AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅನುಶ್ರೀ ಮದುವೆ ಮಾಡಿಸಿದ ವರುಣ್​​ಗೆ ಮಾತೇ ಬರಲಿಲ್ಲ, ಬರೀ ಕಣ್ಣೀರು: ಕಾರಣ ಏನು?

ಆ್ಯಂಕರ್ ಅನುಶ್ರೀ ಅವರ ಮದುವೆಯನ್ನು ಮುಂದೆ ನಿಂತು ಮಾಡಿಸಿದವರು ಸ್ನೇಹಿತ, ಸಹೋದರ ವರುಣ್ ಗೌಡ. ‘ಎಲ್ಲರಿಗೂ ವರುಣ್ ರೀತಿಯ ವ್ಯಕ್ತಿ ಸಿಗಲಿ’ ಎಂದು ಅನುಶ್ರೀ ಅವರು ಜೀ ಕನ್ನಡ ವೇದಿಕೆಯಲ್ಲಿ ಹೇಳಿದ್ದಾರೆ. ಈ ವೇಳೆ ವರುಣ್ ಅವರು ತುಂಬಾ ಎಮೋಷನಲ್ ಆದರು. ಎಲ್ಲರ ಎದುರು ಅವರು ಮಗುವಂತೆ ಕಣ್ಣೀರು ಹಾಕಿದರು.

ಅನುಶ್ರೀ ಮದುವೆ ಮಾಡಿಸಿದ ವರುಣ್​​ಗೆ ಮಾತೇ ಬರಲಿಲ್ಲ, ಬರೀ ಕಣ್ಣೀರು: ಕಾರಣ ಏನು?
Anchor Anushree, Varun Gowda
ಮದನ್​ ಕುಮಾರ್​
|

Updated on: Sep 14, 2025 | 9:10 AM

Share

ಇತ್ತೀಚೆಗೆ ನಿರೂಪಕಿ ಅನುಶ್ರೀ (Anchor Anushree) ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟರು. ರೋಷನ್ ಜೊತೆ ಅವರ ಮದುವೆ ನೆರವೇರಿತು. ಈ ಮದುವೆಯನ್ನು ಅಣ್ಣನ ಸ್ಥಾನದಲ್ಲಿ ನಿಂತು ಮಾಡಿಸಿದ್ದು ಪುನೀತ್ ರಾಜ್​​ಕುಮಾರ್ ಅಭಿಮಾನಿ ವರುಣ್ ಗೌಡ. ಈಗ ‘ಜೀ ಕನ್ನಡ’ ವೇದಿಕೆಗೆ ಆ್ಯಂಕರ್ ಅನುಶ್ರೀ ಅವರು ಮರಳಿದ್ದಾರೆ. ಈ ವೇಳೆ ಮದುವೆ ಬಗ್ಗೆ ಅವರು ಮಾತನಾಡಿದರು. ವರುಣ್ (Varun Gowda) ಕೂಡ ವೇದಿಕೆಗೆ ಬಂದರು. ಮದುವೆ ಬಗ್ಗೆ ಏನಾದರೂ ಮಾತನಾಡಿ ಎಂದರೆ, ವರುಣ್ ಅವರಿಗೆ ಮಾತೇ ಬರಲಿಲ್ಲ. ಬರೀ ಕಣ್ಣೀರು ಸುರಿಸಿದರು. ಅದಕ್ಕೆ ಕಾರಣ ಆಗಿದ್ದು ಪುನೀತ್ ರಾಜ್​​ಕುಮಾರ್ (Puneeth Rajkumar) ನೆನಪು!

ಹೌದು, ಅನುಶ್ರೀ ಅವರು ಪುನೀತ್​ ರಾಜ್​​ಕುಮಾರ್ ಅವರ ದೊಡ್ಡ ಅಭಿಮಾನಿ. ಅದೇ ರೀತಿ ವರುಣ್ ಕೂಡ ದೊಡ್ಡ ಫ್ಯಾನ್. ಅನುಶ್ರೀ ಅವರ ಮದುವೆಗೆ ಪುನೀತ್ ರಾಜ್​​ಕುಮಾರ್ ಬರಲಾಗಲಿಲ್ಲ ಎಂಬ ಕೊರಗು ಇಬ್ಬರಿಗೂ ಇದೆ. ಅದರಿಂದಾಗಿ ವರುಣ್ ಅವರು ‘ಜೀ ಕನ್ನಡ’ ವೇದಿಕೆಯಲ್ಲಿ ಎಮೋಷನ್ ಆದರು. ಈ ವೇಳೆ ಅನುಶ್ರೀ ಅವರು ಮಾತನಾಡಿದರು.

