ಬಿಗ್ ಬಾಸ್ 50 ಲಕ್ಷ ರೂ. ಬಹುಮಾನದಲ್ಲಿ ಕಾರ್ತಿಕ್ ಮಹೇಶ್ ಕೈಸೇರಿದ್ದು ಎಷ್ಟು?
ನಟ ಕಾರ್ತಿಕ್ ಮಹೇಶ್ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 10’ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿ ವಿನ್ ಆಗಿದ್ದರು. ಅವರಿಗೆ 50 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿತ್ತು. ಆ ಹಣ ಕೈ ಸೇರಿದೆಯಾ ಎಂಬ ಪ್ರಶ್ನೆಗೆ ಈಗ ಅವರು ಉತ್ತರ ನೀಡಿದ್ದಾರೆ.
ನಟ ಕಾರ್ತಿಕ್ ಮಹೇಶ್ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 10’ (Bigg Boss Kannada) ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿ ಟ್ರೋಫಿ ಗೆದ್ದಿದ್ದರು. ಅವರಿಗೆ 50 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿತ್ತು. ಆ ದುಡ್ಡು ಕೈ ಸೇರಿದೆಯಾ ಎಂಬ ಪ್ರಶ್ನೆಗೆ ಈಗ ಅವರು ಉತ್ತರಿಸಿದ್ದಾರೆ. ‘ಎಲ್ಲರಿಗೂ ಗೊತ್ತಿರುವಂತಹ ವಿಷಯ. ಸರ್ಕಾರದ ನಿಯಮದ ಪ್ರಕಾರ, 30 ಪರ್ಸೆಂಟ್ ಸರ್ಕಾರಕ್ಕೆ ಹೋಗುತ್ತದೆ. ಉಳಿದದ್ದು ಬಂದೇ ಬರುತ್ತದೆ. ಅದರ ಜೊತೆಗೆ ನಾನು ಬಿಸ್ನೆಸ್ ಶುರು ಮಾಡಿದ್ದೇನೆ’ ಎಂದು ಕಾರ್ತಿಕ್ ಮಹೇಶ್ ಹೇಳಿದ್ದಾರೆ. ಈ ವೇಳೆ ಕಾರ್ತಿಕ್ ಮಹೇಶ್ (Karthik Mahesh) ಮದುವೆ ಬಗ್ಗೆ ಅವರ ತಾಯಿ ಮಾತನಾಡಿದ್ದಾರೆ. ‘ಸಿನಿಮಾ ಮಾಡುತ್ತಿದ್ದಾನೆ. ಅದು ಮುಗಿದ ಬಳಿಕ ಮದುವೆ ಮಾಡುತ್ತೇವೆ’ ಎಂದು ಕಾರ್ತಿಕ್ ಮಹೇಶ್ ತಾಯಿ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
