AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mallamma: ಬಿಗ್ ಬಾಸ್ ಮನೆಯಿಂದ ಅರ್ಧಕ್ಕೆ ಹೊರ ನಡೆದ ಮಲ್ಲಮ್ಮ?

Mallamma Exit From Bigg Boss: ಬಿಗ್ ಬಾಸ್ ಕನ್ನಡ ಸೀಸನ್ 12ರಿಂದ ಮಲ್ಲಮ್ಮ ಅವರು ಅನಿರೀಕ್ಷಿತವಾಗಿ ಹೊರ ನಡೆದಿದ್ದಾರೆ ಎಂದು ವರದಿ ಆಗಿದೆ. ಬಿಗ್ ಬಾಸ್ ಮನೆಯಲ್ಲಿ ಇದ್ದ ಎಲ್ಲರಿಗೂ ಮನೆಯವರ ನೆನಪು ಕಾಡುತ್ತಾ ಇತ್ತು. ಆದರೆ ಮಲ್ಲಮ್ಮ ಮಾತ್ರ ಗಟ್ಟಿತನ ತೋರಿಸುತ್ತಿದ್ದರು. ಭಾವನಾತ್ಮಕ ವಿಚಾರಕ್ಕೆ ನಡುಗಿದವರಲ್ಲ. ಆದರೂ ಅವರು ಹೊರ ನಡೆದಿದ್ದಾರೆ.

Mallamma: ಬಿಗ್ ಬಾಸ್ ಮನೆಯಿಂದ ಅರ್ಧಕ್ಕೆ ಹೊರ ನಡೆದ ಮಲ್ಲಮ್ಮ?
ಮಲ್ಲಮ್ಮ
ರಾಜೇಶ್ ದುಗ್ಗುಮನೆ
|

Updated on:Oct 29, 2025 | 2:42 PM

Share

‘ಬಿಗ್ ಬಾಸ್ ಕನ್ನಡ ಸೀಸನ್ 12’ ರಲ್ಲಿ ಯಾರೂ ಊಹಿಸದ ಘಟನೆಗಳು ಸಾಕಷ್ಟು ನಡೆಯುತ್ತಿವೆ. ಮೂರನೇ ವಾರದಲ್ಲೇ ಬಿಗ್ ಬಾಸ್ ಫಿನಾಲೆ ನಡೆಯಿತು. ಇದರಲ್ಲಿ ವಿನ್ ಆದ ಸುಧಿಗೆ ಮುಂಬರುವ ಯಾವುದೇ ಒಂದು ನಾಮಿನೇಷನ್​ನಿಂದ ಬಚಾವ್ ಆಗುವ ಅಧಿಕಾರ ನೀಡಲಾಯಿತು. ಇನ್ನು, ಒಬ್ಬರನ್ನು ವಾರದ ಮಧ್ಯದಲ್ಲಿ ಹಾಗೂ ಮತ್ತಿಬ್ಬರನ್ನು ವಾರಾಂತ್ಯದಲ್ಲಿ ಎಲಿಮಿನೇಟ್ ಮಾಡಲಾಯಿತು. ಈಗ ಮೂವರು ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಪಡೆದಿರುವಾಗಲೇ ಬಿಗ್ ಬಾಸ್​ನಿಂದ ಮಲ್ಲಮ್ಮ (Mallamma) ಹೊರ ನಡೆದಿದ್ದಾರೆ ಎಂಬ ಶಾಕಿಂಗ್ ಸುದ್ದಿ ಹೊರ ಬಿದ್ದಿದೆ. ಇದನ್ನು ಕೇಳಿ ಫ್ಯಾನ್ಸ್ ಕೂಡ ಬೇಸರ ಮಾಡಿಕೊಂಡಿದ್ದಾರೆ.

ಮಲ್ಲಮ್ಮ ಅವರಿಗೆ ವಯಸ್ಸಾಗಿದೆ. ಆದಾಗ್ಯೂ ಬಿಗ್ ಬಾಸ್ ಮನೆಯಲ್ಲಿ ಎಲ್ಲರಿಗೂ ಠಕ್ಕರ್ ಕೊಡೋ ರೀತಿಯಲ್ಲಿ ಆಟ ಆಡುತ್ತಿದ್ದರು. ಕೆಲವು ನಿಯಮಗಳು, ಆಟದ ವಿಚಾರಗಳು ಅವರಿಗೆ ಅರ್ಥ ಆಗದೇ ಇದ್ದರು ಅವರಿಗೆ ಸೂಕ್ಷ್ಮತೆಗಳು ತಿಳಿಯುತ್ತಿತ್ತು. ಅವರು ಅನೇಕರ ಫೇವರಿಟ್ ಸ್ಪರ್ಧಿ ಆಗಿದ್ದರು. ಆದರೆ, ಈಗ ವೈಯಕ್ತಿಕ ಕಾರಣಗಳಿಂದ ಅವರು ದೊಡ್ಮನೆಯಿಂದ ಹೊರ ಹೋಗಿದ್ದಾರೆ ಎಂಬ ಸುದ್ದಿ ಹರಿದಾಡಿದೆ.

