AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಷ್ಣು ನಟನೆಯ ‘ಬಂಧನ’ ಸಿನಿಮಾ ತಡೆಯಲು ನಡೆದ ಪ್ರಯತ್ನಗಳು ಒಂದೆರಡಲ್ಲ

ಇಂದು ವಿಷ್ಣುವರ್ಧನ್ ಅವರ ಜನ್ಮದಿನ. ಅವರ ಸೂಪರ್ ಹಿಟ್ ಚಿತ್ರ ‘ಬಂಧನ’ದ ಬಿಡುಗಡೆಯ ಸಮಯದಲ್ಲಿ ಎದುರಾದ ವಿವಾದಗಳು ಒಂದೆರಡಲ್ಲ. ಚಿತ್ರದ ಪ್ರದರ್ಶನವನ್ನು ತಡೆಯಲು ಹಲವು ಪ್ರಯತ್ನಗಳು ನಡೆದವು. ಆದರೆ ಚಿತ್ರ ಯಶಸ್ವಿಯಾಗಿ ಬಿಡುಗಡೆಯಾಯಿತು ಮತ್ತು ದೊಡ್ಡ ಯಶಸ್ಸು ಕಂಡಿತು. ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ ಈ ಚಿತ್ರದ ಬಿಡುಗಡೆಗೆ ಸರ್ಕಾರದಿಂದಲೂ ಸಹಾಯ ದೊರೆಯಿತು.

ವಿಷ್ಣು ನಟನೆಯ ‘ಬಂಧನ’ ಸಿನಿಮಾ ತಡೆಯಲು ನಡೆದ ಪ್ರಯತ್ನಗಳು ಒಂದೆರಡಲ್ಲ
ಬಂಧನ
 ಶ್ರೀಲಕ್ಷ್ಮೀ ಎಚ್
| Edited By: |

Updated on:Sep 18, 2025 | 7:48 AM

Share

ವಿಷ್ಣುವರ್ಧನ್ (Vishnuvardhan) ಅವರಿಗೆ ಇಂದು (ಸೆಪ್ಟೆಂಬರ್ 17) ಜನ್ಮದಿನ. ಈ ವಿಶೇಷ ದಿನವನ್ನು ಫ್ಯಾನ್ಸ್ ಅದ್ದೂರಿಯಾಗಿ ಆಚರಿಸುತ್ತಿದ್ದಾರೆ. ಈ ವೇಳೆ ಅವರ ಹಳೆಯ ಘಟನೆಗಳ ಬಗ್ಗೆ ನೆನಪಿಸಿಕೊಳ್ಳಲೇಬೇಕು. ವಿಷ್ಣು ನಟಿಸಿದ ಸೂಪರ್ ಹಿಟ್ ಚಿತ್ರಗಳಲ್ಲಿ ‘ಬಂಧನ’ ಕೂಡ ಒಂದು. ಈ ಸಿನಿಮಾನ ತಡೆಯಲು ಅನೇಕ ಪ್ರಯತ್ನಗಳು ನಡೆದವು. ಆದರೆ, ಯಾವುದು ಕೂಡ ಸಿನಿಮಾ ತಡೆಯಲು ಸಾಧ್ಯವಾಗಿಲ್ಲ. ವಿಷ್ಣು ಜನ್ಮದಿನದ (ಸೆಪ್ಟೆಂಬರ್ 18) ಪ್ರಯುಕ್ತ ಆ ಘಟನೆ ನೆನಪಿಸಿಕೊಳ್ಳೋಣ.

1984ರಲ್ಲಿ ಬಂಧನ ಸಿನಿಮಾ ರಿಲೀಸ್ ಆಯಿತು. ವಿಷ್ಣುವರ್ಧನ್ ಹಾಗೂ ಸುಹಾಸಿನಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡರು. ಜೈ ಜಗದೀಶ್ ಕೂಡ ಸಿನಿಮಾದ ಭಾಗ ಆಗಿದ್ದರು. ಈ ಸಿನಿಮಾ ರಾಜೇಂದ್ರ ಸಿಂಗ್ ಬಾಬು ನಿರ್ದೇಶನ ಮಾಡಿದ್ದರು. ಈ ಸಿನಿಮಾ ಭಗ್ನ ಪ್ರೇಮದ ಕಥೆ ಹೊಂದಿತ್ತು. ಆಗಿನ ಕಾಲಕ್ಕೆ ಚಿತ್ರ ಸೂಪರ್ ಹಿಟ್ ಆಯಿತು. ಆದರೆ, ಇದನ್ನು ತಡೆಯೋ ಪ್ರಯತ್ನಗಳು ನಡೆದವು.

