇ ಶ್ರೀಲೀಲಾ ಅವರನ್ನು ಸಾಕಿ ವೈದ್ಯೆಯನ್ನಾಗಿ ಈಗ ಭಾರತದ ಟಾಪ್ ನಟಿಯರಲ್ಲಿ ಒಬ್ಬರನ್ನಾಗಿ ಮಾಡಿದ್ದಾರೆ. ಶ್ರೀಲೀಲಾಗೆ ಒಬ್ಬ ಸಹೋದರ ಸಹ ಇದ್ದಾನೆ. ಆತನೂ ಸಹ ವೈದ್ಯಕೀಯ ಕೋರ್ಸ್ ಮಾಡುತ್ತಿದ್ದಾನೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




