AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಯಸಿ ಬಂದ ಪ್ರೀತಿಯನ್ನು ಕಾಲಿನಿಂದ ಒದ್ದ ಭೂಮಿಕಾ; ಗೌತಮ್ ಮತ್ತೆ ಏಕಾಂಗಿ

ಅಮೃತಧಾರೆ ಧಾರಾವಾಹಿಯಲ್ಲಿ ಐದು ವರ್ಷಗಳ ನಂತರ ಭೂಮಿಕಾ ಮತ್ತು ಗೌತಮ್ ಮತ್ತೆ ಸೇರಿದ್ದಾರೆ. ಆದರೆ, ಶಕುಂತಲಾಳ ಹಸ್ತಕ್ಷೇಪದಿಂದಾಗಿ ಅವರ ಪ್ರೀತಿಯು ಮತ್ತೆ ಅಡ್ಡಿಯಾಗಿದೆ. ಭೂಮಿಕಾ ತನ್ನ ಹಿಂದಿನ ಜೀವನದ ಬಗ್ಗೆ ಗೌತಮ್‌ಗೆ ಹೇಳಲು ಹಿಂಜರಿಯುತ್ತಾಳೆ, ಮತ್ತು ಅವನ ಪ್ರೀತಿಯನ್ನು ತಿರಸ್ಕರಿಸುತ್ತಾಳೆ. ಗೌತಮ್ ತನ್ನ ಪ್ರೀತಿಯನ್ನು ಮರಳಿ ಪಡೆಯಲು ಪ್ರಯತ್ನಿಸುತ್ತಿದ್ದಾನೆ.

ಬಯಸಿ ಬಂದ ಪ್ರೀತಿಯನ್ನು ಕಾಲಿನಿಂದ ಒದ್ದ ಭೂಮಿಕಾ; ಗೌತಮ್ ಮತ್ತೆ ಏಕಾಂಗಿ
ಅಮೃತಧಾರೆ
 ಶ್ರೀಲಕ್ಷ್ಮೀ ಎಚ್
| Edited By: |

Updated on:Sep 19, 2025 | 7:59 AM

Share

‘ಅಮೃತಧಾರೆ’ ಧಾರಾವಾಹಿಯಲ್ಲಿ (Amruthadhaare Serial) ಭೂಮಿಕಾ ಹಾಗೂ ಗೌತಮ್ ಬೇರೆ ಆಗಿದ್ದಾರೆ. ಇವರ ಪ್ರೀತಿಗೆ ಗೌತಮ್ ಮಲತಾಯಿ ಶಕುಂತಲಾಳೇ ಅಡ್ಡಿ ಆಗಿದ್ದಳು. ಈಗ ಕಥೆ ಐದು ವರ್ಷಗಳ ಮುಂದೆ ಹೋಗಿದೆ. ಗೌತಮ್ ಹಾಗೂ ಭೂಮಿಕಾ ಮತ್ತೆ ಒಂದಾಗಿದ್ದರು. ಹಲವು ವರ್ಷಗಳ ಬಳಿಕ ಸಿಕ್ಕ ಪ್ರೀತಿಯನ್ನು ಭೂಮಿಕಾ ಕಾಲಿನಿಂದ ಒದ್ದಿದ್ದಾಳೆ. ಇದು ಗೌತಮ್​ಗೆ ಸಾಕಷ್ಟು ಬೇಸರ ಮೂಡಿಸಿದೆ. ಮುಂದೇನಾಗುತ್ತದೆ ಎಂಬ ಕುತೂಹಲ ಮೂಡಿದೆ.

ಗೌತಮ್​ ಈಗಾಗಲೇ ತನ್ನ ಆಸ್ತಿಯನ್ನು ತಮ್ಮನ ಹೆಸರಿಗೆ ಬರೆದಿಟ್ಟು ಬಂದಾಗಿದೆ. ಆ ಬಳಿಕ ಗೌತಮ್ ಕ್ಯಾಬ್ ಡ್ರೈವರ್ ಆಗಿದ್ದಾನೆ. ಪ್ರತಿ ಊರಿಗೆ ತೆರಳಿ ಭೂಮಿಕಾಳನ್ನು ಹುಡುಕುವ ಪ್ರಯತ್ನವನ್ನು ಗೌತಮ್ ಮಾಡುತ್ತಲೇ ಇದ್ದಾನೆ. ಆದರೆ, ಈವರೆರೆ ಭೂಮಿಕಾ ಸಿಕ್ಕಿರಲಿಲ್ಲ. ಈ ವಿಚಾರ ಗೌತಮ್​ಗೆ ಸಾಕಷ್ಟು ಬೇಸರ ಮೂಡಿಸಿತ್ತು. ಈಗ ಗೌತಮ್ ಕುಶಾಲನಗರಕ್ಕೆ ಬಂದಿದ್ದಾನೆ.