ಈ ಬಗ್ಗೆ ರಾಜೇಂದ್ರ ಸಿಂಗ್ ಬಾಬು ಈ ಮೊದಲು ಮಾತನಾಡಿದ್ದರು. ‘ನನ್ನ ಬಂಧನ ಸಿನಿಮಾ ರಿಲೀಸ್ ಆಗಿತ್ತು. ಹೆಂಗಸರು ಸಿನಿಮಾ ನೋಡಲು ಬರಬಾರದು ಎಂದು ಥಿಯೇಟರ್​ ಒಳಗೆ ಖಾರದ ಪುಡಿ ಎರಚಲು ಆರಂಭಿಸಿದರು. ಟಿಕೆಟ್ ಕೌಂಟರ್ ಬಳಿ ಬ್ಲೇಡ್​ ಹೊಡೆಯೋ ಕೆಲಸ ಆಗಿತ್ತು. ಈ ವೇಳೆ ಸಿಎಂ ಆಗಿದ್ದ ರಾಮಕೃಷ್ಣ ಹೆಗಡೆ ಅವರು ಸಹಾಯ ಮಾಡಿದರು. ಪೊಲೀಸರ ಬಳಿ ರಕ್ಷಣೆಗೆ ಸೂಚಿಸಿದರು’ ಎಂದು ರಾಜೇಂದ್ರ ಸಿಂಗ್ ಬಾಬು ಹೇಳಿದ್ದರು.

ಇದನ್ನೂ ಓದಿ
Image
ಇನ್ನೂ ಕಡಿಮೆ ಆಗಿಲ್ಲ ಮಾಲಾಶ್ರೀ ಖದರ್; ಈ ವಿಡಿಯೋನೇ ಸಾಕ್ಷಿ
Image
ವಿಷ್ಣು, ಉಪ್ಪಿ, ಶ್ರುತಿ ಜನ್ಮದಿನ; ಚಿತ್ರರಂಗಕ್ಕೆ ನೀಡಿದ ಕೊಡುಗೆ ಅಪಾರ
Image
ಊಟದ ವಿಚಾರದಲ್ಲಿ ಸಖತ್ ಮೂಡಿ ಆಗಿದ್ದ ವಿಷ್ಣುವರ್ಧನ್
Image
ವಿಷ್ಣುವರ್ಧನ್-ರಜನಿಕಾಂತ್  ಒಟ್ಟಾಗಿ ನಟಿಸಿದ್ದ ಸಿನಿಮಾದ ದೃಶ್ಯ ನೆನಪಿದೆಯೇ?

ಇದನ್ನೂ ಓದಿ: ಆತ್ಮೀಯ ಗೆಳೆಯರಾಗಿದ್ದ ವಿಷ್ಣುವರ್ಧನ್-ರಾಜೇಂದ್ರ ಸಿಂಗ್ ಬಾಬು ದೂರಾಗಿದ್ದೇಕೆ?

ಪೊಲೀಸರು ಕಠಿಣ ಕ್ರಮ ಕೈಗೊಂಡರು. 25 ಜನರನ್ನು ಬಂಧಿಸುವ ಕೆಲಸ ಕೂಡ ಆಯಿತು. ಮೈಸೂರಲ್ಲಿ ಕೆಲ ಕಿಡಿಗೇಡಿಗಳು ವಿಷ್ಣು ಕಟೌಟ್ ಸುಡೋ ಕೆಲಸ ಮಾಡಿದರು. ಆದರೆ, ಯಾವುದೇ ಪ್ರಯತ್ನಗಳು ಯಶಸ್ಸು ಕಾಣಲೇ ಇಲ್ಲ. ಸಿನಿಮಾನ ಯಾರೂ ನಿಲ್ಲಿಸೋಕೆ ಆಗಲಿಲ್ಲ. 25 ಸೆಂಟರ್​ಗಳಲ್ಲಿ 25 ವಾರ ಸಿನಿಮಾ ಪ್ರದರ್ಶನ ಕಂಡಿತು. ಇದು ಸಿನಿಮಾ ಮಾಡಿದ ಸಾಧನೆ. 25 ವಾರ ಆ ಕಟೌಟ್ ಹಾಗೆಯೇ ಇತ್ತು. ವಿಷ್ಣು ಬರ್ತ್​ಡೇನ ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಯಿತು. ಆದರೆ, ಇದಕ್ಕೆ ಹಲವು ಅಡೆತಡೆಗಳು ಎದುರಾಗಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:46 am, Thu, 18 September 25

