‘ನಂಗೆ ಈ ರೀತಿಯಲ್ಲಿ ಬಿಗ್ ಬಾಸ್ ಆರಂಭಿಸೋಕೆ ಇಷ್ಟ ಇಲ್ಲ’; ನೇರವಾಗಿ ಹೇಳಿದ ಸುದೀಪ್
ಕಿಚ್ಚ ಸುದೀಪ್ ಬಿಗ್ ಬಾಸ್ ಕನ್ನಡ 12 ಆರಂಭದಲ್ಲಿ ತಾಯಿ ಸರೋಜಾ ಅವರ ನೆನಪಿನಲ್ಲಿ ಭಾವುಕರಾದರು. ತಾಯಿಯ ಶಾಲು ನೀಡಿದಾಗ ಕಣ್ಣೀರಾದ ಸುದೀಪ್, ಎಮೋಷನಲ್ ಆಗಿ ಶೋ ನಡೆಸಲು ಇಷ್ಟವಿರಲಿಲ್ಲ ಎಂದರು. ನಂತರ ಶೋಗೆ ಹೊಸ ಹುರುಪು ತುಂಬಿದರು. ಈ ಸೀಸನ್ 'ಒಂಟಿ ಮತ್ತು ಜಂಟಿ' ಎಂಬ ವಿಶೇಷ ಕಾನ್ಸೆಪ್ಟ್‌ನೊಂದಿಗೆ ಶುರುವಾಗಿದೆ.

ಕಿಚ್ಚ ಸುದೀಪ್ ಅವರು ಬಿಗ್ ಬಾಸ್ನ ಯಾವಾಗಲೂ ಜೋಶ್ನಿಂದ ಆರಂಭಿಸಲು ಇಷ್ಟಪಡುತ್ತಾರೆ. ಈ ಬಾರಿಯೂ ಅವರು ದೊಡ್ಮನೆ ಆಟವನ್ನು ಜೋಶ್ನಿಂದಲೇ ಪ್ರಾರಂಭಿಸುವವರಿದ್ದರು. ಆದರೆ, ಆ ಒಂದು ವಿಚಾರ ಅವರನ್ನು ಭಾವುಕರನ್ನಾಗಿ ಮಾಡಿಸಿತು. ಅದುವೇ ತಾಯಿ ಶಾಲು. ಬಿಗ್ ಬಾಸ್ ಆರಂಭಕ್ಕೂ ಮೊದಲು ಸುದೀಪ್ ತಾಯಿಯನ್ನು ನೆನಪಿಸಿಕೊಳ್ಳುವ ಕೆಲಸ ಮಾಡಲಾಯಿತು. ಹೀಗೆ ಬಿಗ್ ಬಾಸ್ ಆರಂಭಿಸೋಕೆ ಅವರಿಗೆ ಇಷ್ಟ ಆಗಿಲ್ಲ.
ಸುದೀಪ್ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಎಪಿಸೋಡ್ ನಡೆಸಿಕೊಡುವಾಗ ಅವರ ತಾಯಿ ಸರೋಜಾ ನಿಧನ ಹೊಂದಿದರು. ಆಗ ಅವರು ಶೋನ ಅರ್ಧಕ್ಕೆ ಬಿಟ್ಟು ತಾಯಿ ನೋಡಲು ಓಡೋಡಿ ಹೋದರು. ಆದರೆ, ಅವರ ತಾಯಿ ಉಳಿಸಿಕೊಳ್ಳಲು ಸಾಧ್ಯವಾಗಲೇ ಇಲ್ಲ. ಇದು ಸುದೀಪ್ ಅವರಿಗೆ ನುಂಗಲಾರದ ತುತ್ತಾಯಿತು. ಇದಾದ ಬಳಿಕ ಸುದೀಪ್ ಅವರು ಅನೇಕ ಬಾರಿ ತಾಯಿಯನ್ನು ನೆನಪಿಸಿಕೊಳ್ಳುವ ಕೆಲಸ ಮಾಡಿದ್ದಾರೆ.
‘ಬಿಗ್ ಬಾಸ್ ಕನ್ನಡ ಸೀಸನ್ 12’ರ ಆರಂಭಕ್ಕೂ ಮೊದಲು ಸುದೀಪ್ ಅವರ ತಾಯಿಯನ್ನು ಬಿಗ್ ಬಾಸ್ ನೆನಪಿಸಿಕೊಂಡರು. ಸುದೀಪ್ ತಾಯಿ ಸರೋಜಾ ಅವರ ಪ್ರೀತಿಯ ಶಾಲನ್ನು ಸುದೀಪ್ಗೆ ನೀಡಲಾಯಿತು. ಇದನ್ನು ನೋಡಿ ಸುದೀಪ್ ಭಾವುಕರಾದರು. ಈ ವೇಳೆ ಪರದೆ ಮೇಲೆ ಸುದೀಪ್ ತಾಯಿಯ ಫೋಟೋವನ್ನು ಕೂಡ ಹಾಕಲಾಯಿತು. ಅವರು ಅದೇ ಶಾಲನ್ನು ಹೊದ್ದುಕೊಂಡಿದ್ದರು.
‘ನನಗೆ ಎಮೋಷನಲ್ ಆಗಿ ಶೋನ ಆರಂಭಿಸೋಕೆ ಇಷ್ಟ ಇಲ್ಲ’ ಎಂದು ಹೇಳಿದರು. ಆ ಬಳಿಕ ಫೋಟೋನ ಸ್ಕ್ರೀನ್ ಮೇಲಿನಿಂದ ತೆಗೆಯಲಾಯಿತು. ಆ ಬಳಿಕ ಸುದೀಪ್ ಅವರು ತಮ್ಮ ಎನರ್ಜಿಯೊಂದಿಗೆ ಶೋ ಆರಂಭಿಸಿದರು.
ಇದನ್ನೂ ಓದಿ: ‘ನಿಮ್ಮದು ಫ್ರಾಡ್ ಬಿಸ್ನೆಸಾ’; ಡಾಗ್ ಸತೀಶ್ಗೆ ನೇರವಾಗಿ ಕೇಳಿದ ಸುದೀಪ್
ಈ ಬಾರಿ ಒಂಟಿ ಹಾಗೂ ಜಂಟಿ ಎಂಬ ಕಾನ್ಸೆಪ್ಟ್‌ನೊಂದಿಗೆ ಶೋ ಮಾಡಲಾಗುತ್ತಿದೆ. ‘ಒಂಟಿ, ಒಂಟಿ ಸಲಗ ಆಗಿ ಆಟ ಆಡ್ತಾರೆ. ಜಂಟಿ, ಜಂಟಿಯಾಗಿ ಆಟ ಆಡ್ತಾರೆ. ಇದನ್ನು ಅಲ್ಲಿ ನೆರೆದವರು ನಿರ್ಧಾರ ಮಾಡುತ್ತಾರೆ. ಶೇ. 75 ಮೇಲಿದ್ದರೆ ಒಂಟಿ, ಶೇ.75ಕ್ಕಿಂತ ಕಡಿಮೆ ಇದ್ದರೆ ಜಂಟಿ ಆಗಿ ಎಂಟ್ರಿ ಕೊಡಬೇಕು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








