AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಿಶಾ ಪಟಾನಿ ಮನೆ ಮೇಲೆ ಗುಂಡಿನ ದಾಳಿ ನಡೆಯಲು ಹೊರ ಬಿತ್ತು ಕಾರಣ

Disha Patani: ಬಾಲಿವುಡ್​ನ ಹಾಟ್ ನಟಿ ದಿಶಾ ಪಟಾನಿ ಮನೆಯ ಮುಂದೆ ಶೂಟೌಟ್ ನಡೆದಿದೆ. ಕೆಲವು ಅನಾಮಿಕರು ದಿಶಾ ಪಟಾನಿ ಮನೆ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಕೆಲವು ದುಷ್ಕರ್ಮಿಗಳ ಗುಂಪು ಇದನ್ನು ಮಾಡಿದೆ ಎನ್ನಲಾಗುತ್ತಿದೆ. ಅಂದಹಾಗೆ ದಿಶಾ ಪಟಾನಿ ಮನೆಯ ಮೇಲೆ ಗುಂಡು ಹಾರಿಸಲು ಕಾರಣವೇನು? ಇಲ್ಲಿದೆ ಓದಿ ಮಾಹಿತಿ...

ದಿಶಾ ಪಟಾನಿ ಮನೆ ಮೇಲೆ ಗುಂಡಿನ ದಾಳಿ ನಡೆಯಲು ಹೊರ ಬಿತ್ತು ಕಾರಣ
Disha Patani
 ಶ್ರೀಲಕ್ಷ್ಮೀ ಎಚ್
| Edited By: |

Updated on:Sep 13, 2025 | 10:58 PM

Share

ನಟಿ ದಿಶಾ ಪಟಾಣಿ (Disha Patani) ಗ್ಲಾಮರಸ್ ಲುಕ್​ನಿಂದಲೇ ಸದಾ ಸುದ್ದಿಯಲ್ಲಿರುತ್ತಾರೆ. ಈಗ ಅವರ ಮನೆ ಬಳಿ ಗುಂಡಿನ ದಾಳಿ ಕೇಳಿಸಿದೆ. ಬರೇಲಿಯಲ್ಲಿರುವ ಅವರ ಮನೆಯಲ್ಲಿ ನಡೆದ ಶೂಟಿಂಗ್ ನಿಂದಾಗಿ ನಟಿಯ ಕುಟುಂಬದಲ್ಲಿ ಭಯದ ವಾತಾವರಣ ನಿರ್ಮಾಣ ಆಗಿದೆ. ಹಾಗಾದರೆ ದಿಶಾ ಪಟಾನಿ ಅವರ ಪೋಷಕರ ಮನೆಯ ಮೇಲೆ ಯಾರು ಗುಂಡು ಹಾರಿಸಿದರು ಮತ್ತು ಏಕೆ? ಇದಕ್ಕೆ ಉತ್ತರ ಸಿಕ್ಕಿದೆ. ದಿಶಾ ಪಟಾಣಿ ಅವರ ಸಹೋದರಿ ಮತ್ತು ಮಾಜಿ ಸೇನಾ ಅಧಿಕಾರಿ ಖುಷ್ಬೂ ಪಟಾನಿ ನೀಡಿದ ಹೇಳಿಕೆಯಿಂದಾಗಿ ಮನೆಯ ಮೇಲೆ ಗುಂಡು ಹಾರಿಸಲಾಗಿದೆ.

