ಕ್ವಾಟ್ಲೆ ಕಿಚನ್ ಫೈನಲ್ನಲ್ಲಿ ‘ಬಿಗ್ ಬಾಸ್ ಕನ್ನಡ 12’ರ 3 ಸ್ಪರ್ಧಿಗಳ ಹೆಸರು ರಿವೀಲ್
ಬಿಗ್ ಬಾಸ್ ಕನ್ನಡ ಸೀಸನ್ 12ರ ಆರಂಭಕ್ಕೆ ಬಾಕಿ ಉಳಿದಿರುವುದು ಇನ್ನು ಕೆಲವು ಗಂಟೆಗಳು ಮಾತ್ರ. ಹೀಗಿರುವಾಗಲೇ ಮೂವರು ಸ್ಪರ್ಧಿಗಳ ಹೆಸರು ರಿವೀಲ್ ಆಗಿದೆ. ‘ಕ್ವಾಟ್ಲೆ ಕಿಚನ್’ ಫಿನಾಲೆಯಲ್ಲಿ ಇವರ ಹೆಸರನ್ನು ರಿವೀಲ್ ಮಾಡಲಾಗಿದೆ. ಹಾಗಾದರೆ, ಅವರು ಯಾರು ಎಂಬ ಬಗ್ಗೆ ಇಲ್ಲಿದೆ ವಿವರ.

‘ಬಿಗ್ ಬಾಸ್’ ಸ್ಪರ್ಧೆಗೆ ಬರುವವರ ಹೆಸರನ್ನು ಪ್ರತಿ ಬಾರಿ ಶೋನಲ್ಲೇ ರಿವೀಲ್ ಮಾಡಲಾಗುತ್ತದೆ. ಇದು ಸಂಪ್ರದಾಯ. ಸುದೀಪ್ ಅವರು ವೇದಿಕೆಗೆ ಬಂದು ಹೆಸರನ್ನು ರಿವೀಲ್ ಮಾಡುವ ಕೆಲಸ ಮಾಡುತ್ತಾರೆ. ಆದರೆ, ಈ ಬಾರಿ ‘ಕ್ವಾಟ್ಲೆ ಕಿಚನ್’ ಫೈನಲ್ನಲ್ಲಿ ಮೂವರು ಸ್ಪರ್ಧಿಗಳ ಹೆಸರು ರಿವೀಲ್ ಆಗಿದೆ. ಈ ಮೂಲಕ ಕುತೂಹಲವನ್ನು ಕಡಿಮೆ ಮಾಡುವ ಕೆಲಸವನ್ನು ತಂಡದವರು ಮಾಡಿದ್ದಾರೆ. ಉಳಿದ 14 ಅಥವಾ 15 ಸ್ಪರ್ಧಿಗಳ ಹೆಸರು ನಾಳೆ (ಸೆಪ್ಟೆಂಬರ್ 28) ರಿವೀಲ್ ಆಗಲಿದೆ. ಸಂಪೂರ್ಣ ಪಟ್ಟಿ ನೋಡಲು ಬಿಗ್ ಬಾಸ್ ಅಭಿಮಾನಿಗಳು ಕಾದಿದ್ದಾರೆ.
ಮೊದಲ ಸ್ಪರ್ಧಿಯಾಗಿ ಕಾಕ್ರೋಚ್ ಸುಧಿ ಹೆಸರನ್ನು ತೋರಿಸಿದರು. ಕಾಕ್ರೋಚ್ ಸುಧಿ ಅವರು ಸಿನಿಮಾಗಳಲ್ಲಿ ವಿಲನ್ ಪಾತ್ರಗಳ ಮೂಲಕ ಗಮನ ಸೆಳೆದವರು. ಅವರು ‘ಟಗರು’ ಸಿನಿಮಾದಲ್ಲಿ ಕಾಕ್ರೋಚ್ ಪಾತ್ರ ಮಾಡಿದ್ದರು. ಅಂದಿನಿಂದ ಅವರು ಕಾಕ್ರೋಚ್ ಸುಧಿ ಎಂದೇ ಫೇಮಸ್ ಆದರು. ಅವರು ಬಿಗ್ ಬಾಸ್ಗೆ ಬರೋದಿಲ್ಲ ಎನ್ನುತ್ತಲೇ ದೊಡ್ಮನೆಗೆ ಬಂದಿದ್ದಾರೆ ಎಂಬುದು ವಿಶೇಷ. ಅವರಿಂದ ಟಫ್ ಸ್ಪರ್ಧೆ ನಿರೀಕ್ಷಿಸಬಹುದು.