‘ನನಗೆ ಜೀವನ ಕೊಟ್ಟಿದ್ದು ಜೀ ಕನ್ನಡ. ಆ ಜೀವನಕ್ಕೆ ಅರ್ಥ ಕೊಟ್ಟಿದ್ದು ರೋಷನ್. ನಾವು ತುಂಬ ಜನರನ್ನು ಕರೆದು ಮದುವೆ ಮಾಡೋಕೆ ಆಗಿಲ್ಲ. ಇದಕ್ಕಿಂತಲೂ ಸಿಂಪಲ್ ಆಗಿ ದುವೆ ಆಗಬೇಕಿತ್ತು. ಅಲ್ಲಿ ಬಂದವರು ಯಾರೂ ಸೆಲೆಬ್ರಿಟಿಗಳಲ್ಲ. ಅಲ್ಲಿ ಬಂದವರು ನನ್ನ ಆತ್ಮೀಯರು. ನನ್ನ ಮನೆಯವರಿಗಿಂತಲೂ ಹೆಚ್ಚು ಕೆಲಸವನ್ನು ಅಲ್ಲಿ ನಿಂತು ಮಾಡಿದ್ದು ರಾಜ್​ ಬಿ. ಶೆಟ್ಟಿ. ಆದರೆ ನನ್ನ ಜೀವನದ ಈ ತುಂಬಾ ಸುಂದರವಾದ ಕ್ಷಣವನ್ನು ಜೀವನಪೂರ್ತಿ ಉಡುಗೊರೆಯಾಗಿ ನೀಡಿದ್ದು ಬೆಸ್ಟ್ ಫ್ರೆಂಡ್, ಅಣ್ಣ ವರುಣ್ ಗೌಡ’ ಎಂದು ಅನುಶ್ರೀ ಹೇಳಿದರು.

View this post on Instagram

A post shared by Zee Kannada (@zeekannada)

‘ಈ ಮದುವೆ ಅವನ ಕನಸಾಗಿತ್ತು. ನನಗೆ ಯಾವುದೋ ದೇವಸ್ಥಾನದಲ್ಲಿ ಮದುವೆ ಆಗಬೇಕು ಎಂಬ ಆಸೆ ಇತ್ತು. ನನ್ನ ತಂಗಿ ಮದುವೆಯನ್ನು ಹಿಂಗೇ ಮಾಡಿಸಬೇಕು ಅಂತ ನನಗೆ ಈ ಮದುವೆ ಮಾಡಿಸಿದ್ದು ಅವನು. ಧನ್ಯವಾದಗಳು ವರುಣ. ಆ ಕ್ಷಣದಲ್ಲಿ ನಾವೆಲ್ಲರೂ ಅಪ್ಪು ಸರ್​​ನ ಮಿಸ್ ಮಾಡಿಕೊಂಡೆವು. ಅವರೇ ವರಣ್​​ನ ಕಳಿಸಿ ನನಗೆ ಈ ಮದುವೆ ಮಾಡಿಸಿದ್ದಾರೆ ಅಂತ ನಾನು ಅಂದುಕೊಂಡಿದ್ದೇನೆ’ ಎಂದು ವರುಣ್ ಗೌಡ ಬಗ್ಗೆ ಮಾತನಾಡುತ್ತಾ ಅನುಶ್ರೀ ಅವರು ಕಣ್ಣೀರು ಹಾಕಲು ಆರಂಭಿಸಿದರು.

