AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಏನಾಗಿದೆ ಅದನ್ನು ಬದಲಿಸಲು ಸಾಧ್ಯವಿಲ್ಲ’; ದೀಪಿಕಾ ಬಗ್ಗೆ ನಾಗ್ ಅಶ್ವಿನ್ ಬೇಸರ?

‘ಕಲ್ಕಿ 2898 ಎಡಿ’ ಚಿತ್ರದ ಸೀಕ್ವೆಲ್‌ನಲ್ಲಿ ದೀಪಿಕಾ ಪಡುಕೋಣೆ ಇಲ್ಲದಿರುವುದು ಚರ್ಚೆಗೆ ಕಾರಣವಾಗಿದೆ. ನಾಗ್ ಅಶ್ವಿನ್ ಅವರ ಅನುಮಾನಾಸ್ಪದ ಪೋಸ್ಟ್ ಕೂಡಾ ಗಮನ ಸೆಳೆದಿದೆ. ಹಣ ಮತ್ತು ಕೆಲಸದ ಸಮಯದ ವಿಚಾರಗಳಿಂದಾಗಿ ದೀಪಿಕಾ ಸಿನಿಮಾವನ್ನು ತೊರೆದಿದ್ದಾರೆ ಎನ್ನಲಾಗಿದೆ. ಈಗ ಸೀಕ್ವೆಲ್‌ನ ಭವಿಷ್ಯ ಅನಿಶ್ಚಿತವಾಗಿದೆ.

‘ಏನಾಗಿದೆ ಅದನ್ನು ಬದಲಿಸಲು ಸಾಧ್ಯವಿಲ್ಲ’; ದೀಪಿಕಾ ಬಗ್ಗೆ ನಾಗ್ ಅಶ್ವಿನ್ ಬೇಸರ?
ನಾಗ್-ದೀಪಿಕಾ
ರಾಜೇಶ್ ದುಗ್ಗುಮನೆ
|

Updated on: Sep 19, 2025 | 7:06 AM

Share

ಪ್ರಭಾಸ್, ಅಮಿತಾಭ್ ಬಚ್ಚನ್ ಮೊದಲಾದವರು ನಟಿಸಿರೋ ‘ಕಲ್ಕಿ 2898 ಎಡಿ’ (Kalki 2898 ಎಡಿ) ಚಿತ್ರ 2023ರಲ್ಲಿ ರಿಲೀಸ್ ಆಗಿ ಮೆಚ್ಚುಗೆ ಪಡೆಯಿತು. ಈ ಸಿನಿಮಾಗೆ ಸೀಕ್ವೆಲ್ ಬರಬೇಕಿತ್ತು. ಆದರೆ, ಈಗ ಅದರ ಸ್ಥಿತಿ ಡೋಲಾಯಮಾನವಾಗಿದೆ. ಈ ಸಿನಿಮಾ ಸೆಟ್ಟೇರುತ್ತದೆಯೋ ಅಥವಾ ಇಲ್ಲವೋ ಎಂಬುದೇ ಅನುಮಾನ ಆಗಿದೆ. ಇದಕ್ಕೆ ಕಾರಣ ದೀಪಿಕಾ ಪಡುಕೋಣೆ. ಅವರು ‘ಕಲ್ಕಿ 2898 ಎಡಿ’ ಸೀಕ್ವೆಲ್​ನಿಂದ ಹೊರ ಬಂದಿದ್ದಾರಂತೆ. ಈ ಕಾರಣದಿಂದ ಸೀಕ್ವೆಲ್ ಸೆಟ್ಟೇರುವುದು ಅನುಮಾನ ಎನ್ನಲಾಗುತ್ತಿದೆ. ಹೀಗಿರುವಾಗಲೇ ನಾಗ್ ಅಶ್ವಿನ್ ಅವರು ಮಾಡಿರೋ ಪೋಸ್ಟ್ ಗಮನ ಸೆಳೆದಿದೆ.

