AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ್ತೆ ನಿಲ್ಲಲಿದೆ ಕಪಿಲ್ ಶರ್ಮಾ ಶೋ? ಸೆಟ್​ನಲ್ಲಿ ನಡೆಯಿತು ದೊಡ್ಡ ಜಗಳ

Kapil Sharma show: ಕಪಿಲ್ ಶರ್ಮಾ ಶೋ ಭಾರತೀಯ ಟಿವಿ ಲೋಕದ ಬಲು ಜನಪ್ರಿಯ ಶೋ ಆಗಿತ್ತು. ಎಲ್ಲ ಟಿಆರ್​ಪಿ ದಾಖಲೆಗಳನ್ನು ಸಹ ಈ ಶೋ ಅಳಿಸಿಹಾಕಿತ್ತು. ಆದರೆ ಕಪಿಲ್ ಶರ್ಮಾ ಶೋನ ಕೆಲ ಕಲಾವಿದರ ನಡುವೆ ಜಗಳ ನಡೆದಿತ್ತು. ಆದರೆ ಈಗ ಕಪಿಲ್ ಶರ್ಮಾ ಶೋ ನೆಟ್​ಫ್ಲಿಕ್ಸ್​​ನಲ್ಲಿ ಪ್ರಸಾರವಾಗುತ್ತಿದೆ. ಈಗ ಮತ್ತೆ ಕಲಾವಿದರ ನಡುವೆ ಜಗಳ ನಡೆದಿದೆ ಎನ್ನಲಾಗುತ್ತಿದೆ. ಏನಿದು ಕತೆ?

ಮತ್ತೆ ನಿಲ್ಲಲಿದೆ ಕಪಿಲ್ ಶರ್ಮಾ ಶೋ? ಸೆಟ್​ನಲ್ಲಿ ನಡೆಯಿತು ದೊಡ್ಡ ಜಗಳ
Kapil Sharma Show
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ|

Updated on:Aug 23, 2025 | 6:57 AM

Share

ಕಪಿಲ್ ಶರ್ಮಾ (Kapil Sharma) ಹಾಗೂ ಸುನಿಲ್ ಗ್ರೋವರ್ ಮಧ್ಯೆ ವಿಮಾನದಲ್ಲಿ ಆದ ಜಗಳದಿಂದ ‘ಕಪಿಲ್ ಶರ್ಮ’ ಶೋ ನಡೆಯಲೇ ಇಲ್ಲ. ಆ ಬಳಿಕ ಕಪಿಲ್ ಶರ್ಮಾ ಅವರು ಶೋ ಆರಂಭಿಸಿದರೂ ಸುನಿಲ್ ಇರಲಿಲ್ಲ. ಈಗ ಸುನಿಲ್ ಗ್ರೋವರ್ ಮತ್ತೆ ಬಂದಿದ್ದು ನೆಟ್​ಫ್ಲಿಕ್ಸ್​ನಲ್ಲಿ ‘ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ’ ಮಾಡಲಾಗುತ್ತಿದೆ. ಈ ಶೋನಲ್ಲಿ ಮತ್ತೆ ಫೈಟ್ ನಡೆದಿದೆ. ಕೃಷ್ಣ ಅಭಿಷೇಕ್ ಹಾಗೂ ಕಿಕು ಶಾರದ ಮಧ್ಯೆ ಫೈಟ್ ಆಗಿದೆ. ಇವರು ಜಗಳ ಆಡುತ್ತಿರುವ ವಿಡಿಯೋ ವೈರಲ್ ಆಗಿರುವುದನ್ನು ನೋಡಬಹುದು.