ಕೆಲವು ತಿಂಗಳ ಹಿಂದೆ, ಆಧ್ಯಾತ್ಮಿಕ ನಾಯಕ ಮತ್ತು ಧಾರ್ಮಿಕ ಪ್ರವಾದಿ ಅನಿರುದ್ಧಾಚಾರ್ಯ ಮಹಾರಾಜ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಹುಡುಗಿಯರ ಬಗ್ಗೆ ಹೇಳಿಕೆ ನೀಡಿದ್ದರು. ‘25 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನಲ್ಲಿ ಅವಿವಾಹಿತ ಮಹಿಳೆಯರು ಅನೈತಿಕ ಸಂಬಂಧ ಹೊಂದಿದ್ದಾರೆ’ ಎಂದು ಅವರು ಹೇಳಿದ್ದರು. ಖುಷ್ಬೂ ಅವರು ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವನ್ನು ಪೋಸ್ಟ್ ಮಾಡುವ ಮೂಲಕ ಅನಿರುದ್ಧಾಚಾರ್ಯ ಮಹಾರಾಜ್ ಅವರನ್ನು ಟೀಕಿಸಿದ್ದರು. ‘ಬಾಬಾ ರಾಷ್ಟ್ರವಿರೋಧಿ. ನೀವು ಅಂತಹ ಕಿಡಿಗೇಡಿಗಳನ್ನು ಬೆಂಬಲಿಸಬಾರದು. ಈ ಸಮಾಜದಲ್ಲಿರುವ ಎಲ್ಲಾ ಶಕ್ತಿಹೀನ ಜನರು ಅವರನ್ನು ಅನುಸರಿಸುತ್ತಾರೆ’ ಎಂದು ಹೇಳಿದ್ದರು.

ಇದನ್ನೂ ಓದಿ:ಸನಾತನ ಧರ್ಮಕ್ಕೆ ಅವಮಾನ ಮಾಡಿದ ನಟಿ ದಿಶಾ ಪಟಾನಿ ಮನೆ ಎದುರು ಗುಂಡಿನ ದಾಳಿ

ಸದ್ಯದ ಮಾಹಿತಿ ಮಾಹಿತಿಯ ಪ್ರಕಾರ, ರೋಹಿತ್ ಗೋದ್ರಾ ಮತ್ತು ಗೋಲ್ಡಿ ಬ್ರಾರ್ ಗ್ಯಾಂಗ್ ಘಟನೆಯ ಹೊಣೆಯನ್ನು ಹೊತ್ತುಕೊಂಡಿದೆ. ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡ ಅವರು, ಗುಂಡಿನ ದಾಳಿಯ ಹೊಣೆಯನ್ನು ಹೊತ್ತುಕೊಂಡಿದ್ದಾರೆ. ‘ಖುಷ್ಬು ಪೂಜ್ಯ ಸಂತರನ್ನು ಅವಮಾನಿಸಿದ್ದಾರೆ. ಅವರು ಸನಾತನ ಧರ್ಮವನ್ನು ಅವಮಾನಿಸಿದ್ದಾರೆ.. ನಮ್ಮ ದೇವರುಗಳನ್ನು ಅವಮಾನಿಸುವುದನ್ನು ಸಹಿಸಲಾಗುವುದಿಲ್ಲ. ಇದು ಕೇವಲ ಟ್ರೇಲರ್ ಆಗಿತ್ತು. ಮುಂದಿನ ಬಾರಿ ಅವರು ಅಥವಾ ಬೇರೆ ಯಾರಾದರೂ ನಮ್ಮ ಧರ್ಮವನ್ನು ಅಗೌರವಿಸಿದರೆ, ಅವರ ಮನೆಯಲ್ಲಿ ಯಾರನ್ನೂ ಜೀವಂತವಾಗಿ ಬಿಡುವುದಿಲ್ಲ’ ಎಂದು ಅವರು ಹೇಳಿದ್ದಾರೆ ಎನ್ನಲಾಗಿದೆ. ಗುಂಡಿನ ದಾಳಿಯ ನಂತರ, ದಿಶಾ ಪಟಾನಿ ಅವರ ಮನೆಯ ಹೊರಗೆ ಪೊಲೀಸ್ ಭದ್ರತೆಯನ್ನು ಹೆಚ್ಚಿಸಲಾಗಿದೆ.

