ಗೌತಮ್-ಭೂಮಿಕಾ ಬಾಳಲ್ಲಿ ಮತ್ತೆ ಮೂಡಿತು ಪ್ರೀತಿ; ಎಲ್ಲರಿಂದ ದೂರ ಹೋಗೋಣ ಎಂದ ನಾಯಕಿ
Amruthadhare Kannada serial: ‘ಅಮೃತಧಾರೆ’ ಧಾರಾವಾಹಿಯಲ್ಲಿ ಭೂಮಿಕಾ ಮನೆ ಬಿಟ್ಟು ಹೋಗಿ ಐದು ವರ್ಷಗಳ ಮೇಲಾಗಿದೆ. ಇದಕ್ಕೆಲ್ಲ ಕಾರಣ ಆಗಿದ್ದು ಗೌತಮ್ ಮಲತಾಯಿ ಶಕುಂತಲಾ. ಇದನ್ನು ತಿಳಿದು ಗೌತಮ್ ಕೂಡ ಬೇಸರಿಂದ ಹೊರ ಬಂದಿದ್ದಾನೆ. ತನ್ನ ಆಸ್ತಿಯನ್ನು ಮನೆಯವರ ಹೆಸರಿಗೆ ಬರೆದುಕೊಟ್ಟು ನೇರವಾಗಿ ಕ್ಯಾಬ್ ಡ್ರೈವರ್ ಆಗಿದ್ದಾನೆ. ಕ್ಯಾಬ್ ಡ್ರೈವರ್ ಆದಾಗ ಆತ ಭೂಮಿಕಾಳನ್ನು ಹುಡುಕುವ ಪ್ರಯತ್ನ ಮಾಡಿದ್ದಾನೆ.

‘ಅಮೃತಧಾರೆ’ ಧಾರಾವಾಹಿಯಲ್ಲಿ ಇಷ್ಟು ದಿನ ಕಥಾ ನಾಯಕ ಗೌತಮ್ ಹಾಗೂ ಕಥಾ ನಾಯಕಿ ಭೂಮಿಕಾ ದೂರವಾಗಿಯೇ ಇದ್ದರು. ಇವರು ಬೇರೆ ಆಗಲು ಕಾರಣ ಆಗಿದ್ದು ಶಕುಂತಲಾ. ಆದರೆ, ಈಗ ಇವರು ಮತ್ತೆ ಒಂದಾಗುತ್ತಾ ಇದ್ದಾರೆ. ಗೌತಮ್ನ ತಬ್ಬಿಕೊಂಡ ಭೂಮಿಕಾ ‘ನಿಮ್ಮನ್ನು ಬಿಟ್ಟು ಇರಲಾರೆನು’ ಎಂದು ಹೇಳಿದ್ದಾಳೆ. ಇವಳ ಬಾಳಲ್ಲಿ ಮತ್ತೆ ಚೈತ್ರಕಾಲ ಬಂದಿದೆ ಎಂದು ಅನೇಕರು ಹೇಳಿದ್ದಾರೆ.
ಭೂಮಿಕಾ ಮನೆ ಬಿಟ್ಟು ಹೋಗಿ ಐದು ವರ್ಷಗಳ ಮೇಲಾಗಿದೆ. ಇದಕ್ಕೆಲ್ಲ ಕಾರಣ ಆಗಿದ್ದು ಗೌತಮ್ ಮಲತಾಯಿ ಶಕುಂತಲಾ. ಇದನ್ನು ತಿಳಿದು ಗೌತಮ್ ಕೂಡ ಬೇಸರಿಂದ ಹೊರ ಬಂದಿದ್ದಾನೆ. ತನ್ನ ಆಸ್ತಿಯನ್ನು ಮನೆಯವರ ಹೆಸರಿಗೆ ಬರೆದುಕೊಟ್ಟು ನೇರವಾಗಿ ಕ್ಯಾಬ್ ಡ್ರೈವರ್ ಆಗಿದ್ದಾನೆ. ಕ್ಯಾಬ್ ಡ್ರೈವರ್ ಆದಾಗ ಆತ ಭೂಮಿಕಾಳನ್ನು ಹುಡುಕುವ ಪ್ರಯತ್ನ ಮಾಡಿದ್ದಾನೆ.
