Bigg Boss Kannada 12 Highlights: ಬಿಗ್ಬಾಸ್ ಕನ್ನಡ 12 ಗ್ರ್ಯಾಂಡ್ ಓಪನಿಂಗ್ ಲೈವ್
Bigg Boss Kannada Season 12 Highlights: ಕನ್ನಡ ಬಿಗ್ಬಾಸ್ ಸೀಸನ್ 12 ಪ್ರಾರಂಭವಾಗಿದೆ. ಅದ್ಧೂರಿಯಾಗಿ ಕಾರ್ಯಕ್ರಮಕ್ಕೆ ಚಾಲನೆ ದೊರೆತಿದೆ. ಸುದೀಪ್ ಅವರು ಕಾರ್ಯಕ್ರಮ ನಿರೂಪಣೆ ಮಾಡುತ್ತಿದ್ದು, ಒಬ್ಬೊಬ್ಬರಾಗಿ ಸ್ಪರ್ಧಿಗಳು ವೇದಿಕೆ ಮೇಲೆ ಬಂದು, ಬಿಗ್ಬಾಸ್ ಮನೆ ಸೇರಿಕೊಳ್ಳುತ್ತಿದ್ದಾರೆ. ಈ ಬಾರಿ ಬಿಗ್ಬಾಸ್ ಮನೆಗೆ ಹೋಗುತ್ತಿರುವವರು ಯಾರು? ಬಿಗ್ಬಾಸ್ ಮನೆಯಲ್ಲಿ ಏನಾಗುತ್ತಿದೆ. ಎಲ್ಲವನ್ನೂ ಲೈವ್ ಆಗಿ ಇಲ್ಲಿ ತಿಳಿಯಿರಿ.

Bigg Boss Kannada Season 12 Highlights: ಬಿಗ್ಬಾಸ್ ಕನ್ನಡ ಸೀಸನ್ 12 ಪ್ರಾರಂಭ ಆಗುತ್ತಿದೆ. ಪ್ರತಿ ಬಾರಿಯಂತೆ ಕಿಚ್ಚ ಸುದೀಪ್ ಅವರು ಈ ಬಾರಿಯೂ ಕಾರ್ಯಕ್ರಮದ ನಿರೂಪಣೆ ಮಾಡಲಿದ್ದಾರೆ. ಬಿಗ್ಬಾಸ್ ಮನೆಯನ್ನು ಪ್ರತಿ ಬಾರಿಯಂತೆ ಅದ್ಧೂರಿಯಾಗಿ ನಿರ್ಮಿಸಲಾಗಿದೆ. ಈ ಬಾರಿ ಬಿಗ್ಬಾಸ್ ಮನೆಯನ್ನು ಕರ್ನಾಟಕದ ಇತಿಹಾಸ, ಸಂಸ್ಕೃತಿಯನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸ ಮಾಡಿರುವುದು ವಿಶೇಷ. ಈ ಬಾರಿ ಬಿಗ್ಬಾಸ್ ಮನೆಗೆ ಯಾರ್ಯಾರು ಹೋಗಲಿದ್ದಾರೆ ಎಂಬುದಕ್ಕೆ ಕೆಲವೇ ಗಂಟೆಗಳಲ್ಲಿ ಉತ್ತರ ಸಿಗಲಿದೆ. ಸುದೀಪ್ ಅವರು ಬಿಗ್ಬಾಸ್ 12 ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, ಬಿಗ್ಬಾಸ್ ವೇದಿಕೆ ಮೇಲೆ ನಡೆದಿದ್ದೆಲ್ಲವೂ ಲೈವ್ ಆಗಿ ಇಲ್ಲಿ ಓದಬಹುದಾಗಿದೆ, ನೋಡಬಹುದಾಗಿದೆ.
LIVE NEWS & UPDATES
-
ಬಿಗ್ಬಾಸ್ಗೆ ಬಂದ ಆರ್ಜೆ ಅಮಿತ್
ಬಿಗ್ಬಾಸ್ ಕನ್ನಡ ಸೀಸನ್ 12ಕ್ಕೆ ಬಂದಿದ್ದಾರೆ ಖ್ಯಾತ ಆರ್ಜೆ ಅಮಿತ್. ರೇಡಿಯೋ ಮಿರ್ಚಿ ನಲ್ಲಿ ಇವರು ಆರ್ಜೆ ಆಗಿ ಕೆಲಸ ಮಾಡುತ್ತಿದ್ದಾರೆ.