‘ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ’ನ ಶೂಟ್ ನಡೆಯುತ್ತಿತ್ತು. ಈ ವೇಳೆ ಕಿಕು ಹಾಗೂ ಕೃಷ್ಣ ಮಧ್ಯೆ ಜಗಳ ಆಗಿದೆ. ಕಿಕು ಅವರು ‘ಟೈಮ್ ಪಾಸ್ ಮಾಡುತ್ತಾ ಇದೀನಾ’ ಎಂದು ಕೇಳಿದರು. ಇದಕ್ಕೆ ಅಪ್ಸೆಟ್ ಆಗಿ ಉತ್ತರಿಸಿದ ಕೃಷ್ಣ, ‘ಹಾಗಾದರೆ ಟೈಮ್ ಪಾಸ್ ಮಾಡಿ. ಸಮಸ್ಯೆ ಇಲ್ಲ. ನಾನು ಇಲ್ಲಿಂದ ಹೋಗುತ್ತೇನೆ’ ಎಂದು ಹೇಳುತ್ತಾರೆ. ಆ ಬಳಿಕ ಕಿಕು ಕೂಡ ಉತ್ತರಿಸಿದರು. ‘ವಿಷಯವೇನೆಂದರೆ, ನನ್ನನ್ನು ಇಲ್ಲಿ ಕರೆಸಲಾಗಿದೆ. ನಾನು ಮೊದಲು ನನ್ನ ಕೆಲಸವನ್ನು ಮುಗಿಸಬೇಕು’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ:ಕಮಿಡಿಯನ್ ಕಪಿಲ್ ಶರ್ಮಾ ಕೆಫೆ ಮೇಲೆ ಖಲಿಸ್ಥಾನಿ ಉಗ್ರರ ದಾಳಿ

‘ನೀವು ಎಂದರೆ ನನಗೆ ಇಷ್ಟ. ನಿಮ್ಮನ್ನು ಗೌರವಿಸುತ್ತೇನೆ. ಹೀಗಾಗಿ ಧ್ವನಿ ಏರಿಸಿ ಮಾತನಾಡುತ್ತಿಲ್ಲ’ ಎಂದು ಕೃಷ್ಣ ಹೇಳಿದ್ದಾರೆ. ‘ಇಲ್ಲಿ ಧ್ವನಿ ಏರಿಸಿ ಮಾತನಾಡುತ್ತಿರುವ ವಿಚಾರದ ಬಗ್ಗೆ ಚರ್ಚೆ ಆಗುತ್ತಿಲ್ಲ. ಈ ವಿಚಾರವನ್ನು ತಪ್ಪು ದಾರಿಗೆ ಎಳೆದುಕೊಂಡು ಹೋಗುತ್ತಿದ್ದೀರಿ’ ಎಂದು ಕಿಕು ಉತ್ತರಿಸಿದರು. ಈ ವೇಳೆ ಕೃಷ್ಣ ಹಾಗೂ ಕೀಕು ಮಧ್ಯೆ ಸಿಬ್ಬಂದಿ ಸುತ್ತುವರಿದು ಫೈಟ್ ತಪ್ಪಿಸಲು ಪ್ರಯತ್ನಿಸಿದ್ದಾರೆ.

ಇದು ಸ್ಕ್ರಿಪ್ಟ್​ನ ಭಾಗವೋ ಅಥವಾ ನಿಜವಾಗಿಯೂ ಇವರು ಫೈಟ್ ಮಾಡಿಕೊಂಡರೇ ಎನ್ನುವ ಪ್ರಶ್ನೆ ಮೂಡಿದೆ. ಹೀಗೆಯೇ ಈ ಫೈಟ್ ಮುಂದುವರಿದು ಶೋ ಅರ್ಧಕ್ಕೆ ನಿಲ್ಲುವ ಪರಿಸ್ಥಿತಿ ಬಂದರೆ ಎನ್ನುವ ಭಯ ಅಭಿಮಾನಿಗಳದ್ದು.  ಕಿಕು ಹಾಗೂ ಕೃಷ್ಣ ಮಧ್ಯೆ ಒಳ್ಳೆಯ ಗೆಳೆತನ ಇದೆ. ಹೀಗಾಗಿ, ಸ್ಕ್ರಿಪ್ಟ್​ನ ಭಾಗ ಕೂಡ ಇದು ಆಗಿರಬಹುದು ಎನ್ನಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:24 pm, Fri, 22 August 25