ಆದರೆ, ಭೂಮಿಕಾ ಅಷ್ಟು ಸುಲಭಕ್ಕೆ ಸಿಕ್ಕುವವಳಲ್ಲ. ಆದರೂ ಛಲ ಬಿಡದೇ ಭೂಮಿಕಾಳನ್ನು ಹುಡುಕಿದ್ದಾನೆ ಗೌತಮ್. ಕಥೆಯಲ್ಲಿ ಸಾಕಷ್ಟು ಸುತ್ತಾಟ ನಡೆದು ಈಗ ಗೌತಮ್ ಹಾಗೂ ಭೂಮಿಕಾ ಒಂದೇ ವಠಾರ ಸೇರಿದ್ದಾರೆ. ಒಂದು ಕಡೆ ಗೌತಮ್ ನಿಮ್ಮ ಸಹವಾಸಕ್ಕೆ ಬರೋದಿಲ್ಲ ಎಂದು ಹೇಳಿದ್ದಾನೆ. ಇದು ಭೂಮಿಕಾ ಚಿಂತೆಗೆ ಕಾರಣ ಆಗಿದೆ.
View this post on Instagram
ಗೌತಮ್ ಇಷ್ಟು ಕಲ್ಲು ಮನಸ್ಸಿನವರಾಗಲು ಹೇಗೆ ಸಾಧ್ಯ ಎಂದು ಭೂಮಿಕಾಗೆ ಅನಿಸುತ್ತಿತ್ತು. ಮತ್ತೊಂದು ಕಡೆ ಗೌತಮ್ ಬೇಕು ಎಂದು ಅನಿಸುತ್ತಿದೆ. ಈಗ ರಿಲೀಸ್ ಆಗಿರೋ ಪ್ರೋಮೋದಲ್ಲಿ ಭೂಮಿಕಾ ಹಾಗೂ ಗೌತಮ್ ಒಂದಾಗಿದ್ದಾರೆ. ‘ನಿಮ್ಮನ್ನುನ ಪ್ರೀತಿ ಮಾಡುತ್ತೇನೆ’ ಎಂದು ಭೂಮಿಕಾ ಹೇಳಿದ್ದಾಳೆ. ‘ನಿಮ್ಮನ್ನು ಬಿಟ್ಟು ಇರಲು ಸಾಧ್ಯವೇ ಇಲ್ಲ ಎಂದು, ಗೌತಮ್ನ ತಬ್ಬಿ ಹೇಳಿದ್ದಾಳೆ. ಎಲ್ಲರನ್ನೂ ಬಿಟ್ಟು ದೂರ ಎಲ್ಲಾದರೂ ಹೋಗಿ ಜೀವಿಸೋಣ ಎಂದು ಭೂಮಿಕಾ ಹೇಳಿದ್ದಾಳೆ. ಇದರಿಂದ ಇವರ ಮಧ್ಯೆ ಮತ್ತೆ ಪ್ರೀತಿ ಮೂಡಿರೋದು ಸ್ಪಷ್ಟವಾಗಿದೆ.
‘ಅಮೃತಧಾರೆ’ ಧಾರಾವಾಹಿಯ ಹೊಸ ಕಥೆ ಜನರಿಗೆ ಇಷ್ಟ ಆಗುತ್ತಿದೆ. ಶ್ರೀಮಂತ ವ್ಯಕ್ತಿಯಾಗಿದ್ದ ಗೌತಮ್ ಸರಳ ಜೀವ ನಡೆಸುತ್ತಿರುವುದು ಅನೇಕರಿಗೆ ಖುಷಿ ನೀಡಿದೆ. ಮತ್ತೊಂದು ಕಡೆ ಗೌತಮ್ಗಾಗಿ ಆತನ ಸಹೋದರ ಜಯದೇವ್ ಹುಡುಕಾಟ ಆರಂಭಿಸಿದ್ದಾನೆ. ಈ ಕಥೆ ಕೂಡ ಮತ್ತೊಂದು ಕಡೆಯಲ್ಲಿ ಸಾಗುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