View this post on Instagram -
ಕನ್ನಡ ಹೋರಾಟಗಾರ್ತಿ ಬಿಗ್ಬಾಸ್ ಮನೆಗೆ
ಖ್ಯಾತ ನಟಿ ಹಾಗೂ ಕನ್ನಡ ಪರ ಹೋರಾಟಗಾರ್ತಿಯೂ ಆಗಿರುವ ಅಶ್ವಿನಿ ಗೌಡ ಅವರು ಇದೀಗ ಬಿಗ್ಬಾಸ್ ಮನೆಗೆ ಹೋಗಿದ್ದಾರೆ. 100 ಕ್ಕೂ ಹೆಚ್ಚು ಸಿನಿಮಾ, 25ಕ್ಕೂ ಧಾರಾವಾಹಿಗಳಲ್ಲಿ ಅಶ್ವಿನಿ ನಟಿಸಿದ್ದಾರೆ.
-
-
ಬಿಗ್ಬಾಸ್ ಮನೆಗೆ ಬಂದ ‘ಸಾಹಿತಿ’
ಬಿಗ್ಬಾಸ್ ಮನೆಗೆ ಧಾರಾವಾಹಿ ನಟಿ ಸ್ಪಂದನ ಎಂಟ್ರಿ ಕೊಟ್ಟಿದ್ದಾರೆ. ಮೈಸೂರಿನ ಈ ಚೆಲುವೆ ಬಿಗ್ಬಾಸ್ಗೆ ಬಂದಿದ್ದಾರೆ.
-
ಬಿಗ್ಬಾಸ್ ಮನೆಗೆ ‘ಡ್ರೈವರ್’
‘ನಾ ಡ್ರೈವರ, ನನ ಲವ್ವರ’ ಹಾಡಿನ ಗಾಯಕ ಮಾಳು ನಿಪನಾಳ ಅವರು ಬಿಗ್ಬಾಸ್ ಮನೆ ಪ್ರವೇಶಿಸಿದ್ದಾರೆ. ಅವರು ಸುದೀಪ್ ಅವರ ದೊಡ್ಡ ಅಭಿಮಾನಿ.
-
ಬಿಗ್ಬಾಸ್ ಮನೆಗೆ ಬಂದ ಬಾಡಿ ಬಿಲ್ಡರ್
ಬಿಗ್ಬಾಸ್ ಕನ್ನಡ ಸೀಸನ್ 12ರ ಮನೆಗೆ ಬಾಡಿ ಬಿಲ್ಡರ್ ಕರಿಬಸಪ್ಪ ಮನೆಗೆ ಬಂದಿದ್ದಾರೆ. ದಾವಣಗೆರೆಯ ಕರಿಬಸಪ್ಪ, ಅಂತರಾಷ್ಟ್ರೀಯ ದೇಹದಾರ್ಡ್ಯ ಪಟು ಆಗಿ ಗುರುತಿಸಿಕೊಂಡಿದ್ದಾರೆ.
-
-
ಮಾತುಗಾತಿ ರಕ್ಷಿತಾ ಶೆಟ್ಟಿ
ಯೂಟ್ಯೂಬರ್ ರಕ್ಷಿತಾ ಶೆಟ್ಟಿ ಇದೀಗ ಬಿಗ್ಬಾಸ್ ಮನೆಗೆ ಬಂದಿದ್ದಾರೆ. ಮುಂಬೈನ ರಕ್ಷಿತಾ, ಯೂಟ್ಯೂಬ್ನಲ್ಲಿ ಅಡುಗೆ ರೆಸಿಪಿ ಹಂಚಿಕೊಳ್ಳುತ್ತಾರೆ.
-
ನಟ ಧ್ರುವಂತ್ ಬಿಗ್ಬಾಸ್ಗೆ ಎಂಟ್ರಿ
ಕನ್ನಡದ ಸುಮಾರು ಎಂಟು ಧಾರಾವಾಹಿಗಳಲ್ಲಿ ನಟನಾಗಿ, ನಾಯಕನಾಗಿ ನಟಿಸಿರುವ ಮಂಗಳೂರು ಮೂಲದ ಧ್ರುವಂತ್ ಅವರು ಇದೀಗ ಬಿಗ್ಬಾಸ್ ಮನೆಗೆ ಎಂಟ್ರಿ ನೀಡಿದ್ದಾರೆ.