Follow Us
 ಶ್ರೀಲಕ್ಷ್ಮೀ ಎಚ್
ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
ಕಾಂಗ್ರೆಸ್ ಸೇವಾದಳದಿಂದ ಎಡವಟ್ಟು: ಉಲ್ಟಾ ಧ್ವಜ ನೀಡಿ ಅಧಿಕಾರ ಹಸ್ತಾಂತರ
ಕಾಂಗ್ರೆಸ್ ಸೇವಾದಳದಿಂದ ಎಡವಟ್ಟು: ಉಲ್ಟಾ ಧ್ವಜ ನೀಡಿ ಅಧಿಕಾರ ಹಸ್ತಾಂತರ
ಉಪ್ಪಿನ ಕೇಕ್ ತಿಂದ ಶಾಸ್ತ್ರಿ, ಅದ್ಭುತ ನಟನೆ ಎಂದ ಕಿಚ್ಚ: ವಿಡಿಯೋ ನೋಡಿ
ಉಪ್ಪಿನ ಕೇಕ್ ತಿಂದ ಶಾಸ್ತ್ರಿ, ಅದ್ಭುತ ನಟನೆ ಎಂದ ಕಿಚ್ಚ: ವಿಡಿಯೋ ನೋಡಿ
ಗಣಪತಿ ಮೂರ್ತಿ ಮೆರವಣಿಗೆಯಲ್ಲಿ ರಾರಾಜಿಸಿದ ಪೈಲಟ್ ಸ್ಮಿತ್ ಮಚ್ಚರ್ ಫೋಟೋ!
ಗಣಪತಿ ಮೂರ್ತಿ ಮೆರವಣಿಗೆಯಲ್ಲಿ ರಾರಾಜಿಸಿದ ಪೈಲಟ್ ಸ್ಮಿತ್ ಮಚ್ಚರ್ ಫೋಟೋ!
ಶೌಚಾಲಯಕ್ಕೂ ಜಾತಿ ಕೇಳಿದ ಅಧಿಕಾರಿಗಳು: ಪ್ರಜಾಸೇವಾಯಲ್ಲಿ ಕಣ್ಣೀರಿಟ್ಟ ಮಹಿಳೆ
ಶೌಚಾಲಯಕ್ಕೂ ಜಾತಿ ಕೇಳಿದ ಅಧಿಕಾರಿಗಳು: ಪ್ರಜಾಸೇವಾಯಲ್ಲಿ ಕಣ್ಣೀರಿಟ್ಟ ಮಹಿಳೆ
ನೆಲಮಂಗಲ ಭಾಗದಲ್ಲಿ ಮಿತಿಮೀರಿದ ಕಳ್ಳರ ಹಾವಳಿ: ದೇವರನ್ನೂ ಬಿಡದ ಖದೀಮರು
ನೆಲಮಂಗಲ ಭಾಗದಲ್ಲಿ ಮಿತಿಮೀರಿದ ಕಳ್ಳರ ಹಾವಳಿ: ದೇವರನ್ನೂ ಬಿಡದ ಖದೀಮರು
ಬಿ.ವೈ.ವಿಜಯೇಂದ್ರ ಸಮ್ಮುಖದಲ್ಲೇ ಕಿತ್ತಾಡಿಕೊಂಡ ಬಿಜೆಪಿ ಮುಖಂಡರು
ಬಿ.ವೈ.ವಿಜಯೇಂದ್ರ ಸಮ್ಮುಖದಲ್ಲೇ ಕಿತ್ತಾಡಿಕೊಂಡ ಬಿಜೆಪಿ ಮುಖಂಡರು
ಗದಗ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಆವಿಷ್ಕಾರ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ
ಗದಗ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಆವಿಷ್ಕಾರ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ
ದಸರಾ ಸಮಿತಿಯಿಂದ ಕೊಪ್ಪಳ ಶ್ರೀಗಳಿಗೆ ಅಧಿಕೃತ ಆಹ್ವಾನ
ದಸರಾ ಸಮಿತಿಯಿಂದ ಕೊಪ್ಪಳ ಶ್ರೀಗಳಿಗೆ ಅಧಿಕೃತ ಆಹ್ವಾನ
SIR ಗೊಂದಲ: ಜೀವಂತ ವ್ಯಕ್ತಿಗಳ ಮರಣ ಪತ್ರ ಪ್ರದರ್ಶಿಸಿದ ಯತ್ನಾಳ್
SIR ಗೊಂದಲ: ಜೀವಂತ ವ್ಯಕ್ತಿಗಳ ಮರಣ ಪತ್ರ ಪ್ರದರ್ಶಿಸಿದ ಯತ್ನಾಳ್
ಗೋಕಳ್ಳರು ಕರುವನ್ನು ಎಳೆದೊಯ್ಯುವಾಗ ಹಿಂದೆ ಓಡಿದ ತಾಯಿ!
ಗೋಕಳ್ಳರು ಕರುವನ್ನು ಎಳೆದೊಯ್ಯುವಾಗ ಹಿಂದೆ ಓಡಿದ ತಾಯಿ!