AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್ ಬಾಸ್ ಕನ್ನಡದ ವಿಶೇಷತೆ ಏನು? ವಿವರಿಸಿದ ಕೃಷ್ಣನ್ ಕುಟ್ಟಿ

ಬಿಗ್ ಬಾಸ್ ಕನ್ನಡ 11 ಸೀಸನ್‌ಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ, ಕರ್ನಾಟಕದಲ್ಲಿ 82% ಟಿವಿ ಪ್ರೇಕ್ಷಕರನ್ನು ತಲುಪಿದೆ. ಸೆಪ್ಟೆಂಬರ್ 28 ರಿಂದ ಆರಂಭವಾಗುವ 12ನೇ ಸೀಸನ್ ಅನ್ನು ಕಿಚ್ಚ ಸುದೀಪ್ ನಿರೂಪಿಸಲಿದ್ದಾರೆ. ಹೊಸ ಸ್ಪರ್ಧಿಗಳು ಮತ್ತು ಆಟದ ವಿಧಾನಗಳೊಂದಿಗೆ, ಈ ಶೋ ಕೇವಲ ಮನರಂಜನಾ ಕಾರ್ಯಕ್ರಮವಲ್ಲ, ಸಮುದಾಯಗಳನ್ನು ಸಂಪರ್ಕಿಸುವ ಸಾಂಸ್ಕೃತಿಕ ವೇದಿಕೆಯಾಗಿದೆ ಎಂದು ಜಿಯೋಸ್ಟಾರ್ ಅವರು ಹೇಳಿದ್ದಾರೆ.

ಬಿಗ್ ಬಾಸ್ ಕನ್ನಡದ ವಿಶೇಷತೆ ಏನು? ವಿವರಿಸಿದ ಕೃಷ್ಣನ್ ಕುಟ್ಟಿ
ಬಿಗ್ ಬಾಸ್
ರಾಜೇಶ್ ದುಗ್ಗುಮನೆ
|

Updated on: Sep 13, 2025 | 2:59 PM

Share

‘ಬಿಗ್ ಬಾಸ್ ಕನ್ನಡ’ (Bigg Boss Kannada) ಈಗಾಗಲೇ 11 ಸೀಸನ್​ಗಳನ್ನು ಪೂರ್ಣಗೊಳಿಸಿದೆ. ಈ ಶೋ ಕರ್ನಾಟಕದಲ್ಲಿ ಶೇ.82 ಟಿವಿ ಪ್ರೇಕ್ಷಕರನ್ನು ತಲುಪಿದೆ ಅನ್ನೋದು ವಿಶೇಷ. ಇದು ರಾಜ್ಯದ ಅತ್ಯಂತ ಯಶಸ್ವಿ ಶೋ ಎಂಬ ಖ್ಯಾತಿಗೆ ಪಾತ್ರವಾಗಿದೆ. ಈ ಶೋ ಕಳೆದ ಒಂದು ದಶಕದಿಂದ ಪ್ರಸಾರ ಕಾಣುತ್ತಿದೆ. ಮನರಂಜನೆಗೆ ಕೊರತೆ ಮಾಡದೆ ಶೋ ಎಲ್ಲರ ಗಮನ ಸೆಳೆದಿದೆ. ಈಗ 12ನೇ ಸೀಸನ್ ಆರಂಭಕ್ಕೆ ದಿನಗಣನೆ ಶುರುವಾಗಿದೆ.

ಸೆಪ್ಟೆಂಬರ್ 28ರಿಂದ ಆರಂಭ ಆಗಲಿರುವ ‘ಬಿಗ್ ಬಾಸ್ ಕನ್ನಡ ಸೀಸನ್ 12’ರ ನಿರೂಪಣೆಯನ್ನು ಕಿಚ್ಚ ಸುದೀಪ್ ಅವರು ಮಾಡುತ್ತಿದ್ದಾರೆ. ಅವರು ಕಳೆದ 11 ಸೀಸನ್​ಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದ್ದಾರೆ. ಬಿಗ್ ಬಾಸ್ ಗೇಮ್​ಗೆ ತುಂಬಾನೇ ಫೇಮಸ್. ಪ್ರತಿ ವರ್ಷವೂ ಹೊಸ ಹೊಸ ಆಟದ ವಿಧಾನ ಸೇರ್ಪಡೆ ಆಗುತ್ತವೆ. ಅದೇ ರೀತಿ ವಿವಿಧ ರೀತಿಯ ಸ್ಪರ್ಧಿಗಳು ಆಗಮಿಸುತ್ತಾರೆ. ಈ ಬಾರಿಯೂ ಅದು ಮುಂದುವರಿಯಲಿದೆ.