-
ಬಿಗ್ಬಾಸ್ ಮನೆಗೆ ಬಂದ ಮುದ್ದುಲಕ್ಷ್ಮಿ
ಬಲು ಜನಪ್ರಿಯ ಧಾರಾವಾಹಿ ‘ಮುದ್ದುಲಕ್ಷ್ಮಿ’ ಧಾರಾವಾಹಿಯ ನಟಿ ಅಶ್ವಿನಿ ಅವರು ಇದೀಗ ಬಿಗ್ಬಾಸ್ ಮನೆಗೆ ಬಂದಿದ್ದಾರೆ, ಅಶ್ವಿನಿ ಅವರು ಬಹಳ ಕಷ್ಟಪಟ್ಟು ನಟಿ ಆಗಿದ್ದಾರಂತೆ.
-
ಬಿಗ್ಬಾಸ್ ಮನೆಯಲ್ಲಿ ಮಾತುಗಾತಿ ಮಲ್ಲಮ್ಮ
ಬಿಗ್ಬಾಸ್ ಮನೆಗೆ ಮಾತುಗಾತಿ ಮಲ್ಲಮ್ಮ ಎಂಟ್ರಿ ಕೊಟ್ಟಿದ್ದಾರೆ. ಉತ್ತರ ಕನ್ನಡದ ಈ ಮಹಿಳೆ, ತನ್ನ ಮಾತುಗಳಿಂದ ಬಹಳ ಜನಪ್ರಿಯ. ಇದೀಗ ಬಿಗ್ಬಾಸ್ ಮನೆಗೆ ಬಂದಿದ್ದಾರೆ.
-
ಬಿಗ್ಬಾಸ್ ಮನೆಗೆ ಬಂದ ಅಭಿಷೇಕ್
ಬಿಗ್ಬಾಸ್ ಕನ್ನಡ ಸೀಸನ್ 12ರ ಸ್ಪರ್ಧಿಯಾಗಿ ಅಭಿಷೇಕ್ ಅವರು ಮನೆಗೆ ಬಂದಿದ್ದಾರೆ. ಎಂಜಿನಿಯರಿಂಗ್ ಓದಿ, ನಟನಾಗಲು ಬಂದಿದ್ದರು ಅಭಿಷೇಕ್. ಈಗ ನಟನಾಗಿದ್ದಾರೆ, ಈಗ ಬಿಗ್ಬಾಸ್ಗೆ ಬಂದಿದ್ದಾರೆ.
-
ಬಿಗ್ಬಾಸ್ ಮನೆಗೆ ಬಂದ ನಾಯಕಿ
‘ಮನದ ಕಡಲು’ ಸಿನಿಮಾದ ನಾಯಕಿ ರಾಶಿಕಾ ಶೆಟ್ಟಿ ಇದೀಗ ಬಿಗ್ಬಾಸ್ ಮನೆಗೆ ಬಂದಿದ್ದಾರೆ. ರಾಶಿಕಾ ಶೆಟ್ಟಿಗೆ ಕೋಪ, ಪ್ರೀತಿ, ಅಳು ಎಲ್ಲವೂ ಹೆಚ್ಚಂತೆ.
-
ಬಿಗ್ಬಾಸ್ ಮನೆಗೆ ಬಂದ ಲಲ್ಲಿ
ಬಿಗ್ಬಾಸ್ ಕನ್ನಡ ಸೀಸನ್ 12ಕ್ಕೆ ಖ್ಯಾತ ನಟಿ ಮಂಜು ಭಾಷಿಣಿ ಅವರು ಎಂಟ್ರಿ ಕೊಟ್ಟಿದ್ದಾರೆ. ‘ಸಿಲ್ಲಿ-ಲಲ್ಲಿ’, ‘ಸಾಧನೆ’, ಈಗ ಪ್ರಸಾರ ಆಗುತ್ತಿರುವ ‘ಪುಟ್ಟಕ್ಕನ ಮಕ್ಕಳು’ ಸೇರಿದಂತೆ ಹಲವಾರು ಧಾರಾವಾಹಿ, ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ.
