‘ನೀವು ಊಹಿಸಿದಂತೆ ಕಥೆ ನಡೆಯಲ್ಲ’; ‘ಕರ್ಣ’ ಬಗ್ಗೆ ಕಿರಣ್ ರಾಜ್ ಹಿಂಟ್
ಕಿರಣ್ ರಾಜ್ ಅವರು ಜೀ ಕನ್ನಡದ ಜನಪ್ರಿಯ ಧಾರಾವಾಹಿ "ಕರ್ಣ"ದಲ್ಲಿ ಕರ್ಣನ ಪಾತ್ರ ನಿರ್ವಹಿಸುತ್ತಿದ್ದಾರೆ. ಅವರು ಇತ್ತೀಚಿನ ಸಂದರ್ಶನದಲ್ಲಿ ಧಾರಾವಾಹಿಯ ಕಥಾವಸ್ತು ಅನೇಕರ ನಿರೀಕ್ಷೆಗಳಿಗೆ ವಿರುದ್ಧವಾಗಿ ಸಾಗಲಿದೆ ಎಂದು ಹೇಳಿದ್ದಾರೆ. ನಿತ್ಯ ಮತ್ತು ನಿಧಿ ಅವರೊಂದಿಗಿನ ಕರ್ಣನ ಸಂಬಂಧದ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದ್ದು, ಕಿರಣ್ ರಾಜ್ ಅವರು ಧಾರಾವಾಹಿಯಲ್ಲಿ ಅದಕ್ಕೆ ಉತ್ತರ ಸಿಗಲಿದೆ ಎಂದು ಸೂಚಿಸಿದ್ದಾರೆ.

ಕಿರಣ್ ರಾಜ್ ಅವರು ‘ಕನ್ನಡತಿ’ ಧಾರಾವಾಹಿ ಮೂಲಕ ಜನಪ್ರಿಯತೆ ಪಡೆದವರು. ಅವರು ಈಗ ‘ಕರ್ಣ’ ಧಾರಾವಾಹಿ (Karna Serial) ಮೂಲಕ ಜೀ ಕನ್ನಡ ಪ್ರೇಕ್ಷಕರ ಎದುರು ಬಂದಿದ್ದಾರೆ. ಅವರು ‘ಕರ್ಣ’ ಧಾರಾವಾಹಿ ಬಗ್ಗೆ, ಅದರ ಕಥೆ ಬಗ್ಗೆ ದೊಡ್ಡ ಹಿಂಟ್ ಒಂದನ್ನು ನೀಡಿದ್ದಾರೆ. ‘ನೀವು ಅಂದುಕೊಂಡಂತೆ ಧಾರಾವಾಹಿ ಕಥೆ ನಡೆಯಲ್ಲ. ಅದಕ್ಕೆ ವಿರುದ್ಧವಾಗಿಯೇ ಕಥೆ ಸಾಗುತ್ತದೆ’ ಎಂದು ಅವರು ಹೇಳಿದ್ದಾರೆ. ಈ ಮೂಲಕ ಮುಂದೆ ಏನಾಗುತ್ತದೆ ಎಂಬ ಕುತೂಹಲ ಮೂಡಿದೆ.
ಯಾವುದೇ ಹೊಸ ಧಾರಾವಾಹಿ ಆರಂಭ ಆದರೂ ಆರಂಭದ ಹಂತದಲ್ಲಿ ಸಾಕಷ್ಟು ಸುದ್ದಿ ಆಗುತ್ತದೆ. ಧಾರಾವಾಹಿಯ ಕಥೆ ಹಾಗೆ ಸಾಗಬಹುದು, ಹೀಗೆ ಸಾಗಬಹುದು ಎಂದೆಲ್ಲ ಊಹಿಸಲಾಗುತ್ತದೆ. ‘ಕರ್ಣ’ ಧಾರಾವಾಹಿಯಲ್ಲೂ ಅದು ಮುಂದುವರಿದಿದೆ. ಈ ಧಾರಾವಾಹಿ ಬಗ್ಗೆ ವಿವಿಧ ರೀತಿಯ ಊಹೆಗಳು ಬರುತ್ತಿವೆ. ಆದರೆ, ಹಾಗಾಗೋದಿಲ್ಲ ಎಂಬುದು ಕಿರಣ್ ರಾಜ್ ಅವರ ಮಾತು. ಅವರು ಸಂದರ್ಶನ ಒಂದರಲ್ಲಿ ಈ ಬಗ್ಗೆ ಹೇಳಿದ್ದಾರೆ.
