ಬಿಗ್ ಬಾಸ್ಗೆ ಹೋಗುತ್ತಿರುವ ಆ ಮಾಸ್ಕ್ ಮ್ಯಾನ್ ಯಾರು ಎಂದು ಕೊನೆಗೂ ಕಂಡು ಹಿಡಿದ ಫ್ಯಾನ್ಸ್
ಕಲರ್ಸ್ ಕನ್ನಡದಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭಕ್ಕೆ ಉಳಿದಿರೋದು ಇನ್ನು ಕೆಲವೇ ಗಂಟೆಗಳು ಮಾತ್ರ. ನಾಳೆ ಅಂದರೆ ಸೆಪ್ಟೆಂಬರ್ 28ರಂದು ಶೋ ಅದ್ದೂರಿಯಾಗಿ ಆರಂಭ ಆಗಲಿದೆ. ಈ ಬಗ್ಗೆ ಸಾಕಷ್ಟು ನಿರೀಕ್ಷೆ ಮೂಡಿದೆ. ಅದಕ್ಕೂ ಮೊದಲು ಮಾಸ್ಕ್ ಮ್ಯಾನ್ ಯಾರು ಎಂದು ಕಂಡು ಹಿಡಿಯಲಾಗಿದೆ.

ಕಲರ್ಸ್ ಕನ್ನಡ ವಾಹಿನಿಯು ಪ್ರತಿ ವರ್ಷವೂ ಬಿಗ್ ಬಾಸ್ನ (Bigg Boss) ಹೋಸ್ಟ್ ಮಾಡುತ್ತಾ ಬರುತ್ತಿದೆ. ಈ ವರ್ಷವೂ ಅದು ಬಿಗ್ ಬಾಸ್ ಕಾರ್ಯಕ್ರಮವನ್ನು ನಡೆಸಿಕೊಡಲಿದೆ. ಪ್ರತಿ ಬಾರಿಯೂ ಶೋಗೆ ನಾನಾ ರೀತಿಯ ತಂತ್ರ ಬಳಕೆ ಮಾಡಲಾಗುತ್ತದೆ. ಅದೇ ರೀತಿ ಈ ಬಾರಿ ವ್ಯಕ್ತಯೋರ್ವನು ಜನರ ಎದುರು ಹೋಗಿ ನಾನು ಬಿಗ್ ಬಾಸ್ಗೆ ಹೋಗುತ್ತೇನೆ ಎಂದು ಹೇಳಿದ್ದಾನೆ. ಕೊನೆಯ ಪಕ್ಷ ಧ್ವನಿ ಗುರುತು ಸಿಕ್ಕಿದ್ದರೆ ಇವರೇ ಅಂತ ಕಂಡು ಹಿಡಿಯಬಹುದಿತ್ತು. ಆದರೆ, ಧ್ವನಿಯನ್ನು ಬದಲಾಯಿಸಲಾಗಿದೆ. ಹೀಗಾಗಿ, ಯಾರು ಎಂದು ಹೇಳುವುದು ಕಷ್ಟವಾಗಿತ್ತು. ಆದರೆ, ವೀಕ್ಷಕರು, ಬಿಗ್ ಬಾಸ್ನ ವೀಕ್ಷಕರು ಬುದ್ಧಿವಂತರು ಗೊತ್ತಲ್ಲ.
ಆ ವ್ಯಕ್ತಿ ಯಾರು ಎಂಬುದನ್ನು ಫ್ಯಾನ್ಸ್ ಕಂಡು ಹಿಡಿದೇ ಬಿಟ್ಟಿದ್ದಾರೆ. ಆ ವ್ಯಕ್ತಿ ಬೇರೆ ಯಾರೂ ಅಲ್ಲ ಕಾಕ್ರೋಚ್ ಸುಧಿ. ಹಲವು ಸಿನಿಮಾಗಳಲ್ಲಿ ನಟಿಸಿದ ಅವರಿಗೆ ‘ಟಗರು’ ಸಿನಿಮಾ ಜನಪ್ರಿಯತೆ ನೀಡಿತು ಎಂದರೂ ತಪ್ಪಾಗಲಾರದು. ಅಲ್ಲಿ ಅವರು ಕಾಕ್ರೋಚ್ ಹೆಸರಿನ ಪಾತ್ರವನ್ನು ಮಾಡಿದ್ದರು. ಆ ಬಳಿಕ ಅವರಿಗೆ ಕಾಕ್ರೋಚ್ ಸುಧಿ ಎಂಬ ಹೆಸರೇ ಪರ್ಮನೆಂಟ್ ಆಯಿತು. ಅದನ್ನು ಅವರು ಕೂಡ ಇಷ್ಟಪಟ್ಟಿದ್ದಾರೆ.
ಅವರು ಬಿಗ್ ಬಾಸ್ ಮನೆಗೆ ಬರುತ್ತಾರೆ ಎಂಬುದು ಮೊದಲಿನಿಂದಲೂ ಚಾಲ್ತಿಯಲ್ಲಿ ಇದ್ದ ಸುದ್ದಿಯಾಗಿತ್ತು ಎನ್ನಬಹುದು. ಆದರೆ, ಇದನ್ನು ಒಪ್ಪಲು ಅವರು ರೆಡಿ ಇರಲೇ ಇಲ್ಲ. ಇದನ್ನು ಅವರು ಫೇಕ್ ಸುದ್ದಿ ಎಂದು ಕರೆದರು. ನನಗೆ ಹೊರಗೆ ಒಪ್ಪಿಕೊಂಡ ಕಮಿಟ್ಮೆಂಟ್ಗಳು ಸಾಕಷ್ಟು ಇವೆ. ಹೀಗಾಗಿ, ನಾನು ಬರೋದೇ ಇಲ್ಲ ಎಂದು ಹೇಳಿದ್ದರು. ಆದರೆ, ಅದು ಸುಳ್ಳಾಗಿದೆ. ಅವರು ಆಗಮಿಸಿದ್ದಾರೆ.
ಇದನ್ನೂ ಓದಿ: ನಾನು ಬಿಗ್ ಬಾಸ್ಗೆ ಹೋಗ್ತೀನಿ: ಜನರ ಎದುರು ಸೀಕ್ರೇಟ್ ಬಿಚ್ಚಿಟ್ಟ ಮಾಸ್ಕ್ ಮ್ಯಾನ್
ನಿಜ ಜೀವನದಲ್ಲಿ ಸುದೀ ಅವರು ಒಂದಷ್ಟು ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಈ ಟ್ಯಾಟೂಗಳು ವಿಡಿಯೋದಲ್ಲಿ ಕಾಣಿಸಿವೆ ಮತ್ತು ಇವರೇ ಕಾಕ್ರೋಚ್ ಸುಧಿ ಎಂಬುದು ಪ್ರೇಕ್ಷಕರಿಗೂ ಸ್ಪಷ್ಟವಾಗಿದೆ. ಹೀಗಾಗಿ ಇವರೇ ಸುಧಿ ಎಂದು ಕಮೆಂಟ್ ಬಾಕ್ಸ್ನಲ್ಲಿ ಹೇಳಲಾಗುತ್ತಾ ಇದೆ. ಸೆಪ್ಟೆಂಬರ್ 28ರ ಎಪಿಸೋಡ್ನಲ್ಲಿ ಈ ವಿಚಾರವು ರಿವೀಲ್ ಆಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



