ಬಿಗ್ ಬಾಸ್ ಮನೆಗೆ ಬಂದ ಮಾತಿನ ಮಲ್ಲಿ ಮಲ್ಲಮ್ಮ ಯಾರು?
Mathina malli Mallamma: ಕಳೆದ ಬಾರಿ ಉತ್ತರ ಕರ್ನಾಟಕ ಪ್ರತಿಭೆ ಹನುಮಂತ ಅವರಿಗೆ ಬಿಗ್ ಬಾಸ್ನಲ್ಲಿ ಅವಕಾಶ ನೀಡಲಾಗಿತ್ತು. ದೊಡ್ಮನೆಗೆ ಬಂದಿದ್ದೂ ಅಲ್ಲದೆ, ಗೆಲುವನ್ನು ಕಂಡರು. ಈ ಬಾರಿ ಮಲ್ಲಮ್ಮ ಅವರು ಬಿಗ್ ಬಾಸ್ಗೆ ಬಂದಿದ್ದಾರೆ. ಮಲ್ಲಮ್ಮ ಅವರು ಉತ್ತರ ಕರ್ನಾಟಕದ ಪ್ರತಿಭೆ.

‘ಬಿಗ್ ಬಾಸ್ ಕನ್ನಡ ಸೀಸನ್ 12’ರ ಗ್ರ್ಯಾಂಡ್ ಓಪನಿಂಗ್ ಸೆಪ್ಟೆಂಬರ್ 28ರಂದು ನಡೆಯಲಿದೆ. ಅದಕ್ಕೂ ಮೊದಲು ಅಂದರೆ ಸೆಪ್ಟೆಂಬರ್ 27ರಂದು ಕ್ವಾಟ್ಲೆ ಕಿಚನ್ ಫಿನಾಲೆಯಲ್ಲಿ ಮೂವರ ಹೆಸರನ್ನು ರಿವೀಲ್ ಮಾಡಲಾಗಿದೆ. ಮಂಜು ಭಾಷಿಣಿ, ಕಾಕ್ರೋಚ್ ಸುಧಿ ಹಾಗೂ ಮಲ್ಲಮ್ಮ ಹೆಸರು ರಿವೀಲ್ ಆಗಿದೆ. ಇದರಲ್ಲಿ ಸಾಕಷ್ಟು ಗಮನ ಸೆಳೆದಿದ್ದು ಮಲ್ಲಮ್ಮ. ಇವರು ಮಾತಿನ ಮಲ್ಲಿ ಮಲ್ಲಮ್ಮ ಎಂದೇ ಫೇಮಸ್ ಆದವರು. ಅವರ ಹಿನ್ನೆಲೆ ಬಗ್ಗೆ ಇಲ್ಲಿದೆ ವಿವರ.
ಕಳೆದ ಬಾರಿ ಉತ್ತರ ಕರ್ನಾಟಕ ಪ್ರತಿಭೆ ಹನುಮಂತ ಅವರಿಗೆ ಬಿಗ್ ಬಾಸ್ನಲ್ಲಿ ಅವಕಾಶ ನೀಡಲಾಗಿತ್ತು. ದೊಡ್ಮನೆಗೆ ಬಂದಿದ್ದೂ ಅಲ್ಲದೆ, ಗೆಲುವನ್ನು ಕಂಡರು. ಈ ಬಾರಿ ಮಲ್ಲಮ್ಮ ಅವರು ಬಿಗ್ ಬಾಸ್ಗೆ ಬಂದಿದ್ದಾರೆ. ಮಲ್ಲಮ್ಮ ಅವರು ಉತ್ತರ ಕರ್ನಾಟಕದ ಪ್ರತಿಭೆ. ಯಾದಗಿರಿ ಜಿಲ್ಲೆಯ, ಸುರಪುರ ತಾಲೂಕಿನ ಸಣ್ಣ ಹಳ್ಳಿಯವರು. ಕೆಲಸಕ್ಕೆಂದು ಬೆಂಗಳೂರಿಗೆ ಬಂದರು. ಅವರು ತಮ್ಮ ಮಾತಿನ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದರು. ಇಳಿ ವಯಸ್ಸಿನಲ್ಲಿ ಅವರು ಉಳಿದ ಸ್ಪರ್ಧಿಗಳ ಜೊತೆ ಹೇಗೆ ಸ್ಪರ್ಧಿಸುತ್ತಾರೆ ಎಂಬುದನ್ನು ಕಾದು ನೋಡುವ ಕುತೂಹಲ ಮೂಡಿದೆ.
View this post on Instagram
ಮಲ್ಲಮ್ಮ ಅವರು ತಮ್ಮದೇ ಆದ ಇನ್ಸ್ಟಾಗ್ರಾಮ್ ಹಾಗೂ ಯೂಟ್ಯೂಬ್ ಚಾನೆಲ್ ಹೊಂದಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ 1.69 ಲಕ್ಷ ಹಿಂಬಾಲಕರು ಅವರಿಗೆ ಇದ್ದಾರೆ. ಯೂಟ್ಯೂಬ್ ಚಾನೆಲ್ಗೆ 16 ಸಾವಿರ ಹಿಂಬಾಲಕರು ಇದ್ದಾರೆ. ಮಲ್ಲಮ್ಮ ಟಾಕ್ಸ್ ಅನ್ನೋದು ಅವರ ಯೂಟ್ಯೂಬ್ ಚಾನೆಲ್ ಹೆಸರು.
ಇದನ್ನೂ ಓದಿ: ಕ್ವಾಟ್ಲೆ ಕಿಚನ್ ಫೈನಲ್ನಲ್ಲಿ ‘ಬಿಗ್ ಬಾಸ್ ಕನ್ನಡ 12’ರ 3 ಸ್ಪರ್ಧಿಗಳ ಹೆಸರು ರಿವೀಲ್
ಮಲ್ಲಮ್ಮ ಅವರು ನವ ಯುವಕ-ಯವತಿಯರಂತೆ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಆದರೆ, ದೊಡ್ಮನೆಯಲ್ಲಿ ಅವರು ಉಳಿದ ಸ್ಪರ್ಧಿಗಳ ಜೊತೆ ಯಾವ ರೀತಿ ಹೊಂದಿಕೊಳ್ಳುತ್ತಾರೆ ಎಂದು ಕಾದು ನೋಡಬೇಕಿದೆ. ಬಿಗ್ ಬಾಸ್ನಲ್ಲಿ ಮಾತೇ ಬಂಡವಾಳ. ತಮ್ಮ ಮಾತಿನ ಚಾಕಚಕ್ಯತೆಯನ್ನು ಅವರು ಬಿಗ್ ಬಾಸ್ನಲ್ಲಿ ಹೇಗೆ ಬಳಕೆ ಮಾಡಿಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 11:00 pm, Sat, 27 September 25



