ಶರಣ್-ತರುಣ್ ಸುಧೀರ್ ಗೆಳೆತನ ಎಂಥದ್ದು? ಯಾರೂ ಊಹಿಸಲೂ ಸಾಧ್ಯವಿಲ್ಲ
ಶರಣ್ ಮತ್ತು ತರುಣ್ ಸುಧೀರ್, ಜೀ ಕನ್ನಡದ ಎರಡು ರಿಯಾಲಿಟಿ ಶೋಗಳಲ್ಲಿ ಜಡ್ಜ್ ಆಗಿ ಕಾಣಿಸಿಕೊಂಡಿದ್ದಾರೆ. ಅವರ ಆಪ್ತ ಗೆಳೆತನವನ್ನು ‘ಮಹಾ ಸಂಗಮ’ ಕಾರ್ಯಕ್ರಮದಲ್ಲಿ ಬಿಚ್ಚಿಟ್ಟಿದ್ದಾರೆ. ಶರಣ್ ತಮ್ಮ ಜೀವನದ ಪ್ರಮುಖ ನಿರ್ಧಾರಗಳಲ್ಲಿ ತರುಣ್ ಅವರ ಸಲಹೆಯನ್ನು ಪಡೆಯುತ್ತಾರೆ ಎಂದು ಹೇಳಿದ್ದಾರೆ. ಇಬ್ಬರೂ ತಮ್ಮ ದೀರ್ಘಕಾಲಿಕ ಗೆಳೆತನದ ಬಗ್ಗೆ ಮಾತನಾಡಿದ್ದಾರೆ.

ಶರಣ್ ಹಾಗೂ ತರುಣ್ ಸುಧೀರ್ (Tharun Sudhir) ಒಳ್ಳೆಯ ಗೆಳೆಯರು ಎಂಬುದು ಇಂಡಸ್ಟ್ರಿಗೇ ಗೊತ್ತು. ಅಷ್ಟೇ ಏಕೆ ಅನೇಕ ಅಭಿಮಾನಿಗಳು ಕೂಡ ಇದನ್ನು ಬಲ್ಲರು. ಈಗ ಇಬ್ಬರೂ ಕಿರುತೆರೆಯಲ್ಲಿ ಮಿಂಚುತ್ತಿದ್ದಾರೆ. ‘ಮಹಾನಟಿ 2’ ಶೋಗೆ ತರುಣ್ ಸುಧೀರ್ ಜಡ್ಜ್ ಸ್ಥಾನದಲ್ಲಿ ಕುಳಿತಿದ್ದರೆ, ಶರಣ್ ಅವರು, ‘ನಾವು ನಮ್ಮವರು’ ಶೋಗೆ ಜಡ್ಜ್ ಸ್ಥಾನವನ್ನು ತುಂಬಿದ್ದಾರೆ. ಈ ಎರಡೂ ರಿಯಾಲಿಟಿ ಶೋಗಳು ಜೀ ಕನ್ನಡದಲ್ಲಿ ಪ್ರಸಾರ ಕಾಣುತ್ತಿವೆ ಮತ್ತು ಇದರ ಮಹಾ ಸಂಗಮ ನಡೆದಿದೆ. ಈ ಶೋನಲ್ಲಿ ಅನುಶ್ರೀ ಅವರು ಇವರ ಗೆಳೆತನದ ಬಗ್ಗೆ ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಅವರು ಉತ್ತರಿಸಿದ್ದಾರೆ.
‘ನಾವು ನಮ್ಮವರು ಶೋಗೆ ನೀವು ಜಡ್ಜ್ ಎಂದು ಕರೆ ಬಂದಾಗ ಸೀನಿಯರ್ ಜಡ್ಜ್ ಆಗಿರೋ ನಿಮ್ಮ ಆಪ್ತ ಗೆಳೆಯ ತರುಣ್ ಏನೆಂದು ಟಿಪ್ಸ್ ಕೊಟ್ಟರು’ ಎಂದು ಮಹಾ ಸಂಗಮದಲ್ಲಿ ಅನುಶ್ರೀ ಅವರು ಕೇಳಿದರು. ಆಗ ಶರಣ್ ಉತ್ತರವನ್ನು ನೀಡಿದರು. ಈ ವೇಳೆ ತಮ್ಮ ಗೆಳೆತನ ಎಷ್ಟು ಆಳವಾಗಿದೆ ಎಂಬುದನ್ನು ಹೇಳಿಕೊಂಡರು.
