‘ನಾ ನಿನ್ನ ಬಿಡಲಾರೆ’ ಧಾರಾವಾಹಿಗೆ ಶಾಕ್ ಕೊಟ್ಟ ಪ್ರೇಕ್ಷಕ; ಟಿಆರ್ಪಿಯಲ್ಲಿ ಯಾರು ಟಾಪ್?
ಕರ್ಣ ಧಾರಾವಾಹಿ ಟಿಆರ್‌ಪಿ ರೇಟಿಂಗ್‌ನಲ್ಲಿ ಮೊದಲ ಸ್ಥಾನದಲ್ಲಿದ್ದರೆ, ನಾ ನಿನ್ನ ಬಿಡಲಾರೆ ಧಾರಾವಾಹಿಯ ರೇಟಿಂಗ್ ಕುಸಿದಿದೆ. ಅಣ್ಣಯ್ಯ ಮತ್ತು ಲಕ್ಷ್ಮೀ ನಿವಾಸ ಧಾರಾವಾಹಿಗಳು ಉತ್ತಮ ಪ್ರದರ್ಶನ ನೀಡುತ್ತಿವೆ. ಹಳ್ಳಿ ಪವರ್ ಶೋ ಲಾಂಚಿಂಗ್‌ನಲ್ಲಿ ಉತ್ತಮ ಟಿವಿಆರ್ ಪಡೆದಿದ್ದರೂ, ವೀಕ್ಷಕರ ಸಂಖ್ಯೆ ಹೆಚ್ಚಿಸಿಕೊಳ್ಳುವಲ್ಲಿ ಸವಾಲು ಎದುರಿಸುತ್ತಿದೆ.

ಎಷ್ಟೇ ಉತ್ತಮವಾಗಿ ಕಥೆ ಮಾಡಿದರೂ ವೀಕ್ಷಕರಿಗೆ ರುಚಿಸದಿದ್ದರೆ ಆ ಧಾರಾವಾಹಿಯ ಟಿಆರ್‌ಪಿ ಕುಸಿತ ಕಾಣುತ್ತದೆ. ಈಗ ‘ನಾ ನಿನ್ನ ಬಿಡಲಾರೆ’ ಧಾರಾವಾಹಿ ವಿಚಾರದಲ್ಲಿ ಹಾಗೆಯೇ ಆಗಿದೆ. ಹಲವು ಟ್ವಿಸ್ಟ್ಗಳನ್ನು ನೀಡಿದ ಹೊರತಾಗಿಯೂ ಟಿಆರ್ಪಿಯಲ್ಲಿ ಇಳಿಕೆ ಕಂಡಿದೆ. ಕಿರಣ್ ರಾಜ್ ನಟನೆಯ ‘ಕರ್ಣ’ ಧಾರಾವಾಹಿ (Karna Serial) ಟಿಆರ್ಪಿಯಲ್ಲಿ ಮೊದಲ ಸ್ಥಾನ ಪಡೆದು ಮುಂದಕ್ಕೆ ಸಾಗುತ್ತಿದೆ.
‘ಕರ್ಣ’ ಧಾರಾವಾಹಿಯಲ್ಲಿ ಕಿರಣ್ ರಾಜ್, ನಮ್ರತಾ ಗೌಡ ಹಾಗೂ ಭವ್ಯಾ ಗೌಡ ನಟಿಸುತ್ತಿದ್ದಾರೆ. ಈ ಮೂವರಿಗೂ ದೊಡ್ಡ ಅಭಿಮಾನಿ ಬಳಗ ಇದೆ. ಈ ಕಾರಣದಿಂದಲೇ ಸಿನಿಮಾ ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಪಡೆದಿದೆ. ಒಳ್ಳೆಯ ಟಿಆರ್‌ಪಿ ಪಡೆದು ಧಾರಾವಾಹಿ ಮುಂದಕ್ಕೆ ಸಾಗುತ್ತಿದೆ. ಈ ಧಾರಾವಾಹಿ ಮೊದಲ ಸ್ಥಾನದಲ್ಲಿ ಇದೆ.
