ದಕ್ಷಿಣದ ಈ ನಟನ ಅಭಿಮಾನಿಯಂತೆ ಅಮಿತಾಭ್ ಬಚ್ಚನ್
ಅಮಿತಾಭ್ ಬಚ್ಚನ್ ಅವರ ನಟನೆಯನ್ನು ನಟನಾ ಶಾಲೆಗಳಲ್ಲಿ ಪಠ್ಯವಾಗಿ ಹೇಳಿಕೊಡಲಾಗುತ್ತದೆ. ಭಾರತದ ಅತ್ಯುತ್ತಮ ನಟರಲ್ಲಿ ಬಚ್ಚನ್ ಸಹ ಒಬ್ಬರು. ಮಹಾನ್ ನಟ ಎನಿಸಿಕೊಂಡಿರುವ ಅಮಿತಾಬ್ ಬಚ್ಚನ್ ಅವರೇ, ತಮಗೆ ದಕ್ಷಿಣದ ನಟರೊಬ್ಬರ ನಟನೆ ಅಚ್ಚುಮೆಚ್ಚು, ತಾವು ಅವರ ಅಭಿಮಾನಿ ಎಂದು ಹೇಳಿಕೊಂಡಿದ್ದಾರೆ. ಅದೂ ಬಚ್ಚನ್ ಹೊಗಳಿರುವುದು ತಮ್ಮ ಸಮಕಾಲೀನ ನಟರನ್ನಲ್ಲ ಬದಲಿಗೆ ತಮಗಿಂತಲೂ ಕಿರಿಯ ನಟರೊಬ್ಬರನ್ನು. ಅದುವೇ ಧನುಶ್.

ಅಮಿತಾಭ್ ಬಚ್ಚನ್, ಭಾರತೀಯ ಚಿತ್ರರಂಗದ ಅಗ್ರಗಣ್ಯ ನಟ ಎನಿಸಿಕೊಂಡಿದ್ದಾರೆ. ಅವರ ನಟನೆಯನ್ನು ಮೆಚ್ಚದ ಸಿನಿಮಾ ಪ್ರೇಮಿಗಳಿಲ್ಲ. ಅಮಿತಾಭ್ ಬಚ್ಚನ್ ಅವರ ನಟನೆಯನ್ನು ನಟನಾ ಶಾಲೆಗಳಲ್ಲಿ ಪಠ್ಯವಾಗಿ ಹೇಳಿಕೊಡಲಾಗುತ್ತದೆ. ಭಾರತದ ಅತ್ಯುತ್ತಮ ನಟರಲ್ಲಿ ಬಚ್ಚನ್ ಸಹ ಒಬ್ಬರು. ಮಹಾನ್ ನಟ ಎನಿಸಿಕೊಂಡಿರುವ ಅಮಿತಾಬ್ ಬಚ್ಚನ್ ಅವರೇ, ತಮಗೆ ದಕ್ಷಿಣದ ನಟರೊಬ್ಬರ ನಟನೆ ಅಚ್ಚುಮೆಚ್ಚು, ತಾವು ಅವರ ಅಭಿಮಾನಿ ಎಂದು ಹೇಳಿಕೊಂಡಿದ್ದಾರೆ. ಅದೂ ಬಚ್ಚನ್ ಹೊಗಳಿರುವುದು ತಮ್ಮ ಸಮಕಾಲೀನ ನಟರನ್ನಲ್ಲ ಬದಲಿಗೆ ತಮಗಿಂತಲೂ ಕಿರಿಯ ನಟರೊಬ್ಬರನ್ನು. ಅದುವೇ ಧನುಶ್.
ಅಮಿತಾಭ್ ಬಚ್ಚನ್ ಅವರು ತಮಗೆ ತಮಿಳಿನ ಸ್ಟಾರ್ ನಟ ಧನುಶ್ ಎಂದರೆ ಬಹಳ ಇಷ್ಟ, ಅವರ ನಟನೆಯ ಅಭಿಮಾನಿ ನಾನು ಎಂದು ಹೇಳಿಕೊಂಡಿದ್ದಾರೆ. ‘ಕೌನ್ ಬನೇಗಾ ಕರೋಡ್‌ಪತಿ 18’ ಕಾರ್ಯಕ್ರಮದಲ್ಲಿ ಸ್ಪರ್ಧಿಯೊಬ್ಬರ ಜೊತೆ ಮಾತನಾಡುವಾಗ ಬಿಗ್ ಬಿ, ತಾವು ಧನುಷ್ ಅವರ ಅಭಿಮಾನಿ ಎಂಬುದನ್ನು ಹೇಳಿಕೊಂಡಿದ್ದಾರೆ ಮತ್ತು ಅವರು ಎಷ್ಟು ಅಸಾಧಾರಣ ನಟ ಎಂಬುದನ್ನು ಹಂಚಿಕೊಂಡಿದ್ದಾರೆ.
