ಹಿತಾನ ಸಾಯಿಸಲು ಮುಂದಾದ ಮಾಳವಿಕಾ; ದೇವಿ ಅವತಾರದಲ್ಲಿ ಸಂಹಾರಕ್ಕೆ ಇಳಿದ ದುರ್ಗಾ
‘ನಾ ನಿನ್ನ ಬಿಡಲಾರೆ’ ಧಾರಾವಾಹಿಯಲ್ಲಿ ನವರಾತ್ರಿಯ ಸಂದರ್ಭದಲ್ಲಿ ಕಥಾ ನಾಯಕಿ ದುರ್ಗಾ, ದೇವಿ ಅವತಾರ ತಾಳಿದ್ದಾರೆ. ಮಾಳವಿಕಾಳ ದುಷ್ಟ ಶಕ್ತಿಗಳ ವಿರುದ್ಧ ಹೋರಾಡಿ ಹಿತಾಳನ್ನು ರಕ್ಷಿಸುತ್ತಾಳೆ. ಮಾಳವಿಕಾ ಹಿತಾಳನ್ನು ಕೊಲ್ಲಲು ಯತ್ನಿಸುತ್ತಾಳೆ ಆದರೆ ದುರ್ಗಾ ದೇವಿಯ ಅವತಾರದಿಂದಾಗಿ ವಿಫಲಳಾಗುತ್ತಾಳೆ. ಇದು ನವರಾತ್ರಿಯ ಹೈಲೈಟ್ ಆಗಲಿದೆ.

ಈಗ ನವರಾತ್ರಿ. ಒಂಭತ್ತು ದಿನ ನವ ದುರ್ಗೆಯನ್ನು ಪೂಜಿಸಲಾಗುತ್ತದೆ. ಈಗ ‘ನಾ ನಿನ್ನ ಬಿಡಲಾರೆ’ ಧಾರಾವಾಹಿಯಲ್ಲೂ ದುರ್ಗಾ ದೇವಿ ಅವತಾರ ತಾಳಿದ್ದಾಳೆ. ಹಿತಾಳನ್ನು ಕೊಲ್ಲಬೇಕು ಎಂದುಕೊಂಡಿದ್ದ ಮಾಳವಿಕಾಗೆ ದುರ್ಗಾ ಶಾಕ್ ಕೊಟ್ಟಿದ್ದಾಳೆ. ಆಕೆಯ ಮೈ ಮೇಲೆ ದೇವಿಯ ಆಗಮನ ಆಗಿದೆ. ದುರ್ಗಾ ದುಷ್ಟರ ಸಂಹಾರ ಮಾಡಿದ್ದಾಳೆ. ಈ ಎಪಿಸೋಡ್ ಎಲ್ಲರ ಗಮನ ಸೆಳೆಯುವ ಸೂಚನೆ ಕೊಟ್ಟಿದೆ. ಆ ಬಗ್ಗೆ ಇಲ್ಲಿದೆ ವಿವರ.
ಶರತ್ ತಾಯಿ, ಹಿತಾಳ ಅಜ್ಜಿ ಮಾಳವಿಕಾ ದುಷ್ಟ ಶಕ್ತಿ ಆರಾಧಕಿ. ಆಕೆ ಸಾಕಷ್ಟು ದುಷ್ಟ ಶಕ್ತಿಯನ್ನು ಒಲಿಸಿಕೊಂಡಿದ್ದಾಳೆ. ಅಮ್ಮನ ಚಿರಂಜೀವಿ ಮಾಡಬೇಕು ಎಂದು ಈಗಾಗಲೇ ಆಕೆ ತನ್ನ ಸೊಸೆ ಅಂಬಿಕಾಳನ್ನು ಬಲಿ ಕೊಟ್ಟಿದ್ದಾಳೆ. ಆಕೆ ಆತ್ಮವಾಗಿ ಓಡಾಡುತ್ತಾ ಇದ್ದಾಳೆ. ಈಗ ಅವಳ ಮಗಳು ಹಿತಾಳನ್ನು ಸಾಯಿಸೋಕೆ ಆಕೆ ಸಿದ್ಧವಾಗಿದ್ದಾಳೆ. ಹಿತಾಗೆ 7 ವರ್ಷ ತುಂಬಲಿ ಎಂದು ಮಾಳವಿಕಾ ಕಾದಿದ್ದಳು. ಆ ದಿನ ಬಂದೇ ಬಿಟ್ಟಿದೆ.