ಬಿಗ್ ಬಾಸ್ ವಿಶೇಷತೆ ಬಗ್ಗೆ ಜಿಯೋಸ್ಟಾರ್ ದಕ್ಷಿಣ ವಿಭಾಗದ ಎಂಟರ್​ಟೇನ್​ಮೆಂಟ್ ಕ್ಲಸ್ಟರ್ ಮುಖ್ಯಸ್ಥ ಕೃಷ್ಣನ್ ಕುಟ್ಟಿ ಮಾತನಾಡಿದ್ದಾರೆ. ‘ಬಿಗ್ ಬಾಸ್ ಸಾಂಸ್ಕೃತಿಕ ಕೇಂದ್ರ. ಇಲ್ಲಿ ವಿವಿಧ ರೀತಿಯ ಸ್ಪರ್ಧಿಗಳು ಬರುತ್ತಾರೆ. ಇದು ಭಿನ್ನ ಅನುಭವ ನೀಡುತ್ತದೆ. ಪ್ರತಿ ಬಾರಿಯೂ ಬಿಗ್ ಬಾಸ್ ಹೊಸ ರೂಪದಲ್ಲಿ ಬರುತ್ತಿರುವುದರಿಂದ ಪ್ರೇಕ್ಷಕರು ಪ್ರೀತಿ ತೋರುವುದನ್ನು ಮುಂದುವರಿಸಿದ್ದಾರೆ. ಬಿಗ್ ಬಾಸ್ ಕನ್ನಡ ಇದು ಕೇವಲ ಟಿವಿ ಶೋ ಅಲ್ಲ. ಇದು ಸಮುದಾಯಗಳನ್ನು ಸಂಪರ್ಕಿಸೋ ಸಾಂಸ್ಕೃತಿಕ ಕೇಂದ್ರ’ ಎಂದಿದ್ದಾರೆ ಅವರು.

ಇದನ್ನೂ ಓದಿ
Image
ಆ ಒಂದು ಶಬ್ದ ಬಳಕೆ ಮಾಡಿದ್ದಕ್ಕೆ ಆಕ್ರೋಶ; ಕಪಿಲ್ ಶೋ ನಿಲ್ಲಿಸೋ ಎಚ್ಚರಿಕೆ
Image
‘ನೀವು ಊಹಿಸಿದಂತೆ ಕಥೆ ನಡೆಯಲ್ಲ’; ‘ಕರ್ಣ’ ಬಗ್ಗೆ ಕಿರಣ್ ರಾಜ್ ಹಿಂಟ್
Image
ಜೀ ಕನ್ನಡ ವೇದಿಕೆ ಮೇಲೆ ಅನುಶ್ರೀ ಮಡಿಲು ತುಂಬಿದ ತಾರಾ; ಮಗಳಂತೆ ಭಾವುಕ
Image
‘ತಾಳ್ಮೆಯಿಂದ ಕಾದಿದ್ದಕ್ಕೆ ಅರ್ಥಪೂರ್ಣವಾದ ತಾಳಿ ಬಿದ್ದಿದೆ’; ಅನುಶ್ರೀ

ಹಲವರಿಗೆ ವೇದಿಕೆ

ಬಿಗ್ ಬಾಸ್ ಅನೇಕ ಹೊಸ ತಾರೆಗಳನ್ನು ಮತ್ತು ಇನ್​ಫ್ಲ್ಯುನ್ಸರ್​ಗಳನ್ನು ಪರಿಚಯಿಸಿದೆ. ಬಿಗ್ ಬಾಸ್ ವೇದಿಕೆ ಏರಿ ಅನೇಕರ ಬದುಕು ಬದಲಾಗಿದೆ. ಇದಲ್ಲದೆ, ಹಲವು ಬ್ರ್ಯಾಂಡ್​ಗಳಿಗೆ ಇದು ವೇದಿಕೆ ಕೂಡ ಆಗಿದೆ. ಹಲವು ಬ್ರ್ಯಾಂಡ್​ಗಳ ಜೊತೆ ಬಿಗ್ ಬಾಸ್ ಒಪ್ಪಂದ ಮಾಡಿಕೊಳ್ಳುತ್ತದೆ. ಇದರಿಂದ, ಗ್ರಾಹಕರೊಂದಿಗೆ ಆಳವಾದ ಸಂಪರ್ಕವನ್ನು ಬೆಳೆಸಲು ಸಹಕಾರಿ ಆಗಿದೆ.

ಇದನ್ನೂ ಓದಿ: ಬಿಗ್ ಬಾಸ್ ಎಂಟ್ರಿ ಬಗ್ಗೆ ಸುಧಾರಾಣಿ ಸ್ಪಷ್ಟನೆ

ಬಿಗ್ ಬಾಸ್ ಪ್ರತಿ ಆವೃತ್ತಿಯಲ್ಲೂ ಸ್ಥಳೀಯ ಮೌಲ್ಯಗಳನ್ನು ಪ್ರತಿಬಿಂಬಿಸಲು ಆದ್ಯತೆ ನೀಡಲಾಗುತ್ತಿದೆ. ಸಂಬಂಧ ಹಾಗೂ ಮಾನವೀಯ ಕಥೆಗಳನ್ನು ಇದರಲ್ಲಿ ಸೇರ್ಪಡೆ ಮಾಡಲಾಗುತ್ತಿದೆ. ಅನೇಕ ಮನೆಗಳಲ್ಲಿ ಅಜ್ಜ-ಅಜ್ಜಿ, ಮೊಮ್ಮಕ್ಕಳೊಂದಿಗೆ ಕುಳಿತು ಚರ್ಚಿಸುತ್ತಾ ನೋಡಬಹುದಾದ ಕುಟುಂಬ ಒಗ್ಗಟ್ಟಿನ ಶೋ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