‘ಕಲ್ಕಿ 2898 ಎಡಿ’ ಸಿನಿಮಾ ನಿರ್ಮಾಣ ಮಾಡಿದ ವೈಜಯಂತಿ ಮೂವಿಸ್ ಈ ಬಗ್ಗೆ ಟ್ವೀಟ್ ಮಾಡಿದೆ. ದೀಪಿಕಾ ಪಡುಕೋಣೆ ಅವರು ಸಿನಿಮಾದ ಭಾಗ ಆಗೋದಿಲ್ಲ ಎಂದು ಇಲ್ಲಿ ಮಾಹಿತಿ ನೀಡಲಾಗಿದೆ. ಇತ್ತೀಚೆಗೆ ಪ್ರಭಾಸ್ ಬಗ್ಗೆ ದೀಪಿಕಾ ನೆಗೆಟಿವ್ ಹೇಳಿಕೆ ನೀಡಿದ್ದರು. ಇದರ ಜೊತೆಗೆ ದೀಪಿಕಾ ಅವರು 8 ಗಂಟೆ ಮಾತ್ರ ಕೆಲಸ ಮಾಡೋದಾಗಿ ಹೇಳಿದ್ದರು. ಈ ಎಲ್ಲಾ ಕಾರಣದಿಂದ ಸಿನಿಮಾದಿಂದ ಅವರನ್ನು ಹೊರಕ್ಕೆ ಇಡಲಾಗಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ
Image
ವಿಷ್ಣು ನಟನೆಯ ‘ಬಂಧನ’ ಸಿನಿಮಾ ತಡೆಯಲು ನಡೆದ ಪ್ರಯತ್ನಗಳು ಒಂದೆರಡಲ್ಲ
Image
ಇನ್ನೂ ಕಡಿಮೆ ಆಗಿಲ್ಲ ಮಾಲಾಶ್ರೀ ಖದರ್; ಈ ವಿಡಿಯೋನೇ ಸಾಕ್ಷಿ
Image
ವಿಷ್ಣು, ಉಪ್ಪಿ, ಶ್ರುತಿ ಜನ್ಮದಿನ; ಚಿತ್ರರಂಗಕ್ಕೆ ನೀಡಿದ ಕೊಡುಗೆ ಅಪಾರ
Image
ವಿಷ್ಣುವರ್ಧನ್-ರಜನಿಕಾಂತ್  ಒಟ್ಟಾಗಿ ನಟಿಸಿದ್ದ ಸಿನಿಮಾದ ದೃಶ್ಯ ನೆನಪಿದೆಯೇ?

ಈ ಬೆನ್ನಲ್ಲೇ ನಾಗ್ ಅಶ್ವಿನ್ ಅವರು ಪೋಸ್ಟ್ ಒಂದನ್ನು ಮಾಡಿದ್ದಾರೆ. ‘ಏನಾಗಿದೆ ಎಂಬುದನ್ನು ಬದಲಿಸಲು ಸಾಧ್ಯವಿಲ್ಲ. ಆದರೆ, ಮುಂದೆ ಏನಾಗುತ್ತದೆ ಎಂಬುದನ್ನು ಆಯ್ಕೆ ಮಾಡಬಹುದು’ ಎಂದು ನಾಗ್ ಅಶ್ವಿನ್ ಹೇಳಿದ್ದಾರೆ. ಅವರ ಪೋಸ್ಟ್ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ದೀಪಿಕಾ ಬಗ್ಗೆ ಬೇಸರ ಹೊರಹಾಕಿ ಈ ಪೋಸ್ಟ್ ಮಾಡಿದ್ದಾರೆ ಎಂಬ ಮಾತು ಕೇಳಿ ಬಂದಿದೆ.

ಇದನ್ನೂ ಓದಿ: ‘ಕಲ್ಕಿ 2898 ಎಡಿ’ ಸಿನಿಮಾದಿಂದ ದೀಪಿಕಾ ಪಡುಕೋಣೆ ಹೊರಕ್ಕೆ: ಕಾರಣವೇನು?