-
ಮತ್ತೊಬ್ಬ ಕಾಮಿಡಿ ನಟ ಎಂಟ್ರಿ
ಗಿಚ್ಚಿ-ಗಿಲಿಗಿಲಿ ಗೆದ್ದಿರುವ ಚಂದ್ರಪ್ರಭಾ ಇದೀಗ ಬಿಗ್ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಶೋನಲ್ಲಿ ಮಾತ್ರವೇ ನಾನು ಡಬಲ್ ಮೀನಿಂಗ್, ನಿಜವಾಗಿ ನಾನು ಬಹಳ ಮೃದು ಸ್ವಭಾವದ ವ್ಯಕ್ತಿ ಎಂದಿದ್ದಾರೆ.
-
ಆರನೇ ಸ್ಪರ್ಧಿಯಾಗಿ ಬಂದ ಧನುಶ್
ಕಿರುತೆರೆ, ಹಿರಿತೆರೆ ಎರಡರಲ್ಲೂ ನಟಿಸಿರುವ ನಟ ಧನುಶ್ ಆರನೇ ಸ್ಪರ್ಧಿಯಾಗಿ ಬಿಗ್ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.
-
ಐದನೇ ಸ್ಪರ್ಧಿ ಎಂಟ್ರಿ
ಬಿಗ್ಬಾಸ್ ಕನ್ನಡ 12ಕ್ಕೆ ಐದನೇ ಸ್ಪರ್ಧಿಯಾಗಿ ನಿರೂಪಕಿ, ನಟಿ ಜಾನ್ಹವಿ ಎಂಟ್ರಿ ಕೊಟ್ಟಿದ್ದಾರೆ.
-
ನಾಲ್ಕನೇ ಸ್ಪರ್ಧಿ ಎಂಟ್ರಿ
ನಾಲ್ಕನೇ ಸ್ಪರ್ಧಿಯಾಗಿ ಕಾಮಿಡಿ ಕಲಾವಿದ ಗಿಲ್ಲಿ ಎಂಟ್ರಿ ಕೊಟ್ಟಿದ್ದಾರೆ. ಬಿಗ್ಬಾಸ್ ಕನ್ನಡ 12 ರಲ್ಲಿ ಸ್ಪರ್ಧಿಯಾಗಿ ಅವರು ಬಂದಿದ್ದಾರೆ.
-
ಮೂರನೇ ಸ್ಪರ್ಧಿ ಎಂಟ್ರಿ
ಡಾಗ್ ಸತೀಶ್ ಅವರು ಬಿಗ್ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಕೋಟ್ಯಂತರ ರೂಪಾಯಿ ಬೆಲೆ ಬಾಳುವ ನಾಯಿಗಳನ್ನು ಅವರು ಖರೀದಿ ಮಾಡುತ್ತಾರೆ ಮಾರಾಟ ಮಾಡುತ್ತಾರೆ.
-
ಎರಡನೇ ಸ್ಪರ್ಧಿ ಎಂಟ್ರಿ
ಬಿಗ್ಬಾಸ್ ಮನೆಗೆ ಎರಡನೇ ಸ್ಪರ್ಧಿಯ ಎಂಟ್ರಿ ಆಗಿದೆ. ‘ಕೊತ್ತಲವಾಡಿ’ ಸಿನಿಮಾದ ನಾಯಕಿ ಕಾವ್ಯಾ ಅವರ ಎಂಟ್ರಿ ಆಗಿದೆ. ಇವರು ಜಂಟಿಯಾಗಿ ಬಿಗ್ಬಾಸ್ ಮನೆ ಸೇರಲಿದ್ದಾರೆ.
View this post on Instagram -
IND vs PAK Live Score: ದುಬೈ ಹವಾಮಾನ
ಅಕ್ಯೂವೆದರ್ ಪ್ರಕಾರ, ಸೆಪ್ಟೆಂಬರ್ 28 ರಂದು ದುಬೈನಲ್ಲಿ ತಾಪಮಾನವು ಸುಮಾರು 42°C ಇರಲಿದೆ. ಆದಾಗ್ಯೂ, ಸಂಜೆಯ ತಾಪಮಾನವು 31°C ತಲುಪಬಹುದು. ಪಂದ್ಯಾವಳಿಯಾದ್ಯಂತ ಇಬ್ಬನಿ ಪರಿಣಾಮ ಬೀರಬಹುದು.
