ಗೌತಮ್ನಿಂದ ಮತ್ತಷ್ಟು ದೂರ ಸರಿಯಲಿದ್ದಾಳೆ ಭೂಮಿಕಾ? ನಡೆಯಿತು ಊಹಿಸದ ಘಟನೆ
ಗೌತಮ್ ಹಾಗೂ ಭೂಮಿಕಾ ಐದು ವರ್ಷಗಳ ಬಳಿಕ ಭೇಟಿ ಆದಾಗ ಕೆಲವು ಎಚ್ಚರಿಕೆಗಳನ್ನು ನೀಡಿದ್ದಳು. ‘ನಿಮ್ಮಿಂದ ನಾನು ತುಂಬಾನೇ ದೂರ ಬಂದಿದ್ದೇನೆ. ನನ್ನನ್ನು ಮತ್ತೆ ಹುಡುಕುವ ಪ್ರಯತ್ನ ಮಾಡಬೇಡಿ. ಹಾಗಾದಲ್ಲಿ ನಾನು ನಿಮ್ಮಿಂದ ಮತ್ತಷ್ಟು ದೂರ ಹೋಗಬೇಕಾಗುತ್ತದೆ’ ಎಂದು ಎಚ್ಚರಿಸಿದ್ದಳು. ಈಗ ಹಾಗೆ ಆಗುವ ಸೂಚನೆ ಸಿಕ್ಕಿದೆ.

‘ಅಮೃತಧಾರೆ’ ಧಾರಾವಾಹಿ (Amruthadhaare) ಸದ್ಯ ಹಲವು ತಿರುವುಗಳನ್ನು ಪಡೆದು ಸಾಗುತ್ತಿರುವುದನ್ನು ಕಾಣಬಹುದು. ಜೀ ಕನ್ನಡದಲ್ಲಿ ಪ್ರಸಾರ ಕಾಣುತ್ತಿರುವ ಈ ಧಾರಾವಾಹಿಯ ಕಥೆಯಲ್ಲಿ ಮಹತ್ವದ ಬದಲಾವಣೆ ಆಗಿದೆ. ಗೌತಮ್ ಬಾಡಿಗೆ ಕಾರ್ ಡ್ರೈವರ್ ಆಗಿದ್ದಾನೆ. ಭೂಮಿಕಾ ಆತನ ಬಿಟ್ಟು ದೂರ ಬಂದಿದ್ದಾಳೆ. ಭೂಮಿಕಾಳನ್ನು ಹುಡುಕುತ್ತಾ ಹುಡುಕುತ್ತಾ ಐದು ವರ್ಷಗಳು ಕಳೆದಿವೆ. ಕೊನೆಗೂ ಭೂಮಿಕಾ ಹಾಗೂ ಗೌತಮ್ ಎದುರಾಗಿದ್ದಾರೆ. ಈಗ ಭೂಮಿಕಾ ಮತ್ತಷ್ಟು ದೂರ ಹೋಗುವ ಸೂಚನೆ ಕೊಟ್ಟಿದ್ದಾಳೆ.
ಗೌತಮ್ ಹಾಗೂ ಭೂಮಿಕಾ ಐದು ವರ್ಷಗಳ ಬಳಿಕ ಭೇಟಿ ಆದಾಗ ಕೆಲವು ಎಚ್ಚರಿಕೆಗಳನ್ನು ನೀಡಿದ್ದಳು. ‘ನಿಮ್ಮಿಂದ ನಾನು ತುಂಬಾನೇ ದೂರ ಬಂದಿದ್ದೇನೆ. ನನ್ನನ್ನು ಮತ್ತೆ ಹುಡುಕುವ ಪ್ರಯತ್ನ ಮಾಡಬೇಡಿ. ಹಾಗಾದಲ್ಲಿ ನಾನು ನಿಮ್ಮಿಂದ ಮತ್ತಷ್ಟು ದೂರ ಹೋಗಬೇಕಾಗುತ್ತದೆ’ ಎಂದು ಎಚ್ಚರಿಸಿದ್ದಳು. ಆದರೆ, ಗೌತಮ್ ಈ ಎಚ್ಚೆರಿಕೆಯನ್ನು ಗಂಭೀರವಾಗಿ ಪರಿಗಣಿಸಿಯೇ ಇರಲಿಲ್ಲ. ಇದನ್ನು ನಿರ್ಲಕ್ಷ್ಯ ಮಾಡಿ ಮಗನ ಭೇಟಿ ಮಾಡುತ್ತಿದ್ದಾನೆ. ಇದು ಆತನಿಗೆ ಮುಳುವಾಗುವ ಸೂಚನೆ ಸಿಕ್ಕಿದೆ.
