‘ಜೀವನದಲ್ಲಿ ಇನ್ನೆಂದೂ ಆ ತಪ್ಪು ಮಾಡಲ್ಲ’; ಕಣ್ಣೀರು ಹಾಕಿದ ರಕ್ಷಿತಾ ಶೆಟ್ಟಿ
Rakshita Shetty: ಬಿಗ್ ಬಾಸ್ ಕನ್ನಡ 12ರ ಪ್ರಬಲ ಸ್ಪರ್ಧಿ ರಕ್ಷಿತಾ ಶೆಟ್ಟಿ ತಮ್ಮ ಮನೆಯಿಂದ ಹೊರಗಿದ್ದಾಗ ಮಾಡಿದ ತಪ್ಪೊಂದನ್ನು ಅರಿತುಕೊಂಡಿದ್ದಾರೆ. ಅಮ್ಮನ ಪ್ರೀತಿ, ಅವರು ತಯಾರಿಸುವ ಆಹಾರದ ಮಹತ್ವ ತಿಳಿಯದೆ ದೂರುತ್ತಿದ್ದರು. ಈಗ ತಮ್ಮ ನಡೆಯ ಬಗ್ಗೆ ಪಶ್ಚಾತ್ತಾಪ ವ್ಯಕ್ತಪಡಿಸಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ರಕ್ಷಿತಾ ಶೆಟ್ಟಿ ಅವರು ಟಫ್ ಸ್ಪರ್ಧಿ ಆಗಿ ಗುರುತಿಸಿಕೊಂಡಿದ್ದಾರೆ. ಅವರು ರೇಸ್ನಲ್ಲಿ ಮುಂಚೂಣಿಯಲ್ಲಿ ಇದ್ದಾರೆ. ಬಿಗ್ ಬಾಸ್ ಫಿನಾಲೆವರೆಗೆ ಅವರು ಇರಬಹುದು ಎಂದು ಅನೇಕರು ನಿರೀಕ್ಷಿಸಿದ್ದಾರೆ. ಬಿಗ್ ಬಾಸ್ಗೆ ಬಂದ ಬಳಿಕ ಅವರು ಹೊರಗೆ ಮಾಡುತ್ತಿದ್ದ ಒಂದು ತಪ್ಪು ಅರಿವಾಗಿದೆ. ಈ ತಪ್ಪನ್ನು ಅವರು ಜೀವನದಲ್ಲಿ ಎಂದಿಗೂ ಮಾಡುವುದಿಲ್ಲವಂತೆ.
‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ ರಕ್ಷಿತಾ ಶೆಟ್ಟಿ ಅವರು ಸ್ಪರ್ಧಿ ಆಗಿ ಎಂಟ್ರಿ ಕೊಟ್ಟರು. ಬಂದ ದಿನವೇ ಅವರು ಹೊರ ಹೋದರು. ಒಂದು ವಾರದ ಬಳಿಕ ಅವರು ದೊಡ್ಮನೆಗೆ ಮತ್ತೆ ಎಂಟ್ರಿ ಕೊಟ್ಟರು. ಈ ವೇಳೆ ಅವರ ಆಟ ಸಾಕಷ್ಟು ಗಮನ ಸೆಳೆಯುವ ರೀತಿಯಲ್ಲಿ ಇದೆ ಎಂಬ ವಿಚಾರ ತಿಳಿಯಿತು. ಅವರು ಎಲ್ಲಾ ವಿಚಾರಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಾರೆ. ಆದರೆ, ಅದನ್ನು ಎಕ್ಸ್ಪ್ರೆಸ್ ಮಾಡಲು ಅವರಿಗೆ ಸಾಧ್ಯವಾಗುವುದಿಲ್ಲ. ಇದು ಅವರಿಗೆ ಹಿನ್ನಡೆ ಕೂಡ ಆಗಿದೆ.
ಬಿಗ್ ಬಾಸ್ ಮನೆಯಲ್ಲಿ ‘ಪ್ರೀತಿ’ ವಿಷಯದ ಬಗ್ಗೆ ಮಾತನಾಡುವಂತೆ ಕ್ಯಾಪ್ಟನ್ ರಘು ಕೋರಿದರು. ಈ ವೇಳೆ ಒಬ್ಬೊಬ್ಬರು ಒಂದೊಂದು ರೀತಿಯ ಅಭಿಪ್ರಾಯ ಹೊರಹಾಕಿದರು. ಈ ಪೈಕಿ ರಕ್ಷಿತಾ ಅವರು ಪ್ರೀತಿ ವಿಚಾರದಲ್ಲಿ ಹೇಳಿದ ಮಾತು ಗಮನ ಸೆಳೆದಿದೆ. ಅವರಿಗೆ ತಮ್ಮ ತಪ್ಪಿನ ಅರಿವಾಗಿದೆ.
ಇದನ್ನೂ ಓದಿ: Mallamma: ಬಿಗ್ ಬಾಸ್ ಮನೆಯಿಂದ ಅರ್ಧಕ್ಕೆ ಹೊರ ನಡೆದ ಮಲ್ಲಮ್ಮ?
‘ನನ್ನ ಮನೆಯಲ್ಲಿ ಇರುವಾಗ ಅಮ್ಮ ತಿಂಡಿ ಮಾಡಿಕೊಡ್ತಾ ಇದ್ದಳು. ನಾನು ಈ ತಿಂಡಿ ಬೇಡ, ಉಪ್ಪು ಆಗಿದೆ, ಖಾರ ಆಗಿದೆ ಎಂದೆಲ್ಲ ಹೇಳುತ್ತಿದ್ದೆ. ತಿನ್ನು ಎಂದು ಅವರು ಹೇಳಿದರೂ ನಾನು ತಿನ್ನುತ್ತಿರಲಿಲ್ಲ. ಆ ಟೈಮ್ ಅಲ್ಲಿ ಅದರ ವ್ಯಾಲ್ಯೂ, ಅವರು ತೋರಿಸುತ್ತಿದ್ದ ಪ್ರೀತಿ ಗೊತ್ತಾಗಲಿಲ್ಲ. ಈ ತಪ್ಪನ್ನು ನಾನು ಜೀವನದಲ್ಲಿ ಯಾವಾಗಲೂ ಮಾಡಲ್ಲ. ಮನೆಗೆ ಹೋದಾಗ ಏನೇ ಮಾಡಿದ್ರೂ ತಿನ್ನುತ್ತೇನೆ, ಕಂಪ್ಲೇಂಟ್ ಮಾಡಲ್ಲ’ ಎಂದಿದ್ದಾರೆ ರಕ್ಷಿತಾ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 1:05 pm, Wed, 29 October 25