‘ನಿಧಿನ ಮದುವೆ ಆಗ್ತೀರಾ, ನಿತ್ಯಾನ ಮದುವೆ ಆಗ್ತಾರಾ ಎಂದು ಕೇಳುತ್ತಾ ಇದ್ದಾರೆ’ ಎಂಬುದಾಗಿ ಸಂದರ್ಶಕರು ಕೇಳಿದರು. ಆಗ ಕಿರಣ್ ರಾಜ್ ಅವರು, ‘ಎಪಿಸೋಡ್ನಲ್ಲಿ ಅವರೇ ಹಾಕುತ್ತಾರೆ, ಆಗ ನೋಡಿ’ ಎಂದು ಕಿರಣ್ ರಾಜ್ ಹೇಳಿದ್ದಾರೆ. ‘ನೀವು ಏನು ನಿರೀಕ್ಷಿಸುತ್ತೀರೋ ಅದಂತೂ ಆಗಲ್ಲ. ನಮ್ಮ ವಿಮರ್ಶೆ ಮೇಲೆ ಕಥೆ ಬರೆಯಲಾಗುತ್ತದೆ ಎಂದು ಎಲ್ಲರೂ ಊಹಿಸುತ್ತಾರೆ. ಆದರೆ, ಅದಕ್ಕೆ ವಿರುದ್ಧವಾಗಿ ಮಾಡಿದಾಗಲೇ ಟಿಆರ್ಪಿ ಹೆಚ್ಚುತ್ತದೆ’ ಎಂದು ಕಿರಣ್ ರಾಜ್ ಹೇಳಿದ್ದಾರೆ.
ಸದ್ಯ ಕರ್ಣನು ನಿತ್ಯ ಹಾಗೂ ನಿಧಿ ಇಬ್ಬರನ್ನೂ ಮದುವೆ ಆಗುತ್ತಾನೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಸದ್ಯ ಕಿರಣ್ ರಾಜ್ ನಿಧಿಯನ್ನು ಪ್ರೀತಿಸುತ್ತಿದ್ದಾನೆ. ಹೀಗಾಗಿ, ಜನರ ಊಹೆ ತಪ್ಪಾಗಬೇಕು ಎಂದು ಕರ್ಣ ಹಾಗೂ ನಿತ್ಯಾ ಮದುವೆ ಮಾಡಿಸುತ್ತಾರೆಯೇ ಎಂಬ ಪ್ರಶ್ನೆ ಮೂಡಿದೆ.
ಇದನ್ನೂ ಓದಿ: ನಿಧಿ-ನಿತ್ಯಾ ಇಬ್ಬರನ್ನೂ ಮದವೆ ಆಗ್ತಾನೆ ಕರ್ಣ? ಸಿಕ್ತು ದೊಡ್ಡ ಸೂಚನೆ
‘ಕರ್ಣ’ ಧಾರಾವಾಹಿ ಸದ್ಯ ಟಿಆರ್ಪಿಯಲ್ಲಿ ಟಾಪ್ ಸ್ಥಾನ ಪಡೆದುಕೊಂಡಿದೆ. ಈ ಧಾರಾವಾಹಿ ಆರಂಭದಿಂದಲೇ ಬಹುತೇಕ ವಾರಗಳಲ್ಲಿ ಟಿಆರ್ಪಿಯಲ್ಲಿ ಮೊದಲ ಸ್ಥಾನವನ್ನೇ ಪಡೆದುಕೊಳ್ಳುತ್ತಾ ಬರುತ್ತಿತ್ತು. ಈ ಧಾರಾವಾಹಿ ಬಗ್ಗೆ ಹಲವು ತಿರುವುಗಳನ್ನು ಪಡೆದು ಸಾಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.