ಮೊದಲ ಭಾಗಕ್ಕೆ ಪಡೆದ ಹಣಕ್ಕಿಂತ ಶೇ.25ರಷ್ಟು ಹೆಚ್ಚಿನ ಹಣವನ್ನು ದೀಪಿಕಾ ಕೇಳಿದ್ದಾರಂತೆ. ಇಷ್ಟೇ ಅಲ್ಲ, ದಿನಕ್ಕೆ 7-8 ಗಂಟೆ ಮಾತ್ರ ಶೂಟಿಂಗ್​ನಲ್ಲಿ ಭಾಗಿ ಆಗೋದಾಗಿ ಹೇಳಿದ್ದಾರಂತೆ. ‘ಕಲ್ಕಿ’ ಅಂತಹ ಸಿನಿಮಾಗಳಿಗೆ ಇಷ್ಟು ಸಣ್ಣ ಮಟ್ಟದ ಸಮಯ ಏನಕ್ಕೂ ಸಾಲುವುದಿಲ್ಲ. ಹೀಗಾಗಿ, ಸಿನಿಮಾದಿಂದ ಅವರನ್ನು ಹೊರಕ್ಕೆ ಇಡಲಾಗಿದೆ ಎಂದು ಹೇಳಲಾಗುತ್ತಿದೆ. ಈಗ ದೀಪಿಕಾ ಬದಲಿಗೆ ಯಾರನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಪ್ರಧಾನಿ ಮೋದಿ ಹೇಳಿಕೆಗೆ ಖಾಸಗಿ ಶಾಲಾ ಒಕ್ಕೂಟದಿಂದ ಆಕ್ಷೇಪ
ಪ್ರಧಾನಿ ಮೋದಿ ಹೇಳಿಕೆಗೆ ಖಾಸಗಿ ಶಾಲಾ ಒಕ್ಕೂಟದಿಂದ ಆಕ್ಷೇಪ
ನೀಟ್: ರಾಜ್ಯದಲ್ಲಿ ಅಕ್ರಮವಾಗಿದೆಯಾ? ಬಂಗಾರಪ್ಪ ಏನಂದ್ರು ನೋಡಿ
ನೀಟ್: ರಾಜ್ಯದಲ್ಲಿ ಅಕ್ರಮವಾಗಿದೆಯಾ? ಬಂಗಾರಪ್ಪ ಏನಂದ್ರು ನೋಡಿ
ಪ್ರಧಾನಿ ಮೋದಿ ಹೇಳಿದ್ದಕ್ಕೆ BMTC ಬಸ್​ನಲ್ಲಿ ಬಂದೆ ಎಂದ ಪ್ರಯಾಣಿಕ!
ಪ್ರಧಾನಿ ಮೋದಿ ಹೇಳಿದ್ದಕ್ಕೆ BMTC ಬಸ್​ನಲ್ಲಿ ಬಂದೆ ಎಂದ ಪ್ರಯಾಣಿಕ!
ವಿಶ್ವಾಸ ಮತ ಯಾಚನೆಯಲ್ಲಿ ಭಾಗಿಯಾಗದಂತೆ TVK ಶಾಸಕನಿಗೆ ಕೋರ್ಟ್​ ನಿರ್ಬಂಧ
ವಿಶ್ವಾಸ ಮತ ಯಾಚನೆಯಲ್ಲಿ ಭಾಗಿಯಾಗದಂತೆ TVK ಶಾಸಕನಿಗೆ ಕೋರ್ಟ್​ ನಿರ್ಬಂಧ
ವಿಧಾನಸಭೇಲಿ ಸಿಎಂ ವಿಜಯ್ ಕಾಲೆಳೆದ ಉದಯನಿಧಿ ಬಿಚ್ಚಿಟ್ಟರು ಹಳೇ ಕಾಲದ ರಹಸ್ಯ!
ವಿಧಾನಸಭೇಲಿ ಸಿಎಂ ವಿಜಯ್ ಕಾಲೆಳೆದ ಉದಯನಿಧಿ ಬಿಚ್ಚಿಟ್ಟರು ಹಳೇ ಕಾಲದ ರಹಸ್ಯ!
ನಿದ್ದೆಯ ಮಂಪರಿನಲ್ಲಿ ಡಿವೈಡರ್​​ಗೆ ಗುದ್ದಿದ ಟ್ರಕ್​ ಡ್ರೈವರ್
ನಿದ್ದೆಯ ಮಂಪರಿನಲ್ಲಿ ಡಿವೈಡರ್​​ಗೆ ಗುದ್ದಿದ ಟ್ರಕ್​ ಡ್ರೈವರ್
ತಮಿಳುನಾಡು ರಾಜಕಾರಣದಲ್ಲಿ ಸ್ಫೋಟಕ ಬೆಳವಣಿಗೆ: ಎಐಎಡಿಎಂಕೆಯಲ್ಲಿ ಭಾರಿ ಬಂಡಾಯ
ತಮಿಳುನಾಡು ರಾಜಕಾರಣದಲ್ಲಿ ಸ್ಫೋಟಕ ಬೆಳವಣಿಗೆ: ಎಐಎಡಿಎಂಕೆಯಲ್ಲಿ ಭಾರಿ ಬಂಡಾಯ
Live: ಅಸ್ಸಾಂ ಸಿಎಂ ಆಗಿ ಹಿಮಂತ್ ಬಿಸ್ವಾ ಶರ್ಮಾ ಪದಗ್ರಹಣದ ನೇರಪ್ರಸಾರ
Live: ಅಸ್ಸಾಂ ಸಿಎಂ ಆಗಿ ಹಿಮಂತ್ ಬಿಸ್ವಾ ಶರ್ಮಾ ಪದಗ್ರಹಣದ ನೇರಪ್ರಸಾರ
ಶೃಂಗೇರಿ ವೋಟ್ ಟ್ಯಾಂಪರಿಂಗ್ ಆರೋಪ: FSL​ನಲ್ಲಿ ಎಲ್ಲ ಗೊತ್ತಾಗಲಿದೆ: ಪರಮೇಶ್
ಶೃಂಗೇರಿ ವೋಟ್ ಟ್ಯಾಂಪರಿಂಗ್ ಆರೋಪ: FSL​ನಲ್ಲಿ ಎಲ್ಲ ಗೊತ್ತಾಗಲಿದೆ: ಪರಮೇಶ್
ಸುಪ್ರೀಂ ಕೋರ್ಟ್ ಆದೇಶವನ್ನು ಒಪ್ಪಿಕೊಳ್ಳುತ್ತೇನೆ ಎಂದ ಜೀವರಾಜ್
ಸುಪ್ರೀಂ ಕೋರ್ಟ್ ಆದೇಶವನ್ನು ಒಪ್ಪಿಕೊಳ್ಳುತ್ತೇನೆ ಎಂದ ಜೀವರಾಜ್