ಗೌತಮ್ ತನ್ನ ಮಗ ಆಕಾಶ್ನ ಪದೇ ಪದೇ ಭೇಟಿ ಮಾಡುತ್ತಿದ್ದ. ಈ ಭೇಟಿ ಗುಟ್ಟಾಗಿ ನಡೆಯುತ್ತಿತ್ತು. ಈ ಬಗ್ಗೆ ಭೂಮಿಕಾಗೆ ಯಾವುದೇ ಅನುಮಾನ ಇರಲಿಲ್ಲ. ಆದರೆ, ಈಗ ಗೌತಮ್ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾನೆ. ಇದರಿಂದ ಭೂಮಿಕಾ ಮತ್ತಷ್ಟು ದೂರ ಆಗುವ ಸೂಚನೆ ಸಿಕ್ಕಿದೆ.
‘ಅಮೃತಧಾರೆ’ ಪ್ರೋಮೋ
ಗೌತಮ್ ಹಾಗೂ ಆಕಾಶ್ ಮಾತನಾಡುತ್ತಿದ್ದರು. ಆಕಾಶ್ಗೆ ತೋರಿದ ಪ್ರೀತಿಯಿಂದ ಆತ ಖುಷಿಯಾಗಿದ್ದಾನೆ. ಈ ವೇಳೆ ಭೂಮಿಕಾ ನೋಡಿ ಬಿಟ್ಟಿದ್ದಾಳೆ. ಗೌತಮ್ ಮುಖದಲ್ಲಿ ಆತಂಕದ ಛಾಯೆ ಮೂಡಿದೆ. ಈಗ ಇಬ್ಬರೂ ಮತ್ತಷ್ಟು ದೂರ ಆಗುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ: ರಾಕೆಟ್ ರೀತಿ ಏರಿತು ‘ಅಮೃತಧಾರೆ’ ಟಿಆರ್ಪಿ; ಟಾಪ್ ಐದರಿಂದ ‘ನಾ ನಿನ್ನ ಬಿಡಲಾರೆ’ ಔಟ್
ಭೂಮಿಕಾ ಹಾಗೂ ಗೌತಮ್ ಬೇರೆ ಆಗಿರುವಾಗ ತೆಗೆದುಕೊಂಡ ಕಥಾ ಹಂದರ ಸಾಕಷ್ಟು ಟೀಕೆಗೂ ಕಾರಣ ಆಗಿದೆ. ವಿವಿಧ ಸಿನಿಮಾಗಳ ಕಥೆಯನ್ನು ಇಟ್ಟುಕೊಂಡು ಈ ರೀತಿ ಕಥೆ ಮಾಡಲಾಗುತ್ತಿದೆ ಎಂದು ಅನೇಕರು ಟೀಕೆ ಮಾಡಿದ್ದೂ ಇದೆ. ಆದರೆ, ಮೇಕರ್ಗಳು ಈ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಂಡಿಲ್ಲ. ಸದ್ಯ ಧಾರಾವಾಹಿ ಒಳ್ಳೆಯ ಟಿಆರ್ಪಿ ಪಡೆದುಕೊಂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 10:07 am, Fri, 26 September 25







