AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್ ಬಾಸ್ ನೋಡಿ ಚಿನ್ನದ ನಾಣ್ಯ ಗೆಲ್ಲಿ: ಫಿನಾಲೆಯಲ್ಲಿ ಅತಿಥಿಯಾಗುವ ಅವಕಾಶ ಇಲ್ಲಿದೆ

ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್ ಕನ್ನಡ’ ಹೊಸ ಸೀಸನ್ ನೋಡಲು ಜನರು ಕಾತರದಿಂದ ಕಾದಿದ್ದಾರೆ. ಕಿರುತೆರೆ ಪ್ರೇಕ್ಷಕರಿಗೆ ಈ ಬಾರಿ ಒಂದಷ್ಟು ಸರ್ಪ್ರೈಸ್ ಇರಲಿದೆ. ಆ ಬಗ್ಗೆ ಬಿಗ್ ಬಾಸ್ ಆಯೋಜಕರು ಮಾಹಿತಿ ನೀಡಿದ್ದಾರೆ. ವೀಕ್ಷಕರು ಚಿನ್ನ ಗೆಲ್ಲಬಹುದು, ಫಿನಾಲೆಯಲ್ಲಿ ಅತಿಥಿಯಾಗಿ ಕೂಡ ಭಾಗವಹಿಸಬಹುದು. ಸೆ.28ಕ್ಕೆ ಬಿಗ್ ಬಾಸ್ ಶುರು ಆಗಲಿದೆ.

ಬಿಗ್ ಬಾಸ್ ನೋಡಿ ಚಿನ್ನದ ನಾಣ್ಯ ಗೆಲ್ಲಿ: ಫಿನಾಲೆಯಲ್ಲಿ ಅತಿಥಿಯಾಗುವ ಅವಕಾಶ ಇಲ್ಲಿದೆ
Bigg Boss Kannada Season 12
ಮದನ್​ ಕುಮಾರ್​
|

Updated on:Sep 24, 2025 | 7:28 PM

Share

‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss Kannada Season 12) ರಿಯಾಲಿಟಿ ಶೋ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಉಳಿದಿವೆ. ಸೆಪ್ಟೆಂಬರ್‍‌ 28ರ ಭಾನುವಾರ ಸಂಜೆ 6 ಗಂಟೆಗೆ ‘ಬಿಗ್‌ ಬಾಸ್‌ ಕನ್ನಡ’ (BBK) ಹೊಸ ಸೀಸನ್‌ ಗ್ರಾಂಡ್‌ ಓಪನಿಂಗ್‌ ಪ್ರಸಾರ ಆಗಲಿದೆ. ಅದಕ್ಕಾಗಿ ಈಗಾಗಲೇ ಸಕಲ ಸಿದ್ಧತೆ ನಡೆದಿದೆ. ವಾರದ ಸಂಚಿಕೆಗಳು ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9.30ಕ್ಕೆ ‘ಕಲರ್ಸ್‌ ಕನ್ನಡ’ ಹಾಗೂ ‘ಜಿಯೋ ಹಾಟ್‌ಸ್ಟಾರ್‍‌’ ಮೂಲಕ ಬಿತ್ತರ ಆಗಲಿದೆ. ಕಿಚ್ಚ ಸುದೀಪ್ (Kichcha Sudeep) ನಡೆಸಿಕೊಡುವ ವೀಕೆಂಡ್ ಎಪಿಸೋಡ್​​ಗಳು ರಾತ್ರಿ 9 ಗಂಟೆಯಿಂದ ಪ್ರಸಾರವಾಗಲಿದೆ. ಈ ಬಾರಿ ಬಿಗ್ ಬಾಸ್ ವೀಕ್ಷಕರಿಗೆ ಒಂದಷ್ಟು ಅವಕಾಶಗಳು ಸಿಗುತ್ತಿವೆ.