-
ಮೊದಲ ಸ್ಪರ್ಧಿ ಎಂಟ್ರಿ
ಬಿಗ್ಬಾಸ್ 12ರ ಮೊದಲ ಸ್ಪರ್ಧಿಯಾಗಿ ಕಾಕ್ರೂಚ್ ಸುಧಿ ಅವರು ಎಂಟ್ರಿ ಮಾಡಿದ್ದಾರೆ. ಸುದೀಪ್ ಅವರೊಟ್ಟಿಗೆ ಕೆಲಸ ಮಾಡಿರಲಿಲ್ಲವಂತೆ, ಈಗ ಬಿಗ್ಬಾಸ್ ವೇದಿಕೆ ಮೇಲೆಯೇ ಅವರು ಸುದೀಪ್ ಅವರನ್ನು ಭೇಟಿ ಮಾಡಿದ್ದಾರೆ.
View this post on Instagram -
ಒಂಟಿ-ಜಂಟಿ
ಈ ಬಾರಿ ಬರುವ ಸ್ಪರ್ಧಿಗಳು ಒಂಟಿಯಾಗಿ ಅಥವಾ ಜಂಟಿಯಾಗಿ ಬಿಗ್ಬಾಸ್ ಮನೆಗೆ ಹೋಗಲಿದ್ದಾರೆ. ಯಾರು ಒಂಟಿ ಆಗಲಿದ್ದಾರೆ, ಯಾರು ಜಂಟಿ ಆಗಲಿದ್ದಾರೆ ಎಂಬುದನ್ನು ವೀಕ್ಷಕರು ಮತದಾನದ ಮೂಲಕ ನಿರ್ಧರಿಸುತ್ತಾರೆ.
-
ಈ ಬಾರಿ ಜೈಲು ಇಲ್ಲ
ಪ್ರತಿ ಸೀಸನ್ನಲ್ಲೂ ಜೈಲೊಂದು ಬಿಗ್ಬಾಸ್ ಮನೆಯಲ್ಲಿ ಇದ್ದೇ ಇರುತ್ತದೆ. ಆದರೆ ಈ ಬಾರಿ ಬಿಗ್ಬಾಸ್ ಮನೆಯಲ್ಲಿ ಜೈಲು ನಿರ್ಮಿಸಲಾಗಿಲ್ಲ. ಹಾಗಿದ್ದರೆ ಕಳಪೆಗಳಿಗೆ ಈ ಬಾರಿ ಬೇರೆಯದ್ದೇ ಶಿಕ್ಷೆ ಇರಲಿದೆ ಎಂಬ ಅನುಮಾನ ಮೂಡಿದೆ.
-
ಬಿಗ್ಬಾಸ್ ಮನೆ ಪರಿಚಯ
ಕಿಚ್ಚ ಸುದೀಪ್ ಅವರು ಪ್ರತಿ ಬಾರಿಯಂತೆ ಈ ಬಾರಿಯೂ ಮನೆಯನ್ನು ವೀಕ್ಷಕರಿಗೆ ಪರಿಚಯಿಸಿದರು. ಕರ್ನಾಟಕವನ್ನು ಪ್ರತಿನಿಧಿಸುವ ರೀತಿಯಲ್ಲಿ ಈ ಬಾರಿ ಮನೆಯನ್ನು ವಿನ್ಯಾಸ ಮಾಡಲಾಗಿದೆ.
-
ಶುರುವಾಯ್ತು ಬಿಗ್ಬಾಸ್
ಬಿಗ್ಬಾಸ್ ಕನ್ನಡ 12 ಶುರುವಾಯ್ತು, ತಮ್ಮದೇ ಸಿನಿಮಾದ ಹಾಡುಗಳು ಹಿನ್ನೆಲೆಯಲ್ಲಿ ಕೇಳಿ ಬರುತ್ತಿರುವಾಗ ಸಖತ್ ಆಗಿ ಎಂಟ್ರಿ ಕೊಟ್ಟರು ಸುದೀಪ್.
