- Kannada News Photo gallery Bigg Boss Kannada Contestants Count is 19 This time Colors Kannada Reveals
ಹದಿನೇಳೂ ಅಲ್ಲ, ಹದಿನೆಂಟೂ ಅಲ್ಲ; ಊಹಿಸಿದ್ದಕ್ಕಿಂತ ಹೆಚ್ಚಿನ ಸ್ಪರ್ಧಿಗಳು ಬಿಗ್ ಬಾಸ್ಗೆ ಎಂಟ್ರಿ
‘ಬಿಗ್ ಬಾಸ್ ಕನ್ನಡ ಸೀಸನ್ 12’ರ ಆರಂಭಕ್ಕೆ ಬಾಕಿ ಇರೋದು ಇನ್ನು ಕೆಲವೇ ಗಂಟೆಗಳು ಮಾತ್ರ. ಈ ಕ್ಷಣಕ್ಕಾಗಿ ಅನೇಕರು ಕಾದು ಕುಳಿತಿದ್ದಾರೆ. ಹೀಗಿರುವಾಗಲೇ ದೊಡ್ಮನೆಗೆ ಬರುವ ಸ್ಪರ್ಧಿಗಳ ಸಂಖ್ಯೆ ಬಗ್ಗೆ ಕುತೂಹಲ ಮೂಡಿದೆ. ಊಹಿಸಿದ್ದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧಿಗಳು ಬಿಗ್ ಬಾಸ್ ಮನೆಗೆ ಬರಲಿದ್ದಾರೆ ಎನ್ನಲಾಗುತ್ತಿದೆ.
Updated on: Sep 28, 2025 | 3:01 PM

ಬಿಗ್ ಬಾಸ್ನಲ್ಲಿ ಪ್ರತಿ ಬಾರಿ 17 ಅಥವಾ 18 ಸ್ಪರ್ಧಿಗಳು ಬರೋದು ವಾಡಿಕೆ. ಆದರೆ, ಈ ಬಾರಿ ಸ್ಪರ್ಧಿಗಳ ಸಂಖ್ಯೆ ಅಂದುಕೊಂಡಿದ್ದಕ್ಕಿಂತಲೂ ಹೆಚ್ಚೇ ಇದೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಕಾರಣ ಆಗಿರೋದು ಕಲರ್ಸ್ ಕನ್ನಡ ವಾಹಿನಿ ಹಂಚಿಕೊಂಡಿರೋ ಪೋಸ್ಟರ್.

‘ಮೂವರ ಹೆಸರು ರಿವೀಲ್ ಮಿಕ್ಕಿದವರು ಯಾರು’ ಎಂದು ಪ್ರಶ್ನೆ ಮಾಡುವ ಪೋಸ್ಟರ್ನ ಕಲರ್ಸ್ ಕನ್ನಡ ವಾಹಿನಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ಈ ಪೋಸ್ಟರ್ನಲ್ಲಿ ಈಗಾಗಲೇ ರಿವೀಲ್ ಆದ ಮಂಜು ಭಾಷಿಣಿ, ಮಾತಿನ ಮಲ್ಲಿ ಮಲ್ಲಮ್ಮ ಹಾಗೂ ಕಾಕ್ರೋಚ್ ಸುಧಿ ಹೆಸರು ಇದೆ.

ಇಷ್ಟೇ ಆಗಿದ್ದರೆ ವೀಕ್ಷಕರು ಅಷ್ಟೊಂದು ತಲೆಕೆಡಿಸಿಕೊಳ್ಳುತ್ತಿರಲಿಲ್ಲವೇನೋ. ಈ ಪೋಸ್ಟರ್ನಲ್ಲಿ ಉಳಿದ ಸ್ಥಾನಗಳಿಗೆ ಬರಬೇಕಿರುವ ಸ್ಪರ್ಧಿಗಳ ಪೋಸ್ಟರ್ನ ಜಾಗವನ್ನು ಖಾಲಿ ಬಿಡಲಾಗಿದೆ. ಇದನ್ನು ಲೆಕ್ಕ ಹಾಕಿದರೆ ಒಟ್ಟೂ ಸಂಖ್ಯೆ 19 ಆಗುತ್ತದೆ.

ಹೀಗಾಗಿ, ಈ ಬಾರಿ ಬಿಗ್ ಬಾಸ್ ಮನೆಗೆ 19 ಸ್ಪರ್ಧಿಗಳು ಬರುತ್ತಿರಬಹುದು ಎಂದು ಊಹಿಸಲಾಗುತ್ತಿದೆ. ಇದರಲ್ಲಿ ನಾನಾ ಕ್ಷೇತ್ರದವರು ಇರಲಿದ್ದಾರೆ. ಇದರಿಂದ ಸ್ಪರ್ಧೆ ಕೂಡ ಜೋರಾಗುವ ನಿರೀಕ್ಷೆ ಇದೆ.

ಸದ್ಯ ಬಿಗ್ ಬಾಸ್ ಮನೆ ಪ್ರವೇಶಿಸಿರುವ ಮೂವರ ಹೆಸರು ರಿವೀಲ್ ಆಗಿದೆ. ಮಂಜು ಅವರು ಕಿರುತೆರೆಯವರು. ಸುಧಿ ಹಿರಿತೆರೆ ಹಾಗೂ ಮಲ್ಲಮ್ಮ ಅವರು ಸೋಶಿಯಲ್ ಮೀಡಿಯಾ ಮೂಲಕ ಖ್ಯಾತಿ ಪಡೆದವರಾಗಿದ್ದಾರೆ.