ಇದನ್ನೂ ಓದಿ
Image
ಸೌಂದರ್ಯಾ ಜೊತೆ ವಿಮಾನದಲ್ಲಿ ಕನ್ನಡದ ಈ ನಟಿಯೂ ಇರಬೇಕಿತ್ತು
Image
‘ಏನಾಗಿದೆ ಅದನ್ನು ಬದಲಿಸಲು ಸಾಧ್ಯವಿಲ್ಲ’; ದೀಪಿಕಾ ಬಗ್ಗೆ ನಾಗ್ ಬೇಸರ
Image
ವಿಷ್ಣು ನಟನೆಯ ‘ಬಂಧನ’ ಸಿನಿಮಾ ತಡೆಯಲು ನಡೆದ ಪ್ರಯತ್ನಗಳು ಒಂದೆರಡಲ್ಲ
Image
ವಿಷ್ಣುವರ್ಧನ್-ರಜನಿಕಾಂತ್  ಒಟ್ಟಾಗಿ ನಟಿಸಿದ್ದ ಸಿನಿಮಾದ ದೃಶ್ಯ ನೆನಪಿದೆಯೇ?

ಕುಶಾಲನಗರದಲ್ಲಿ ಗಲ್ಲಿ ಗಲ್ಲಿಯನ್ನು ಹುಡುಕುತ್ತಾ ಹೋಗುತ್ತಿರುವಾಗ ಭೂಮಿಕಾ ಸಿಕ್ಕಿದ್ದಾಳೆ. ಆಕೆ ಕುಶಾಲನಗರದಲ್ಲಿ ಶಿಕ್ಷಕಿಯಾಗಿದ್ದಾಳೆ. ಶಿಕ್ಷಕಿಯಾಗಿ ಅಲ್ಲಿ ಸೇವೆ ಸಲ್ಲಿಸುವ ಕೆಲಸ ಮಾಡುತ್ತಿದ್ದಾಳೆ. ಹೀಗಿರುವಾಗಲೇ ಗೌತಮ್ ಎದುರು ಭೂಮಿಕಾ ಬಂದರು.

ಅಮೃತಧಾರೆ ಪ್ರೋಮೋ

View this post on Instagram

A post shared by Zee Kannada (@zeekannada)

ಭೂಮಿಕಾ ಎದುರು ಬರುತ್ತಿದ್ದಂತೆ ಗೌತಮ್ ತನ್ನ ಪ್ರೀತಿಯನ್ನು ಹೇಳಿಕೊಂಡಿದ್ದಾನೆ. ‘ನಾವಿಬ್ಬರೂ ಒಟ್ಟಾಗಿ ಬದುಕುವ ಅವಕಾಶ ಇತ್ತಲ್ಲ’ ಎಂದು ಕೇಳಿದ್ದಾನೆ. ಆದರೆ, ಭೂಮಿಕಾಗೆ ಶಕುಂತಲಾ ಹೇಳಿದ ಮಾತು ನೆನಪಾಗಿದೆ. ‘ಇಡೀ ಕುಟುಂಬ ನಾಶ ಮಾಡ್ತೀನಿ’ ಎಂದು ಶಕುಂತಲ ಈ ಮೊದಲು ಎಚ್ಚಿರಿಸಿದ್ದಳು.

ಇದನ್ನೂ ಓದಿ: ‘ಒಂದಾಗಿ ಜೀವನ ಮಾಡೋಕೆ ಸಾವಿರ ಕಾರಣಗಳಿದ್ದವಲ್ಲ’: ಭೂಮಿಕಾಗೆ ಪ್ರಶ್ನೆ ಮಾಡಿದ ಗೌತಮ್

ಹೀಗಾಗಿ ಭೂಮಿಕಾ ನೇರವಾಗಿ ಈ ಪ್ರೀತಿಯನ್ನು ಒದ್ದಿದ್ದಾಳೆ. ‘ನಾನು ನಿಮ್ಮಿಂದ ತುಂಬಾನೇ ದೂರ ಬಂದಿದ್ದೇನೆ. ದಯವಿಟ್ಟು ಮತ್ತೆ ಸೇರುವ ಪ್ರಯತ್ನ ಮಾಡಬೇಡಿ. ನೀವು ನನಗೆ ಮತ್ತೊಂದು ಮಗು ಇದೆ ಎಂಬ ವಿಚಾರವನ್ನು ಮುಚ್ಚಿಟ್ಟಿರಿ. ಇದು ಸರಿ ಅಲ್ಲ’ ಎಂದು ಭೂಮಿಕಾ ಹೇಳಿದ್ದಾಳೆ. ಇದನ್ನು ಹೇಳುವಾಗ ಭೂಮಿಕಾ ಅಳುತ್ತಲೇ ಇದ್ದಳು. ಪ್ರೀತಿಯನ್ನು ಒದ್ದು ಭೂಮಿಕಾ ನೇರವಾಗಿ ಮರಳಿ ಬಂದಳು. ಮುಂದೆ ಏನಾಗುತ್ತದೆ ಎಂಬ ಕುತೂಹಲ ಮೂಡಿದೆ. ಇಬ್ಬರೂ ಮತ್ತೆ ಒಂದಾಗಲಿ ಎಂಬುದು ಅಭಿಮಾನಿಗಳ ಕೋರಿಕೆಯೂ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:58 am, Fri, 19 September 25