-
ಕಾಮನ್ ಮ್ಯಾನ್ ಎಂಟ್ರಿ
ಬಿಗ್ಬಾಸ್ ಸ್ಪರ್ಧಿಗಳು ಮನೆ ಪ್ರವೇಶಿಸುವ ಮುಂಚೆಯೇ ಕೆಲ ಕಾಮನ್ ಮ್ಯಾನ್ಗಳನ್ನು ಬಿಗ್ಬಾಸ್ ಮನೆ ಪ್ರವೇಶಿಸಲು ಅವಕಾಶ ನೀಡಲಾಗಿತ್ತು. ಹಲವಾರು ಮಂದಿ ಸಾಮಾನ್ಯರು ಬಿಗ್ಬಾಸ್ ಮನೆ ಪ್ರವೇಶಿಸಿ ಖುಷಿ ಪಟ್ಟಿದ್ದಾರೆ.
-
ವೇದಿಕೆಯಿಂದಲೇ ಆಟ ಶುರು
ಈ ಬಾರಿ ಬಿಗ್ಬಾಸ್ ಗ್ರ್ಯಾಂಡ್ ಓಪನಿಂಗ್ ವೇದಿಕೆಯಿಂದಲೇ ಆಟ ಶುರುವಾಗಲಿದೆ. ಜೋಡಿ ಮತ್ತು ಒಂಟಿ ಆಟವನ್ನು ಬಿಗ್ಬಾಸ್ ವೇದಿಕೆ ಮೇಲಿಂದಲೇ ಆಡಿಸಲಿದ್ದಾರೆ ಸುದೀಪ್.
-
ಮಂಗಳೂರಿನ ರಕ್ಷಿತಾ
ಯುಟ್ಯೂಬರ್ ಆಗಿರುವ, ಭಿನ್ನವಾಗಿ, ಚಿತ್ರ-ವಿಚಿತ್ರವಾದ ರೆಸಿಪಿಗಳನ್ನು ಮಾಡುವ ಬಲು ನಾಟಕೀಯವಾಗಿಯೂ ಮಾತನಾಡುವ ಮಂಗಳೂರಿನ ರಕ್ಷಿತಾ ಸಹ ಈ ಬಾರಿ ಬಿಗ್ಬಾಸ್ ಮನೆಗೆ ಹೋಗಲಿದ್ದಾರೆ.
View this post on Instagram -
ಮೂರು ಸ್ಪರ್ಧಿಗಳು ಕನ್ಫರ್ಮ್
ನಿನ್ನೆ ನಡೆದ ಕ್ವಾಟ್ಲೆ ಕಿಚನ್ ಕಾರ್ಯಕ್ರಮದ ಫಿನಾಲೆ ವೇಳೆ ಈ ಬಾರಿ ಬಿಗ್ಬಾಸ್ ಮನೆಗೆ ಹೋಗಲಿರುವ ಮೂವರು ಸ್ಪರ್ಧಿಗಳ ಹೆಸರನ್ನು ಬಹಿರಂಗಪಡಿಸಲಾಗಿತ್ತು. ಕಾಕ್ರೂಚ್ ಸುಧಿ, ಮಂಜು ಭಾಷಿಣಿ ಮತ್ತು ಮಲ್ಲಮ್ಮ ಅವರು ಬಿಗ್ಬಾಸ್ಗೆ ಹೋಗಲಿರುವ ವಿಷಯ ನಿನ್ನೆಯೇ ಬಹಿರಂಗಪಡಿಸಲಾಗಿತ್ತು.
-
ಬಿಗ್ಬಾಸ್ ಮನೆ
ಈ ಬಾರಿ ಬಿಗ್ಬಾಸ್ ಮನೆಯನ್ನು ಇನ್ನೋವೇಟಿವ್ ಫಿಲಂ ಸಿಟಿಯಲ್ಲಿ ನಿರ್ಮಾಣ ಮಾಡಲಾಗಿದ್ದು, ಬಲು ಅದ್ಧೂರಿಯಾಗಿ ಹಾಗೂ ಇಡೀ ಕರ್ನಾಟಕದ ಪ್ರಾದೇಶಿಕತೆ, ಇತಿಹಾಸ, ಸಂಸ್ಕೃತಿಯನ್ನು ಪ್ರತಿಬಿಂಬಿಸುವಂತೆ ನಿರ್ಮಾಣ ಮಾಡಲಾಗಿದೆ.
Published On - Sep 28,2025 4:41 PM




