ನಿಧಿಗೆ ಪ್ರಪೋಸ್ ಮಾಡಿಯೇ ಬಿಟ್ಟ ಕರ್ಣ; ಮಗುವಿನಂತೆ ಮಲಗಿಬಿಟ್ಟ ಕಥಾ ನಾಯಕ
Karna Kannada Serial: ಕರ್ಣ ಧಾರಾವಾಹಿಯಲ್ಲಿ ನಿಧಿಗೆ ಮೊದಲಿಗೆ ಕರ್ಣನ ಮೇಲೆ ಪ್ರೀತಿ ಮೂಡಿತು ಮತ್ತು ಅದನ್ನು ಕರ್ಣನ ಎದುರು ಹಂಚಿಕೊಂಡಳು. ಆದರೆ, ಕರ್ಣ ಇದಕ್ಕೆ ಮೊದಲು ಒಪ್ಪಿಕೊಂಡೇ ಇರಲಿಲ್ಲ. ಆ ಬಳಿಕ ಕರ್ಣನಿಗೂ ನಿಧಾನವಾಗಿ ನಿಧಿಯ ಮೇಲೆ ಪ್ರೀತಿ ಮೂಡುವಂತೆ ಆಯಿತು. ಈಗ ಇಬ್ಬರ ಮಧ್ಯೆ ಸಂಪೂರ್ಣವಾಗಿ ಪ್ರೀತಿ ಮೂಡಿದೆ. ಟೀಚರ್ ಹಾಗೂ ಶಿಷ್ಯೆ ಮಧ್ಯೆ ಪ್ರೀತಿ ಅರಳಿದೆ.

‘ಕರ್ಣ’ ಧಾರಾವಾಹಿಯಲ್ಲಿ ಒಂದು ಮಹತ್ವದ ತಿರುವು ಬಂದಿದೆ. ಈ ಧಾರಾವಾಹಿಯಲ್ಲಿ ಕರ್ಣ ಹಾಗೂ ನಿಧಿ ಮಧ್ಯೆ ಪ್ರೀತಿ ಮೂಡಿತ್ತು. ಆದರೆ, ಇದನ್ನು ಯಾರೂ ಹೇಳಿಕೊಂಡಿರಲಿಲ್ಲ. ಕೊನೆಗೂ ಧಾರಾವಾಹಿ ದೊಡ್ಡ ತಿರುವು ಪಡೆದುಕೊಂಡಿದೆ. ಕರ್ಣನು ನಿಧಿಗೆ ಪ್ರಪೋಸ್ ಮಾಡಿಯೇ ಬಿಟ್ಟಿದ್ದಾನೆ. ಅದೂ ನದಿಯ ಮಧ್ಯೆ ಎಂಬುದು ವಿಶೇಷ. ಈ ಸಂದರ್ಭದ ಪ್ರೋಮೋವನ್ನು ಜೀ ಕನ್ನಡ ವಾಹಿನಿಯು ಹಂಚಿಕೊಂಡಿದೆ. ಈ ಪ್ರೋಮೋ ಅನೇಕರಿಗೆ ಇಷ್ಟ ಆಗಿದೆ.
ನಿಧಿಗೆ ಮೊದಲಿಗೆ ಕರ್ಣನ ಮೇಲೆ ಪ್ರೀತಿ ಮೂಡಿತು ಮತ್ತು ಅದನ್ನು ಕರ್ಣನ ಎದುರು ಹಂಚಿಕೊಂಡಳು. ಆದರೆ, ಕರ್ಣ ಇದಕ್ಕೆ ಮೊದಲು ಒಪ್ಪಿಕೊಂಡೇ ಇರಲಿಲ್ಲ. ಆ ಬಳಿಕ ಕರ್ಣನಿಗೂ ನಿಧಾನವಾಗಿ ನಿಧಿಯ ಮೇಲೆ ಪ್ರೀತಿ ಮೂಡುವಂತೆ ಆಯಿತು. ಈಗ ಇಬ್ಬರ ಮಧ್ಯೆ ಸಂಪೂರ್ಣವಾಗಿ ಪ್ರೀತಿ ಮೂಡಿದೆ. ಟೀಚರ್ ಹಾಗೂ ಶಿಷ್ಯೆ ಮಧ್ಯೆ ಪ್ರೀತಿ ಅರಳಿದೆ.
ನಿಧಿ, ಕರ್ಣ ಸೇರಿದಂತೆ ಇಡೀ ಫ್ಯಾಮಿಲಿ ಮಾರಿಗುಡಿಗೆ ತೆರಳಿದೆ. ಅಲ್ಲಿ, ಕರ್ಣ ಹಾಗೂ ನಿಧಿ ಮತ್ತಷ್ಟು ಆಪ್ತರಾದರು. ಕರ್ಣನೇ ಬಂದು ನಿಧಿಗೆ ಪ್ರಪೋಸ್ ಮಾಡಿದ್ದಾನೆ. ಕರ್ಣನು ತೆಪ್ಪದ ಮೇಲೆ ಕುಳಿತು, ‘ಇವನು ಕಳ್ಳ. ಮೊದಲು ಹಾರ್ಟ್ ನನಗೋಸ್ಕರ ಮಾತ್ರ ಲಬ್ಡಬ್ ಅಂತಿದ್ದ, ಈಗ ನಿಗೂ ಸೇರಿ ಲಬ್ಡಬ್ ಅಂತಿದಾನೆ. ಐ ಲವ್ ಯೂ ನಿಧಿ’ ಎಂದು ಕರ್ಣ ಹೇಳಿದ್ದಾನೆ. ಆ ಬಳಿಕ ಮಗುವಿನಂತೆ ನಿಧಿ ಮಡಿಲಲ್ಲಿ ಕರ್ಣ ಮಲಗಿದ್ದಾನೆ.
View this post on Instagram
ನಿಧಿ ಹಾಗೂ ಕರ್ಣ ಮಧ್ಯೆ ಪ್ರೀತಿ ಮೂಡಿದೆ ನಿಜ. ಆದರೆ, ಆತ ಅಸಲಿಗೆ ಯಾರನ್ನು ಮದುವೆ ಆಗುತ್ತಾನೆ ಎಂಬುದೇ ಸದ್ಯದ ಕುತೂಹಲ. ಏಕೆಂದರೆ ನಿಧಿ ಅಕ್ಕ ನಿತ್ಯಾ ಪಾತ್ರ ಕೂಡ ಧಾರಾವಾಹಿಯಲ್ಲಿ ಹೈಲೈಟ್ ಆಗಿದೆ. ಆಕೆ ಕೂಡ ಕರ್ಣನ ಮದುವೆ ಆಗುತ್ತಾಳೆ ಎಂದು ಹೇಳಲಾಗುತ್ತಿದೆ. ಆದರೆ, ಈ ವಿಚಾರ ಇನ್ನೂ ಅಧಿಕೃತ ಆಗಿಲ್ಲ.
ಸದ್ಯ ಮಾರಿಗುಡಿ ಕಥೆಯನ್ನು ಧಾರಾವಾಹಿಯಲ್ಲಿ ಹೈಲೈಟ್ ಮಾಡಲಾಗುತ್ತಿದೆ. ಈ ಊರಿಗೂ ಕರ್ಣನಿಗೆ, ನಿಧಿ ಹಾಗೂ ನಿತ್ಯಾಗೆ ಕನೆಕ್ಷನ್ ಇದೆ. ಅದು ಏನು ಎಂಬುದು ಮುಂದಿನ ದಿನಗಳಲ್ಲಿ ರಿವೀಲ್ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



