AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆ ಒಂದು ಶಬ್ದ ಬಳಕೆ ಮಾಡಿದ್ದಕ್ಕೆ ಭುಗಿಲೆದ್ದ ಆಕ್ರೋಶ; ಕಪಿಲ್ ಶರ್ಮಾ ಶೋ ನಿಲ್ಲಿಸೋ ಎಚ್ಚರಿಕೆ

ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) ಕಪಿಲ್ ಶರ್ಮಾ ಅವರ ಶೋನಲ್ಲಿ ‘ಬಾಂಬೆ’ ಎಂಬ ಪದವನ್ನು ಬಳಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದೆ. ಎಂಎನ್‌ಎಸ್ ಮುಖ್ಯಸ್ಥ ಅಮೇಯ್ ಖೋಪ್ಕರ್ ಅವರು ಕಪಿಲ್ ಶರ್ಮಾ ಅವರಿಗೆ ನೇರವಾಗಿ ಎಚ್ಚರಿಕೆ ನೀಡಿದ್ದು, ಮುಂಬೈಗೆ ‘ಬಾಂಬೆ’ ಎಂದು ಕರೆಯುವುದನ್ನು ನಿಲ್ಲಿಸುವಂತೆ ಒತ್ತಾಯಿಸಿದ್ದಾರೆ.

ಆ ಒಂದು ಶಬ್ದ ಬಳಕೆ ಮಾಡಿದ್ದಕ್ಕೆ ಭುಗಿಲೆದ್ದ ಆಕ್ರೋಶ; ಕಪಿಲ್ ಶರ್ಮಾ ಶೋ ನಿಲ್ಲಿಸೋ ಎಚ್ಚರಿಕೆ
ಕಪಿಲ್ ಶರ್ಮಾ
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ|

Updated on: Sep 13, 2025 | 8:04 AM

Share

ಹಾಸ್ಯನಟ ಮತ್ತು ನಟ ಕಪಿಲ್ ಶರ್ಮಾ (Kapil Sharma) ಮೇಲೆ ಎಂಎನ್‌ಎಸ್‌ನ (ಮಹಾರಾಷ್ಟ್ರ ನವನಿರ್ಮಾಣ ಸೇನಾ) ಕೋಪಗೊಂಡಿದೆ. ಎಂಎನ್‌ಎಸ್ ಚಿತ್ರಪತ್ ಸೇನಾ ಮುಖ್ಯಸ್ಥ ಅಮೇ ಖೋಪ್ಕರ್ ಅವರಿಗೆ ನೇರವಾಗಿ ಎಚ್ಚರಿಕೆ ನೀಡಿದ್ದಾರೆ. ಮುಂಬೈಯನ್ನು ‘ಬಾಂಬೆ’ ಎಂದು ಕರೆಯುವ ವಿಷಯಕ್ಕೆ ಈ ಆಕ್ರೋಶ ಭುಗಿಲೆದ್ದಿದೆ. ‘ಬಾಂಬೆ’ ಅನ್ನು ಅಧಿಕೃತವಾಗಿ ಮುಂಬೈ ಎಂದು ಹೆಸರಿಸಿ ಮೂವತ್ತು ವರ್ಷಗಳ ನಂತರವೂ, ಕಪಿಲ್ ಅವರ ಶೋನಲ್ಲಿ ಅದನ್ನು ಬಾಂಬೆ ಎಂದು ಉಲ್ಲೇಖಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಕಪಿಲ್ ಶರ್ಮಾ ಅವರ ಶೋನ ಕ್ಲಿಪ್ ಅನ್ನು ಹಂಚಿಕೊಳ್ಳುವ ಮೂಲಕ ಪೋಸ್ಟ್ ಬರೆದಿದ್ದಾರೆ. ‘ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ’ ಒಟಿಟಿ ಪ್ಲಾಟ್‌ಫಾರ್ಮ್ ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರ ಕಾಣುತ್ತಿದೆ. ಈ ಶೋನಲ್ಲಿ ಕಾಣಿಸಿಕೊಳ್ಳುವ ಸೆಲೆಬ್ರಿಟಿಗಳು ಮತ್ತು ಕಪಿಲ್ ಸ್ವತಃ ಮುಂಬೈ ಬದಲಿಗೆ ‘ಬಾಂಬೆ’ ಎಂದು ಉಲ್ಲೇಖಿಸಿದ್ದಾರೆ.

‘ಬಾಂಬೆಯನ್ನು ಅಧಿಕೃತವಾಗಿ ಮುಂಬೈ ಎಂದು ಮರುನಾಮಕರಣ ಮಾಡಿ 30 ವರ್ಷಗಳ ನಂತರವೂ, ‘ಕಪಿಲ್ ಶರ್ಮಾ ಶೋ’ದಲ್ಲಿ ಸೆಲೆಬ್ರಿಟಿ ಅತಿಥಿಗಳು, ದೆಹಲಿ ಮೂಲದ ರಾಜ್ಯಸಭಾ ಸಂಸದರು, ಕಾರ್ಯಕ್ರಮ ನಿರೂಪಕರು ಮತ್ತು ಅನೇಕ ಹಿಂದಿ ಚಲನಚಿತ್ರಗಳು ಬಾಂಬೆ ಎಂಬ ಪದವನ್ನು ಇನ್ನೂ ಉಲ್ಲೇಖಿಸುತ್ತಿವೆ. 1995ರಲ್ಲಿ ಮಹಾರಾಷ್ಟ್ರ ಸರ್ಕಾರ ಮತ್ತು 1996 ರಲ್ಲಿ ಕೇಂದ್ರ ಸರ್ಕಾರದಿಂದ ಅಧಿಕೃತ ಅನುಮೋದನೆ ಪಡೆದ ನಂತರ ಮುಂಬೈ ಆಗಿ ಮಾರ್ಪಟ್ಟಿದೆ. ಇದನ್ನೇ ಬಳಸಬೇಕು’ ಎಂದು ಎಚ್ಚರಿಸುತ್ತಿ್ದದೇನೆ’ ಎಂದು ಅವರು ಹೇಳಿದ್ದಾರೆ. ಕಪಿಲ್ ಅಥವಾ ಅವರ ತಂಡ ಇದಕ್ಕೆ ಪ್ರತಿಕ್ರಿಯೆ ನೀಡುತ್ತದೆಯೇ ಎಂದು ನೋಡುವುದು ಮುಖ್ಯ.