ತಾವು ಧನುಷ್ ಅವರ ದೊಡ್ಡ ಅಭಿಮಾನಿ ಎಂದು ಸ್ಪರ್ಧಿ ಹೇಳಿದಾಗ, ಅಮಿತಾಭ್ ಬಚ್ಚನ್, “ನೀವು ಧನುಷ್ ಅವರ ದೊಡ್ಡ ಅಭಿಮಾನಿ ಎಂದು ಹೇಳಿದಿರಿ, ನಿಮಗೂ ನನಗೂ ಒಂದು ವಿಷಯದಲ್ಲಿ ಸಾಮ್ಯತೆ ಇದೆ. ನಾನೂ ಕೂಡ ಅವರ ದೊಡ್ಡ ಅಭಿಮಾನಿ. ನಿಜ ಹೇಳಬೇಕೆಂದರೆ, ಅವರು ಒಬ್ಬ ಅಸಾಧಾರಣ ಕಲಾವಿದ. ಯಾವುದೇ ಪಾತ್ರ ಕೊಟ್ಟರೂ ಅದರಲ್ಲಿ ಸಂಪೂರ್ಣವಾಗಿ ತಲ್ಲೀನರಾಗುತ್ತಾರೆ” ಎಂದರು. ಮುಂದುವರಿದು ಮಾತನಾಡಿ, ‘ಅವರು ತುಂಬಾ ಒಳ್ಳೆಯ ಡ್ಯಾನ್ಸರ್ ಕೂಡ ಹೌದು. ‘ಶಮಿತಾಭ್’ ಸಿನಿಮಾದಲ್ಲಿ ಅವರ ಜೊತೆ ಕೆಲಸ ಮಾಡುವ ಅವಕಾಶ ನನಗೆ ಸಿಕ್ಕಿತ್ತು, ಅದು ನನಗೆ ದೊಡ್ಡ ಸೌಭಾಗ್ಯ. ಅವರ ಬಗ್ಗೆ ನಾನು ಸಾಕಷ್ಟು ಕೇಳಿದ್ದೆ ಮತ್ತು ಅವರ ಬಗ್ಗೆ ನನಗೆ ಸ್ವಲ್ಪ ಮಟ್ಟಿಗೆ ತಿಳಿದಿತ್ತು, ಆದರೆ ನಾನು ಅವರನ್ನು ಭೇಟಿಯಾದಾಗ, ಜೊತೆಗೆ ಕೆಲಸ ಮಾಡಿದಾಗ ಮತ್ತು ಅವರ ಅಭಿನಯವನ್ನು ನೋಡಿದಾಗ ಅರ್ಥವಾಯಿತು. ನಿಜಕ್ಕೂ ಅವರು ಒಬ್ಬ ಅಸಾಧಾರಣ ಕಲಾವಿದ’ ಎಂದು ಹೇಳಿದರು.
ಇದನ್ನೂ ಓದಿ:ಶೈನ್ ಶೆಟ್ಟಿ ಅಭಿನಯದ ‘ಶಂಕರಾಭರಣ’ ಸಿನಿಮಾ ನೋಡಿ ಮೆಚ್ಚಿದ ಪ್ರೇಕ್ಷಕರು
ಧನುಷ್ ಮತ್ತು ಅಮಿತಾಭ್ ಬಚ್ಚನ್ ಅವರು 2015ರ ‘ಶಮಿತಾಭ್’ ಸಿನಿಮಾನಲ್ಲಿ ಒಟ್ಟಿಗೆ ನಟಿಸಿದ್ದರು. ‘ಶಮಿತಾಬ್’ ಬಹಳ ಭಿನ್ನವಾದ ಕತೆ ಹೊಂದಿತ್ತು, ಸಿನಿಮಾನಲ್ಲಿ ಧನುಶ್ ಅವರಿಗೆ ಮಾತು ಬಾರದು, ಆದರೆ ಸ್ಟಾರ್ ನಟ ಆಗಬೇಕೆಂಬ ಆಸೆ, ಅಮಿತಾಬ್ ಬಚ್ಚನ್ ಅವರಿಗೆ ಅದ್ಭುತ ಧ್ವನಿ ಇರುತ್ತದೆ. ಇಬ್ಬರೂ ಒಂದುಗೂಡಿ ಕೆಲಸ ಮಾಡುತ್ತಾರೆ. ಅಮಿತಾಬ್ ಧ್ವನಿ ಮತ್ತು ಧನುಶ್ ನಟನೆ ಒಟ್ಟುಗೂಡಿ ಪ್ರೇಕ್ಷಕರನ್ನು ಮೋಡಿ ಮಾಡುತ್ತದೆ. ಬಳಿಕ ಇಬ್ಬರೂ ಜಗಳವಾಡಿ ದೂರಾಗುತ್ತಾರೆ, ಬಳಿಕ ಒಂದಾಗುತ್ತಾರೆ ಹೀಗೆ ಕತೆ ಬಹಳ ಏರಿಳಿತಗಳನ್ನು ಒಳಗೊಂಡಿತ್ತು. ಇದೇ ಸಿನಿಮಾನಲ್ಲಿ ಕಮಲ್ ಹಾಸನ್ ಅವರ ಕಿರಿಯ ಪುತ್ರಿ ಅಕ್ಷರಾ ಹಾಸನ್ ಸಹ ನಟಿಸಿದ್ದರು.
ಧನುಷ್ ಪ್ರಸ್ತುತ ‘ಓಂ’ ಸಿನಿಮಾನಲ್ಲಿ ನಟನೆ ಮಾಡಿದ್ದು, ಆ ಸಿನಿಮಾ ನಾಳೆ (ನವೆಂಬರ್ 20) ರಿಲೀಸ್ ಆಗಲಿದೆ. ಸಿನಿಮಾನಲ್ಲಿ ಧನುಶ್ ಜೊತೆಗೆ ಸಾಯಿ ಪಲ್ಲವಿ, ಮಮ್ಮುಟಿ, ಶ್ರೀಲೀಲಾ ನಟನೆ ಮಾಡಿದ್ದಾರೆ. ಸಿನಿಮಾ ಅನ್ನು ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ರಾಜ್‌ಕುಮಾರ್ ಪೆರಿಯಸಾಮಿ ನಿರ್ದೇಶಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