ಹಿತಾಗೆ ಏಳು ವರ್ಷ ತುಂಬಿದ ಕಾರಣ ಆಕೆ ತಂದೆ ಶರತ್ ಹಾಗೂ ಮಲತಾಯಿ ದುರ್ಗಾ ಜೊತೆ ದೇವಸ್ಥಾನಕ್ಕೆ ತೆರಳಿದ್ದಾಳೆ. ದೇವಸ್ಥಾನದಲ್ಲಿ ಪೂಜೆ ಮಾಡಿ ಹೊರ ಬರುತ್ತಿರುವಾಗ ಮಾಳವಿಕ ದುಷ್ಟ ಶಕ್ತಿಯನ್ನು ಕಳುಹಿಸಿದ್ದಾಳೆ. ಆ ದುಷ್ಟ ಶಕ್ತಿಗಳ ವಿರುದ್ಧ ಹೋರಾಡಲು ಅಂಬಿಕಾ ಮುಂದಾಗಿದ್ದಾಳೆ. ಆದರೆ ಪ್ರಯೋಜನ ಆಗಲೇ ಇಲ್ಲ. ಅಲ್ಲದೆ, ಅಂಬಿಕಾ ತಂದೆ ಕೂಡ ಪ್ರಯತ್ನಿಸಿದ್ದಾನೆ. ಅದು ಕೂಡ ಕೆಲಸಕ್ಕೆ ಬರಲೇ ಇಲ್ಲ.
ನಾ ನಿನ್ನ ಬಿಡಲಾರೆ ಧಾರಾವಾಹಿ ಪ್ರೋಮೋ
View this post on Instagram
ಆಗ ಶರತ್ ಅವರನ್ನು ಹೊಡೆಯಲು ಪ್ರಯತ್ನಿಸಿ ಸೋಲುತ್ತಾನೆ. ಆಗ ದುರ್ಗಾ ಮುನ್ನುಗ್ಗುತ್ತಾಳೆ. ಆಕೆಯನ್ನು ತಳ್ಳಿ ದೇವರ ಬಳಿ ಬೀಳಿಸಲಾಗುತ್ತದೆ. ದೇವರಿಂದ ಆಕೆಗೆ ವಿಶೇಷ ಶಕ್ತಿ ಸಿಗುತ್ತದೆ. ಇದೇ ಶಕ್ತಿಯಿಂದ ಆಕೆ ದುಷ್ಟ ಶಕ್ತಿಗಳ ವಿರುದ್ಧ ಹೋರಾಡುತ್ತಾಳೆ. ಆಕೆಯು ಅಕ್ಷರಶಃ ದೇವಿಯ ಅವತಾರ ತಾಳಿದ್ದಾಳೆ.
ಇದನ್ನೂ ಓದಿ: ‘ನಾ ನಿನ್ನ ಬಿಡಲಾರೆ’ ಧಾರಾವಾಹಿಗೆ ಶಾಕ್ ಕೊಟ್ಟ ಪ್ರೇಕ್ಷಕ; ಟಿಆರ್ಪಿಯಲ್ಲಿ ಯಾರು ಟಾಪ್?
ದೇವಿಯಂತೆ ತ್ರಿಶೂಲ ಹಿಡಿದು ದುಷ್ಟ ಶಕ್ತಿಗಳ ವಿರುದ್ಧ ಹೋರಾಡಿದ್ದಾಳೆ. ವೈರಿಗಳನ್ನು ಆಕೆ ಚೆಂಡಾಡಿದ್ದಾಳೆ. ಮಗುವನ್ನು ಕಾಪಾಡಿದ ಕಾರಣಕ್ಕೆ ಆಕೆ ಶರತ್ನಿಂದ ಮೆಚ್ಚುಗೆ ಪಡೆಯಬಹುದು. ಧಾರಾವಾಹಿಯಲ್ಲಿ ಮುಂದಿನ ದಿನಗಳಲ್ಲಿ ಯಾವ ರೀತಿಯ ಟ್ವಿಸ್ಟ್ ಬರುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 1:10 pm, Wed, 24 September 25







