ಸಾಯುವುದಕ್ಕೂ ಸರಿಯಾಗಿ ಒಂದು ವರ್ಷ ಮೊದಲು ಅಪ್ಪು ಮಾಡಿದ ಒಳ್ಳೆಯ ಕೆಲಸ ನೋಡಿ
ಪುನೀತ್ ರಾಜ್‌ಕುಮಾರ್ ನಿಧನಕ್ಕೂ ಒಂದು ವರ್ಷ ಮುನ್ನ ಮಾಡಿದ ಸಮಾಜ ಸೇವಾ ಕಾರ್ಯ ಈಗ ಬೆಳಕಿಗೆ ಬಂದಿದೆ. 'ಜೇಮ್ಸ್' ಚಿತ್ರೀಕರಣದ ವೇಳೆ ಗಂಗಾವತಿಯ ಶಾಲೆಯೊಂದಕ್ಕೆ 1 ಲಕ್ಷ ರೂ. ಧನ ಸಹಾಯ ಮಾಡಿದ್ದರು. ತಾವು ಮಾಡಿದ ಸಹಾಯವನ್ನು ಎಂದೂ ಹೇಳಿಕೊಳ್ಳದ ಅಪ್ಪು ಅವರ ಈ ಮಹತ್ಕಾರ್ಯ, ಅವರ ನಿಸ್ವಾರ್ಥ ವ್ಯಕ್ತಿತ್ವಕ್ಕೆ ಸಾಕ್ಷಿಯಾಗಿದೆ.

ಪುನೀತ್ ರಾಜ್‌ಕುಮಾರ್ (Puneeth Rajkumar) ಅವರು ನಿಧನ ಹೊಂದಿ ಇಂದಿಗೆ (ಅಕ್ಟೋಬರ್ 29) ಒಂದು ವರ್ಷ ಕಳೆದಿರುವುದು ಗೊತ್ತೇ ಇದೆ. ಇಂದು ಅವರ ನಾಲ್ಕನೇ ವರ್ಷದ ಪುಣ್ಯ ತಿಥಿ. ಪುನೀತ್ ನಿಧನ ಹೊಂದುತ್ತಾರೆ ಎಂದರೆ ಯಾರೆಂದರೆ ಯಾರೂ ಊಹಿಸಿರಲಿಲ್ಲ. ಅವರು ಸಾಯುವಾಗ ಅವರಿಗೆ 46 ವರ್ಷ ವಯಸ್ಸು. ಪುನೀತ್ ಸಾಯುವುದಕ್ಕೂ ಒಂದು ವರ್ಷ ಮೊದಲು ಅವರು ಒಂದು ಒಳ್ಳೆಯ ಕೆಲಸ ಮಾಡಿದ ವಿಷಯವನ್ನು ಈಗ ಅವರ ಪುಣ್ಯ ತಿಥಿ ಸಮಯದಲ್ಲಿ ನೆನಪಿಸಿಕೊಳ್ಳಲಾಗುತ್ತಿದೆ.
ಪುನೀತ್ ರಾಜ್‌ಕುಮಾರ್ ಅವರು ನಿಧನ ಹೊಂದಿದ ಬಳಿಕ ಅವರು ಮಾಡಿದ ಒಳ್ಳೆಯ ಕೆಲಸಗಳ ವಿಷಯಗಳು ಗೊತ್ತಾದವು. ಸಾಮಾನ್ಯವಾಗಿ ಪುನೀತ್ ಅವರು ಎಲ್ಲಿಯೂ ತಾವು ಮಾಡಿದ್ದನ್ನು ಹೇಳಿಕೊಳ್ಳುತ್ತಿರಲಿಲ್ಲ. ಇದಕ್ಕೆ ಅವರ ಕುಟುಂಬದವರು ಹಾಕಿಕೊಟ್ಟ ಮಾರ್ಗದರ್ಶನವೇ ಕಾರಣ ಎಂದರೂ ತಪ್ಪಾಗಲಾರದು. ಹೀಗಾಗಿ, ಅವರು ಮಾಡಿಕೊಂಡ ಒಳ್ಳೆಯ ಕೆಲಸದ ಬಗ್ಗೆ ಎಲ್ಲಿಯೂ ಹೇಳುತ್ತಾ ಇರಲಿಲ್ಲ.
ಪುನೀತ್ ಬಗೆಗಿನ ಪೋಸ್ಟ್
ಪುನೀತ್ ಹೀರೋ ಆಗಿ ನಟಿಸಿದ ಕೊನೆಯ ಸಿನಿಮಾ ‘ಜೇಮ್ಸ್’. ಕೊವಿಡ್ ಕಾರಣಕ್ಕೆ ಸಿನಿಮಾದ ಶೂಟ್ ವಿಳಂಬ ಆಗಿತ್ತು. 2020ರ ಅಕ್ಟೋಬರ್ನಲ್ಲಿ ಈ ಚಿತ್ರದ ಶೂಟಿಂಗ್ಗಾಗಿ ಪುನೀತ್ ಅವರು ಗಂಗಾವತಿಗೆ ತೆರಳಿದ್ದರು. ಈ ವೇಳೆ ಅವರು ಮಾಡಿದ ಒಳ್ಳೆಯ ಕೆಲಸದ ಬಗ್ಗೆ ಸೋಶಿಯಲ್ ಮೀಡಿಯಾ ಬಳಕೆದಾರರು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಪುನೀತ್ ರಾಜ್‌ಕುಮಾರ್ ಪುಣ್ಯಸ್ಮರಣೆ; ನಾಲ್ಕು ವರ್ಷಗಳ ಹಿಂದೆ ನಿಜಕ್ಕೂ ನಡೆದಿದ್ದೇನು?
‘ಜೇಮ್ಸ್ ಚಿತ್ರೀಕರಣಕ್ಕೆ ಪುನೀತ್ ರಾಜಕುಮಾರ್ ಅವರು ಗಂಗಾವತಿಯ ಅನೆಗುಂದಿಗೆ ಬಂದಿದ್ದರು. ತಾಲೂಕಿನ ಮಲ್ಲಾಪುರ ಗ್ರಾಮದ ಸರಕಾರಿ ಪ್ರೌಢಶಾಲೆಗೆ ಶಾಲಾ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗಾಗಿ, ಶಾಲೆಯ ಕಲಿಕಾ ವಾತಾವರಣವನ್ನು ಉತ್ತೇಜಿಸಲು, ವಿದ್ಯಾರ್ಥಿಗಳಿಗೆ ಕಲಿಕಾ ಪ್ರೋತ್ಸಾಹವನ್ನು ನೀಡುವ ಉದ್ದೇಶದಿಂದ ಒಂದು ಲಕ್ಷ ರೂ ಅನ್ನು ಪ್ರೋತ್ಸಾಹ ಧನವಾಗಿನೀಡಿದ್ದರು. ಇದು ದಿನಾಂಕ 21-10, 2020ರಂದು ಅಂದರೆ ಅವರು ತೀರಿಕೊಳ್ಳುವ ಒಂದು ವರ್ಷ ಮುಂಚೆ ಈ ಕೆಲಸ ಮಾಡಿದ್ದರು.. ಧನ ಸಹಾಯ ಮಾಡಿದ ಬಗ್ಗೆ ಶಾಲೆಯಿಂದ ನೀಡಿದ ಪತ್ರಕ್ಕೆ ಅಪ್ಪು ರವರು ಒಂದು ಪ್ರತಿ ಪಡೆದು ಸಹಿ ಮಾಡಿರುವುದು’ ಎಂದು ಬರೆಯಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.