ಇದನ್ನೂ ಓದಿ
Image
ಪುನೀತ್ ಪ್ರೀತಿ ವಿಚಾರ ಹೇಳಿದಾಗ ರಾಜ್​ಕುಮಾರ್ ರಿಯಾಕ್ಷನ್ ಹೇಗಿತ್ತು?
Image
ಸಾವಿರ ಕೋಟಿ ತಲುಪಲ್ಲ ‘ಕಾಂತಾರ: ಚಾಪ್ಟರ್ 1’ ಕಲೆಕ್ಷನ್; ದೊಡ್ಡ ಕನಸು ಭಗ್ನ
Image
‘ಜಾನ್ವಿ ಗೆಳೆತನದಿಂದ ನನಗೆ ಕಳಂಕ ಬಂದಿದೆ’; ಬದಲಾದ ಅಶ್ವಿನಿ ಗೌಡ
Image
‘ಕಾಂತಾರ: ಚಾಪ್ಟರ್ 1’ ಚಿತ್ರದಲ್ಲಿ ರಿಷಬ್ ಮಾಯಕಾರನಾಗಲು ಬೇಕಾಯ್ತು 6 ಗಂಟೆ

ಮಲ್ಲಮ್ಮ ಕುಟುಂಬದವರೊಬ್ಬರಿಗೆ ಮಗು ಜನಿಸಿದೆ ಎನ್ನಲಾಗಿದೆ. ಈ ಖುಷಿಯ ಕ್ಷಣದಲ್ಲಿ ಅವರು ಭಾಗಿ ಆಗಲೇಬೇಕಾದ ಅನಿವಾರ್ಯತೆ ಇದೆ. ಹೀಗಾಗಿ, ಅವರು ಆಟ ತೊರೆದು ದೊಡ್ಮನೆಯಿಂದ ಹೊರ ಹೋಗುವ ನಿರ್ಧಾರಕ್ಕೆ ಬಂದಿದ್ದಾರೆ.

ಇದನ್ನೂ ಓದಿ: ಬಿಗ್ ಬಾಸ್ ಸ್ಪರ್ಧಿ ಮಾತಿನ ಮಲ್ಲಿ ಮಲ್ಲಮ್ಮ ಯಾರು?

ಬಿಗ್ ಬಾಸ್ ಮನೆಯಲ್ಲಿ ಇದ್ದ ಎಲ್ಲರಿಗೂ ಮನೆಯವರ ನೆನಪು ಕಾಡುತ್ತಾ ಇತ್ತು. ಆದರೆ ಮಲ್ಲಮ್ಮ ಮಾತ್ರ ಗಟ್ಟಿತನ ತೋರಿಸುತ್ತಿದ್ದರು. ಭಾವನಾತ್ಮಕ ವಿಚಾರಕ್ಕೆ ನಡುಗಿದವರಲ್ಲ. ಅವರು ಎಂದಿಗೂ ಮನೆಯನ್ನು ಹಾಗೂ ಮನೆಯವರನ್ನು ನೆನಪಿಸಿಕೊಂಡು ಅತ್ತವರಲ್ಲ. ಈಗ ಅವರು ಬಿಗ್ ಬಾಸ್ ಮನೆಯಿಂದ ಹೊರ ಹೋಗುವ ನಿರ್ಧಾರ ತೆಗೆದುಕೊಂಡಿದ್ದಾರೆ.

ಮಲ್ಲಮ್ಮ ಸ್ಪಷ್ಟನೆ

ಮಲ್ಲಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಲಾಗಿದೆ. ‘ಬಿಗ್ ಬಾಸ್​ನಿಂದ ಮಲ್ಲಮ್ಮ ಹೊರ ಬಂದಿಲ್ಲ’ ಎಂದು ಹೇಳಗಾಗಿದೆ. ಈ ಮೂಲಕ ವದಂತಿಗೆ ಸ್ಪಷ್ಟನೆ ಕೊಟ್ಟಂತೆ ಆಗಿದೆ.

ಮಲ್ಲಮ್ಮ ಯಾರು?

ಮಲ್ಲಮ್ಮ ಅವರು ಮೂಲತಃ ಯಾದಗಿರಿ ಜಿಲ್ಲೆಯ, ಸುರಪುರ ತಾಲೂಕಿನ ಸಣ್ಣ ಹಳ್ಳಿಯವರು. ಕೆಲಸಕ್ಕೆಂದು ಬೆಂಗಳೂರಿಗೆ ಬಂದರು. ಅವರ ಮಾತು ಕೆಲವರಿಗೆ ಇಷ್ಟ ಆಯಿತು. ಅದನ್ನು ವಿಡಿಯೋ ಮಾಡಿ ಹಂಚಿಕೊಳ್ಳಲಾಯಿತು. ಆ ಬಳಿಕ ಮಲ್ಲಮ್ಮ ಫೇಮಸ್ ಆದರು. ನಂತರ ತಮ್ಮದೇ ಆದ ಇನ್​ಸ್ಟಾಗ್ರಾಮ್ ಖಾತೆ ಹಾಗೂ ಯೂಟ್ಯೂಬ್ ಚಾನೆಲ್ ತೆಗೆದು ಮತ್ತಷ್ಟು ಜನಪ್ರಿಯತೆ ಪಡೆದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 6:57 am, Wed, 29 October 25