ಬಿಗ್ ಬಾಸ್ ನೋಡುವುದರ ಜೊತೆಗೆ ವೀಕ್ಷಕರಿಗೆ ಆಡುವ ಮಜಾ ನೀಡುವುದಕ್ಕಾಗಿ ‘ಜೀತೋ ಧನ್ ಧನಾ ಧನ್’ ಸ್ಪರ್ಧೆ ಇರಲಿದೆ. ಎಪಿಸೋಡ್ ಪ್ರಸಾರ ಆಗುವ ವೇಳೆ ‘ಜಿಯೋ ಹಾಟ್‌ಸ್ಟಾರ್‌’ ಮೂಲಕ ಕೇಳುವ ಸರಳ ಪ್ರಶ್ನೆಗಳಿಗೆ ಉತ್ತರಿಸಿದರೆ ಚಿನ್ನದ ನಾಣ್ಯವನ್ನು ನಿಮ್ಮದಾಗಿಸಿಕೊಳ್ಳಬಹುದು. ಫ್ಯಾನ್‌ ಝೋನ್‌ನಲ್ಲಿ ಸಕ್ರಿಯರಾಗಿದ್ದರೆ ಸೀಸನ್ ಅಂತ್ಯದಲ್ಲಿ ನಡೆಯುವ ಫಿನಾಲೆಯಲ್ಲಿ ಅತಿಥಿಯಾಗಿ ಪಾಲ್ಗೊಳ್ಳುವ ಅವಕಾಶ ಪಡೆಯಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಈ ಬಾರಿ ಕೂಡ ನಿಮ್ಮಿಷ್ಟದ ಸ್ಪರ್ಧಿಗಳನ್ನು ಉಳಿಸುವುದಕ್ಕಾಗಿ ವೋಟ್ ಮಾಡಲು ‘ಜಿಯೋ ಹಾಟ್‌ಸ್ಟಾರ್‌’ ಆ್ಯಪ್‌ನಲ್ಲಿ ಮಾತ್ರ ಅವಕಾಶ ಇರಲಿದೆ. ಬಿಗ್ ಬಾಸ್ ಮನೆಯೊಳಗೆ ನಡೆಯುವ ಸಂಗತಿಗಳ ಪ್ರತಿ ಕ್ಷಣವನ್ನೂ ಜಿಯೋ ಹಾಟ್‌ಸ್ಟಾರ್‍‌ನಲ್ಲಿ 24 ಗಂಟೆ ಲೈವ್‌ ಆಗಿ ನೋಡಬಹುದು. ಬಿಗ್ ಬಾಸ್ ಅಭಿಮಾನಿಗಳು ಹೊಸ ಸೀಸನ್​ ನೋಡಲು ಕಾತರದಿಂದ ಕಾದಿದ್ದಾರೆ.

ಕಿಚ್ಚ ಸುದೀಪ್ ಅವರು ಈಗಾಗಲೇ ಪ್ರೋಮೋ ಮೂಲಕ ಕೌತುಕದ ಕಿಚ್ಚು ಹಚ್ಚಿದ್ದಾರೆ. ಮತ್ತೆ ಅವರೇ ನಿರೂಪಕರಾಗಿ ಮುಂದುವರಿಯುತ್ತಿರುವುದು ಅಭಿಮಾನಿಗಳಿಗೆ ಖುಷಿ ನೀಡಿದೆ. ಈ ಬಾರಿ ಕೂಡ ವಿವಿಧ ಕ್ಷೇತ್ರಗಳ ಜನರು ಬಿಗ್​ ಬಾಸ್ ಮನೆಯನ್ನು ಪ್ರವೇಶಿಸಲಿದ್ದಾರೆ. ಯಾರೆಲ್ಲ ಬರಬಹುದು ಎಂಬ ಬಗ್ಗೆ ಸಿಕ್ಕಾಪಟ್ಟೆ ಊಹೆಗಳು ಜಾಲ್ತಿಯಲ್ಲಿವೆ. ಅದಕ್ಕೆಲ್ಲ ಸೆಪ್ಟೆಂಬರ್ 28ರಂದು ಪೂರ್ಣ ವಿರಾಮ ಬೀಳಲಿದೆ.

ಇದನ್ನೂ ಓದಿ: ಬಿಗ್ ಬಾಸ್​​ನಲ್ಲಿ ಲೆಸ್ಬಿಯನ್ ಕಪಲ್; ರಿಂಗ್ ಬದಲಿಸಿ ಕಿಸ್ ಮಾಡಿದ ಜೋಡಿ

‘ಎಂಡಮಾಲ್ ಶೈನ್’ ಬಿಗ್ ಬಾಸ್‌ ಫಾರ್ಮ್ಯಾಟ್‌ನ ಹಕ್ಕುದಾರ ಕಂಪನಿಯಾಗಿದೆ. ಈ ಬಾರಿ ‘ಬಿಗ್‌ಬಾಸ್’ ರಿಯಾಲಿಟಿ ಶೋ ‘Expect the Unexpected’ ಎಂಬ ಥೀಮ್‌ನಲ್ಲಿ ಬರುತ್ತಿದೆ. ಆ ಮೂಲಕ ಹಲವು ಅನಿರೀಕ್ಷಿತಗಳನ್ನು ಇಟ್ಟುಕೊಂಡು ಪ್ರೇಕ್ಷಕರಿಗೆ ಮನರಂಜನೆ ನೀಡಲಾಗುವುದು. ಬಿಗ್ ಬಾಸ್ ಪ್ರೋಮೋ ಈಗಾಗಲೇ 10 ಮಿಲಿಯನ್​ಗಿಂತಲೂ ಹೆಚ್ಚು ವೀಕ್ಷಣೆ ಕಂಡಿದೆ. ವೀಕ್ಷಕರಿಗೆ ಎಷ್ಟು ನಿರೀಕ್ಷೆ ಇದೆ ಎಂಬುದಕ್ಕೆ ಈ ಸಂಖ್ಯೆಯೇ ಸಾಕ್ಷಿಯಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:26 pm, Wed, 24 September 25