ಮಂಜು ಭಾಷಿಣಿ ಅವರು ಕೂಡ ಬಿಗ್ ಬಾಸ್ಗೆ ಬರುತ್ತಿದ್ದಾರೆ. ಅವರು ‘ಸಿಲ್ಲಿ ಲಲ್ಲಿ’ ಧಾರಾವಾಹಿಯಲ್ಲಿ ಲಲಿತಾಂಬ ಹೆಸರಿನ ಪಾತ್ರ ಮಾಡಿದ್ದರು. ಅವರು ಸಿನಿಮಾಗಳಲ್ಲೂ ಮಾಡಿದ್ದಾರೆ. ಜೀ ಕನ್ನಡದ ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯಲ್ಲಿ ಅವರು ಬಂಗಾರಮ್ಮನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈಗ ಅವರು ಬಿಗ್ ಬಾಸ್ಗೆ ಬರುತ್ತಿರುವುದು ರಿವೀಲ್ ಆಗಿದೆ.
View this post on Instagram
View this post on Instagram
View this post on Instagram
ಮೂರನೇ ಸ್ಪರ್ಧಿಯಾಗಿ ಮಲ್ಲಮ್ಮ ಅವರು ಬರುತ್ತಿದ್ದಾರೆ. ಅವರು ಉತ್ತರ ಕರ್ನಾಟಕದವರು. ಮಾತಿನ ಮಲ್ಲಿ ಮಲ್ಲಮ್ಮ ಎಂದೇ ಫೇಮಸ್. ರೀಲ್ಸ್ ಮಾಡಿಯೂ ಫೇಮಸ್ ಆಗಿದ್ದಾರೆ. ಇವರ ಬಗ್ಗೆ ಹೆಚ್ಚಿನ ಮಾಹಿತಿ ಸೆಪ್ಟೆಂಬರ್ 28ರಂದು ರಿವೀಲ್ ಆಗಲಿದೆ. ಅವರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಫ್ಯಾನ್ಸ್ ಕೂಡ ಕಾದಿದ್ದಾರೆ.
ಇದನ್ನೂ ಓದಿ: ಬಿಗ್ ಬಾಸ್ಗೆ ಹೋಗುತ್ತಿರುವ ಆ ಮಾಸ್ಕ್ ಮ್ಯಾನ್ ಯಾರು ಎಂದು ಕೊನೆಗೂ ಕಂಡು ಹಿಡಿದ ಫ್ಯಾನ್ಸ್
‘ಬಿಗ್ ಬಾಸ್ ಕನ್ನಡ ಸೀಸನ್ 12’ರ ಗ್ರಾಂಡ್ ಓಪನಿಂಗ್ ಸೆಪ್ಟೆಂಬರ್ 28ರಂದು ನಡೆಯಲಿದೆ. ಜಿಯೋ ಹಾಟ್ಸ್ಟಾರ್ ಹಾಗೂ ಕಲರ್ಸ್ ಕನ್ನಡ ವಾಹಿನಿಯಲ್ಲಿ ಲೈವ್ ನೋಡಲು ಅವಕಾಶ ಇದೆ. ದಿನ ನಿತ್ಯ 9.30ಕ್ಕೆ ಎಪಿಸೋಡ್ ಪ್ರಸಾರ ಕಾಣಲಿದೆ. ಜಿಯೋ ಹಾಟ್ಸ್ಟಾರ್ನಲ್ಲಿ 24 ಗಂಟೆ ವೀಕ್ಷಣೆಗೆ ಅವಕಾಶ ಇದೆ ಎನ್ನಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 9:51 pm, Sat, 27 September 25



