ಬಿಗ್ ಬಾಸ್ಗೆ ದಾರಿ ಬಿಟ್ಟಕೊಟ್ಟ ಸೀರಿಯಲ್ಸ್; ಕಲರ್ಸ್ನ ಈ ಧಾರಾವಾಹಿಗಳು ಕೊನೆ
ಬಿಗ್ ಬಾಸ್ ಕನ್ನಡ ಸೀಸನ್ 12 ರ ಆರಂಭಕ್ಕಾಗಿ ಕಲರ್ಸ್ ಕನ್ನಡದ ಕೆಲವು ಕನ್ನಡ ಧಾರಾವಾಹಿಗಳು ತಮ್ಮ ಪ್ರಸಾರವನ್ನು ಅಂತ್ಯಗೊಳಿಸಿವೆ. ಈಗಾಗಲೇ ‘ದೃಷ್ಟಿ ಬೊಟ್ಟು’ ಧಾರಾವಾಹಿ ತನ್ನ ಪ್ರಸಾರವನ್ನು ಅಂತ್ಯಗೊಳಿಸಿದೆ. ಇದಕ್ಕೆ ಕಾರಣ ಏನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಇವುಗಳ ಜೊತೆ ಇನ್ನೂ ಒಂದು ಧಾರಾವಾಹಿ ತನ್ನ ಪ್ರಸಾರವನ್ನು ಅಂತ್ಯಗೊಳಿಸಲಿದೆ.

‘ಬಿಗ್ ಬಾಸ್ ಕನ್ನಡ ಸೀಸನ್ 12’ರ ಆರಂಭಕ್ಕೆ ಇನ್ನು ಬಾಕಿ ಉಳಿದಿರೋದು ಕೆಲವೇ ದಿನಗಳು ಮಾತ್ರ. ಹಲವು ಸೆಲೆಬ್ರಿಟಿಗಳು, ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಶೋಗೆ ಬರುತ್ತಾರೆ ಎಂದು ಹೇಳಲಾಗುತ್ತಿದೆ. ಕಳೆದ ಬಾರಿಯಂತೆ ಈ ಬಾರಿಯೂ ‘ಬಿಗ್ ಬಾಸ್ ಕನ್ನಡ’ ರಾತ್ರಿ 9.30ಕ್ಕೆ ಕಲರ್ಸ್ ವಾಹಿನಿಯಲ್ಲಿ ಪ್ರಸಾರ ಆಗಲಿದೆ. ಹೀಗಿರುವಾಗಲೇ ಯಾವೆಲ್ಲ ಧಾರಾವಾಹಿಗಳು ಕೊನೆ ಆಗುತ್ತವೆ ಎನ್ನುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ.
ಈಗಾಗಲೇ ‘ದೃಷ್ಟಿ ಬೊಟ್ಟು’ ಧಾರಾವಾಹಿ ತನ್ನ ಪ್ರಸಾರವನ್ನು ಅಂತ್ಯಗೊಳಿಸಿದೆ. ಇದಕ್ಕೆ ಕಾರಣ ಏನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಇವುಗಳ ಜೊತೆ ಇನ್ನೂ ಒಂದು ಧಾರಾವಾಹಿ ತನ್ನ ಪ್ರಸಾರವನ್ನು ಅಂತ್ಯಗೊಳಿಸಲಿದೆ. ಇದು ಎಲ್ಲರ ಜನ ಮೆಚ್ಚಿನ ಧಾರಾವಾಹಿ ಎನಿಸಿಕೊಂಡಿತ್ತು. ಅದುವೇ ‘ನಿನಗಾಗಿ’.
ದಿವ್ಯಾ ಉರುಡುಗ ಹಾಗೂ ರಿತ್ವಿಕ್ ನಟಿಸುತ್ತಿರುವ ‘ನಿನಗಾಗಿ’ ಧಾರಾವಾಹಿ ಈಗಾಗಲೇ ಹಲವು ಎಪಿಸೋಡ್ ಪ್ರಸಾರ ಕಂಡಿದೆ. ಈ ಧಾರಾವಾಹಿ ಪ್ರತಿ ನಿತ್ಯ ರಾತ್ರಿ 8 ಗಂಟೆಗೆ ಪ್ರಸಾರ ಕಾಣುತ್ತಿತ್ತು. ಈಗ ಈ ಧಾರಾವಾಹಿಯ ಕೊನೆಯ ಹಂತದ ಶೂಟ್ ಪೂರ್ಣಗೊಂಡಿದೆಯಂತೆ. ಈ ಜಾಗದಲ್ಲಿ ‘ಗಂಧದಗುಡಿ’ ಧಾರಾವಾಹಿ ಪ್ರಸಾರ ಕಾಣಲಿದೆಯೇ ಎಂಬ ಪ್ರಶ್ನೆ ಮೂಡಿದೆ.
ಇದನ್ನೂ ಓದಿ: ‘ಬಿಗ್ ಬಾಸ್ ಕನ್ನಡ ಸೀಸನ್ 12’ ಶೋಗೆ ಫೈನಲ್ ಆದ ಸ್ಪರ್ಧಿಗಳು ಇವರೇ ನೋಡಿ
ಪ್ರತಿ ದಿನ ಸಂಜೆ 6 ಗಂಟೆಗೆ ‘ದೃಷ್ಟಿ ಬೊಟ್ಟು’ ಧಾರಾವಾಹಿ ಪ್ರಸಾರ ಕಾಣುತ್ತಿತ್ತು. ಈ ಧಾರಾವಾಹಿ ಮುಕ್ತಾಯಗೊಂಡಿದೆ. ಈ ಕಾರಣಕ್ಕೆ ಆ ಸಮಯದಲ್ಲಿ ‘ಯಜಮಾನ’ ಹಾಗೂ ‘ರಾಮಾಚಾರಿ’ ಧಾರಾವಾಹಿಗಳ ಮಹಾ ಸಂಗಮ ಪ್ರಸಾರ ಕಾಣುತ್ತಿದೆ. ಈ ಮಹಾಸಂಗಮ ಈ ಮೊದಲು ರಾತ್ರಿ 9.30ರಿಂದ 10.30ರವರೆಗೆ ಪ್ರಸಾರ ಕಾಣುತ್ತಿತ್ತು. ಈಗ ಈ ಮಹಾಸಂಗಮದ ಟೈಮಿಂಗ್ 6 ಗಂಟೆಗೆ ಶಿಫ್ಟ್ ಆಗಿರುವುದರಿಂದ ಬಿಗ್ ಬಾಸ್ ಹಾದಿ ಸುಗಮವಾಗಿದೆ. ಈ ಎರಡು ಧಾರಾವಾಹಿಗಳ ಪೈಕಿ ಒಂದು ಕೊನೆ ಆಗಬಹುದು ಅಥವಾ ಇದೇ ಮಹಾ ಸಂಗಮ ಹೀಗೆಯೇ ಮುಂದುವರಿಯಬಹುದು ಎನ್ನಲಾಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








