‘ಬಿಗ್ ಬಾಸ್ ಕನ್ನಡ ಸೀಸನ್ 12’ರ ಆರಂಭಕ್ಕೂ ಮೊದಲು ಈ ಸಂಪ್ರದಾಯ ಕೈ ಬಿಟ್ಟ ವಾಹಿನಿ
ಬಿಗ್ ಬಾಸ್ ಕನ್ನಡ ಸೀಸನ್ 12 ಸೆಪ್ಟೆಂಬರ್ 28 ರಂದು ಆರಂಭವಾಗಲಿದೆ. ಈ ಬಾರಿ ಸಾಂಪ್ರದಾಯಿಕ ಪತ್ರಿಕಾಗೋಷ್ಠಿ ಇರುವುದಿಲ್ಲ. ಜಿಯೋ ಹಾಟ್‌ಸ್ಟಾರ್‌ನಲ್ಲಿ 24/7 ಲೈವ್ ಸ್ಟ್ರೀಮಿಂಗ್ ಇರಲಿದೆ ಎನ್ನಲಾಗಿದೆ. ಬಿಡದಿಯಲ್ಲಿರುವ ಹೊಸ ಮನೆ ಸಂಪೂರ್ಣವಾಗಿ ಸಿದ್ಧವಾಗಿದೆ ಮತ್ತು ಸತ್ಯನಾರಾಯಣ ಪೂಜೆ ನೆರವೇರಿದೆ.

‘ಬಿಗ್ ಬಾಸ್ ಕನ್ನಡ ಸೀಸನ್ 12’ರ (BBK 12) ಆರಂಭಕ್ಕೆ ಇನ್ನು ಬಾಕಿ ಉಳಿದಿರೋದು ಬೆರಳೆಣಿಕೆ ದಿನಗಳು ಮಾತ್ರ. ಕಿಚ್ಚ ಸುದೀಪ್ ಅವರು ಸೆಪ್ಟೆಂಬರ್ 28ರಂದು ಶೋಗೆ ಅದ್ದೂರಿಯಾಗಿ ಚಾಲನೆ ನೀಡಲಿದ್ದಾರೆ. ಈ ವರ್ಷ ಹಲವು ವಿಶೇಷತೆಗಳೊಂದಿಗೆ ಶೋ ಆರಂಭ ಆಗಲಿದೆ ಎನ್ನಲಾಗುತ್ತಿದೆ. ಹೀಗಿರುವಾಗಲೇ ಒಂದು ಮಹತ್ವದ ಸಂಪ್ರದಾಯಕ್ಕೆ ಬ್ರೇಕ್ ಹಾಕಲಾಗಿದೆ ಎಂದು ವರದಿ ಆಗುತ್ತಿದೆ. ಆ ಬಗ್ಗೆ ಇಲ್ಲಿದೆ ವಿವರ.
‘ಬಿಗ್ ಬಾಸ್ ಕನ್ನಡ ಸೀಸನ್ 12’ರ ಮನೆ ಸಂಪೂರ್ಣ ಸಿದ್ಧವಾಗಿದೆಯಂತೆ. ಬೆಂಗಳೂರು ಹೊರವಲಯದ ಬಿಡದಿಯ ಇನೋವೇಟಿವ್ ಫಿಲ್ಮ್ ಸಿಟಿಯಲ್ಲಿ ‘ಬಿಗ್ ಬಾಸ್ 12’ ಮನೆ ರೆಡಿ ಆಗಿದೆ. ಇತ್ತೀಚೆಗೆ ಈ ಮನೆಯಲ್ಲಿ ಸತ್ಯ ನಾರಾಯಣ ಪೂಜೆ ನೆರವೇರಿದ. ದೊಡ್ಮನೆ ಆಟಕ್ಕೆ ಯಾವುದೇ ವಿಘ್ನ ಬರದೆ ಇರಲಿ ಎಂಬ ಕಾರಣಕ್ಕೆ ಈ ಪೂಜೆ ಮಾಡಿಸಲಾಗಿದೆ.
ಪ್ರತಿ ವರ್ಷ ಬಿಗ್ ಬಾಸ್ ಆರಂಭಕ್ಕೂ ಕೆಲವೇ ದಿನ ಮೊದಲು ಸುದ್ದಿಗೋಷ್ಠಿ ನಡೆಸಲಾಗುತ್ತದೆ. ಈ ಮೂಲಕ ಶೋ ಬಗ್ಗೆ, ಶೋ ಪ್ರಸಾರದ ಬಗ್ಗೆ ಮಾಹಿತಿ ನೀಡಲಾಗುತ್ತಿತ್ತು. ಆದರೆ, ಈ ಬಾರಿ ಅದಕ್ಕೆ ಬ್ರೇಕ್ ಹಾಕಲಾಗಿದೆ ಎನ್ನಲಾಗುತ್ತಿದೆ. ಈ ಮೊದಲೇ ಶೋ ಬಗ್ಗೆ ಹಬ್ಬಿದ ವದಂತಿ ಬಗ್ಗೆ ಸ್ಪಷ್ಟನೆ ನೀಡಲು ಸುದ್ದಿಗೋಷ್ಠಿ ಕರೆಯಲಾಗಿತ್ತು. ಅದರಲ್ಲಿ ಸುದೀಪ್ ಕೂಡ ಇದ್ದರು. ಹೀಗಾಗಿ, ಈಗ ಯಾವುದೇ ಹೊಸ ಸುದ್ದಿಗೋಷ್ಠಿ ಹಮ್ಮಿಕೊಳ್ಳಲಾಗುತ್ತಿಲ್ಲ ಎನ್ನಲಾಗುತ್ತಿದೆ.
ಇದನ್ನೂ ಓದಿ: ಬಿಗ್ ಬಾಸ್ 50 ಲಕ್ಷ ರೂ. ಬಹುಮಾನದಲ್ಲಿ ಕಾರ್ತಿಕ್ ಮಹೇಶ್ ಕೈಸೇರಿದ್ದು ಎಷ್ಟು?
ಜಿಯೋ ಹಾಟ್ ಸ್ಟಾರ್ನಲ್ಲಿ ‘ಬಿಗ್ ಬಾಸ್’ ಹೊಸ ಸೀಸನ್ನ 24 ಗಂಟೆ ಲೈವ್ ಇಡಲು ನಿರ್ಧರಿಸಲಾಗಿದೆ ಎನ್ನಲಾಗುತ್ತಿದೆ. ಈ ಮೂಲಕ ರಾತ್ರಿ 9.30ಕ್ಕೆ ಎಪಿಸೋಡ್ಗೂ ಮೊದಲೇ ಕೆಲವು ವಿಚಾರಗಳನ್ನು ಲೈವ್ ಮೂಲಕ ತಿಳಿದುಕೊಳ್ಳಬಹುದಾಗಿದೆ. ಈ ಬಾರಿ ಬಿಗ್ ಬಾಸ್ಗೆ ಯಾರೆಲ್ಲ ಬರುತ್ತಾರೆ ಎನ್ನುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಸಿನಿಮಾ, ಧಾರಾವಾಹಿ ಹಾಗೂ ಯೂಟ್ಯೂಬರ್ಗಳು ಶೋನ ಭಾಗ ಆಗುವ ಸಾಧ್ಯತೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