ಇದನ್ನೂ ಓದಿ: ಮದುವೆ ಬಳಿಕ ಗುಡ್ ನ್ಯೂಸ್ ನೀಡಿದ ನಿರೂಪಕಿ ಅನುಶ್ರೀ: ಒಂದಲ್ಲ ಎರಡು

ಆಗ ವರುಣ್ ಗೌಡ ಅವರು ವೇದಿಕೆಗೆ ಬಂದರು. ‘ಯಾರಿಗೆ ಏನೇ ತೊಂದರೆ ಆದರೂ ಹೋಗಿ ಸಹಾಯಕ್ಕೆ ನಿಲ್ಲುವ ಜೀವ ಇದು’ ಎಂದು ಅನುಶ್ರೀ ಅವರು ವರುಣ್ ಬಗ್ಗೆ ಹೇಳಿದರು. ಬಳಿಕ ಮಾತನಾಡಿ ಎಂದು ಮೈಕ್ ನೀಡಿದರೆ ವರುಣ್ ಅವರಿಗೆ ಮಾತುಗಳೇ ಬರಲಿಲ್ಲ. ಕಣ್ಣೀರು ಹಾಕುತ್ತಲೇ ಒಂದೆರಡು ಮಾತನಾಡಿದರು. ‘ನೀವೆಲ್ಲ ಹೇಳೋ ಥರ ನಾನು ಏನೂ ಮಾಡಿಲ್ಲ. ನಿಮ್ಮ ಕೈಯಲ್ಲಿ ಆದರೆ ಒಳ್ಳೆಯದು ಮಾಡಿ, ದಯವಿಟ್ಟು ಯಾರಿಗೂ ಕೆಟ್ಟದ್ದು ಬಯಸಬೇಡಿ ಅಂತ ನಮಗೆ ಅಪ್ಪು ಬಾಸ್ ಹೇಳಿಕೊಟ್ಟಿದ್ದರು. ಅವರ ಮಾತನ್ನು ನಾನು ಪಾಲಿಸಿಕೊಂಡು ಹೋಗುತ್ತಿದ್ದೇನೆ. ನನ್ನ ಮದುವೆಯಲ್ಲೂ ಅವರನ್ನು ಮಿಸ್ ಮಾಡಿಕೊಂಡೆ. ನನ್ನ ತಂಗಿ ಮದುವೆಯಲ್ಲೂ ಅವರನ್ನು ಮಿಸ್ ಮಾಡಿಕೊಂಡೆ’ ಎಂದು ವರುಣ್ ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
34 ರನ್​ಗಳಿದ್ದಾಗ ಕ್ಯಾಚ್ ಬಿಟ್ಟ ಸಿರಾಜ್; 93 ರನ್ ಚಚ್ಚಿದ ಅಲೆನ್
34 ರನ್​ಗಳಿದ್ದಾಗ ಕ್ಯಾಚ್ ಬಿಟ್ಟ ಸಿರಾಜ್; 93 ರನ್ ಚಚ್ಚಿದ ಅಲೆನ್
9 ಗಂಟೆ ಕಾರ್ಯಾಚರಣೆ ಬಳಿಕ ಬೋರ್​​ವೆಲ್​ನಿಂದ 4 ವರ್ಷದ ಬಾಲಕನ ರಕ್ಷಣೆ!
9 ಗಂಟೆ ಕಾರ್ಯಾಚರಣೆ ಬಳಿಕ ಬೋರ್​​ವೆಲ್​ನಿಂದ 4 ವರ್ಷದ ಬಾಲಕನ ರಕ್ಷಣೆ!
ಬಿಸಿಸಿಐನ ರೋಬೋ ಶ್ವಾನ ಚಂಪಕ್ ಮೇಲೆ ಕೊಹ್ಲಿ ಅಸಮಾಧಾನ
ಬಿಸಿಸಿಐನ ರೋಬೋ ಶ್ವಾನ ಚಂಪಕ್ ಮೇಲೆ ಕೊಹ್ಲಿ ಅಸಮಾಧಾನ
ಲಕ್ಕುಂಡಿಯಲ್ಲಿ ಪತ್ತೆಯಾಗಿದ್ದ ನಿಧಿ ಮೌಲ್ಯ 8 ಕೋಟಿ ರೂ
ಲಕ್ಕುಂಡಿಯಲ್ಲಿ ಪತ್ತೆಯಾಗಿದ್ದ ನಿಧಿ ಮೌಲ್ಯ 8 ಕೋಟಿ ರೂ
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ
ಜೆ.ಪಿ. ಪಾರ್ಕ್ ಫ್ಲೈಓವರ್ ಕೆಳಗೆ ಕಸದ ರಾಶಿ! GBA ನಿದ್ದೆ ಜಾರಿದೆಯೇ?
ಜೆ.ಪಿ. ಪಾರ್ಕ್ ಫ್ಲೈಓವರ್ ಕೆಳಗೆ ಕಸದ ರಾಶಿ! GBA ನಿದ್ದೆ ಜಾರಿದೆಯೇ?
ಸಿದ್ದರಾಮಯ್ಯ ಬಿಟ್ರೆ CM ಆಗುವ ಅರ್ಹತೆ ಖರ್ಗೆಗೆ ಮಾತ್ರ: ರಾಯರೆಡ್ಡಿ
ಸಿದ್ದರಾಮಯ್ಯ ಬಿಟ್ರೆ CM ಆಗುವ ಅರ್ಹತೆ ಖರ್ಗೆಗೆ ಮಾತ್ರ: ರಾಯರೆಡ್ಡಿ