ಎರಡನೇ ಸ್ಥಾನದಲ್ಲಿ ‘ಅಣ್ಣಯ್ಯ’ ಧಾರಾವಾಹಿ ಇದೆ. ‘ಕರ್ಣ’ ಹಾಗೂ ‘ಅಣ್ಣಯ್ಯ’ ಎರಡೂ ಧಾರಾವಾಹಿಗಳು 9+ ಟಿಆರ್‌ಪಿ ಪಡೆದುಕೊಂಡು ಸಾಗುತ್ತಿವೆ. ಮೂರನೇ ಸ್ಥಾನದಲ್ಲಿ ‘ಲಕ್ಷ್ಮೀ ನಿವಾಸ’ ಧಾರಾವಾಹಿ ಇದೆ. ಈ ಧಾರಾವಾಹಿ ಕೂಡ ಪ್ರೇಕ್ಷಕರಿಂದ ಮೆಚ್ಚುಗೆ ಪಡೆಯುತ್ತಿದೆ. ಈ ಮೂರು ಧಾರಾವಾಹಿಗಳು ಪ್ರೈಮ್ ಟೈಮ್ನಲ್ಲಿ ಪ್ರಸಾರ ಕಾಣುತ್ತಿವೆ.
ನಾಲ್ಕನೇ ಸ್ಥಾನದಲ್ಲಿ ‘ಅಮೃತಧಾರೆ’ ಧಾರಾವಾಹಿ ಇದೆ. ಈ ಧಾರಾವಾಹಿ ರೇಸ್ನಲ್ಲಿ ನಾಲ್ಕನೇ ಸ್ಥಾನ ಪಡೆದುಕೊಂಡಿದೆ. ಈ ಧಾರಾವಾಹಿಯಲ್ಲೂ ಸಾಕಷ್ಟು ಟ್ವಿಸ್ಟ್ಗಳನ್ನು ನೀಡಲಾಗಿದೆ. ಕೆಲವರಿಗೆ ಇದು ಇಷ್ಟ ಆದರೆ, ಇನ್ನೂ ಕೆಲವರಿಗೆ ಬೇಸರ ತಂದಿದೆ.
ಐದನೇ ಸ್ಥಾನದಲ್ಲಿ ‘ನಾ ನಿನ್ನ ಬಿಡಲಾರೆ’ ಧಾರಾವಾಹಿ ಇದೆ. ಈ ಮೊದಲು ಧಾರಾವಾಹಿ ಎರಡನೇ ಸ್ಥಾನ ಪಡೆದುಕೊಂಡ ಉದಾಹರಣೆ ಇದೆ. ಆದರೆ, ಇತ್ತೀಚೆಗೆ ಧಾರಾವಾಹಿ ಪ್ರೇಕ್ಷಕರಿಗೆ ಇಷ್ಟ ಆಗುತ್ತಿಲ್ಲವೇ ಎನ್ನುವ ಪ್ರಶ್ನೆ ಮೂಡಿದೆ. ಏಕೆಂದರೆ ಈ ಧಾರಾವಾಹಿಯ ಟಿಆರ್‌ಪಿ ಏಳಕ್ಕಿಂತ ಕೆಳಗೆ ಕುಸಿದಿದೆ. ಇದು ಧಾರಾವಾಹಿ ಅಭಿಮಾನಿಗಳ ಬೇಸರಕ್ಕೆ ಕಾರಣ ಆಗಿದೆ.
ಇದನ್ನೂ ಓದಿ: ನಿಧಿಗೆ ಪ್ರಪೋಸ್ ಮಾಡಿಯೇ ಬಿಟ್ಟ ಕರ್ಣ; ಮಗುವಿನಂತೆ ಮಲಗಿಬಿಟ್ಟ ಕಥಾ ನಾಯಕ
‘ಹಳ್ಳಿ ಪವರ್’ ಶೋ ಟಿಆರ್‌ಪಿ ಹೊರ ಬಿದ್ದಿದೆ. ಲಾಂಚಿಂಗ್ ಈವೆಂಟ್ಗೆ 1.5 ಟಿವಿಆರ್ ಹಾಗೂ ಮೊದಲ ವೀಕ್ನಲ್ಲಿ 1.7 ಟಿವಿಆರ್ನ ಪಡೆದುಕೊಂಡಿದೆ. ಈ ಶೋ ಜೀ ಪವರ್ನಲ್ಲಿ ಪ್ರಸಾರ ಕಾಣುತ್ತಿರುವುದರಿಂದ ಹೆಚ್ಚು ವೀಕ್ಷಕರಿಗೆ ತಲುಪಲು ಸಾಧ್ಯವಾಗುತ್ತಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