ಇದನ್ನೂ ಓದಿ
Image
‘ನೀವು ಊಹಿಸಿದಂತೆ ಕಥೆ ನಡೆಯಲ್ಲ’; ‘ಕರ್ಣ’ ಬಗ್ಗೆ ಕಿರಣ್ ರಾಜ್ ಹಿಂಟ್
Image
ಜೀ ಕನ್ನಡ ವೇದಿಕೆ ಮೇಲೆ ಅನುಶ್ರೀ ಮಡಿಲು ತುಂಬಿದ ತಾರಾ; ಮಗಳಂತೆ ಭಾವುಕ
Image
‘ತಾಳ್ಮೆಯಿಂದ ಕಾದಿದ್ದಕ್ಕೆ ಅರ್ಥಪೂರ್ಣವಾದ ತಾಳಿ ಬಿದ್ದಿದೆ’; ಅನುಶ್ರೀ
Image
ಹಠ ಮಾಡಿ ವಿಷ್ಣುವರ್ಧನ್ ಸಿನಿಮಾದಲ್ಲಿ ನಟಿಸಿದ್ದ ನಟ ಅಕ್ಷಯ್ ಕುಮಾರ್

ಇದನ್ನೂ ಓದಿ: ಮತ್ತೆ ನಿಲ್ಲಲಿದೆ ಕಪಿಲ್ ಶರ್ಮಾ ಶೋ? ಸೆಟ್​ನಲ್ಲಿ ನಡೆಯಿತು ದೊಡ್ಡ ಜಗಳ

‘ಕಪಿಲ್ ಶರ್ಮಾ ಅವರ ಶೋನಲ್ಲಿ ಮಾತ್ರವಲ್ಲದೆ ಹಿಂದಿ ಚಲನಚಿತ್ರಗಳು ಅಥವಾ ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿನ ವೆಬ್ ಸರಣಿಗಳಲ್ಲಿಯೂ ಸಹ ಇದೇ ತರ ಬಳಕೆ ಆಗುತ್ತಿದೆ. ಮುಂಬೈ ಅನ್ನು ಉದ್ದೇಶಪೂರ್ವಕವಾಗಿ ಬಾಂಬೆ ಎಂದು ಕರೆಯಲಾಗುತ್ತಿದೆ. ಯಾವುದೇ ಬದಲಾವಣೆ ಇಲ್ಲದಿದ್ದರೆ, ಸೆಟ್‌ಗಳಿಗೆ ಹೋಗಿ ಪ್ರತಿಭಟನೆ ನಡೆಸುತ್ತೇವೆ ಮತ್ತು ಚಿತ್ರೀಕರಣ ನಿಲ್ಲಿಸಲಾಗುತ್ತದೆ. ಕಪಿಲ್ ಸ್ವತಃ ಕಳೆದ 15-17 ವರ್ಷಗಳಿಂದ ಮುಂಬೈನಲ್ಲಿ ವಾಸಿಸುತ್ತಿದ್ದಾರೆ. ಆದರೆ ಅವರು ಇನ್ನೂ ನಗರವನ್ನು ಸರಿಯಾಗಿ ಹೆಸರಿಸಲು ಸಾಧ್ಯವಿಲ್ಲವೇ? ಅವರನ್ನು ಕಪಿಲ್ ಬದಲಿಗೆ ಟ್ಯಾಪಿಲ್ ಎಂದು ಕರೆದರೆ ಸರಿಯೇ? ನಾವು ಅವರ ಅಥವಾ ಬಾಲಿವುಡ್‌ನ ವಿರೋಧಿಯಲ್ಲ, ಆದರೆ ನಗರಕ್ಕೆ ಮುಂಬೈ ಎಂದು ಹೆಸರಿಸಬೇಕು’ ಎಂದು ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್
ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್
ಭಾರತಕ್ಕೆ ಬಂದ ಗೆಳೆಯ ಪುಟಿನ್​ಗೆ ಪ್ರಧಾನಿ ಮೋದಿಯ ಅಪ್ಪುಗೆಯ ಸ್ವಾಗತ
ಭಾರತಕ್ಕೆ ಬಂದ ಗೆಳೆಯ ಪುಟಿನ್​ಗೆ ಪ್ರಧಾನಿ ಮೋದಿಯ ಅಪ್ಪುಗೆಯ ಸ್ವಾಗತ
ಧ್ರುವಂತ್ ಮೇಲೆ ಬುಕ್ ಬರೆಯುತ್ತಾರಂತೆ ಗಿಲ್ಲಿ: ಸೀರಿಯಸ್ ಪ್ರಶ್ನೆಗೆ ಕಾಮಿಡಿ
ಧ್ರುವಂತ್ ಮೇಲೆ ಬುಕ್ ಬರೆಯುತ್ತಾರಂತೆ ಗಿಲ್ಲಿ: ಸೀರಿಯಸ್ ಪ್ರಶ್ನೆಗೆ ಕಾಮಿಡಿ