‘ಶೋ ಒಪ್ಪಿಕೊಳ್ಳಿತ್ತೇನೆ ಎಂಬುದು ಅವನಿಗೆ ತಕ್ಕ ಮಟ್ಟಿಗೆ ಗೊತ್ತಿತ್ತು. ನನ್ನ ಜೀವನದಲ್ಲಿ ತೆಗೆದುಕೊಂಡ ದೊಡ್ಡ ನಿರ್ಧಾರಗಳನ್ನು ಒಪ್ಪಿಕೊಂಡಿದ್ದೇ ಇವನನ್ನು ಕೇಳಿ. ಸಿನಿಮಾ ಆಗಲಿ, ವೈಯಕ್ತಿ ಆಗಲಿ. ನನ್ನ ನಿರ್ಮಾಣ ಸಂಸ್ಥೆಗೆ ಹೆಸರು ಇಡುವುದರಿಂದ ಹಿಡಿದು, , ಮನೆಗೆ ಹೆಸರು ಇಡೋ ತನಕ ಎಲ್ಲವನ್ನೂ ಇವನೇ ಇಟ್ಟಿದ್ದು’ ಎಂದು ಅವರು ಹೇಳಿದರು.
ಶರಣ್ ಮಾತನಾಡಿದ ವಿಡಿಯೋ
View this post on Instagram
‘ನನ್ನ ಜೀವನದಲ್ಲಿ ಇವನು ಸಿಗದೇ ಇದ್ದಿದ್ದರೆ ನಾನು ಅಪೂರ್ಣ ಆಗುತ್ತಿದ್ದೆ. ನನ್ನ ಪೂರ್ಣಗೊಳಿಸಿದವನು. ಆಪ್ತ ಗೆಳೆಯನ ಸ್ಟ್ರೆಂತ್ಗಿಂತ ಆತನ ವೀಕ್ನೆಸ್ ಗೊತ್ತಿರಬೇಕು. ನನ್ ವೀಕ್ನೆಸ್ ಏನು ಎಂಬುದು ಆತನಿಗೆ ಗೊತ್ತು. ನಾನು ಶೋ ಮಾಡುತ್ತಿದ್ದೇನೆ ಎಂದಾಗ ನೈಟ್ ಓಕೆನಪ್ಪ ಎಂದು ಕೇಳಿದ’ ಎಂದು ಶರಣ್ ಅವರು ಹೇಳಿದರು.
ಇದನ್ನೂ ಓದಿ: ‘ನಾನು ನಿರ್ದೇಶಕನಾಗಲು ಅವನೇ ಕಾರಣ’; ಜೀವದ ಗೆಳೆಯನ ನೆನೆದ ತರುಣ್ ಸುಧೀರ್
ಶರಣ್, ತರುಣ್, ನೆನಪಿರಲಿ ಪ್ರೇಮ್ ಮೊದಲಾದವರು ಒಳ್ಳೆಯ ಗೆಳೆಯರು. ಸಿನಿಮಾ ರಂಗದಲ್ಲಿ ಹಲವು ವರ್ಷಗಳಿಂದ ಇರೋ ಇವರು ತಮ್ಮ ಗೆಳೆತನವನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಶರಣ್ ಅವರು ಹಾಸ್ಯ ನಟನಾಗಿ ಗಮನ ಸೆಳೆದವರು. ಆ ಬಳಿಕ ಹೀರೋ ಆದರು. ತರುಣ್ ಅವರು ನಟನಾಗಿ ಚಿತ್ರರಂಗದಲ್ಲಿ ಮಿಂಚಿದವರು. ನಂತರ ನಿರ್ದೇಶಕನಾಗಿಯೂ ಗಮನ ಸೆಳೆದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:51 am, Mon, 15 September 25