ದಿಶಾ ಪಟಾಣಿ ಅವರು ಹಿಂದಿ ಸಿನಿಮಾಗಳಲ್ಲಿ ನಟಿಸಿ ಫೇಮಸ್ ಆಗಿದ್ದಾರೆ. ಅವರು ಮುಂಬೈನಲ್ಲೇ ಸೆಟಲ್ ಆಗಿದ್ದಾರೆ. ಈ ಘಟನೆಯಿಂದ ದಿಶಾ ಶಾಕ್​ಗೆ ಒಳಲಾಗಿದ್ದಾರೆ. ದಿಶಾ ಜೊತೆ ಅವರ ಅಭಿಮಾನಿಗಳು ಕೂಡ ಶಾಕ್​​ನಲ್ಲಿ ಇದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:57 pm, Sat, 13 September 25

Follow Us
Shreelaxmi H
Shreelaxmi H

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
34 ರನ್​ಗಳಿದ್ದಾಗ ಕ್ಯಾಚ್ ಬಿಟ್ಟ ಸಿರಾಜ್; 93 ರನ್ ಚಚ್ಚಿದ ಅಲೆನ್
34 ರನ್​ಗಳಿದ್ದಾಗ ಕ್ಯಾಚ್ ಬಿಟ್ಟ ಸಿರಾಜ್; 93 ರನ್ ಚಚ್ಚಿದ ಅಲೆನ್
9 ಗಂಟೆ ಕಾರ್ಯಾಚರಣೆ ಬಳಿಕ ಬೋರ್​​ವೆಲ್​ನಿಂದ 4 ವರ್ಷದ ಬಾಲಕನ ರಕ್ಷಣೆ!
9 ಗಂಟೆ ಕಾರ್ಯಾಚರಣೆ ಬಳಿಕ ಬೋರ್​​ವೆಲ್​ನಿಂದ 4 ವರ್ಷದ ಬಾಲಕನ ರಕ್ಷಣೆ!
ಬಿಸಿಸಿಐನ ರೋಬೋ ಶ್ವಾನ ಚಂಪಕ್ ಮೇಲೆ ಕೊಹ್ಲಿ ಅಸಮಾಧಾನ
ಬಿಸಿಸಿಐನ ರೋಬೋ ಶ್ವಾನ ಚಂಪಕ್ ಮೇಲೆ ಕೊಹ್ಲಿ ಅಸಮಾಧಾನ
ಲಕ್ಕುಂಡಿಯಲ್ಲಿ ಪತ್ತೆಯಾಗಿದ್ದ ನಿಧಿ ಮೌಲ್ಯ 8 ಕೋಟಿ ರೂ
ಲಕ್ಕುಂಡಿಯಲ್ಲಿ ಪತ್ತೆಯಾಗಿದ್ದ ನಿಧಿ ಮೌಲ್ಯ 8 ಕೋಟಿ ರೂ
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ
ಜೆ.ಪಿ. ಪಾರ್ಕ್ ಫ್ಲೈಓವರ್ ಕೆಳಗೆ ಕಸದ ರಾಶಿ! GBA ನಿದ್ದೆ ಜಾರಿದೆಯೇ?
ಜೆ.ಪಿ. ಪಾರ್ಕ್ ಫ್ಲೈಓವರ್ ಕೆಳಗೆ ಕಸದ ರಾಶಿ! GBA ನಿದ್ದೆ ಜಾರಿದೆಯೇ?
ಸಿದ್ದರಾಮಯ್ಯ ಬಿಟ್ರೆ CM ಆಗುವ ಅರ್ಹತೆ ಖರ್ಗೆಗೆ ಮಾತ್ರ: ರಾಯರೆಡ್ಡಿ
ಸಿದ್ದರಾಮಯ್ಯ ಬಿಟ್ರೆ CM ಆಗುವ ಅರ್ಹತೆ ಖರ್ಗೆಗೆ ಮಾತ್ರ: ರಾಯರೆಡ್ಡಿ